The Public Spot
ರಾಜಕೀಯ

ನನಗೆ ಸರ್ಕಾರದ ಭತ್ಯೆ ಬೇಡ.. ಊಟ, ತಿಂಡಿ, ಕಾಫಿ, ರೂಮು ಏನೂ ಬೇಡ.. ಸ್ಪೀಕರ್‌ಗೆ ಪತ್ರ..

ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗ್ತಿದೆ ಮಲತಾಯಿ ಧೋರಣೆ ಅನುಸರಿಸಲಾಗ್ತಿದೆ ಎಂದು ಕಾಂಗ್ರೆಸ್‌ ಶಾಸಕ ರಾಜು ಕಾಗೆ ಪ್ರತ್ಯೇಕ ರಾಜ್ಯಕ್ಕಾಗಿ ಸಿಎಂಗೆ ಪತ್ರ ಬರೆದಿದ್ದಾರೆ. ರಾಷ್ಟ್ರಪತಿ, ಪ್ರಧಾನಿಗೂ ಪತ್ರ ರವಾನೆ ಮಾಡಿದ್ದಾರೆ. ಈ ನಡುವೆ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜೆಡಿಎಸ್ ಶಾಸಕರೊಬ್ಬರು ಸಮರ ಸಾರಿದ್ದಾರೆ. ಮುಂದಿನ ತಿಂಗಳು ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದಿಂದ ಯಾವುದೇ ರೀತಿಯ ಭತ್ಯೆ ಬೇಡ ಎಂದು ಸ್ಪೀಕರ್ ಯು.ಟಿ ಖಾದರ್‌ಗೆ ಪತ್ರ ಬರೆದಿದ್ದಾರೆ.

ಯಾದಗಿರಿ ಜಿಲ್ಲೆ ಗುರುಮಿಟ್ಕಲ್‌ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಸಭಾಧ್ಯಕ್ಷ ಯು.ಟಿ ಖಾದರ್‌ಗೆ ಪತ್ರ ಬರೆದಿದ್ದಾರೆ. ಪ್ರತಿಸಲ ಬೆಳಗಾವಿ ಅಧಿವೇಶನ ನಡೆಯುವಾಗ 25 ರಿಂದ 30 ಕೋಟಿ ರೂಪಾಯಿ ವೆಚ್ಚ ಆಗುತ್ತಿದೆ. ಆದರೆ ಇಲ್ಲಿ ನಡೆಯುವ ಚರ್ಚೆಗಳು, ಕೇವಲ ಚರ್ಚೆಗಷ್ಟೇ ಸೀಮಿತ ಆಗುತ್ತಿವೆ. ಕಳೆದ ಸಲ ನಡೆದ ಚರ್ಚೆಗಳ ವಿಚಾರವಾಗಿ ಏನೆಲ್ಲಾ ಕಾರ್ಯಗಳು ಆಗಿವೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಪ್ರತಿ ಸಲ ಬೆಳಗಾವಿ ಅಧಿವೇಶನ ಕೇವಲ ಪ್ರವಾಸಕ್ಕೆ ಹೋದಂತೆ ಆಗುತ್ತಿದೆ ಎಂದಿದ್ದಾರೆ.

ಅಧಿವೇಶನಗಳಲ್ಲಿ ಕೇವಲ ಚರ್ಚೆಗಳಿಂದ ಯಾವುದೇ ಪ್ರಯೋಜನ ಇಲ್ಲ. ಚರ್ಚೆ ಮಾಡುವುದರಿಂದ ಅಭಿವೃದ್ಧಿ ಕೆಲಸಗಳು ಆಗಲ್ಲ. ಇತ್ತೀಚೆಗೆ ಮಳೆ ಬಂದು ನರೆಯಿಂದ ಲಕ್ಷಾಂತರ ಮೌಲ್ಯದ ಬೆಳೆ ಹಾನಿಯಾಗಿದ್ದರೂ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ. ಹಾಗಾಗಿ ನಾನು ಅಧಿವೇಶನದ ಭತ್ಯೆ ಸ್ವೀಕಾರ ಮಾಡದಿರಲು ತೀರ್ಮಾನಿಸಿದ್ದೇನೆ. ಅಷ್ಟೇ ಅಲ್ಲದೆ ಅಧಿವೇಶನದ ಸಂದರ್ಭದಲ್ಲಿ ಸರ್ಕಾರದಿಂದ ನೀಡಲಾಗುವ ಕಾಫಿ, ಊಟ, ತಿಂಡಿಯನ್ನು ಸಹಾ ಸ್ವೀಕಾರ ಮಾಡದಿರುವ ತೀರ್ಮಾನಕ್ಕೆ ಬಂದಿದ್ದೇನೆ ಎಂದಿದ್ದಾರೆ.

