The Public Spot
Uncategorized

ಬಿರಿಯಾನಿ ತಿಂದ ನಟ ಡಾಲಿ ಧನಂಜಯ್‌‌ ಮೊದಲ ಪ್ರತಿಕ್ರಿಯೆ ಏನು..?

ಲಿಂಗಾಯತ ಆಗಿ ನಾನ್ ವೆಜ್ ಸೇವನೆ ಅನ್ನೋ ಬಗ್ಗೆ ವಿಡಿಯೋ ಸಾಕಷ್ಟು ವೈರಲ್‌ ಆಗಿದ್ದ ಬಗ್ಗೆ ನಟ ಡಾಲಿ ಧನಂಜಯ್ ರಿಯಾಕ್ಟ್‌ ಮಾಡಿದ್ದಾರೆ. ನಾನು ನನ್ನ ಆಹಾರ ಪದ್ಧತಿ ಬಗ್ಗೆ ಮಾತಾಡೋಕೆ ಇಷ್ಟ ಇಲ್ಲ. ನಾನು ಬಹಳ ಇನೋಸೆಂಟ್ ಆಗಿ ನನ್ನ ಗೆಳೆಯನ ಹೋಟೆಲ್‌ಗೆ ಹೋಗಿದ್ದೆ. ಅಲ್ಲಿ ಪ್ರೀತಿಯಿಂದ ತಿಂದು ಬಂದೆ, 10 ರಿಂದ 15 ಬಿರಿಯಾನಿ ಶಾಪ್ ಓಪನ್ ಮಾಡಿದ್ದೀನಿ. ಈ ತರ ವಿಷಯ ಪಿಕ್ ಆಗುತ್ತೆ ಅಂತ ಗೊತ್ತಿರಲಿಲ್ಲ.. ಡಿಸ್ಕಷನ್ ಆಗಿದ್ದು ನೋಡಿ ಶಾಕ್ ಆಯ್ತು. ನನ್ನ ಸಮುದಾಯವನ್ನ ಎಳೆದು ತಂದಿದ್ದು ಬಹಳ ಬೇಜಾರ್ ಆಯ್ತು. ಬೇರೆ ಆರ್ಟಿಸ್ಟ್‌ಗಳ ಹೆಸರು ತಂದಿದ್ದು ಬೇಜಾರ್ ಆಯ್ತು. ನನ್ನ ಆಹಾರ ನನ್ನ ಚಾಯ್ಸ್ ಎಂದಿದ್ದಾರೆ.

ನಾನು ಆಗಾಗ ನಾನು ಪಾರ್ಟಿ ಮಾಡ್ತೀನಿ.. ನಾನು ಬಿಯರ್ ಬಾಯ್.. ಸ್ಮೋಕ್ ಕೂಡ ಮಾಡ್ತಾ ಇದ್ದೆ, ಈಗ ನಿಲ್ಲಿಸಿದ್ದೀನಿ.. ನನಗೆ ಸೀ ಫುಡ್ ಅಂದ್ರೆ ಬಹಳ ಇಷ್ಟ.. ಅದು ನನ್ನ ಇಷ್ಟ.. ಬೇರೆ ಬೇರೆ ಆ್ಯಂಗಲ್ ಕೊಟ್ಟಿದ್ದು ಬಹಳ ಬೇಜಾರ್ ಆಯ್ತು.. ನಾನು ಮಾಂಸ ತಿಂದಿದ್ದು ಎಲ್ಲಿಂದ ಅಂತ ಹೇಳೋಕೆ ಹೋಗಲ್ಲ.. ಆದರೆ ಚರ್ಚೆ ಶುರು ಮಾಡಿದವರಿಗೆ ನಾನು ಉತ್ತರ ಕೊಟ್ಟಂತೆ ಆಗುತ್ತದೆ.. ಅದು ನನಗೆ ಇಷ್ಟ ಇಲ್ಲ. ನಾನು ಏನೇ ಮಾಡಿದರೂ ಬಹಳ ಪ್ರಶ್ನೆಗಳು ಬರುತ್ತವೆ. ಅದು ನನಗೆ ಬಹಳ ಖುಷಿ ಇದೆ ಎಂದಿದ್ದಾರೆ.

ನಾನೊಬ್ಬ ನಟನಾಗಿ ಬಂದು ಈಗ ಪ್ರೊಡಕ್ಷನ್ ಶುರು ಮಾಡಿದ್ದೀನಿ ಎಂದಿರುವ ಡಾಲಿ ಧನಂಜಯ್‌, ಇಂಡಸ್ಟ್ರಿಗೆ ಬಹಳ ಸಿನಿಮಾ ಕೊಟ್ಟೆ, ನೂರಾರು ಕೋಟಿ ವ್ಯಾಪಾರ ಮಾಡಿರೋ ಪ್ರೊಡ್ಯೂಸರ್ ಅಲ್ಲ. ನಾನು ಬೇರೆ ಒಂದು ಕೆಲಸಕ್ಕೆ ಅಂದ್ರೆ ಸಿನಿಮಾಕ್ಕಾಗಿ ಒದ್ದಾಡುತ್ತಿದ್ದೀನಿ. ಅದರ ಬಗ್ಗೆ ಯಾಕೆ ಚರ್ಚೆ ಆಗುತ್ತಿಲ್ಲ ಅನ್ನೋದು ಗೊತ್ತಿಲ್ಲ. ನಾನು ಇಂಡಸ್ಟ್ರಿಗಾಗಿ ಮಾಡೋ ಕೆಲಸದ ಬಗ್ಗೆ ಚರ್ಚೆ ಆಗಬೇಕು ಅನ್ನೋದು ನನ್ನ ಆಸೆ. ಬಡವರ ಮಕ್ಕಳು ಬೆಳೀಬೇಕು ಅನ್ನೋದನ್ನ ಅವರವರ ಅರ್ಥಕ್ಕೆ ಬದಲಾಯಿಸಿ ಮಾತನಾಡಿದ್ದಾರೆ. ಸಂಬಂಧಗಳನ್ನ ಸೆಲೆಬ್ರೇಶನ್ ಮಾಡೋಣ, ಅನ್ನೋದನ್ನ ನಾನು ಎಲ್ಲಾ ಕಡೆ ಹೇಳಿದ್ದೀನಿ ಅಂತಾನೂ ತಿಳಿಸಿದ್ದಾರೆ.

