The Public Spot
ರಾಜಕೀಯ

Congress and Kannadigas; ಕನ್ನಡಿಗರ ಮೇಲಿನ ಪ್ರೀತಿಗಿಂತಾ ಅನ್ಯರೇ ಕಾಂಗ್ರೆಸ್ಗೆ ಮುಖ್ಯನಾ..?

ಕಾಂಗ್ರೆಸ್ ಮಾಡುವುದಕ್ಕೂ ವಿರೋಧ ಪಕ್ಷ ಬಿಜೆಪಿ, ಜೆಡಿಎಸ್ ಆರೋಪ ಮಾಡುವುದಕ್ಕೂ ಕಾಗೆ ಬಂದು ಕೂರುವುದಕ್ಕೂ ರೆಂಬೆ ಮುರಿದು ಬೀಳುವುದಕ್ಕೂ ಒಂದೇ ಆಯ್ತು ಎನ್ನುವಂತಿದೆ. ಕಾಂಗ್ರೆಸ್ ಸರ್ಕಾರ ಹಾಸನದ ಗಣೇಶ ಉತ್ಸವದಲ್ಲಿ ಸಾವನ್ನಪ್ಪಿದ 10 ಜನರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಅದೇ ರೀತಿ ಕೇಂದ್ರ ಸರ್ಕಾರ ಕೂಡ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಆದರೆ ಪರಿಹಾರದ ಮೊತ್ತವನ್ನು 10 ಲಕ್ಷಕ್ಕೆ ಏರಿಕೆ ಮಾಡಬೇಕು ಎನ್ನುವ ಆಗ್ರಹವನ್ನು ವಿರೋಧ ಪಕ್ಷಗಳ ನಾಯಕರು ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ 93ನೇ ವಯಸ್ಸಿನಲ್ಲೂ ಜನರ ಮನೆ ಬಾಗಿಲಿಗೆ ಹೋಗಿ ಸಾಂತ್ವನ ಹೇಳುತ್ತಿರುವ ಮಾಜಿ ಪ್ರಧಾನಿ ದೇವೇಗೌಡರು, JDS ಪಕ್ಷದಿಂದ 1 ಲಕ್ಷ ಪರಿಹಾರ ಘೋಷಣೆ ಮಾಡಿ, ಸರ್ಕಾರ 10 ಲಕ್ಷ ಪರಿಹಾರ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ಆದರೆ..

ರಾಜ್ಯ ಕಾಂಗ್ರೆಸ್ ಸರ್ಕಾರ ಹಿಮಾಚಲ ಪ್ರದೇಶಕ್ಕೆ 5 ಕೋಟಿ ರೂಪಾಯಿ ನೆರವು ನೀಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹಿಮಾಚಲ ಪ್ರದೇಶ ಸಿಎಂಗೆ ಪತ್ರ ಬರೆದು ತಿಳಿಸಿದ್ದಾರೆ. ಕೇರಳ ಬಳಿಕ ಹಿಮಾಚಲ ಪ್ರದೇಶಕ್ಕೆ ಕೊಡುಗೈ ದಾನಿಯಂತೆ ಪರಿಹಾರ ನೀಡಲು ಮುಂದಾಗಿರುವುದು ನಿಜವಾಗಲೂ ರಾಜ್ಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಾಗಿರುವ ಕಾರಣಕ್ಕೆ ಭಾರೀ ನಷ್ಟ ಉಂಟಾಗಿದೆ ಎನ್ನುವ ಕಾರಣಕ್ಕೆ ಹಿಮಾಚಲ ಪ್ರದೇಶ ರಾಜ್ಯದ ನೆರವಿಗೆ ಮುಂದಾಗಿರುವ ರಾಜ್ಯ ಸರ್ಕಾರ ಕ್ರಮವನ್ನು ಕಟುವಾಗಿ ಟೀಕಿಸುತ್ತಿದ್ದಾರೆ. ಹಿಮಾಚಲ ಪ್ರದೇಶದ ನೆರೆ ಹಾನಿಗೆ 5 ಕೋಟಿ ನೆರವು ನೀಡಿದ ರಾಜ್ಯ ಸರ್ಕಾರ, ನಮ್ಮದೇ ನಾಡಿನ ಜನರಿಗೆ 10 ಲಕ್ಷ ರೂಪಾಯಿ ನೀಡಲು ಸಾಧ್ಯವಿಲ್ಲ ಎಂದಿರುವುದು ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.