ಅಧಿವೇಶನದಲ್ಲಿ ನಾನು ಪಾಲ್ಗೊಳ್ತೇನೆ, ಆದರೆ ನನ್ನ ವಸತಿ ವ್ಯವಸ್ಥೆಯನ್ನು ಸಹ ನಾನೇ ಖುದ್ದಾಗಿ ಮಾಡಿಕೊಳ್ಳುತ್ತೇನೆ. ನನ್ನ ಈ ಎಲ್ಲಾ ತೀರ್ಮಾನಕ್ಕೂ ನಿಮ್ಮ ಅನುಮತಿ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಸ್ಪೀಕರ್ ಯು.ಟಿ ಖಾದರ್‌ಗೆ ಪತ್ರ ಬರೆದು ಶಾಸಕ ಶರಣಗೌಡ ಕಂದಕೂರು ಪತ್ರದಲ್ಲಿ ಮನವಿ ಮಾಡಿದ್ದಾರೆ. ಗುರುಮಿಟ್ಕಲ್ ಕ್ಷೇತ್ರದಲ್ಲಿ ಅಭಿವೃದ್ಧಿಗೂ ರಾಜ್ಯ ಸರ್ಕಾರ ಅನುದಾನ ಕೊಡುತ್ತಿಲ್ಲ ಎನ್ನುವ ಅಸಮಾಧಾನದ ಜೊತೆಗೆ ಪದೇ ಪದೇ ಪ್ರಶ್ನೆ ಕೇಳುವ ಶಾಸಕ ಶರಣು ಕಂದಕೂರು, ಯಾವುದಕ್ಕೂ ಸೂಕ್ತ ಪರಿಹಾರ ಸಿಗದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಅಧಿವೇಶನಕ್ಕೂ ಮೊ್ಲೇ ಪತ್ರ ಸಮರ ಮಾಡಿದ್ದಾರೆ.

Related posts

Ballari Galate; ಕಾಂಗ್ರೆಸ್‌ ಕೊಟ್ಟ ಕಾರಣ ಏನು..? ಬಿಜೆಪಿ ಪ್ರತ್ಯುತ್ತರ ಏನು..?

Publicspot

ರಾಜಣ್ಣನ ಬಳಿ ರಾಜೀನಾಮೆ ಕೇಳಿದ್ರೂ ಕೊಡ್ತಿದ್ರು.. ಆದರೆ ವಜಾ ಮಾಡಿದ್ಯಾಕೆ..?

Publicspot

2 ದಿನದಲ್ಲಿ ಹೊಸ ವರ್ಷ.. ಹೊಸ ಮನೆ ಕೊಡ್ತೀವಿ.. ಸಿಂಗಲ್‌ ರೂಮ್‌ ಮನೆ..

Publicspot

ಚಿತ್ತಾಪುರದಲ್ಲಿ RSS ಪಥ ಸಂಚಲನ VS ಭೀಮ್‌ ಆರ್ಮಿ ಫೈಟ್‌ ಸಂಚಲನ..!!

Publicspot

ಚುನಾವಣೆಗೆ ಸಜ್ಜಾಗ್ತಿದ್ಯಾ JDS..? ಇವತ್ತಿನ ಸಮಾವೇಶದ ಉದ್ದೇಶ ಏನು..?

Publicspot

Vote Theft.. ರಾಹುಲ್​ ಆರೋಪಕ್ಕೆ ಟೀಕೆ ಮಾಡಿದವರಿಗೆ ಪ್ರಿಯಾಂಕ್​ ತಿರುಗೇಟು..

Publicspot