The Public Spot
Uncategorized

ಹುಟ್ಟುಹಬ್ಬದ ನೆಪದಲ್ಲಿ ಸಾಕಷ್ಟು ರಹಸ್ಯ ಬಿಚ್ಚಿಟ್ಟ ನಟಿ ರಚಿತಾ ರಾಮ್​!

ಸ್ಯಾಂಡಲ್​ವುಡ್​ ನಟಿ ರಚಿತಾ ರಾಮ್​ 33ನೇ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಬರ್ತ್ ಡೇ ಆಚರಣೆ ಮಾಡಿಕೊಂಡಿದ್ದಾರೆ. ಆರ್. ಆರ್ ನಗರದ ನಿವಾಸದ ಮುಂದೆ ಹುಟ್ಟುಹಬ್ಬ ಆಚರಿಸಿಕೊಂಡ ಡಿಂಪಲ್​ ಕ್ವೀನ್​ಗೆ ಶುಭ ಕೋರಿ ಅಯೋಗ್ಯ-2 ಹಾಗೂ ಲ್ಯಾಂಡ್ ಲಾರ್ಡ್ ಟೀಸರ್ ರಿಲೀಸ್ ಮಾಡಲಾಗಿದೆ. ಡೊಳ್ಳು‌ಕುಣಿತ, ಯಕ್ಷಗಾನ ಕಲಾವಿದರಿಂದ ನೃತ್ಯ ಪ್ರದರ್ಶನ ಕೂಡ ಮಾಡಲಾಯ್ತು. ರಚಿತಾ ನಿವಾಸದ ಬಳಿ ಸಾಕಷ್ಟು ಅಭಿಮಾನಿಗಳು ಜಮಾಯಿಸಿ ಶುಭ ಕೋರಿದ್ರು. ನಿನ್ನೆ ದಿನಪೂರ್ತಿ ಆರ್ ಆರ್ ನಗರದ ನಿವಾಸದಲ್ಲಿ ಇದ್ದುಕೊಂಡು ಮನೆಗೆ ಬಂದ ಅಭಿಮಾನಿಗಳನ್ನು ಭೇಟಿ ಮಾಡಿದ್ರು. ಹುಟ್ಟು ಹಬ್ಬದ ದಿನ ನಟಿ ರಚಿತಾ ರಾಮ್ ಮಾತನಾಡಿ, 2 ವರ್ಷದ ನಂತರ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದೇನೆ. ಮಾಧ್ಯಮದವರ ಜೊತೆ ಫಸ್ಟ್ ಟೈಮ್ ಬರ್ತ್​​ ಡೇ ಸೆಲೆಬ್ರೇಷನ್ ಮಾಡಿದ್ದೇನೆ ಎಂದಿದ್ದಾರೆ.

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಸರ್ ಕಾಲ್ ಮಾಡಿ ವಿಶ್ ಮಾಡಿದ್ರು, ಖುಷಿ ಆಯ್ತು ಎಂದಿರುವ ಡಿಂಪಲ್​ ಕ್ವೀನ್​, ಕೂಲಿ ಸಿನಿಮಾದಲ್ಲಿ ಒಳ್ಳೆ ಪಾತ್ರ ಸಿಕ್ಕಿದೆ. ಲ್ಯಾಂಡ್ ಲಾರ್ಡ್ ಸಿನಿಮಾ ಸಿಗೋದಕ್ಕೆ ದರ್ಶನ್ ಕಾರಣ. ನಾನು ಅವರ ಜೊತೆ ಮಾತಾಡಿದಾಗ ಒಪ್ಕೋ ಅಂದ್ರು. ನಿನ್ನೆ ರಾತ್ರಿ ಕಾಂತಾರ ಬಗ್ಗೆ ಮಾತಾಡಿದಾಗ ಮೈ ಜುಮ್ ಅನ್ನಿಸಿತ್ತು. ಲ್ಯಾಂಡ್ ಲಾರ್ಡ್ ಸಿನಿಮಾದ ಟೀಸರ್ ಅಷ್ಟೇ ಮೈ ಜುಮ್ ಅನ್ಸುತ್ತೆ. ಲ್ಯಾಂಡ್ ಲಾರ್ಡ್ ಸಿನಿಮಾದಲ್ಲಿ ದುನಿಯಾ ವಿಜಯ್ ಮಗಳ ತಾಯಿ ಪಾತ್ರದಲ್ಲಿ ಕಾಣಿಸ್ಕೊಳ್ತಿದ್ದೀನಿ ಎಂದಿದ್ದಾರೆ. ಇನ್ನೂ ರಾಜಕೀಯಕ್ಕೆ ಬರ್ತೀರ ಅನ್ನೋ ಮಾತಿಗೆ ನಾನು ರಾಜಕೀಯಕ್ಕೆ ಬರೋ ಮಾತೇ ಇಲ್ಲ. ರಾಜಕಾರಣ ನನಗೆ ಗೊತ್ತಿಲ್ಲ.. ಹೀಗಾಗಿ ರಾಜಕೀಯ ಹೋಗಲ್ಲ. ಸಾಕಷ್ಟು ಸಿನಿಮಾಗಳು ಬರ್ತಿವೆ, ಬೇರೆ ಇಂಡಸ್ಟ್ರಿ ಇಂದ ನೆಗೆಟಿವ್ ಪಾತ್ರಗಳೇ ಬರ್ತಿದೆ. ಆದರೆ ಎಲ್ಲವನ್ನೂ ಹೋಗಿ ಮಾಡೋಕೆ ಆಗಲ್ಲ. ಸೆಲೆಕ್ಟಿವ್ ಆಗಿ ಆಯ್ಕೆ ಮಾಡ್ಕೊಂಡು ಸಿನಿಮಾ ಮಾಡ್ತೇನೆ ಎಂದಿದ್ದಾರೆ.

