The Public Spot
Uncategorized

Duniya Vijay Slams SIMA; ದುಬೈನಲ್ಲಿ ಕನ್ನಡಿಗರಿಗೆ ಅವಮಾನ.. ಯಾಕೆ ಬೇಕು ಆ ಪ್ರಶಸ್ತಿ..?

ಕನ್ನಡ ಚಿತ್ರರಂಗ ದಕ್ಷಿಣ ಭಾರತ ಅಷ್ಟೇ ಅಲ್ಲ, ಇಡೀ ಭಾರತ ಚಿತ್ರರಂಗದಲ್ಲೇ ಉತ್ತಮ ಸ್ಥಾನದಲ್ಲೇ ಇದೆ ಅನ್ನಬಹುದು. ಆದರೆ ಕನ್ನಡ ಚಿತ್ರರಂಗವನ್ನು ಇತರೆ ಭಾಷೆಗಳ ಸಿನಿಮಾ ಮಂದಿ ನಿರ್ಲಕ್ಷ್ಯ ಮಾಡುತ್ತಿರುವುದು ಆಗ್ಗಿಂದಾಗೆ ಸುದ್ದಿ ಆಗುತ್ತಲೇ ಇದೆ. ಇದೀಗ ದುಬೈನಲ್ಲಿ ನಡೆದ ಸೈಮಾ ಅವಾರ್ಡ್​ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಹೀನಾಯವಾಗಿನ ನಡೆಸಿಕೊಂಡಿರುವುದು ಬೆಳಕಿಗೆ ಬಂದಿದೆ. ಪ್ರಶಸ್ತಿ ವಿತರಣಾ ಸಮಾರಂಭದ ವೇದಿಕೆಯಲ್ಲೇ ನಟ ದುನಿಯಾ ವಿಜಯ್​ ಆಕ್ಷೇಪದ ಜೊತೆಗೆ ಅಸಮಾಧಾನ ಹೊರ ಹಾಕಿದ್ದಾರೆ.

ಕನ್ನಡ ಸಿನಿಮಾ ರಂಗದಲ್ಲಿ ಸಾವಿರಾರು ಕಲಾವಿದರು, ಲೆಕ್ಕವಿಲ್ಲದಷ್ಟು ತಂತ್ರಜ್ಞರು ಕೆಲಸ ಮಾಡುತ್ತಾರೆ. ನಮ್ಮ ಚಂದನವನದಲ್ಲಿ ಡಾ ರಾಜ್​ ಕುಮಾರ್​ ಸೇರಿದಂತೆ ಯುವ ನಟರು ಕನ್ನಡ ಚಿತ್ರರಂಗವನ್ನೇ ಉಸಿರಾಗಿಸಿ ಕೆಲಸ ಮಾಡಿಕೊಂಡು ಕನ್ನಡ ಸಿನಿಮಾ ರಂಗವನ್ನು ಕಟ್ಟಿ ಬೆಳೆಸಿದ್ದಾರೆ. ಕನ್ನಡಿಗರು ಏನನ್ನು ಬೇಕಾದ್ರು ಸಹಿಸಿಕೊಳ್ತಾರೆ. ಆದರೆ ಕನ್ನಡ ಭಾಷೆಗೆ ಅಪಮಾನ ಆಗ್ತಿದೆ ಅನ್ನೋದು ಗೊತ್ತಾದ್ರೆ ಕೊತಕೊತನೆ ಕುದಿತಾರೆ. ಕನ್ನಡಿಗರು ಏನು ಮಾಡ್ತಾರೆ ಅಂದುಕೊಳ್ತಿದ್ದಾಗಲೇ ಇಡೀ ಭಾರತ ಚಿತ್ರರಂಗ ತಿರುಗಿ ನೋಡುವಂತಹ ಸಿನಿಮಾಗಳನ್ನು ಕೊಟ್ಟ ಖ್ಯಾತಿ ಕನ್ನಡಕ್ಕಿದೆ. ಆದರೂ ಕನ್ನಡವನ್ನು ಕೀಳಾಗಿ ಕಾಣುವ ಪ್ರವೃತ್ತಿ ನಿಂತಿಲ್ಲ.

ದುಬೈನಲ್ಲಿ ನಡೆದ ಸೈಮಾ, ಫಿಲ್ಮ್‌ ಫೇರ್‌ ಅವಾರ್ಡ್‌ ಕಾರ್ಯಕ್ರಮದಲ್ಲಿ ಕನ್ನಡವನ್ನು ಕಡೆಗಣಿಸಲಾಗಿದೆ. ಕನ್ನಡ ಚಿತ್ರರಂಗದ ನಟ ನಟಿಯರನ್ನು ಮಲತಾಯಿ ಮಕ್ಕಳಂತೆ ನೋಡಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ತೆರಳಿದ್ದ ನಟ ನಟಿಯರಿಗೆ ಇರುಸು ಮುರುಸು ಮಾಡಿದ್ದಾರೆ. ಸೈಮಾ ಅವಾರ್ಡ್‌ ಫಂಕ್ಷನ್‌ ಆದ್ರೆ ಸಿನಿಮಾ ರಂಗದ ದಿಗ್ಗಜರೇ ಇರ್ತಾರೆ. ಅವಾರ್ಡ್‌ ತಗೊಳ್ಳೋದು ಹೆಮ್ಮೆಯ ವಿಚಾರ. ಆದರೆ ಸೈಮಾ ಅವಾರ್ಡ್‌ಗೆ ಕನ್ನಡದ ಕೆಲವು ಸಿನಿಮಾಗಳು ನಾಮಿನೇಟ್‌ ಆಗಿದ್ದು, ಕಲಾವಿದರಿಗೆ ಪ್ರಶಸ್ತಿಗಳೂ ಬಂದಿವೆ ಆದ್ರೆ ಪ್ರಶಸ್ತಿ ಸ್ವೀಕಾರ ಮಾಡುವಾಗ ಜನರೇ ಇರಲಿಲ್ಲ. ಇದಕ್ಕೆ ಕಾರಣ ಆಯೋಜಕರ ನಿಳಕ್ಷ್ಯ.