ಈ ಹಿಂದೆ ಕೇರಳದಲ್ಲಿ ಆನೆ ಕಾಲ್ತುಳಿತ ಘಟನೆಗೆ 25 ಲಕ್ಷ ರೂಪಾಯಿ ಪರಿಹಾರ ನೀಡಿದ್ದ ಕಾಂಗ್ರೆಸ್ ಸರ್ಕಾರ, ಈಗ ದೂರದ ಹಿಮಾಚಲ ಪ್ರದೇಶದ ನೋವಿಗೆ ಸ್ಪಂದಿಸುತ್ತಿದೆ. ಆದರೆ ಕರ್ನಾಟಕದ ಜನರು ಅಂದರೆ ಅಸಡ್ಡೆಯೇ ಎಂದು ಸರ್ಕಾರದ ನಡೆಯನ್ನು ಬಿಜೆಪಿ, ಜೆಡಿಎಸ್ ಕಟುವಾಗಿ ಟೀಕಿಸಿವೆ. ರಾಜ್ಯದಲ್ಲಿ ಮಳೆ ಹಾನಿಗೆ ಸರ್ಕಾರದ ಬಳಿ ಹಣವಿಲ್ಲ, ಆದರೆ ಅನ್ಯ ರಾಜ್ಯಗಳಿಗೆ ಹಣದ ನೆರವು ನೀಡಲಾಗ್ತಿದೆ ಎಂದು ಟೀಕಿಸಿದ್ದಾರೆ. ಹಿಮಾಚಲ ಪ್ರದೇಶಕ್ಕೆ 5 ಕೋಟಿ ನೆರವಿನ ಬಗ್ಗೆ ಸರ್ಕಾರದಿಂದ ಪತ್ರ ಬರೆದಿರುವುದಕ್ಕೆ ಬಿಜೆಪಿ ಶಾಸಕ ಅಶ್ವತ್ಥ ನಾರಾಯಣ್ ಖಂಡನೆ ವ್ಯಕ್ತಪಡಿಸಿದ್ದಾರೆ. ಮೊನ್ನೆ ನಡೆದ ಗಣೇಶನ ಮೆರವಣಿಗೆಯಲ್ಲಿ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದ ರಸ್ತೆಗಳು ಸುರಕ್ಷತೆ ಇಲ್ಲ. ಆದರೆ ಹಿಮಾಚಲ ಪ್ರದೇಶಕ್ಕೆ 5 ಕೋಟಿ ಘೋಷಣೆ ಮಾಡಿದ್ದಾರೆ. ಪ್ರಾಣ ಕಳೆದುಕೊಂಡವರಿಗೆ 25 ಲಕ್ಷ ಪರಿಹಾರ ನೀಡಿ ಎಂದು ಸಿಎಂ ಬಳಿ ಮನವಿ ಮಾಡ್ತೇನೆ ಎಂದಿದ್ದಾರೆ.

ಹಾಸನದಲ್ಲಿ ಸಾವನ್ನಪ್ಪಿದವರನ್ನು ಕೇರಳದವರು ಅಂದುಕೊಂಡು ಪರಿಹಾರ ಕೊಡಿ ಎಂದು ವ್ಯಂಗ್ಯವಾಡಿದ್ದಾರೆ. ಕಣ್ಣೂರಿನವರು, ವಯನಾಡಿನವರು, ಹಿಮಾಚಲ ಪ್ರದೇಶದವರು ಎಂದುಕೊಂಡು ಅವರಿಗೂ ಪರಿಹಾರ ಕೊಡಿ ಎಂದಿದ್ದಾರೆ ಮಾಜಿ ಡಿಸಿಎಂ ಅಶ್ವತ್ಥ ನಾರಾಯಣ್. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಸನ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಹೆಚ್ಚಿನ ಪರಿಹಾರಕ್ಕೆ ಆಗ್ರಹ ಮಾಡಿದ್ದಾರೆ. ಹಿಂದೆ ನಡೆದ ಹಲವು ಪ್ರಕರಣಗಳಲ್ಲಿ ಇದೇ ಸಿಎಂ ಹೆಚ್ಚು ಪರಿಹಾರ ಕೊಟ್ಟಿದ್ದಾರೆ. ಹಾಸನದಲ್ಲಿ ಸತ್ತವರು ಅಮಾಯಕರು, ಯುವಕರು. ಅವರ ಕುಟುಂಬಗಳು ಕಷ್ಟದಲ್ಲಿದ್ದಾರೆ, ಇದೆಲ್ಲ ನೋಡಿಕೊಂಡು ಹೆಚ್ಚು ಪರಿಹಾರ ಕೊಡಲಿ ಎಂದಿದ್ದಾರೆ.

