The Public Spot
ರಾಜ್ಯ

ಬೆಂಗಳೂರಲ್ಲಿ ಗಣತಿಗೆ ಡಿಸಿಎಂ ಡಿಕೆಶಿ ಚಾಲನೆ.. ಪ್ರಶ್ನೆಗಳಿಗೆ ಉತ್ತರಿಸಲು ಗರಂ..

ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆಗೆ ಬೆಂಗಳೂರಿನಲ್ಲಿ ಡಿಸಿಎಂ ‌ಡಿ.ಕೆ ಶಿವಕುಮಾರ್ ಚಾಲನೆ ನೀಡಿದ್ದಾರೆ. ಸ್ವತಃ ಸಮೀಕ್ಷೆಯಲ್ಲಿ ಭಾಗಿಯಾಗುವ ಮೂಲಕ ಚಾಲನೆ ನೀಡಲಾಗಿದೆ. ಗಣತಿದಾರರಿಗೆ ಮಾಹಿತಿ ನೀಡಿ ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ ಡಿ.ಕೆ ಶಿವಕುಮಾರ್​. ಗಣತಿದಾರರ ಪ್ರಶ್ನೆಗೆ ಒಂದೊಂದಾಗೆ ಉತ್ತರಿಸಿದ ಡಿಸಿಎಂ, ಜನ್ಮ ಜಿಲ್ಲೆ ಬೆಂಗಳೂರು ದಕ್ಷಿಣ, ಉದ್ಯೋಗ ಕೃಷಿ ಎಂದು ಹಾಕಿ, ಧರ್ಮ ಹಿಂದೂ, ಜಾತಿ ಒಕ್ಕಲಿಗ (154), ಜಾತಿ ಪ್ರಯಾಣ ಪತ್ರ ಶಾಲೆಯಲ್ಲಿ ಪಡೆದಿದ್ದೇನೆ. 31ನೇ ವಯಸ್ಸಿನಲ್ಲಿ ಮದುವೆ ಆಗಿದ್ದೇನೆ. ಸರ್ಕಾರದಿಂದ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಮೀಸಲಾತಿ ಸೌಲಭ್ಯವನ್ನು ಪಡೆದಿಲ್ಲ. ಉದ್ಯೋಗ ಪಬ್ಲಿಕ್ ಸರ್ವಂಟ್, ಸೆಲ್ಪ್ ಎಂಪ್ಲಾಯ್‌ಮೆಂಟ್. ಕುಲ ಕಸುಬು ಕೃಷಿ ಸಾಗುವಳಿ, ಆದಾಯ ದೊಡ್ಡ ಸ್ಲಾಬ್ ಹಾಕು ಎಂದ ಡಿ.ಕೆ ಶಿವಕುಮಾರ್​. ರಾಜಕೀಯ ಪ್ರಾತಿನಿಧ್ಯ ಮಂತ್ರಿ ಹಾಕು ಎಂದ ಡಿಕೆಶಿ, ಆದ್ರೆ ಆಪ್ಶನ್ ಇಲ್ಲ ಸರ್ ಎಂದಾಗ ಮಾಜಿ ಜಿಲ್ಲಾ ಪಂಚಾಯತ್ ಮೆಂಬರ್ ಅಂತಾ ಹಾಕಲು ಸೂಚನೆ. ಇನ್ನು ಸರಣಿ ಪ್ರಶ್ನೆಗಳನ್ನು ಕೇಳಿ ಸ್ವತಃ ಟಿಸಿಎಂ ಗರಂ ಆಗಿದ್ದಾರೆ.

