The Public Spot
ಅಪರಾಧ

Darshan Bail Cancel: ದರ್ಶನ್​ ಜಾಮೀನು ರದ್ದು.. ಕರ್ನಾಟಕ ಹೈಕೋರ್ಟ್​ಗೆ ಸುಪ್ರೀಂಕೋರ್ಟ್​ ಗುದ್ದು..

ಸುಪ್ರೀಂಕೋರ್ಟ್​ನಲ್ಲಿ ನಟ ದರ್ಶನ್ ಅಂಡ್​ ಗ್ಯಾಂಗ್​ ಬೇಲ್ ಕ್ಯಾನ್ಸಲ್ ಮಾಡಲಾಗಿದೆ. ಕರ್ನಾಟಕ ಹೈಕೋರ್ಟ್​ ನೀಡಿದ್ದು ಜಾಮೀನನ್ನು ಸುಪ್ರೀಂಕೋರ್ಟ್​ ರದ್ದು ಮಾಡುವ ಮೂಲಕ ಚಾಟಿ ಬೀಸಿದಂತಾಗಿದೆ. ಅಷ್ಟೇ ಅಲ್ಲದೆ ದರ್ಶನ್​ ಅಂಡ್​ ಗ್ಯಾಂಗ್​ 7 ಜನರ ಜಾಮೀನು ರದ್ದತಿ ಮಾಡಿದ ಆದೇಶ ಪ್ರತಿಯನ್ನು ಎಲ್ಲಾ ಹೈಕೋರ್ಟ್ ರವಾನೆನಿಸಲು ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳು ಸೂಚನೆ ಕೊಟ್ಟಿದ್ದಾರೆ. ಇದೊಂದು ಲ್ಯಾಂಡ್ ಮಾರ್ಕ್ ತೀರ್ಪು (ಮುಂದಿನ ದಿನಗಳಲ್ಲಿ ಈ ತೀರ್ಪನ್ನು ಉಲ್ಲೇಖಿಸಿ ಜಾಮೀನು ರದ್ದು ಮಾಡಿಸಬಹುದು) ಆಗಬೇಕು ಅಂತಾ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಎಲ್ಲಾ ಜೈಲುಗಳಿಗೂ ಆದೇಶ ಪ್ರತಿ ರವಾನೆಗೆ ಆದೇಶ ಮಾಡಲಾಗಿದೆ.

ದರ್ಶನ್​ ಜೈಲು ಸೇರಿದ ಬಳಿಕ ಸಹ ಕೈದಿಗಳ ಜೊತೆಗೆ ಕುಳಿತುಕೊಂಡು ಐಷಾರಾಮಿಯಾಗಿ ಜೈಲಿನಲ್ಲಿ ಸಿಗರೇಟ್ ಸೇದಿದ್ದ ಪೋಟೊಗಳ ಬಗ್ಗೆಯೂ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಾಲಯಕ್ಕೆ ದರ್ಶನ್, ಪವಿತ್ರಾಗೌಡ ಆಂಡ್ ಗ್ಯಾಂಗ್ ಸರೆಂಡರ್ ಆಗಬೇಕು ಎಂದು ಸೂಚಿಸಿರುವ ಸುಪ್ರೀಂಕೋರ್ಟ್​, ಜೈಲಿನ ಹಿರಿಯ ಅಧಿಕಾರಿಗಳನ್ನ ಅಮಾನತು ಮಾಡದ ಬಗ್ಗೆಯೂ ಸುಪ್ರೀಂಕೋರ್ಟ್​ ಪ್ರಶ್ನೆ ಮಾಡಿದೆ. ಜೈಲಿನ ಲಾನ್​ನಲ್ಲಿ ಕುಳಿತು ಸಿಗರೇಟ್ ಸೇದಿರೋ ಪೋಟೊ ಇದೆ. ಈ ರೀತಿ ಕಂಡು ಬಂದರೆ ಕ್ರಮ ಆಗಬೇಕು ಎಂದು ಕಟ್ಟುನಿಟ್ಟಾಗಿ ಸೂಚನೆ ಕೊಟ್ಟಿದೆ.