ಕೂಲಿ ಸಿನಿಮಾದಿಂದ ನನಗೆ ಬೇರೆ ಬೇರೆ ಇಂಡಸ್ಟ್ರಿಗಳಿಂದ ಸಿನಿಮಾ ಆಫರ್​ ಬರ್ತಿದೆ. ಅದಕ್ಕೆ ಡೈರೆಕ್ಟರ್ ಲೋಕೇಶ್ ಕನಗರಾಜ್ ಕಾರಣ, ಅವರಿಗೆ ಧನ್ಯವಾದ. ನಾನು ಮದುವೆ ಆದ್ರೆ ಅರೆಂಜ್ಡ್ ಮ್ಯಾರೇಜ್ ಆಗ್ತೀನಿ. ಸದ್ಯಕ್ಕೆ ಮನೆಯಲ್ಲಿ ಹುಡುಗನನ್ನು ಹುಡುಕ್ತಿದ್ದಾರೆ. ಡ್ರೀಮ್ ಬಾಯ್ ಅಂತೇನು ಇಲ್ಲ, ಅಂಥಾ ಆಸೆಗಳು ಇಲ್ಲ. ನೋಡೋಣ ಕಂಕಣ ಭಾಗ್ಯ ಇದ್ದಾಗ ಮದುವೆ ಆಗ್ತೀನಿ ಎಂದಿದ್ದಾರೆ. ಇನ್ನು ಮೂಗು ಚುಚ್ಚಿಸಿರೋದಕ್ಕೂ, ಮದುವೆಗೂ ಲಿಂಕ್ ಇಲ್ಲ. ಮೂಗು ಚುಚ್ಚಿಸ್ಕೋಬೇಕು ಅಂತ ಆಸೆಯಾಗಿ ಚುಚ್ಚಿಸ್ಕೊಂಡಿದ್ದೀನಿ ಅಷ್ಟೆ ಅಂತಾ ಗಾಸಿಪ್​ಗೂ ಉತ್ತರ ಕೊಟ್ಟಿದ್ದಾರೆ. ಇನ್ನು ರಾಜಕಾರಣದಲ್ಲಿ ಆಸೆ ಇಲ್ಲ ಎನ್ನುತ್ತಲೇ ನಾನು ಮುಂದಿನ ಬಾರಿಗೆ ಆಕಾಂಕ್ಷಿ ಎನ್ನುವ ಸಂದೇಶ ರವಾನೆ ಮಾಡಿದಂತಿದೆ. ಅಷ್ಟರೊಳಗೆ ಮದುವೆ ಕೂಡ ಆಗ್ತೀನಿ ಅಂತಾನೂ ಸುಳಿವು ಕೊಟ್ಟಿದ್ದಾರೆ.

Related posts

PIL rejected by supreme court; ಸುಪ್ರೀಂಕೋರ್ಟ್‌ ಆದೇಶ ಮುಚ್ಚಿಟ್ಟು SIT ರಚನೆ ಮಾಡಿತಾ ಸರ್ಕಾರ..?

Publicspot

Kanthara Rishab Shetty Master Plan; ಕಾಂತಾರ ಅಧ್ಯಾಯ ಒಂದರ ಪ್ರಚಾರ ಶುರುವಾಗಿದೆ.. ಶೆಟ್ಟರ ಬುದ್ಧಿವಂತಿಕೆ ವರ್ಕ್​ ಆಗ್ತಿದೆ..

ಯಶವಂತಿ

American Presidents Target India: ಭಾರತವನ್ನು ಟಾರ್ಗೆಟ್​ ಮಾಡಿದ್ಯಾ ಅಮೆರಿಕ..?

Publicspot

ಅಮೆರಿಕ ಎದುರು ಗುಟುರು ಹಾಕಿದ ಭಾರತ – ರಷ್ಯಾ ಜೋಡಿ..

Publicspot

Supreme Court; ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆತ.. ಕಾರಣ ಏನು..?

Publicspot

ನಾಳೆ ರಾಮನ ಊರಿನಲ್ಲಿ ಧ್ವಜಾರೋಹಣ.. ಮೋದಿಗಾಗಿ ಬಂದೋಬಸ್ತ್

Publicspot