ಸಮೀಕ್ಷೆದಾರನಿಗೆ ಡಿ.ಕೆ ಶಿವಕುಮಾರ್​​ ಪ್ರಶ್ನೆ ಮಾಡಿದ್ದು, ಯಾಕೆ ಹಿರಿಯ ಅಧಿಕಾರಿಯನ್ನ ಕೇಳ್ತೀಯಾ..? ನೀನೆ ಕೇಳು, ಅವರೇನು ನಿನ್ನ ಪಿ ಎ ನಾ? ಎಂದ ಡಿಕೆ ಶಿವಕುಮಾರ್​. ಕುಟುಂಬ ಹೊಂದಿರುವ ಆಸ್ತಿ 50-55 ಎಕರೆ ಹಾಕಿ. ಬ್ಯುಸಿನೆಸ್‌ಗೋಸ್ಕರ ಸಾಲ ಇದೆ. 25 ಹಸು ಇದೆ, ಎತ್ತು ಇದೆ, ಕುರಿ ಮೇಕೆ 10-10 ಹಾಕು, ಹೈನುಗಾರಿಕೆ, ಕೋಳಿ ಸಾಕಾಣಿಕೆ, ರೇಷ್ಮೆ ಇದೆ. ವಾಣಿಜ್ಯ ಕಟ್ಟಡ 4 ಹಾಕೊಳ್ಳಿ, ತೋಟದ ಮನೆ ಇದೆ, ಫಾರ್ಮ್ ಹೌಸ್ 2 ಇದೆ. ಕಂಪ್ಯೂಟರ್, ಫ್ರಿಡ್ಜ್ ಒಂದ್ 5 ಹಾಕೊಳಿ, ಎಸಿ ಎಲ್ಲಾ ಹಾಕೊಳಿ. ಫ್ಯಾಕ್ಸ್ ಇದೆಯಾ ಎಂದು ಪ್ರಶ್ನೆ ಮಾಡಿದಾಗ, ಇದನೆಲ್ಲಾ ಯಾಕೆ ಹಾಕಿದ್ರಿ‌..? ಈಗ ಯಾರದ್ದಿರುತ್ತೆ ಫ್ಯಾಕ್ಸ್ ಅಂತಾ ಮರುಪ್ರಶ್ನೆ ಹಾಕಿದ್ದಾರೆ. ಇನ್ನು ಜ್ಯುವೆಲರಿ ಇದೆಯಾ ಇಲ್ಲವಾ ಎನ್ನುವ ಪ್ರಶ್ನೆಗೆ ಡಿಸಿಎಂ ಗರಂ ಆಗಿದ್ದು, ಪರ್ಸನಲ್ ಡೀಟೆಲ್ಸ್‌ಗೆ ಹೋಗಬಾರದು ಎಂದಿದ್ದಾರೆ.

