The Public Spot
Uncategorized

ನಟ ಧ್ರುವಾ ಸರ್ಜಾಗೆ ಬಂಧನದ ಭೀತಿ.. ಮುಂಬೈನಲ್ಲಿ FIR..

ಸ್ಯಾಂಡಲ್​ವುಡ್​ನ ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮುಂಬೈನ ಅಂಬೋಲಿ ಠಾಣೆಯಲ್ಲಿ
ವಂಚನೆ ಆರೋಪದಡಿ ಎಫ್ಐಆರ್ ದಾಖಲು ಮಾಡಲಾಗಿದೆ. ಸಿನಿಮಾ ಮಾಡುವುದಾಗಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ರಾಘವೇಂದ್ರ ಹೆಗಡೆ ಎಂಬುವವರು ನಟ ಧ್ರುವಾ ಸರ್ಜಾ ವಿರುದ್ಧ ದೂರು ನೀಡಿದ್ದಾರೆ. ಸಿನಿಮಾ ಮಾಡೋದಾಗಿ 3 ಕೋಟಿ ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸೋಲ್ಜರ್ ಎಂಬ ಚಿತ್ರ ಮಾಡುವುದಾಗಿ ಸ್ಕ್ರಿಪ್ಟ್ ಮಾಡಿದ್ದ ನಟ ಧ್ರುವಾ ಸರ್ಜಾ, ಒಪ್ಪಂದಕ್ಕೆ ಸಹಿ ಹಾಕುವ ಮೊದಲು ಹಣ ಪಡೆದ ಆರೋಪ ಕೇಳಿ ಬಂದಿದೆ. ಹಣ ಪಡೆದು ಫ್ಲಾಟ್‌ ಖರೀದಿ ಮಾಡಿದ್ದಾರೆ, ಹಣ ಪಡೆದ‌ ಬಳಿಕ ಚಿತ್ರ ಮಾಡಿಕೊಡುವ ಭರವಸೆ ನೀಡಿದ್ದ ಧ್ರುವಾ ಸರ್ಜಾ, ಆ ಬಳಿಕ ಚಿತ್ರವನ್ನೇ ಮಾಡದೆ ವಂಚಿಸಿದ್ದಾರೆ ಎನ್ನಲಾಗಿದೆ.

ಬೆಂಗಳೂರಿಗರ ಸೀಜನಲ್​ ಅಸ್ತಮಾಗೆ ಪಾರಿವಾಳ ಕಾರಣ ಅಂದ್ರೆ ನಂಬ್ತೀರಾ..?

2016 ರಿಂದ‌ 2018ರವರೆಗೆ ಜೊತೆಗೆ ಕೆಲಸ ಮಾಡಿದ್ದ ರಾಘವೇಂದ್ರ ಹೆಗಡೆ, ಬಡ್ಡಿಗೆ ಹಣ ತಂದ ನಟ ಧ್ರುವಾ ಸರ್ಜಾಗೆ ನೀಡಿದ್ರಂತೆ. ಸ್ಕ್ರಿಪ್ ಹಾಗೂ ಪಬ್ಲಿಸಿಟಿಗಾಗಿ ಮತ್ತೆ ಹಣ ಪಡೆದ ಆರೋಪವನ್ನೂ ಹೊರಿಸಿದ್ದು, ಹಣ ಪಡೆದ ಬಳಿಕ ನಟ ಧ್ರುವಾ ಸರ್ಜಾ ರಾಘವೇಂದ್ರರಿಂದ ದೂರವಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ, ಈ ಬಗ್ಗೆ ಫಿಲ್ಮ್ ಚೇಂಬರ್‌ಗೂ ದೂರು ಕೊಟ್ಟಿದ್ದು, ಯಾವುದೇ ಪ್ರಯೋಜನ ಆಗಿಲ್ಲ ಎಂದಿದ್ದಾರೆ ರಾಘವೇಂದ್ರ ಹೆಗಡೆ.

ಮುಂಬೈನ ಅಂಬೋಲಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ ಬಳಿಕ ರಾಘವೇಂದ್ರ ಹೆಗಡೆ ದೂರು ಆಧರಿಸಿ ಎಫ್ಐಆರ್ ದಾಖಲಿಸಿದ್ದಾರೆ ಪೊಲೀಸರು. ನಟ ಧ್ರುವ ಸರ್ಜಾ ವಿರುದ್ಧ FIR ದಾಖಲು ಆಗಿದ್ದು, ಧ್ರುವಾ ಸರ್ಜಾ ಅವರನ್ನು ವಿಚಾರಣೆಗೆ ಕರೆಯುವುದಕ್ಕೆ ಪೊಲೀಸರು ತಯಾರಿ ನಡೆಸಿದ್ದಾರೆ. ಒಂದು ವೇಳೆ ಮಾತುಕತೆ ಮೂಲಕ ಪ್ರಕರಣ ಇತ್ಯರ್ಥ ಆಗದಿದ್ದರೆ ಧ್ರುವಾ ಸರ್ಜಾಗೆ ಬಂಧನದ ಭೀತಿ ಕಟ್ಟಿಟ್ಟ ಬುತ್ತಿ ಎನ್ನಬಹುದು.

Related posts

ಕುರುಬರಿಗೆ ಎಸ್ಟಿ ಮೀಸಲಾತಿ ಕೇಂದ್ರ ವಾಪಸ್‌ ಕಳುಹಿಸಿದೆ.. ನಾನು ಮತ್ತೆ ಕಳುಹಿಸುತ್ತೇನೆ..

Publicspot

ಸುಪ್ರೀಂಕೋರ್ಟ್‌ನಲ್ಲಿ ತಾನೇ ವಾದ ಮಂಡಿಸಿದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ!

Publicspot

Kanthara Rishab Shetty Master Plan; ಕಾಂತಾರ ಅಧ್ಯಾಯ ಒಂದರ ಪ್ರಚಾರ ಶುರುವಾಗಿದೆ.. ಶೆಟ್ಟರ ಬುದ್ಧಿವಂತಿಕೆ ವರ್ಕ್​ ಆಗ್ತಿದೆ..

ಯಶವಂತಿ

VISHNU TRIBUTE-KICCHA SUDEEP: ವಿಷ್ಣುವರ್ಧನ್ ಸ್ಮಾರಕಕ್ಕೆ ಜಾಗ ಖರೀದಿಸಿದ ಕಿಚ್ಚ

Publicspot

Modi Japan Tour: ದೇಶದ ವಿದೇಶಾಂಗ ನೀತಿ ಬಗ್ಗೆ ಟೀಕೆ ಒಳ್ಳೇದಾ..? ಕೆಟ್ಟದ್ದಾ..?

Publicspot

ಬಿರಿಯಾನಿ ತಿಂದ ನಟ ಡಾಲಿ ಧನಂಜಯ್‌‌ ಮೊದಲ ಪ್ರತಿಕ್ರಿಯೆ ಏನು..?

Publicspot