ಎಲ್ಲಾ ಚಿತ್ರರಂಗಳಿಗೂ ಪ್ರಶಸ್ತಿ ವಿತರಣೆ ಮಾಡಿದ ಬಳಿಕ ಕೊನೆಯಲ್ಲಿ ಕನ್ನಡಿಗರನ್ನು ಕರೆದು ಸನ್ಮಾನ ಮಾಡೋದು, ಪ್ರಶಸ್ತಿ ಕೊಡುವ ಕೆಲಸ ಮಾಡ್ತಾರೆ. ಆದರೆ ಅಷ್ಟು ಹೊತ್ತಿಗೆ ಎಲ್ಲರೂ ಪ್ರಶಸ್ತಿ ಪಡೆದು ಎದ್ದು ಹೋಗಿರ್ತಾರೆ. ಇಡೀ ಸಂಭಾಂಗಣವೇ ಖಾಲಿ ಇದ್ದಾಗ ಪ್ರಶಸ್ತಿ ಸ್ವೀಕರಿಸಿ ಮಾತನಾಡೋದು ಒಂದು ರೀತಿಯ ಕಿರಿಕಿರಿ ಎನಿಸುತ್ತದೆ. ಬೇರೆಯವರಿಗೆ ಚಪ್ಪಾಳೆ ಹೊಡೆದ ಬಳಿಕ ತಮಗೆ ತಾವೇ ಚಪ್ಪಾಳೆ ಹೊಡೆದುಕೊಂಡ ಪರಿಸ್ಥಿತಿ ಇದೇ ಕಾರಣಕ್ಕೆ ಸಾಕಷ್ಟು ನಟ ನಟಿಯರು ಪ್ರಶಸ್ತಿಗಳನ್ನೇ ನಿರಾಕರಣೆ ಮಾಡಿಬಿಡ್ತಾರೆ. ಸೈಮಾ ಅವಾರ್ಡ್​ಗೆ ಹೋಗುವುದು ಯಾಕೆ..? ಅಲ್ಲಿ ಕನ್ನಡಿಗರಿಗೆ ಕಿರಕಿರಿ ಆಯ್ತು ಅನ್ನೋದ್ಯಾಕೆ..? ಚಲನ ಚಿತ್ರ ವಾಣಿಜ್ಯ ಮಂಡಳಿ ಒಂದು ಸಭೆ ಮಾಡಿ ಸೈಮಾ ಅವಾರ್ಡ್​ ಫಂಕ್ಷನ್​ಗೆ ಹೋಗುವುದು ಬೇಡ ಅಂತಾ ನಿರ್ಧಾರ ಮಾಡಬಹುದು ಅಲ್ಲವೇ..? ಇಲ್ಲೇ ಒಂದು ಕಾರ್ಯಕ್ರಮ ಮಾಡಿ ಅಭಿಮಾನಿಗಳಿಗೆ ಬನ್ನಿ ಎಂದರೆ ಇಡೀ ಗ್ರೌಂಡ್​ ತುಂಬುವಷ್ಟು ಜನರು ಬರ್ತಾರೆ. ಈ ಬಗ್ಗೆ ಯಾಕೆ ಚಿಂತನೆ ಮಾಡೋದಿಲ್ಲ..?

Related posts

ಸುಪ್ರೀಂಕೋರ್ಟ್‌ನಲ್ಲಿ ತಾನೇ ವಾದ ಮಂಡಿಸಿದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ!

Publicspot

GST Effect; ಇಂದಿನಿಂದ ಬಹುತೇಕ ವಸ್ತುಗಳ ದರ ಇಳಿಕೆ.. ಯಾವ್ಯಾವ ವಸ್ತುಗಳ ಬೆಲೆ ಇಳಿಕೆ ನೋಡಿ..

Publicspot

Thirupathi; ಮೂರು ನಾಮದ ಒಡೆಯನಿಗೇ ನಾಮ ಹಾಕಿದ ಅತಿಶಯ ಮನುಷ್ಯ..!

Publicspot

Modi Japan Tour: ದೇಶದ ವಿದೇಶಾಂಗ ನೀತಿ ಬಗ್ಗೆ ಟೀಕೆ ಒಳ್ಳೇದಾ..? ಕೆಟ್ಟದ್ದಾ..?

Publicspot

ಕಾರ್​ ಸ್ಫೋಟ.. NIA ತನಿಖೆಗೆ ವಹಿಸಿ ಕೇಂದ್ರ ಗೃಹ ಇಲಾಖೆ ಆದೇಶ

Publicspot

Darshan Jail Case; ದರ್ಶನ್‌ ಕೊಲೆಗಾರ ಅಷ್ಟೆ.. ಸೆಲೆಬ್ರಿಟಿ ಅಲ್ಲ.. ಕೋರ್ಟ್‌ನಲ್ಲಿ ಸರ್ಕಾರದ ಸ್ಪಷ್ಟನೆ..!

Publicspot