The Public Spot
ರಾಜ್ಯ

ಸಿಎಂ ಸಿದ್ದರಾಮಯ್ಯಗೆ 10 ವರ್ಷದ ಹಳೇ ಸವಾಲು ಮತ್ತೆ ನೆನಪಿಸಿದ HDK

ಕೋಲಾರದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಾತನಾಡಿ, ನಾನು ಯಾವುದೇ ಕ್ರಾಂತಿ ಬಗ್ಗೆ ಹಗಲು ಕನಸು ಬಗ್ಗೆ ಮಾತನಾಡಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದೇನೆ. ಯಾವುದೆ ಪಕ್ಷ, ಯಾವುದೆ ನಾಯಕರು ಏನ್ ತೀರ್ಮಾನ ಮಾಡುತ್ತಾರೋ ಎಂದು. ನಾವು ಯಾರೂ ಊಹೆ ಮಾಡಕ್ಕಾಗಲ್ಲ. ನಮ್ಮ ಪಕ್ಷದ ನಾಯಕರು ಮೈ ಮರೆಯದೆ ಕೆಲಸ‌ ಮಾಡುವಂತೆ ಕರೆ‌ ನೀಡಿದ್ದೇನೆ. ಏನೂ ಬೇಕಾದ್ರು ಆಗಬಹುದು ಎಂದು ಹೇಳಿದ್ದೇನೆ ಹೊರತು. 6 ತಿಂಗಳಲ್ಲಿ ಸರ್ಕಾರ ಬೀಳುತ್ತೆ ಎಂದು ನಾನು ಹೇಳಿಲ್ಲ ಎಂದಿದ್ದಾರೆ. ನಾನೂ ಊಹೆಯಲ್ಲೂ ಇಲ್ಲ ಹಾಗಂತ ಭ್ರಮೆಯಲ್ಲೂ ನಾನಿಲ್ಲ ಎಂದಿದ್ದಾರೆ ಕುಮಾರಸ್ವಾಮಿ.

ಮುಖ್ಯಮಂತ್ರಿ ಅವಕಾಶ ಸಿಕ್ಕಾಗ ಎಷ್ಟು ಬೇಕೋ ಅಷ್ಟು ಲೂಟಿ ಮಾಡಬೇಕು ಅನ್ನೋದೆ ಅವರ ಉದ್ದೇಶ ಆಗಿದೆ. ಈಗ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು‌ ನೋಡುತ್ತಿದ್ರೆ ಏನಾಗುತ್ತೋ ಏನೋ ಅನ್ನೋದು ಗೊತ್ತಿಲ್ಲ. ನಮ್ಮ ಜೆಡಿಎಸ್‌ ಸ್ಥಾಪನೆಯಾಗಿ 25ನೇ ವರ್ಷದ ಕಾರ್ಯಕ್ರಮದಲ್ಲಿ ನಾನು ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇನೆ. ಈಗಿನ ಸರ್ಕಾರ 136 ಸ್ಥಾನ ಗೆದ್ರೂ ಸಹ ಗ್ಯಾರಂಟಿ ಘೋಷಣೆ ಮಾಡಿ ಅದನ್ನ ಬಿಟ್ಟು ಮುಂದೆ ಹೋಗಿಲ್ಲ. ಗ್ಯಾರಂಟಿಯಿಂದ ಜನ ನೆಮ್ಮದಿಯಿಂದ ಬದುಕುತ್ತಿದ್ದಾರಾ..? ಯಾವ ಪರಿಸ್ಥಿತಿ ರಾಜ್ಯದ ಜನ ಎದುರಿಸುತ್ತಿದ್ದಾರೆ. ಮೆಕ್ಕೆ ಜೋಳ ಬೆಳೆದ ರೈತರ ಪರಿಸ್ಥಿತಿ ಏನು..? ಕೋಲಾರದ ರೈತರ‌ ಜೀವನ ಸುಧಾರಿಸಿದ್ಯಾ..? ಎಂದು ಪ್ರಶ್ನೆ ಮಾಡಿದ್ದಾರೆ.

