The Public Spot
ಅಪರಾಧ

ಸೌಜನ್ಯ ಪ್ರಕರಣದ ವಿಚಾರಣೆ ಪುನಾರಂಭ ಆಯ್ತಾ..? ಏನಿದು ನಿಗೂಢತೆ..?

ಸೌಜನ್ಯ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ಎಸ್​ಐಟಿ ಶುರು ಮಾಡಿದ್ಯಾ..? ಅನ್ನೋ ಬಗ್ಗೆ ಸಾಕಷ್ಟು ಅನುಮಾನಗಳು ಮೂಡುವುದಕ್ಕೆ ಶುರು ಆಗಿದೆ. ಸೌಜನ್ಯ ಕುಟುಂಬಸ್ಥರು ಆರೋಪ ಮಾಡಿದ್ದ ವ್ಯಕ್ತಿಗಳಿಗೆ ಎಸ್​ಐಟಿ ಬುಲಾವ್ ಕೊಟ್ಟಿದೆ. ಬೆಳ್ತಂಗಡಿ SIT ಕಚೇರಿಗೆ ಬರುವಂತೆ ಸೂಚನೆ ಕೊಡಲಾಗಿದೆ. ಹೀಗಾಗಿ ಬೆಳ್ತಂಗಡಿ SIT ಕಚೇರಿಗೆ ಆಗಮಿಸಿದ್ದ ಉದಯ್ ಜೈನ್, ವಿಚಾರಣೆ ಎದುರಿಸಿದ್ದಾರೆ. ಆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿ, ಮಂಗಳವಾರ ರಾತ್ರಿ SIT ಅವರು ಕರೆ ಮಾಡಿ ಬುಧವಾರ (03/09/2025) ಬರೋಕೆ ಹೇಳಿದ್ರು. ನಾನು ಯಾವುದೇ ವಿಚಾರಣೆಗೆ ಸಿದ್ಧನಿದ್ದೇನೆ. ಸತ್ಯ ಹೇಳೋರಿಗೆ ಹೆದರಿಕೆ ಇಲ್ಲ ಎಂದಿದ್ದಾರೆ.

ನನಗೆ ಇನ್ನೊಮ್ಮೆ ಬೇಕಿದ್ದರೂ ಬ್ರೈನ್ ಮ್ಯಾಪಿಂಗ್ ಮಾಡಿ, ಸೌಜನ್ಯ ತಾಯಿಯ ಮೇಲೆ ನಮಗೆ ಗೌರವ ಇದೆ. ಈಗ ತನಿಖೆಗೆ ಇಡಿ ಎಂಟ್ರಿಯಾಗಿದೆ, ಸತ್ಯ ಹೊರ ಬರುತ್ತದೆ. ಸೌಜನ್ಯ ನಮಗೆ ಮಾಡಿರೋದು ಮೋಸ ಅಲ್ವಾ..? ತೋಟದ ಕೆಲಸಕ್ಕೆ ಹೋಗುವವರು ಅಷ್ಟು ದೊಡ್ಡ ಮನೆ ಹೇಗೆ ಮಾಡಿದ್ರು..? ನನ್ನ ಆಟೋ ಲೋನ್ ಕಟ್ಟೋಕೆ ಸಾಧ್ಯ ಆಗುತ್ತಿಲ್ಲ. ಇವರು ಬ್ಯುಸಿನೆಸ್ ಮಾಡಿದ್ರು, ಸೌಜನ್ಯ ಕುಟುಂಬಸ್ಥರಿಗೆ ನಾವೊಂದು ಬಾಣ ಆಗಿದ್ದೇವೆ. ನಮ್ಮನ್ನು ಬಾಣವಾಗಿ ಬಳಸುತ್ತಿದ್ದಾರೆ. ಸಿಬಿಐ ತನಿಖೆಗೂ ನಾವು ಸಂಪೂರ್ಣ ಒಳಗಾಗಿದ್ದೇವೆ. ನಮ್ಮ ಬ್ರೈನ್ ಮ್ಯಾಪಿಂಗ್ ಕೂಡ ಆಗಿದೆ. ಇನ್ನೊಮ್ಮೆ ಬ್ರೈನ್ ಮ್ಯಾಪಿಂಗ್ ಮಾಡಿದರೂ ನಾವು ಸಿದ್ದ ಇದ್ದೇವೆ. ನಮ್ಮ ಬಳಿ ದುಡ್ಡು ಇಲ್ಲ, ಮಾನನಷ್ಟ ಹಾಕೋದಕ್ಕೂ ಹಣ ಇಲ್ಲ. SIT ತನಿಖೆಗೆ ನಾನು ಸಾಯುವವರೆಗೂ ತಯಾರಿದ್ದೇನೆ ಎಂದಿದ್ದಾರೆ ಉದಯ ಜೈನ್.

