The Public Spot
Uncategorized

Kanthara Rishab Shetty Master Plan; ಕಾಂತಾರ ಅಧ್ಯಾಯ ಒಂದರ ಪ್ರಚಾರ ಶುರುವಾಗಿದೆ.. ಶೆಟ್ಟರ ಬುದ್ಧಿವಂತಿಕೆ ವರ್ಕ್​ ಆಗ್ತಿದೆ..

ಕರಾವಳಿಯ ಕಥೆಯನ್ನು ಆಧರಿಸಿದ ಚಿತ್ರ ಕಾಂತಾರ ಅಧ್ಯಾಯ ಒಂದು ಚಿತ್ರೀಕರಣ ಮುಗಿಸಿ ಟ್ರೈಲರ್​ ಕೂಡ ಹೊರ ಬಂದಿದೆ. ಕನ್ನಡದ ಅತೀ ದೊಡ್ಡ ಮೇಕಿಂಗ್ ಚಿತ್ರ ಕಾಂತಾರ ಅಧ್ಯಾಯ 1 ಆಗಿದೆ. ಕಳೆದ ಬಾರಿ ಸಣ್ಣ ಬಜೆಟ್​ನಲ್ಲಿ ಸಿನಿಮಾ ಮುಗಿಸಿ ಕೋಟಿ ಕೋಟಿ ಹಣವನ್ನು ಖಜಾನೆಗೆ ತುಂಬಿಸಿಕೊಂಡಿದ್ದ ಕಾಂತಾರಾ ನಿರ್ಮಾಪಕರು, ಈ ಬಾರಿ ಮೇಕಿಂಗ್​ಗೆ ಹೆಚ್ಚಿನ ಆದ್ಯತೆ ನೀಡಿ ಹೆಚ್ಚಿನ ಬಂಡವಾಳ ಹೂಡಿದ್ದಾರೆ.

ನಟ ನಿರ್ದೇಶಕ ರಿಷಬ್​ ಶೆಟ್ಟಿಯ ಜೀವನದ ಅತೀ ದೊಡ್ಡ ಬಜೆಟ್ ಚಿತ್ರ ಕಾಂತಾರ 1 ಆಗಿದೆ. ರಿಷಬ್ ಕಾಂತಾರದ ಹಿಂದೆ ಸಾವಿರಾರು ಜನರ ಶ್ರಮ, ನೂರಾರು ಕೋಟಿ ಹಣ ಇದೆ. ಕಾಂತಾರ ಪ್ರೀಕ್ವೆಲ್​ಗಾಗಿ ಪ್ರತಿದಿನ 1000-1200 ಕ್ಕೂ ಹೆಚ್ಚು ಜನರು ಕೆಲಸ ಮಾಡಿದ್ದಾರೆ. ವಾರ್ ಹಾಗೂ ಬಂದರು ದೃಶ್ಯಗಳಿಗಾಗಿ ತಿಂಗಳುಗಟ್ಟಲೆ ಶೂಟಿಂಗ್ ಮಾಡಲಾಗಿದೆ. ಕಾಂತಾರಗಾಗಿ ದೇಶದ ಎರಡನೇ ಅತಿ ದೊಡ್ಡ ಎಸಿ ಪ್ಲೋರ್ ನಿರ್ಮಾಣ ಮಾಡಲಾಗಿತ್ತು. 120 ಅಡಿ ಉದ್ದ 220 ಅಡಿ ಅಗಲದಲ್ಲಿ ತಲೆ ಎತ್ತಿದೆ ಬಾಂಗ್ರ ಅರಮನೆ. ಅರಮನೆ ಪೂರ್ತಿ ಎಸಿ ಪ್ಲೋರ್ ಸೆಟ್ ಹಾಕಿಸಿದ್ದ ಚಿತ್ರತಂಡ, ಅದ್ಧೂರಿಯಾಗಿ ಚಿತ್ರೀಕರಣ ಮುಗಿಸಿ ತೆರೆ ಮೇಲೆ ಬರಲು ಸಿದ್ಧತೆ ನಡೆಸಿದೆ.