ಸಮೀಕ್ಷೆಯಲ್ಲಿ ಕೇಲಿದ ಕೆಲವು ಪ್ರಶ್ನೆಗೆ ಡಿಸಿಎಂ ಡಿ.ಕೆ ಶಿವಕುಮಾರ್​ ಅಪಸ್ವರ ವ್ಯಕ್ತಪಡಿಸಿದ್ದು, ಹಾಲಿ ನಿವಾಸ, ನನ್ ಹೆಂಡ್ತಿ ಮನೆ ಎಂದಿದ್ದಾರೆ. ಸಮೀಕ್ಷೆಯ ಪ್ರಶ್ನೆಗೆ ಡಿಸಿಎಂ ಸಿಡಿಮಿಡಿಗೊಂಡಿದ್ದು, ಸಿಂಪಲ್ ಇರಬೇಕು ಟೂ ಮಚ್ ಎಂದ ಡಿ.ಕೆ ಶಿವಕುಮಾರ್​, ಕೋರ್ಟ್ ವ್ಯಾಜ್ಯ ಬೇಕಾದಷ್ಟು ಇದೆ. ಮೊದಲು ಜನ ಎಷ್ಟು ಇದ್ದಾರೆ, ಅನ್ನೊದನ್ನ ಹಾಕಬೇಕು. ಜನಸಂಖ್ಯೆ ಇಂಪಾರ್ಟೆಂಟ್, ಜನಸಂಖ್ಯೆ ಬರಬೇಕು, ಜಗಳ ನಡಿತಿರೊದೆ ಸಂಖ್ಯೆ ಮೇಲೆ. ನೀನ್ ನನಗೆ ಕೇಳಿಲ್ಲವಲ್ಲ, ನನಗೆ ಎಷ್ಟು ಮಕ್ಕಳು..? ಎಂದು. ಮೊದಲು ಕುಟುಂಬದ ಡೀಟೆಲ್ಸ್ ತಕೊಳಿ, ಇದು ಕಂಪ್ಲೀಟ್ ಮಾಡಿಲ್ಲ ಎಂದಿದ್ದಾರೆ. ಎರಡು ದಿನ ಲೇಟ್ ಆಗಲಿ ಪರವಾಗಿಲ್ಲ, ನಿಧಾನವಾಗಿ ಸರಿಯಾಗಿ ಮಾಹಿತಿ ತೆಗೆದುಕೊಳ್ಳಿ ಎಂದು ಸಮೀಕ್ಷೆದಾರರಿಗೆ ಡಿ.ಕೆ ಶಿವಕುಮಾರ್​ ಸಲಹೆ ನೀಡಿದ್ದಾರೆ. ಇದೇ ವೇಳೆ ತಮ್ಮ ಪೋನ್ ನಂಬರ್ ಹೇಳಬೇಡ ಎಂದು ಗಣತಿದಾರನಿಗೆ ಡಿಕೆಶಿ ಸೂಚನೆ ಕೊಟ್ಟ ಘಟನೆಯೂ ನಡೆದಿದೆ.

ದಿನಕ್ಕೆ ಎಷ್ಟು ಮಾಡ್ತೀರಾ ಸಮೀಕ್ಷೆ..? ನಮ್ ಮನೆಯಲ್ಲೇ ಒಂದ್ ಗಂಟೆ ಆಯ್ತಲ್ಲ ಎಂದಾಗ ಉತ್ತರಿಸಿದ ರಾಜೇಂದ್ರ ಜೋಳನ್, ಸರ್, ನಮಗೆ ದಿನಕ್ಕೆ 20 ಮನೆ ಮಾಡಲು ಹೇಳಿದ್ದಾರೆ ಎಂದಿದ್ದಾರೆ. ಆದರೆ ಈ ಪ್ರಶ್ನಾವಳಿಯಲ್ಲಿ ಕಷ್ಟ ಸಾಧ್ಯ. ಕುರಿ ಕೋಳಿ, ಟ್ರ್ಯಾಕ್ಟರ್, ಕೇಸ್, ಖಾಯಿಲೆ ಬಗ್ಗೆ ಎಲ್ಲಾ ಬೇಕಾ? ಸಿಂಪಲ್ ಆಗಿ ಸಮೀಕ್ಷೆ ಮಾಡಿ. ನಮಗೇನೆ ತಾಳ್ಳೆ ಇಲ್ಲ, ಜನ ಎಲ್ಲಿ ಮಾಹಿತಿ ಕೊಡ್ತಾರೆ, ನಡೀರಿ ಅಂತಾರೆ. ಆರ್ಥಿಕ ಸಾಮಾಜಿಕ ಮಾಹಿತಿ ತಕೊಂಡ್ರೆ ಸಾಕು ಎಂದಿರುವ ಡಿಸಿಎಂ ಸಮೀಕ್ಷೆಯಲ್ಲಿ ಪ್ರಶ್ನೆ ಕಡಿಮೆ ಮಾಡಲು ಸಲಹೆ ನೀಡಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ತುಳಸಿ ಮದಿನೇನಿಗೆ ಡಿಸಿಎಂ ಸೂಚನೆ ಕೊಟ್ಟಿದ್ದಾರೆ.

