The Public Spot
ರಾಜಕೀಯ

ಮನರೇನಾ ಹೆಸರು ಬದಲಿಸದಂತೆ ಕಾಂಗ್ರೆಸ್‌ ಲೋಕಭವನ ಚಲೋ!

ಕೇಂದ್ರ ಸರ್ಕಾರ ಮನರೇಗಾ ಯೋಜನೆ ಹೆಸರನ್ನು ಜಿ ರಾಮ್ ಜಿ ಎಂದು ಬದಲಾಯಿಸಿರುವ ನಿರ್ಧಾರವನ್ನು ಕಾಂಗ್ರೆಸ್ ವಿರೋಧಿಸಿದೆ. ಇವತ್ತು ಬೃಹತ್ ಹೋರಾಟದ ಮೂಲಕ ಬೆಂಗಳೂರಿನ ಫ್ರೀಡಂ ಪಾರ್ಕ್‌‌ನಲ್ಲಿ ಬೆಳಗ್ಗೆ 10ಗಂಟೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ. ಲೋಕಭವನ ಚಲೋ ಮೂಲಕ ಮನರೇಗಾ ಯೋಜನೆ ಮರು ಅನುಷ್ಠಾನ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಿದ್ದಾರೆ.

ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಜೆಡಿಎಸ್ ದೋಸ್ತಿ ಕೂಡ ಕೌಂಟರ್ ಹೋರಾಟ ನಡೆಸ್ತಿದ್ದಾರೆ. ವಿಧಾನಸಭೆಯಲ್ಲಿ ಗವರ್ನರ್ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕಾಂಗ್ರೆಸ್ ಶಾಸಕರು ತೋರಿದ ಅಗೌರವ ಹಾಗೂ ಅಬಕಾರಿ ಇಲಾಖೆಯಲ್ಲಿ ಲಂಚ ಪ್ರಕರಣ ಸಂಬಂಧ ಸಚಿವ ಆರ್.ಬಿ ತಿಮ್ಮಾಪುರ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಿದ್ದಾರೆ. ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಬೆಳಗ್ಗೆ 9 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ‌, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಸೇರಿದಂತೆ ಉಭಯ ಪಕ್ಷದ ಶಾಸಕರು ಪಾಲ್ಗೊಂಡು ಕಾಂಗ್ರೆಸ್ ಹೋರಾಟಕ್ಕೆ ತಿರುಗೇಟು ಕೊಡಲು ಮುಂದಾಗಿದ್ದಾರೆ..