ಅರಮನೆ ಸೆಟ್​ ನಿರ್ಮಾಣಕ್ಕಾಗಿಯೇ ಹೊಂಬಾಳೆ ಫಿಲಂಸ್ 10 ಕೋಟಿ ಖರ್ಚು ಮಾಡಿದೆ ಎನ್ನಲಾಗಿದೆ. ಚಿತ್ರದ ಕಾಸ್ಟ್ಯೂಮ್​ಗಾಗಿ ಸೆಟ್​ನಲ್ಲಿ ಪ್ರತಿದಿನ 40 ಟೈಲರ್ 30 ಕಸ್ಟ್ಯೂಮರ್ ಕೆಲಸ ಮಾಡಿದ್ದಾರೆ. ಶೂಟಿಂಗ್ ಸೆಟ್​ನಲ್ಲಿ ಊಟದ ವ್ಯವಸ್ಥೆಗಾಗಿ ಪ್ರತಿದಿನ 50 ಅಡುಗೆ ಸಿಬ್ಬಂದಿ ಹಾಗೂ 70 ಕ್ಕೂ ಪ್ರೊಡಕ್ಷನ್ ಹುಡುಗರು ಕೆಲಸ ಮಾಡಿದ್ದಾರೆ. ಸೆಟ್​ನಲ್ಲಿ ಕೆಲಸ ಮಾಡುವವರಿಗೆ 10 ಲಕ್ಷ ರೂಪಾಯಿ ವಿಮೆ ಕೂಡ ಮಾಡಿಸಿದ್ದರು ಅನ್ನೋದು ಗೊತ್ತಾಗಿದೆ. ಕೆರಾಡಿ, ತೀರ್ಥಹಳ್ಳಿ ಸುತ್ತಮುತ್ತ ಸುಂದರ ದೃಶ್ಯಕಾವ್ಯ ಕಾಂತಾರ – 1 ಚಿತ್ರೀಕರಣವನ್ನು 250 ಕ್ಕೂ ಹೆಚ್ಚು ದಿನ ಮಾಡಿ ದಾಖಲೆ ಬರೆದಿದ್ದಾರೆ ರಿಷಬ್ ಶೆಟ್ಟಿ.

ರಿಷಬ್ ಜೊತೆಗೆ ಕರ್ನಾಟಕ, ಕೇರಳ, ತಮಿಳುನಾಡು, ಮುಂಬೈನ ನಾಲ್ಕು ರಾಜ್ಯಗಳ ತಂತ್ರಜ್ಞರು ಕೆಲಸ ಮಾಡಿದ್ದಾರೆ. ರಿಷಬ್ ಶೆಟ್ಟಿಯ ಗೆಟಪ್ ಹಿಂದೆ ಮಾಲಿವುಡ್ ಮೇಕಪ್ ಮ್ಯಾನ್ ಕೈಚಳ ಕೆಲಸ ಮಾಡಿದೆ. ಕೇರಳದ ಮೇಕಪ್ ಕಲಾವಿದ ರೋನೆಕ್ಸ್ ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದು, ಉತ್ತಮ ಮೇಕಪ್ ಕಲಾವಿದನಾಗಿ ಎರಡು ಬಾರಿ ಕೇರಳ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ರೋನೆಕ್ಸ್ ಜೊತೆ ಕಲಾವಿಭಾಗದಲ್ಲೂ ಕೈಚಳಕ‌ ತೋರಿದೆ ಕೇರಳ ಕಲಾವಿದರ ತಂಡ. ಕಲಾ ನಿರ್ದೇಶಕ ಧರಣೀಶ್ ಜೊತೆಗೆ ಕೇರಳ ಅರ್ಟ್ ಡೈರೆಕ್ಟರ್ ಬಾಂಗ್ಲನ್ ಕೆಲಸ ಮಾಡಿದ್ದಾರೆ. ಕಾಂತಾರದ ಅರಮನೆ ಬಾಂಗ್ರ, ಸ್ಟ್ರೀಟ್, ಬಂದರು ಸೆಟ್​ನಲ್ಲಿ ಬಾಂಗ್ಲನ್ ಉತ್ತಮ ಕಲಾನಿರ್ದೇಶಕನಾಗಿ ಕೇರಳ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.