ಎಲ್ಲರೂ ಎಲ್ಲಾ ವಿಚಾರವನ್ನು ಮಾತನಾಡಬಹುದು.. ಸಿನಿಮಾ ನಟರು ಅಂದ್ರೆ ಅದನ್ನೇ ಮಾತಾಡಬೇಕು ಅಂತ ಏನಿಲ್ಲ ಅಲ್ವಾ..? ನಾನು ಊಟ ಮಾಡಿದ ವಿಚಾರವನ್ನ ಕೂಡ ಮಾತಾಡ್ತಾರೆ ಅಂದ್ರೆ ತಪ್ಪಲ್ವಾ..? ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸಂತಸದ ವಿಚಾರವನ್ನೂ ಡಾಲಿ ಧನಂಜಯ್‌‌ ಹೇಳಿಕೊಂಡಿದ್ದಾರೆ. ನಾನು ತಂದೆಯಾಗುತ್ತಿದ್ದೀನಿ ಅಂತ ಅನೌನ್ಸ್ ಮಾಡಿದ್ದಾರೆ ಡಾಲಿ. ಬಹಳ ಖುಷಿಯಿಂದ ಮಗುವನ್ನ ಎತ್ತಿಕೊಳ್ಳಲು ಕಾಯುತ್ತಿದ್ದೇನೆ. ಹೆಚ್ಚಾಗಿ ಮಕ್ಕಳ ವಿಡಿಯೋ ನೋಡ್ತಾ ಇರ್ತೀನಿ.. ಮೇ ತಿಂಗಳಲ್ಲಿ ಮಗುವಿನ‌ ಆಗಮನ ಆಗಲಿದೆ.. ಹೆಂಡತಿಗೂ ಟೈಂ ಕೊಡೋಕೆ ಶುರು ಮಾಡಿದ್ದೀನಿ.. ಬಾಕಿ ಇರುವಂತಹ ಶೂಟಿಂಗ್ ಮುಗಿಸಿ, ಬ್ರೇಕ್ ತೆಗೆದುಕೊಳ್ತಿದ್ದೀನಿ.. ನನ್ನ ಸ್ನೇಹಿತರಿಗೂ ಹೇಳ್ತಿದ್ದೀನಿ.. ಮದುವೆ ಆಗಿ.. ತಂದೆಯಾಗಿ ಅದರ ಖುಷಿಯನ್ನೂ ಅನುಭವಿಸಿ ಅಂತಾ ಹೇಳ್ತಾ ಇರ್ತೀನಿ ಎಂದಿದ್ದಾರೆ.

Related posts

ಧರ್ಮಸ್ಥಳದಲ್ಲಿ ನೂರಾರು ತಲೆಬುರುಡೆ ಕೇಸ್​.. ಕೋರ್ಟ್​ಗೆ SIT ರಿಪೋರ್ಟ್​

Publicspot

Kanthara Rishab Shetty Master Plan; ಕಾಂತಾರ ಅಧ್ಯಾಯ ಒಂದರ ಪ್ರಚಾರ ಶುರುವಾಗಿದೆ.. ಶೆಟ್ಟರ ಬುದ್ಧಿವಂತಿಕೆ ವರ್ಕ್​ ಆಗ್ತಿದೆ..

ಯಶವಂತಿ

ಡಿಕೆ ಬ್ರದರ್ಸ್​ ಒತ್ತಡಕ್ಕೆ ಹೈಕಮಾಂಡ್​​ ಮಣಿದರೆ ಉಳಿಯುತ್ತಾ ಸರ್ಕಾರ..?

Publicspot

ಸ್ಯಾಂಡಲ್‌ವುಡ್‌ ನಿರ್ಮಾಣಪಕ ವಿರುದ್ಧ ಠಾಣೆ ಮೆಟ್ಟಿಲೇರಿದ ಡೈರೆಕ್ಟರ್‌ ಪ್ರೇಮ್‌..!

Publicspot

Bihara Result; ಕಾಂಗ್ರೆಸ್‌ ಸೋಲಿಗೆ ಕಾರಣ ಏನು..? EVM ತಿರುಚಲಾಗಿದ್ಯಾ..?

Publicspot

ಗಾಯಕ ರಘು ದೀಕ್ಷಿತ್‌ ಮತ್ತೆ ಮದುವೆ.. ಹೊಸ ಬಾಳಿಗೆ ವಾರಿಜಶ್ರೀ ಸಂಗಾತಿ..

Publicspot