The Public Spot
ಟ್ರೆಂಡ್

S.L Byrappa No More; ಕನ್ನಡ ಸಾಹಿತ್ಯ ಲೋಕದ ಅಕ್ಷರ ಮಾಂತ್ರಿಕ S.L ಬೈರಪ್ಪ ಇನ್ನಿಲ್ಲ..

ಕನ್ನಡ ಸಾಹಿತ್ಯಲೋಕದ ಹಿರಿಯ ಕಾದಂಬರಿಕಾರ ಎಸ್.ಎಲ್ ಭೈರಪ್ಪ ಇಹಲೋಕ ತ್ಯಜಿಸಿದ್ದಾರೆ. ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಮನೆಗೆ ತೆರಳಿದ್ದಾಗ ಅಸ್ವಸ್ಥರಾಗಿ ಕುಸಿದು ಬಿದ್ದ ಸಾಹಿತಿ ಭೈರಪ್ಪ ಅವರನ್ನು ರಾಷ್ಟ್ರೋತಾನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಎಸ್.ಎಲ್ ಭೈರಪ್ಪ ನಿಧನರಾಗಿದ್ದಾರೆ. ಆರ್.ಆರ್ ನಗರದ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಮಧ್ಯಾಹ್ನ 2.38ಕ್ಕೆ ಸಾಹಿತಿ ಎಸ್. ಎಲ್ ಭೈರಪ್ಪ ಜೀವನ ಯಾನ ನಿಲ್ಲಿಸಿದ್ದಾರೆ.

ಎಸ್ ಎಲ್ ಬೈರಪ್ಪ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು, ಭೈರಪ್ಪ ಅವರು ಹೃದಯ ಸ್ತಂಭನದಿಂದ ವಿಧಿವಶರಾಗಿದ್ದಾರೆ ಎಂದು ರಾಷ್ಟ್ರೋತ್ಥಾನ ಆಸ್ಪತ್ರೆ ಡಾ ಶೈಲಾ ಹೆಚ್ ಎನ್ ಮಾಹಿತಿ ನೀಡಿದ್ದಾರೆ. ನಾಳೆ ಮಧ್ಯಾಹ್ನ ಮೈಸೂರಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲು ಎಸ್.ಎಲ್ ಭೈರಪ್ಪ ಆಪ್ತ ವರ್ಗ ನಿರ್ಧಾರ ಮಾಡಿದೆ. ಮೈಸೂರಿನಲ್ಲಿದ್ದ ಎಸ್. ಎಲ್ ಭೈರಪ್ಪ ಕುಟುಂಬಸ್ಥರು ಬೆಂಗಳೂರಿಗೆ ಬರುತ್ತಿದ್ದು, ಎಸ್.ಎಲ್ ಭೈರಪ್ಪನವರ ಮತ್ತೊಬ್ಬ ಪುತ್ರ ಲಂಡನ್‌ನಲ್ಲಿದ್ದಾರೆ.