ಇಷ್ಟೆಲ್ಲಾ ಆದರೂ ಕಾಂತಾರ – 1 ಟಿವಿ ಮಾಧ್ಯಮ ಹಾಗೂ ಪೇಪರ್​ಗಳಲ್ಲಿ ಹೆಚ್ಚಿನ ಪ್ರಚಾರ ಮಾಡುತ್ತಿಲ್ಲ. ಕಾಂತಾರಾ ಟ್ರೈಲರ್​ ರಿಲೀಸ್​ ಆದ ಬಳಿಕ ಕೊಲ್ಲೂರಿನ ಮೂಕಾಂಬಿಕೆ ಮೊರೆ ಹೋಗಿರುವ ರಿಷಬ್​ ಶೆಟ್ಟಿ, ದಿನಕ್ಕೆ ಒಂದರಂತೆ ಕಾಂತಾರಾ ಶೂಟಿಂಗ್​ ವಿಚಾರವನ್ನು ಮಾಧ್ಯಮಗಳಿಗೆ ಬಿಟ್ಟು ಕೊಡುತ್ತಿದ್ದಾರೆ. ಅಕ್ಟೋಬರ್​​ 2 ರಂದು ರಾಜ್ಯಾದ್ಯಂತ ತೆರೆ ಮೇಲೆ ಬರಲಿರುವ ಕಾಂತಾರಾ ಬಗ್ಗೆ ಈ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಮಾಧ್ಯಮಗಳಲ್ಲಿ ಜಾಹಿರಾತು ನೀಡುವ ಮೂಲಕ ಲಕ್ಷ ಲಕ್ಷ ರೂಪಾಯಿ ಹಣ ಕೊಡುವ ಬದಲಿಗೆ ಕಾಂತಾರಾ ಚಿತ್ರೀಕರಣದ ಬಗ್ಗೆ ಸಿನಿ ಪತ್ರಕರ್ತರಿಗೆ ಮಾಹಿತಿ ನೀಡುತ್ತಾ ಸುದ್ದಿಯಲ್ಲಿರುವ ರಿಷಬ್​ ಶೆಟ್ಟಿ ಲೆಕ್ಕಾಚಾರ ಎನ್ನುವುದು ಅರ್ಥವಾಗ್ತಿದೆ. 7 ಭಾಷೆಯಲ್ಲಿ ಬರುತ್ತಿರುವ ಕಾಂತಾರಾ 1ಕ್ಕೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಅನ್ನೋದು ಕೆಲವೇ ದಿನದಲ್ಲಿ ಹೊರಬೀಳಲಿದೆ.

Related posts

ಟಾಕ್ಸಿಕ್​ ಟೀಸರ್​ ಬಗ್ಗೆ ಕೇಂದ್ರ ಸೆನ್ಸಾರ್​ ಮಂಡಳಿಗೆ ದೂರು..! ಬೀಳುತ್ತಾ ಕತ್ತರಿ..?

Publicspot

ಬಿಜೆಪಿ ಗೆಲ್ಲಿಸಲು ಅಖಾಡಕ್ಕೆ ಇಳಿದ ಕೇಂದ್ರ ಸಚಿವ ಕುಮಾರಣ್ಣ!

Publicspot

ಮೊದಲ ದಿನ ಅಬ್ಬರಿಸಿದ ಡೆವಿಲ್.. ಕಲೆಕ್ಷನ್​ ಆಗಿದ್ದೆಷ್ಟು..? ಯಾರು ಏನಂದ್ರು..?

Publicspot

ಚಂದ್ರಚೂಡ್​ ಕಥೆಗಳನ್ನು ಯಾವುದೇ ನಿರ್ಮಾಪಕ ಸಿನಿಮಾ ಮಾಡುವಂತಿಲ್ಲ..!

Publicspot

ಧರ್ಮಸ್ಥಳದಲ್ಲಿ ನೂರಾರು ತಲೆಬುರುಡೆ ಕೇಸ್​.. ಕೋರ್ಟ್​ಗೆ SIT ರಿಪೋರ್ಟ್​

Publicspot

ಕುರುಬರಿಗೆ ಎಸ್ಟಿ ಮೀಸಲಾತಿ ಕೇಂದ್ರ ವಾಪಸ್‌ ಕಳುಹಿಸಿದೆ.. ನಾನು ಮತ್ತೆ ಕಳುಹಿಸುತ್ತೇನೆ..

Publicspot