ಆ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಇಂದಿನಿಂದ GBA ವ್ಯಾಪ್ತಿಯಲ್ಲಿ ಸಮೀಕ್ಷೆ ಶುರುವಾಗಿದೆ. ನನ್ನ ಮನೇಲೂ ಮಾಡಿದ್ದಾರೆ, ನಾನು ಮಾಹಿತಿ ನೀಡಿದ್ದೇನೆ. ಎಲ್ಲರೂ ಮಾಹಿತಿ ನೀಡಿ, ಸಮೀಕ್ಷೆಯಲ್ಲಿ ಭಾಗಿಯಾಗಬೇಕು. ಹೆಚ್ಚು ಪ್ರಶ್ನೆ ಕೇಳಬಾರದು, ಯಾರಿಗೂ ತಾಳ್ಮೆ ಇರಲ್ಲ. ಕೋಳಿ, ಚಿನ್ನ ಎಷ್ಟಿದೆ ಎಂದು ಕೇಳ್ತಾರೆ, ಇದೆಲ್ಲಾ ಬೇಡ ಎಂದಿದ್ದಾರೆ. ನನಗೆ ಇಷ್ಟು ಹೊತ್ತು ಮಾಡಿದ್ರೆ ಬೇರೆಯವರಿಗೆ ಎಷ್ಟು ಹೊತ್ತು ಮಾಡ್ತೀರಾ..? ಸಹಕಾರಿ ಬ್ಯಾಂಕುಗಳ ಮೆಂಬರ್ ಶಿಪ್ ಇದೆ. ಹಾಲು ಉತ್ಪಾದಕ ಸಂಘದ ಮೆಂಬರ್ ಶಿಪ್ ನೆನಪಿಲ್ಲ. ನಿಗಮ ಮಂಡಳಿ ಸದಸ್ಯತ್ವ ಇದೆ. ಕೈಗಾರಿಕಾ ನೊಂದಾವಣಿ ಇಲ್ಲ. ನೀರಾವರಿ ಮೂಲ ಬೋರ್ವೆಲ್ ಎಂದು ಬರೆಸಿದ್ದೇನೆ ಎಂದಿದ್ದಾರೆ.

Related posts

ಸಿಎಂ ಸಿದ್ದರಾಮಯ್ಯಗೆ 10 ವರ್ಷದ ಹಳೇ ಸವಾಲು ಮತ್ತೆ ನೆನಪಿಸಿದ HDK

Publicspot

Stone pelting; ರೈತರ ಶಾಲು ಹಾಕಿ ಬಂದವರೆಲ್ಲಾ ರೈತರು ಆಗಲ್ಲ.. ಬೆಳಗಾವಿ ಎಸ್​ಪಿ ಸ್ಪಷ್ಟನೆ..

Publicspot

Namma Metro ಹಳದಿ ಮಾರ್ಗದಲ್ಲಿ ಮಹಾನ್​ ಎಡವಟ್ಟು.. ಜನರೆಲ್ಲಾ ಕಂಗಾಲು..

Publicspot

ಹೊಸ ವರ್ಷ 2026ರ ಸ್ವಾಗತಕ್ಕೆ ಹೇಗಿದೆ ಬೆಂಗಳೂರು ಖಾಕಿ ತಯಾರಿ..?

Publicspot

Mysore Dassara Supreme Court direction; ದಸರಾ ಸಿದ್ದತೆ ನಡುವೆ ಎಲ್ಲರ ಚಿತ್ತ ಸುಪ್ರೀಂಕೋರ್ಟ್‌ನತ್ತ.. ಬಾನು ಬರ್ತಾರಾ..? ಇಲ್ವಾ..?

Publicspot

ಪಾವಗಡದಲ್ಲಿ ವಿದ್ಯುತ್ ಉತ್ಪಾದನೆ ಪ್ಲಾಂಟ್ ಏಷ್ಯಾದಲ್ಲೇ ನಂ 1 ಎಂದ ಸಿಎಂ ಸಿದ್ದರಾಮಯ್ಯ

admin