ನಾಳೆ ಬೆಳಗ್ಗೆ‌ 8 ಗಂಟೆಯಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಧ್ಯಾಹ್ನ 2 ಗಂಟೆ ತನಕ ಅಂತಿಮ‌ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಆ ಬಳಿಕ ಮೈಸೂರಿಗೆ ಪಾರ್ಥಿವ ಶರೀರ ರವಾನೆ ಮಾಡಲಾಗುತ್ತದೆ. ಮೈಸೂರಿನಲ್ಲೂ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ ಬಳಿಕ ಶುಕ್ರವಾರ ಅಂತಿಮ ವಿಧಿ ವಿಧಾನ ನೆರವೇರಿಸಲಿದ್ದಾರೆ ಎಂದು ಶಾಸಕ ಮುನಿರತ್ನ ಮಾಹಿತಿ ನೀಡಿದ್ದಾರೆ. ಕುಟುಂಬದ ಸದಸ್ಯರ ಜೊತೆ ಮಾತನಾಡಲಾಗಿದೆ. ವಿದೇಶದಲ್ಲಿ ಇರುವ ಭೈರಪ್ಪ ಅವರ ಮಗ ಕೂಡ ಬರಬೇಕಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೋತ್ಥಾನ ಆಸ್ಪತ್ರೆ ಮೆಡಿಕಲ್ ಅಡ್ಮಿನಿಸ್ಟ್ರೇಟರ್ ಡಾ. ಶೈಲಾ ಮಾತನಾಡಿ, ಎರಡು ತಿಂಗಳ ಹಿಂದೆ ಭೈರಪ್ಪ ಆಯುರ್ವೇದ ಚಿಕಿತ್ಸೆಗೆ ಬಂದಿದ್ರು. ಚಿಕಿತ್ಸೆ ಪಡೆದು ಗುಣಮುಖರಾಗಿ ಬಹಳ ಖುಷಿಯಾಗಿ ಹೋಗಿದ್ರು. ಕಳೆದ ಮೂರು ದಿನಗಳ ಹಿಂದೆ ಸುಸ್ತು ಹಾಗೂ ಕಾಲು ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ರು. ಮಧ್ಯಾಹ್ನ 1 ಗಂಟೆ ವೇಳೆಯಲ್ಲಿ ಹಠಾತ್ ಹೃದಯಘಾತ ಆಯ್ತು . ನಾವು ಅವರನ್ನು ಉಳಿಸಿಕೊಳ್ಳಲು ಬಹಳ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಅವರು 2 ಗಂಟೆ 38 ನಿಮಿಷಕ್ಕೆ ನಮ್ಮನ್ನು ಅಗಲಿದ್ರು ಎಂದಿದ್ದಾರೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಸಂತೇಶಿವರ ಗ್ರಾಮದ ಲಿಂಗಣ್ಣಯ್ಯ ಭೈರಪ್ಪ, ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರನ್ನು ಕರ್ಮ ಭೂಮಿಯನ್ನಾಗಿ ಮಾಡಿಕೊಂಡಿದ್ದ ಭೈರಪ್ಪನವರಿಗೆ 2023ರಲ್ಲಿ ಪದ್ಮಭೂಷಣ ಗೌರವ ಲಭಿಸಿತ್ತು. ನಾಡೋಜ, ಸರಸ್ವತಿ ಸಮ್ಮಾನ್‌, ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಭೈರಪ್ಪನವರ ಕಾದಂಬರಿಗಳನ್ನು ಹುಡುಕಿ ಬಂದಿತ್ತು.

ಭೈರಪ್ಪ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು, ಕೇಂದ್ರ ಸಚಿವ ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್‌ ಸೇರಿದಂತೆ ಹಲವಾರು ಗಣ್ಯರೂ ಹಾಗೂ ಸಾಹಿತ್ಯ ಲೋಕದ ಲೇಖಕರು, ಕವಿಗಳು, ನಾಟಕಕಾರರು ಸಂತಾಪ ಸೂಚಿಸಿದ್ದಾರೆ. ಹಿರಿಯ ಚೇತನಕ್ಕೆ ಸಂತಾಪ ಸಲ್ಲಿಕೆ ಮಾಡಿದ್ದಾರೆ. ಭೈರಪ್ಪ ಅವರ ಕಾದಂಬರಿಗಳು ನಾಟಕ, ಸಿನಿಮಾ, ಧಾರವಾಹಿಗಳಾಗಿ ಖ್ಯಾತಿ ಪಡೆದಿದ್ದು, ಅಪಾರ ಓದುಗ ಬಳಗವನ್ನು ಅಗಲಿದ್ದಾರೆ.

Related posts

Baby Inside Another Baby ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಮಗು.. ಅಚ್ಚರಿ ಮತ್ತು ವಿಸ್ಮಯ..

Publicspot

ಲೈಂಗಿಕ ಸಮಸ್ಯೆಗೆ 48 ಲಕ್ಷದ ಮದ್ದು..! ಕನಸು ಕೈಗೂಡಲಿಲ್ಲ.. ಕಿಡ್ನಿಯೇ ಹೋಯ್ತು..

Publicspot

ನಾಡಿನ ಸಮಸ್ತ ಜನರಿಗೆ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು

Publicspot

ಮೌಢ್ಯದ ಮಹಲಿನಲ್ಲಿ ಮರೆಯಾದ ಚಂದಿರ.. ಫಲಾಹಾರ ಸೇವಿಸಿ ಸೈ ಎಂದ ಪ್ರಗತಿಪರರು

Publicspot

RSS VS DSS.. ಮತ್ತೆ ಸಂಘದ ವಿರುದ್ಧ ಗುಡುಗಿದ ಪ್ರಿಯಾಂಕ್‌ ಖರ್ಗೆ

Publicspot

ಹೆಣ್ಣು ಮಕ್ಕಳಿಗೆ ಬಾಗಿನ ಕೊಡುವ ಗೌರಿ ಹಬ್ಬ.. ಏನಿದರ ವಿಶೇಷ..?

Publicspot