ನಟ ದರ್ಶನ್ ಸೇರಿದಂತೆ 7 ಮಂದಿ ಆರೋಪಿಗಳು ಜಾಮೀನು ರದ್ದಾಗಿದ್ದಾರೆ. ದರ್ಶನ್ ಅಂಡ್ ಗ್ಯಾಂಗ್ ಜಾಮೀನು ರದ್ದಾದ ಬೆನ್ನಲ್ಲೇ ಮುಂದೇನು..? ಅನ್ನೋ ಪ್ರಶ್ನಾರ್ಥಕ ಚಿಹ್ನೆ ಎಲ್ಲರ ಮುಂದಿದೆ. ಕೋರ್ಟ್ ಎದುರು ಆರೋಪಿಗಳು ಶರಣಾಗಲು ಸೂಚನೆ ಕೊಟ್ಟಿದ್ದಾರೆ. ಆದರೆ ಬೆಂಗಳೂರು ಎಲ್ಲರನ್ನೂ ವಶಕ್ಕೆ ಪಡೆದು ಕೋರ್ಟ್ ಎದುರು ಹಾಜರುಪಡಿಸಲು ಮುಂದಾಗಿದೆ. ಆ ಆದೇಶ ಪ್ರತಿ ಸಿಗ್ತಿದ್ದ ಹಾಗೆ ಮುಂದಿನ ಕ್ರಮ ಜರುಗಿಸಲು ನಿರ್ಧರಿಸಲಾಗಿದೆ. ದರ್ಶನ್ ಮೊಬೈಲ್ ಜಾಡು ಹಿಡಿದು ಪತ್ತೆಗೆ ಪೊಲೀಸರು ಮುಂದಾಗಿದ್ದು, ನಿನ್ನೆ ರಾತ್ರಿ ಮೈಸೂರಿನ ಫಾರ್ಮ್ ಹೌಸ್ ಲೊಕೇಷನ್ ತೋರಿಸಿದೆ. ಇದಾದ ಬಳಿಕ ಲಕ್ಷ್ಮಣ್ ಹಾಗೂ ದರ್ಶನ್ ಮೊಬೈಲ್ ಆಫ್ ಆಗಿದೆ. ಹೀಗಾಗಿ ಮೊಬೈಲ್ ನಂಬರ್ ಸಿಡಿಆರ್ ಮೂಲಕ ಪತ್ತೆಗೆ ಮುಂದಾಗಿದ್ದಾರೆ.

ಜಾಮೀನು ರದ್ದಾಗುತ್ತಿದ್ದ ಹಾಗೆ ಎಲ್ಲರ ಮೊಬೈಲ್ ಜಾಡು ಹಿಡಿದು ಹೊರಟ ಪೊಲೀಸರಿಗೆ ದರ್ಶನ್ ಮೊಬೈಲ್ ಸ್ವಿಚ್ಡ್ ಆಫ್ ಆಗಿರುವುದು ಗೊತ್ತಾಗಿದೆ. ಲಕ್ಷ್ಮಣ್ ಮೊಬೈಲ್ ಕೂಡ ಸ್ವಿಚ್ಡ್ ಆಫ್, ಪವಿತ್ರಗೌಡ ಆರ್ ಆರ್ ನಗರ ಮನೆಯಲ್ಲೇ ಇದ್ದಾರೆ. ಪ್ರದೋಷ್ ಗಿರಿನಗರ ಮನೆಯಲ್ಲಿ ಇದ್ದಾನೆ. ನಾಗರಾಜ್ ಮೈಸೂರು ನಿವಾಸಿ, ಅನುಕುಮಾರ್ ಚಿತ್ರದುರ್ಗದ ಮನೆ, ಜಗದೀಶ್ ಚಿತ್ರದುರ್ಗದ ಮನೆಯಲ್ಲಿ ಇರುವುದು ಆರೋಪಿಗಳ ಟವರ್ ಲೊಕೇಷನ್ ಮೂಲಕ ಪತ್ತೆಯಾಗಿದೆ. ಸದ್ಯ ಎಲ್ಲಾ ಆರೋಪಿಗಳ ಮನೆ ಬಳಿ ಪೊಲೀಸರ ನಿಯೋಜನೆ ಮಾಡಿ, ಮನೆಯಿಂದ ಎಲ್ಲೂ ಹೋಗದಂತೆ ಪೊಲೀಸರು ಸೂಚನೆ ಕೊಟ್ಟಿದ್ದಾರೆ. ಇನ್ನೂ ಪ್ರದೂಶ್ನನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈಗಾಗಲೇ ಪರಪ್ಪನ ಅಗ್ರಹಾರದ ಬಳಿ ಎಂದಿನಂತೆ ಬಂದೋಬಸ್ತ್ ಹೆಚ್ಚಳ ಮಾಡಲಾಗಿದೆ. KSISF ಮತ್ತು ಪೊಲೀಸ್ ಸಿಬ್ಬಂದಿಯಿಂದ ಬಂದೋಬಸ್ತ್ಗೆ ನಿಯೋಜನೆ ಮಾಡಲಾಗಿದೆ. ಬ್ಯಾರಿಕೇಡ್ ಅಳವಡಿಸಿ ಸೂಕ್ತ ಬಂದೋಬಸ್ತ್ ಆಗಿದ್ದು, ಎಂದಿನಂತೆ ಪರಿಶೀಲನೆ ನಡೆಸಿ ಜೈಲು ಭೇಟಿಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ದರ್ಶನ್ ಹಾಗೂ ಲಕ್ಷ್ಮಣ್ ಬಿಟ್ಟು ಉಳಿದವರು ಮನೆಯಲ್ಲೇ ಇದ್ದಾರೆ. ಈಗಾಗಲೇ ಪವಿತ್ರಗೌಡ ಮನೆ ಬಳಿ ತೆರಳಿದ ಕಾಮಾಕ್ಷಿಪಾಳ್ಯ ಪೊಲೀಸರು, ಕೆಲವೇ ನಿಮಿಷಗಳಲ್ಲಿ ಅರೆಸ್ಟ್ ಮಾಡಿಕೊಳ್ಳಲು ಮಹಿಳಾ ಪೊಲೀಸರನ್ನು ಕಳುಹಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಪೊಲೀಸರು ವಶಕ್ಕೆ ಪಡೆದು ಕೋರ್ಟ್ ಮುಂದೆ ಹಾಜರು ಪಡಿಸಲು ಪೊಲೀಸರು ನಿರ್ಧಾರ ಮಾಡಿದ್ದಾರೆ. ಎಲ್ಲಾ ಆರೋಪಿಗಳನ್ನ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಕರೆತರಲಿರೋ ಹಿನ್ನೆಲೆಯಲ್ಲಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಮುಂಭಾಗ ಹೆಚ್ಚಿನ ಪೊಲೀಸ್ ಭದ್ರತೆ ಮಾಡಲಾಗಿದೆ.
ಬ್ಯಾರಿಕೇಡ್ ಹಾಕಿ ಹೆಚ್ಚಿನ ಭದ್ರತೆ ಒದಗಿಸಿರೋ ಪೊಲೀಸರು, ಹೆಚ್ಚುವರಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ಬಂಧನ ಆಗಿ ಒಳಗೆ ಹೋದ್ರೆ ಆರು ತಿಂಗಳು ಜೈಲು ಫಿಕ್ಸ್ ಆಗಲಿದೆ. ಈ ಆದೇಶ ಪ್ರಶ್ನಿಸಿ ತ್ರಿಸದಸ್ಯ ಪೀಠಕ್ಕೆ ಅರ್ಜಿ ಹಾಕಲು ಅವಕಾಶ ಇದ್ದರೂ ತ್ರಿಸದಸ್ಯ ಪೀಠದಲ್ಲಿ ಜಾಮೀನು ರದ್ದು ಮಾಡಿದ ಮೇಲ್ಮನವಿ ಅರ್ಜಿ ಅಡ್ಮಿಟ್ ಆಗುತ್ತಾ ಅನ್ನೋದೇ ಅನುಮಾನ. ಹೀಗಾಗಿ ದರ್ಶನ್ ಅಂಡ್ ಗ್ಯಾಂಗ್ಗೆ ಬಹುತೇಕ ಮುಂದಿನ ಆರು ತಿಂಗಳು ಕಾಲ ಜೈಲೇ ಗತಿ ಎನ್ನುವಂತಾಗಿದೆ. ಆರು ತಿಂಗಳ ಬಳಿಕ ಬದಲಾದ ಸನ್ನಿವೇಶ ಎಂದು ಮತ್ತೆ ಜಾಮೀನಿಗೆ ಅರ್ಜಿ ಹಾಕಬಹುದು. ಈಗಾಗಲೇ ಪವಿತ್ರಾಗೌಡ ನಿವಾಸಕ್ಕೆ ವಕೀಲ ನಾರಾಯಣಸ್ವಾಮಿ ಭೇಟಿ ಕೊಟ್ಟಿದ್ದು, ಪವಿತ್ರಾಗೌಡ ಜೊತೆಗೆ ಚರ್ಚೆ ನಡೆಸುತ್ತಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಪವಿತ್ರಾಗೌಡಳನ್ನು ಬಂಧನ ಮಾಡಿಕೊಂಡು ಕರೆತರಲಿದ್ದಾರೆ.