ಮೈತ್ರಿ ಎಲ್ಲಾ ಚುನಾವಣೆಗಳಲ್ಲೂ ಸಾಧ್ಯ ಇಲ್ಲ, ಕೆಲವು ಸ್ಥಳೀಯ ಚುನಾವಣೆಗಳಲ್ಲಿ ಸಾಧ್ಯ ಇಲ್ಲ. ವಿಧಾನಸಭೆ, ಲೋಕಸಭೆ ಚುನಾವಣೆ ಬಂದಾಗ ಮೈತ್ರಿ ಧರ್ಮ ಇರುತ್ತದೆ. ರಾಜ್ಯ ರಾಜಕಾರಣಕ್ಕೆ ಜನ ಬಯಸಿದಾಗ ಜನ ಕರೆದುಕೊಂಡು ಬರುತ್ತಾರೆ. ಬಿಹಾರ ಚುನಾವಣೆ ನಡೆದಿರುವುದೆ ಬೇರೆ ರೀತಿಯಲ್ಲಿ. ನಿತೀಶ್ ಕುಮಾರ್ 20 ವರ್ಷಗಳಿಂದ ಜನ ಸಂಪರ್ಕದಲ್ಲಿದ್ದಾರೆ. ಅಲ್ಲಿಯ ಚುನಾವಣೆಯ ಪ್ಯಾಟರ್ನ್ ಬೇರೆ, ರಾಜ್ಯದ ಪ್ಯಾಟರ್ನೆ ಬೇರೆ. ಕಾಂಗ್ರೆಸ್ ಪಕ್ಷ ಸಿಎಂ ಸ್ಥಾನದ ಪೈಪೋಟಿ ನಡೆಯುತ್ತಿದೆ. ಅದು ಬಿಟ್ರೆ ರಾಜ್ಯದಲ್ಲಿ ಸಿಎಂ ಆಗಿ ಎಷ್ಟು ಲೂಟಿ ಮಾಡಬೇಕು ಅನ್ನೋದಷ್ಟೆ ಕಾಂಗ್ರೆಸ್ ಲೆಕ್ಕಾಚಾರ ಎಂದು ಕೋಲಾರದ ಕಾಮದೇನಹಳ್ಳಿ ಗ್ರಾಮದಲ್ಲಿ HDK ಆಕ್ರೋಶ ಹೊರ ಹಾಕಿದ್ದಾರೆ.

ಕೋಲಾರದಲ್ಲಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಮಾತನಾಡಿ, 2 ವರ್ಷದಲ್ಲಿ ಕೋಲಾರಕ್ಕೆ ಎತ್ತಿನಹೊಳೆ ನೀರು ಹರಿಯಲಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ. 10 ವರ್ಷದ ಹಿಂದೆಯೇ ತಲೆ ಕೂದಲು ಬೋಳಿಸಿಕೊಳ್ಳುವ ಸವಾಲು ಹಾಕಿದ್ದೆ. ಈಗ ತಲೆಯಲ್ಲಿ ಕೂದಲು ಇಲ್ಲ, ಆದರೂ ಅದೇ ಮಾತು ಹೇಳ್ತೀನಿ. 2 ವರ್ಷದಲ್ಲಿ ಎತ್ತಿನಹೊಳೆ ನೀರು ಬಂದರೆ ನನ್ನದು ಮತ್ತದೇ ಸವಾಲು ನನ್ನದು ಎಂದಿದ್ದಾರೆ. ಕೋಲಾರಕ್ಕೆ ಎತ್ತಿನಹೊಳೆ ನೀರು ಹರಿಯುವುದು ಅನುಮಾನ ಎಂದಿದ್ದಾರೆ.

Related posts

ಮೇಕೆದಾಟು ಡ್ಯಾಂಗೆ ತಮಿಳುನಾಡು ವಿರೋಧ.. ಸಮಸ್ಯೆ ಆಗೋದೇ ನಮಗಲ್ಲ..!!

Publicspot

ಒಳ ಮೀಸಲಾತಿ ನಡುವೆ ಸುಪ್ರೀಂನಲ್ಲಿ ಆದಾಯ ಆಧಾರಿತ ಮೀಸಲಾತಿ ಸದ್ದು..!

ಯಶವಂತಿ

Caste Census Issue: ಜಾತಿ ಜನಗಣತಿ ಆರಂಭಕ್ಕೂ ಮುನ್ನವೇ ಶುರುವಾಯ್ತು ಗೊಂದಲ

Publicspot

Independence Day: 79ನೇ ಸ್ವಾತಂತ್ರ್ಯೋತ್ಸವಕ್ಕೆ ನೀವೂ ಹೋಗಬಹುದು.. ಪಾಸ್‌ ಎಲ್ಲಿ ಸಿಗುತ್ತೆ ಗೊತ್ತಾ..?

ಯಶವಂತಿ

ಕುರುಬರಿಗೆ ಎಸ್ಟಿ ಮೀಸಲಾತಿ ಕೇಂದ್ರ ವಾಪಸ್‌ ಕಳುಹಿಸಿದೆ.. ನಾನು ಮತ್ತೆ ಕಳುಹಿಸುತ್ತೇನೆ..

Publicspot

Veerendra Heggade: ಧರ್ಮಸ್ಥಳದಿಂದ ಸರ್ಕಾರಕ್ಕೆ ಧನ್ಯವಾದ.. ಒಳ್ಳೆಯದ್ದೇ ಮಾಡುವ ಭರವಸೆ..

Publicspot