ಎಲ್ಲಿಯ ಕೇರಳ..? ಎಲ್ಲಿಯ ಹಿಮಾಚಲ..? ಅಲ್ಲಿನ ಜನರ ಕಷ್ಟಕ್ಕೆ ಸ್ಪಂದಿಸುವುದು ಮಾನವೀತೆಯೇ ಎಂದು ನಂಬೋಣ. ಆದರೆ ನಮ್ಮ ಮನೆಯಲ್ಲಿ ಸತ್ತವರು, ಅವರ ಕುಟುಂಬದವರು ಜೀವನ ಪರ್ಯಂತ ಮಕ್ಕಳಿಲ್ಲದೆ ಬದುಕಬೇಕು. ಅಷ್ಟೇ ಅಲ್ಲದೆ ಮಕ್ಕಳನ್ನು ಓದಿಸಲು ಲಕ್ಷ ಲಕ್ಷ ಸಾಲ ಮಾಡಿದ್ದರೆ ಆ ಸಾಲ ತೀರಿಸಲು ಈ ಪರಿಹಾರ ಸಾಕಾಗುತ್ತದೆ. ಆದರೆ ಮುಂದೆ ಮಕ್ಕಳು ಅವರನ್ನು ನೋಡಿಕೊಳ್ಳುತ್ತಾರೆ ಅನ್ನೋ ನಂಬಿಕೆಯಲ್ಲಿ ಏನನ್ನೂ ಕೂಡಿಡದೆ ಬದುಕುತ್ತಿರುತ್ತಾರೆ. ಈಗ ಮಕ್ಕಳೇ ಇಲ್ಲದೆ ಇರುವಾಗ ಮುಂದಿನ ಭವಿಷ್ಯ ಏನು..? ವೃದ್ಧಾಪ್ಯದಲ್ಲಿ ಆ ಹಿರಿಯ ಜೀವಗಳನ್ನು ನೋಡಿಕೊಳ್ಳುವವರು ಯಾರು..? ಈಗ ಸರ್ಕಾರ ಕೊಡುವ ಪರಿಹಾರದ ಹಣವನ್ನು ಬ್ಯಾಂಕ್ನಲ್ಲಿ ಇಟ್ಟುಕಕೊಂಡಾದರೂ ಜೀವನ ನಡೆಸಬಹುದು ಅಲ್ಲವೇ..? ಮಕ್ಕಳನ್ನ ಕಳೆದುಕೊಂಡವರ ಬದುಕು ಬೀದಿಗೆ ಬರಬಾರದು ಅನ್ನೋದಾರೆ ಪರಿಹಾರ ಹೆಚ್ಚಿಉಸಬೇಕು. ಪಕ್ಕದ ಮನೆಯವರಿಗೂ ಮರುಗೋಣ, ಅದಕ್ಕೂ ಮೊದಲು ನಮ್ಮ ಮನೆಯವರೂ ಮುಖ್ಯ ಅಲ್ಲವೇ..?

Related posts

ಚಿತ್ತಾಪುರದಲ್ಲಿ RSS ಪಥ ಸಂಚಲನ VS ಭೀಮ್‌ ಆರ್ಮಿ ಫೈಟ್‌ ಸಂಚಲನ..!!

Publicspot

BiggBoss Congress; ಬಿಗ್​ಬಾಸ್​ ವಿಚಾರದಲ್ಲಿ ಹೊರಬಿತ್ತು ಕಾಂಗ್ರೆಸ್​ ಅಸಮಾಧಾನ!!

Publicspot

Vote Theft.. ರಾಹುಲ್​ ಆರೋಪಕ್ಕೆ ಟೀಕೆ ಮಾಡಿದವರಿಗೆ ಪ್ರಿಯಾಂಕ್​ ತಿರುಗೇಟು..

Publicspot

ಮನರೇನಾ ಹೆಸರು ಬದಲಿಸದಂತೆ ಕಾಂಗ್ರೆಸ್‌ ಲೋಕಭವನ ಚಲೋ!

Publicspot

‘ಸಿದ್ದರಾಮಯ್ಯ ಇರೋ ತನಕ ನನ್ನ ಭವಿಷ್ಯಕ್ಕೆ ಏನೂ ಆಗಲ್ಲ’ ರಾಜಣ್ಣ ಸವಾಲು..

Publicspot

BJP ಬಾಣವನ್ನು ಬಿಜೆಪಿಗೇ ತಿರುಗಿಸಿದ ಸಚಿವ ಕೃಷ್ಣಬೈರೇಗೌಡ..!

Publicspot