The Public Spot
ಟ್ರೆಂಡ್

ನಾಡಿನ ಸಮಸ್ತ ಜನರಿಗೆ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು

ನಾಡಿನಾದ್ಯಂತ ವರಮಹಾಕ್ಷ್ಮೀ ಹಬ್ಬವನ್ನು ಭಕ್ತಿ ಭಾವದೊಂದಿಗೆ ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಗ್ತಿದೆ. ಅದರಲ್ಲೂ ಮಹಿಳೆಯರಿಗೆ ವರಮಹಾಲಕ್ಷ್ಮೀ ಹಬ್ಬ ಬಂತೆಂದರೆ ಎಲ್ಲಿಲ್ಲದ ಸಡಗರ ಮನೆ ಮಾಡಿರುತ್ತದೆ. ಶ್ರಾವಣ ಮಾಸದ ಈ ಹಬ್ಬ, ಈ ವರ್ಷದ ಸರಣಿ ಹಬ್ಬಗಳ ಹೆಬ್ಬಾಗಿಲು ಎನ್ನಬಹುದು. ಈ ಹಬ್ಬದಲ್ಲಿ ವರಮಹಾಲಕ್ಷ್ಮೀ ಕೇಳಿದ ವರಗಳನ್ನು ನೀಡುತ್ತಾಳೆ ಎನ್ನುವುದು ಭಕ್ತರ ನಂಬಿಕೆ.

ಈ ಹಬ್ಬದಲ್ಲಿ ವರಮಹಾಲಕ್ಷ್ಮೀ ತಮ್ಮ ಮನೆಗಳಲ್ಲಿ ಅಲಂಕಾರ ಮಾಡಿ ಆರಾಧಿಸಲಾಗುತ್ತದೆ. ಅಷ್ಟೇ ಅಲ್ಲದೇ ತಮ್ಮ ಮನೆಗಳಲ್ಲಿ ನೋಟಿನ ಕಂತೆಗಳು, ಚಿನ್ನದ ಒಡವೆಗಳನ್ನು ಲಕ್ಷ್ಮೀ ಎದುರು ಅನಾವರಣ ಮಾಡಲಾಗುತ್ತದೆ. ಇಷ್ಟು ಕೊಟ್ಟಿರುವ ವರಮಹಾಲಕ್ಷ್ಮೀ ಇನ್ನಷ್ಟು ಕೊಡು ಎಂದು ಕೇಳಿಕೊಳ್ಳಲಾಗುತ್ತದೆ. ವರಮಹಾಲಕ್ಷ್ಮೀ ಖಂಡಿತವಾಗಿಯೂ ಇಷ್ಟಾರ್ಥ ಸಿದ್ಧಿ ಮಾಡುತ್ತಾಳೆ ಎಂದು ಹೆಂಗಳೆಯರು ವ್ರತ ಕೈಗೊಳ್ಳುತ್ತಾರೆ.

ವರಮಹಾಲಕ್ಷ್ಮೀ ಭಕ್ತರು ಕೇಳಿದನ್ನು ಕೊಡಲಿ, ಆದರೆ ವರಮಹಾಲಕ್ಷ್ಮೀ ಹಬ್ಬದಂದು ಎಲ್ಲವನ್ನೂ ಪ್ರದರ್ಶನ ಮಾಡಿ, ನಮ್ಮ ಮನೆಯಲ್ಲಿ ಅಷ್ಟಿದೆ, ಇಷ್ಟಿದೆ ಎಂದು ಅಕ್ಕಪಕ್ಕದ ಮನೆಯವರ ಮುಂದೆ ತೋರಿಸಿ, ಮುಂದಿನ ದಿನಗಳಲ್ಲಿ ಕಳ್ಳತನಕ್ಕೆ ಆಹ್ವಾನ ಕೊಡುವುದೂ ಇದೆ. ಆದರೆ ನಾಡಿನ ಜನರಲ್ಲಿ ಭಕ್ತಿ ಭಾವ ಇರಲಿ, ಪೂಜೆ ಪುನಸ್ಕಾರಗಳೂ ಸಾಗಲಿ, ಆದರೆ ಕಷ್ಟ ಪಟ್ಟು ಸಂಪಾದಿಸಿದ ಸಂಪತ್ತು ನಿಮ್ಮ ಮನೆಯಿಂದ ಕಳವು ಆಗದಿರಲಿ ಅನ್ನೋದೇ The Public Spot. Com ಆಶಯ. ಸರಳವಾಗಿ ಆಚರಣೆ ಮಾಡಿ, ಎಲ್ಲರಿಗೂ ಒಳಿತಾಗಲಿ. ಮತ್ತೊಮ್ಮೆ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು.

Related posts

Sugarcane Farmers Protest; ಸರ್ಕಾರದ ಆಹ್ವಾನ ತಿರಸ್ಕರಿಸಿದ ರೈತರು.. ಸಂಜೆ ತನಕ ಡೆಡ್‌ಲೈನ್‌..

Publicspot

RSS ಪಥಸಂಚಲನ.. ಸಸ್ಪೆಂಡ್​ಗೆ ಆಕ್ರೋಶ.. ಇವತ್ತು ಮತ್ತೆ ಪಥಸಂಚಲನ ಸಂಚಲನ..!

Publicspot

S.L Byrappa No More; ಕನ್ನಡ ಸಾಹಿತ್ಯ ಲೋಕದ ಅಕ್ಷರ ಮಾಂತ್ರಿಕ S.L ಬೈರಪ್ಪ ಇನ್ನಿಲ್ಲ..

Publicspot

Body Fight; ಬದುಕಿದ್ದಾಗ ಬೇಡವಾದ ಅಮ್ಮ.. ಸತ್ತಾಗ ಶವಕ್ಕೆ ಬಂದ ಮಕ್ಕಳು.. ಥೂ ನಿಮ್ಮ ಜನ್ಮಕ್ಕೆ..

Publicspot

ಮೌಢ್ಯದ ಮಹಲಿನಲ್ಲಿ ಮರೆಯಾದ ಚಂದಿರ.. ಫಲಾಹಾರ ಸೇವಿಸಿ ಸೈ ಎಂದ ಪ್ರಗತಿಪರರು

Publicspot

ಹೆಣ್ಣು ಮಕ್ಕಳಿಗೆ ಬಾಗಿನ ಕೊಡುವ ಗೌರಿ ಹಬ್ಬ.. ಏನಿದರ ವಿಶೇಷ..?

Publicspot