ಆರೋಪಿಗಳಿಗೆ ಜೈಲಿನಲ್ಲಿ 5 ಸ್ಟಾರ್ ಟ್ರೀಟ್​ಮೆಂಟ್ ನೀಡಲಾಗಿದೆ. ಯಾವುದೇ ಪೋಟೋ, ವಿಡಿಯೋ ಕಂಡು ಬಂದರೆ ಗೃಹ ಇಲಾಖೆಯನ್ನು ಕೋರ್ಟ್​ಗೆ ಕರೆಸಲಾಗುವುದು ಎಂದು ಸುಪ್ರೀಂಕೋರ್ಟ್​ ಖಾರವಾದ ಮಾತುಗಳಲ್ಲಿ ಹೇಳಿದೆ. ಜೈಲಿಗೆ ಸೇರಿದ ನಂತರ ಕಾರಾಗೃಹದಲ್ಲೂ ಕಟ್ಟುನಿಟ್ಟು ಇರಬೇಕು. ಒಂದೇ ಒಂದು ಫೋಟೋ, ವಿಡಿಯೋ ವೈರಲ್ ಆದ್ರೂ ಕಠಿಣ ಕ್ರಮದ ಎಚ್ಚರಿಕೆ ನೀಡುವ ಮೂಲಕ ದರ್ಶನ್​ ಅಂಡ್​​ ಗ್ಯಾಂಗ್​​ಗೆ ಸುಪ್ರೀಂಕೋರ್ಟ್ ಶಾಕ್​ ನೀಡಿದೆ. ಅಷ್ಟೇ ಅಲ್ಲದೆ ದೇಶದ ಕಾನೂನು ಎಲ್ಲರಿಗೂ ಒಂದೇ ಅನ್ನೋದನ್ನು ತಿಳಿಸಿದೆ. ಇನ್ನೂ ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಸಣ್ಣವರಲ್ಲ. ನ್ಯಾಯವನ್ನ ಸುಪ್ರೀಂ ಕೋರ್ಟ್ ಎತ್ತಿ ಹಿಡಿಯುತ್ತಿದೆ ಎಂದಿದೆ.

ಜೈಲಿಗೆ ಹೋದ ನಂತರ ಆರೋಪಿ ಸಾಮಾನ್ಯ ಕೈದಿಯಂತೆ ಇರಬೇಕು. ಈ ಮುಂಚೆ ಆತನಿಗೆ ಫೈವ್ ಸ್ಟಾರ್ ಟ್ರೀಟ್ಮೆಂಟ್ ಕೊಡಲಾಗಿದೆ. ಇನ್ಮುಂದೆ ಸಾಮಾನ್ಯ ಕೈದಿಯಂತೆ ಇರಬೇಕು ಎಂದು ಜೈಲಿನ ರಾಜಾತಿಥ್ಯದ ಬಗ್ಗೆ ಕೂಡ ಸುಪ್ರೀಂ ಕೋರ್ಟ್ ಎಚ್ಚರಿಕೆ ಕೊಟ್ಟ ಬೆನ್ನಲ್ಲೇ ಜೈಲು ಅಧಿಕಾರಿಗಳು ಅಲರ್ಟ್​ ಆಗಿದ್ದು, ಜೈಲಾಧಿಕಾರಿಗಳ ಜೊತೆ ಡಿಜಿ ದಯಾನಂದ್ ಸಭೆ ಮಾಡಿದ್ದಾರೆ. ಎಲ್ಲರಿಗೂ ಖಡಕ್ ವಾರ್ನಿಂಗ್ ಕೊಟ್ಟಿರೋ ಬಿ ದಯಾನಂದ್, ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳಿಗೆ ಮುಂದೆ ಯಾವುದೇ ಐಷಾರಾಮಿ ವ್ಯವಸ್ಥೆ ಮಾಡುವಂತಿಲ್ಲ. ಸಾಮಾನ್ಯ ಕೈದಿ ಇರಲು ಬೇಕಾದ ಬ್ಯಾರಕ್ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.

Related posts

Women Death for Love; ಹೆಣ್ಣು ಮನಸ್ಸು ಚಂಚಲ ಅಂತಾರೆ.. ಆದರೆ ಮದುವೆ ಆಗಿದ್ದ ಹೆಣ್ಣು ಮಾಡಿದ್ದೇನು..?

Publicspot

ಧರ್ಮಸ್ಥಳ ಮೂಳೆ ರಹಸ್ಯ.. SIT ತನಿಖಾ ವರದಿ ಮತ್ತು ಅನುಮಾನದ ಹುತ್ತ..

Publicspot

ಗಿಳಿ ಹಿಡಿಯಲು ಹೋದ ಯುವಕ, ಕರೆಂಟ್​ ಶಾಕ್​ನಿಂದ ಸಾವು..!

Publicspot

7 ಕೋಟಿ ಲೂಟಿ ಮಾಡಿದವರು ಸಿಕ್ಕಿ ಬೀಳೋದು ಪಕ್ಕಾನಾ..?

Publicspot

Son Thief for Good Cause; ತಂದೆಯ ಕ್ಯಾನ್ಸರ್​ ಚಿಕಿತ್ಸೆಗೆ ಹಣ ಹೊಂದಿಸಲು ಕಳ್ಳನಾದ ಮಗ..!

Publicspot

Teacher Cruality; ಮೇಡಂ ಸೂಸು ಅಂದ್ರೂ ಬಿಡದೆ ಬಾಸುಂಡೆ ಬರುವಂತೆ ಬಡಿದ್ರಂತೆ..!

Publicspot