ಇನ್ನೊಂದು ಕಡೆ ಬುರುಡೆ ಹಿಂದೆ ಬಿದ್ದಿರುವ SIT ಟೀಂ, ಚಿನ್ನಯ್ಯನ ಬಂಧನ ಮಾಡಿ ಕಸ್ಟಡಿಗೆ ಪಡೆದುಕೊಂಡಿತ್ತು. ಬುಧವಾರಕ್ಕೆ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಕೋರ್ಟ್ ಎದುರು ಹಾಜರು ಮಾಡಿದ SIT ಅಧಿಕಾರಿಗಳು, ಮತ್ತೆ ಮೂರು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ಬೆಳ್ತಂಗಡಿ ಕೋರ್ಟ್‌ನಲ್ಲಿ ಕ್ಲೋಸ್‌ ಡೋರ್ ವಿಚಾರಣೆ ನಡೆದಿದ್ದು, ಸರ್ಕಾರಿ ವಕೀಲರು ತನಿಖಾ ಪ್ರಗತಿ ವರದಿ ಸಲ್ಲಿಕೆ ಮಾಡಿದ್ದಾರೆ. ಜೊತೆಗೆ ಸಾಕ್ಷ್ಯ ಸಂಗ್ರಹಣೆ, ಬಾಕಿ ವಿಚಾರಣೆ ಇತ್ಯಾದಿ ವಿವರ ಸಲ್ಲಿಕೆ ಮಾಡಲಾಗಿದೆ ಎನ್ನಲಾಗಿದೆ. ಮೊದಲೇ SIT ಟೀಂ ವಿಚಾರಣೆಯನ್ನು ಗೌಪ್ಯವಾಗಿ ಇಡುವಂತೆ ಮನವಿ ಮಾಡಿದ್ದರಿಂದ ಕೋರ್ಟ್​ ಕೂಡ ವಿಚಾರಣೆಯನ್ನು ಗೌಪ್ಯವಾಗಿ ನೋಡಿಕೊಂಡಿದೆ.

ಧರ್ಮಸ್ಥಳದ ಮಣ್ಣಸಂಕದ ಬಳಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿದ್ದ ಸೌಜನ್ಯಳ ಬಗ್ಗೆ ಆಕೆಯ ತಾಯಿ ಕುಸುಮಾವತಿ ಎಸ್‌ಐಟಿಗೆ ದೂರು ಕೊಟ್ಟಿದ್ದರು. ಸೌಜನ್ಯಳ ಸಾವಿನ ಬಗ್ಗೆ ಬುರುಡೆ ಮ್ಯಾನ್‌ ಚಿನ್ನಯ್ಯ ಈ ಹಿಂದೆಯೇ ಸಂದರ್ಶನಗಳಲ್ಲಿ ಮಾಹಿತಿ ಹಂಚಿಕೊಂಡಿದ್ದ. ಅದರ ಆಧಾರದಲ್ಲಿಯೇ ತನಿಖೆಗೆ ಒತ್ತಾಯಿಸಿದ್ದರು. ಈ ನಡುವೆ ವಿಚಾರಣೆ ಆರಂಭ ಆದಂತೆ ಕಾಣ್ತಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಗೃಹ ಸಚಿವ ಡಾ ಜಿ ಪರಮೇಶ್ವರ್​, ನನಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. SIT ತನಿಖೆ ನಡೆಸುತ್ತಿದೆ. ಆ ತನಿಖೆಗೆ ನಾವು ಅಡ್ಡಿ ಮಾಡಲ್ಲ. SIT ತನ್ನದೇ ಆದ ನಿರ್ಧಾರ ತೆಗೆದುಕೊಳ್ಳಲಿದೆ ಎಂದಿದ್ದಾರೆ.