ವಿಧಾನಮಂಡಲ ಅಧಿವೇಶನದ ನಡುವೆ ರಾಜ್ಯ ಸರ್ಕಾರ ಲೋಕ ಭವನ ಚಲೋ ಹಮ್ಮಿಕೊಂಡಿರುವ ಬಗ್ಗೆ ಬಿಜೆಪಿ ಹಿರಿಯ ಶಾಸಕ ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಾಲತಾಣದಲ್ಲಿ ಶಾಸಕ ಸುರೇಶ್ ಕುಮಾರ್ ಕಿಡಿ ಕಾರಿದ್ದಾರೆ. ವಿಧಾನಸಭೆಯ ಅಧಿವೇಶನವನ್ನು ಬೆಳಗ್ಗೆ 10 ಗಂಟೆಗೆ ಕರೆಯಲಾಗಿದೆ. ಮೊದಲು ಪ್ರಶ್ನೋತ್ತರ ನಂತರ ರಾಜ್ಯಪಾಲರ ಭಾಷಣದ ಮೇಲೆ ಗೊಂದಲ ನಿರ್ಣಯದ ಕುರಿತು ಚರ್ಚೆ ಎಂಬುದು ಅಜೆಂಡಾ. ಆದರೆ ಬೆಳಗ್ಗೆ 11 ಗಂಟೆಗೆ ಫ್ರೀಡಂ ಪಾರ್ಕ್‌ನಿಂದ ಕಾಂಗ್ರೆಸ್ ಲೋಕಭವನ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಧಿವೇಶನದ ಸಮಯದಲ್ಲಿಯೇ ಆಳುವ ಪಕ್ಷ ಈ ರೀತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ತನ್ನ ಶಾಸಕರುಗಳೆಲ್ಲಾ ಭಾಗವಹಿಸುತ್ತಾರೆ ಎಂದು ಹೇಳಿರುವುದು ಎಷ್ಟು ಸಮಂಜಸ..? ಎಂದು ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿನ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಮುತ್ತಿಗೆ ಮಾಡುವಂತಹ ಕಾರ್ಯಕ್ರಮವನ್ನು ಕರ್ನಾಟಕ ಹೈಕೋರ್ಟ್‌ ನಿರ್ದೇಶನಂತೆ ನಿಷೇಧಿಸಲಾಗಿದೆ. ಒಂದೊಮ್ಮೆ ಆಳುವ ಪಕ್ಷಕ್ಕೆ ಈ ರೀತಿ ಮುತ್ತಿಗೆ ಎಂಬ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರೆ ಬೇರೆ ಪಕ್ಷಗಳಿಗೂ ಅವಕಾಶ ನೀಡಲಾಗುತ್ತದೆಯೇ..? ಎಂದು ಪ್ರಶ್ನಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷವೇ ಕಾನೂನು ಉಲ್ಲಂಘಿಸುವುದು ಎಷ್ಟು ಸಮಂಜಸ..? ಎಂದು ಪ್ರಶ್ನಿಸಿದ್ದಾರೆ. ಆಡಳಿತ ನಡೆಸಬೇಕಾದ ಪಕ್ಷವೇ ಈ ರೀತಿ ಲೋಕಭವನ ಮುತ್ತಿಗೆ ಹಾಕುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸೂಕ್ತವೇ..? ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ಟಾರೆ ಕಾಂಗ್ರೆಸ್‌‌ ಚಲೋ ನಡೆಸುತ್ತಿದೆ. ಫ್ರೀಡಂ ಪಾರ್ಕ್‌ನಿಂದ ಲೋಕಭವನ ತನಕ ಪಾದಯಾತ್ರೆ ತೆರಳಲಿದ್ದು, ಟ್ರಾಫಿಕ್ ಕಿರಿಕಿರಿ ಕಟ್ಟಿಟ್ಟ ಬುತ್ತಿ ಎನ್ನಬಹುದು.

Related posts

ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಭಾಷಣ ಹಗ್ಗಾಜಗ್ಗಾಟ..!

Publicspot

November Action; ದೆಹಲಿಯಿಂದ ಬಂದ ಸತೀಶ್​ ಜಾರಕಿಹೊಳಿ ಹೇಳಿದ್ದೇನು..?

Publicspot

ವೀರಶೈವ ಲಿಂಗಾಯತರಿಗೆ ದಾವಣಗೆರೆಯಿಂದ ಹೊಸ ದಿಕ್ಸೂಚಿ ಸಿಕ್ಕಿದೆ: ಬಸವರಾಜ ಬೊಮ್ಮಾಯಿ

admin

ಔಟ್‌ ಗೋಯಿಂಗ್‌ ಸಿಎಂ ಸಿದ್ದರಾಮಯ್ಯಗೆ ಮಗನ ಬಗ್ಗೆ ಅಷ್ಟೇ ಚಿಂತೆ..

Publicspot

ನನಗೆ ಸರ್ಕಾರದ ಭತ್ಯೆ ಬೇಡ.. ಊಟ, ತಿಂಡಿ, ಕಾಫಿ, ರೂಮು ಏನೂ ಬೇಡ.. ಸ್ಪೀಕರ್‌ಗೆ ಪತ್ರ..

Publicspot

ಚುನಾವಣೆಯಲ್ಲಿ ಮುಸ್ಲಿಮರಿಗೇ ಟಿಕೆಟ್‌ ಕೊಡ್ಬೇಕು ಎಂದು ಆಗ್ರಹ..

Publicspot