ಈ ಎಲ್ಲದರ ಮಧ್ಯೆಯೇ, ಧರ್ಮಸ್ಥಳದ ಬುರುಡೆ ಕೇಸ್‌ನಲ್ಲಿ ಇಡಿ ಕೂಡ ಎಂಟ್ರಿಯಾಗಿದೆ. ಷಡ್ಯಂತ್ರ ರೂಪಿಸಲು ವಿದೇಶಗಳಿಂದ ಫಂಡಿಂಗ್‌‌ ಆಗುತ್ತಿದೆ ಎಂಬ ದೂರನ್ನು ಆಧರಿಸಿ ತನಿಖೆಗೆ ಇಳಿದಿದೆ. ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಗೃಹ ಇಲಾಖೆಗೆ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಇಡಿ ಎಂಟ್ರಿಯಾಗಿದೆ ಎನ್ನಲಾಗ್ತಿದೆ. ರಾಜ್ಯದ ಒಡನಾಡಿ ಮತ್ತು ಸಂವಾದ ಸಂಘಟನೆಗಳ ಬ್ಯಾಂಕ್‌ ವಹಿವಾಟಿನ ವಿವರವನ್ನೂ ಜಾರಿ ನಿರ್ದೇಶನಾಲಯ (ED) ಕೇಳಿದೆಯಂತೆ. ಆದರೆ, ನಮಗೆ ಯಾವುದೇ ನೋಟಿಸ್ ಬಂದಿಲ್ಲ, ದಾಳಿಯೂ ಆಗಿಲ್ಲ ಎಂದು ಒಡನಾಡಿ ಸಂಸ್ಥೆಯ ಪರಶುರಾಮ್‌ ಸ್ಪಷ್ಟಪಡಿಸಿದ್ದಾರೆ. ನೋಟಿಸ್ ಕೊಟ್ಟು ಇಡಿ ದಾಳಿ ಮಾಡುತ್ತಾ..? ಹಾಗೆ ಮಾಡಿದ್ರೆ ಸ್ವಾಗತ ಎಂದಿದ್ದಾರೆ.

Related posts

ACTOR AJAY RAO MARRIAGE STORY: ಕಷ್ಣನ ಲವ್‌ ಸ್ಟೋರಿಯಲ್ಲ.. ಸಂಸಾರ ಬಿರುಕು..

Publicspot

You Tuber Sameer house Raid: ಸಮೀರ್​ ಬಗ್ಗೆ ಮಟ್ಟಣ್ಣವರ್​ ಕೊಟ್ಟ ಸ್ಪಷ್ಟನೆ ಏನು..?

Publicspot

Dharmasthala Issue: ಧರ್ಮಸ್ಥಳ ವಿಚಾರದಲ್ಲಿ ಸರ್ಕಾರ ಮತ್ತೆ ಎಡವಟ್ಟುಗಳು..

Publicspot

Gang Rape; ಬೆಂಗಳೂರಲ್ಲಿ ಗ್ಯಾಂಗ್‌ ರೇಪ್‌.. ಮೂವರು ಆರೋಪಿಗಳ ಬಂಧನ.. ಇಬ್ಬರು ಎಷ್ಕೇಪ್‌

Publicspot

Parappana Agrahara Jail: ದರ್ಶನ್​ಗೆ ಮಾತ್ರ ಜೈಲು.. ಉಳಿದವರಿಗೆ ಬಾರ್​.. ಪಬ್​..

Publicspot

ಪ್ರಜ್ವಲ್​ ರೇವಣ್ಣ ಕೇಸ್​​, 25 ಲಕ್ಷ ಬಹುಮಾನ ಘೋಷಿಸಿದ ಸರ್ಕಾರ..!

Publicspot