The Public Spot
ರಾಜಕೀಯ

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸಿಡಿದೆದ್ದ ಉತ್ತರ ಕರ್ನಾಟಕ ಶಾಸಕರು..! ಪ್ರತ್ಯೇಕ ರಾಜ್ಯ..

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಅನ್ನೋದು ಸಾಕಷ್ಟು ವರ್ಷಗಳಿಂದ ಕೇಳಿ ಬರುತ್ತಿರುವ ಒತ್ತಾಯ. ಉತ್ತರ ಕರ್ನಾಟಕದಿಂದ ಆಯ್ಕೆ ಆಗಿ ಬರುವ ರಾಜಕಾರಣಿಗಳು ಆಗೊಮ್ಮೆ ಹೀಗೊಮ್ಮೆ ಈ ರೀತಿಯ ಹೇಳಿಕೆಗಳು ಬರುತ್ತಲೇ ಇವೆ. ಈ ಹಿಂದೆ ಹಿರಿಯ ರಾಜಕಾರಣಿ ಆಗಿದ್ದ ಉಮೇಶ್‌ ಕತ್ತಿ ಪ್ರತ್ಯೇಕ ರಾಜ್ಯದ ಬಗ್ಗೆ ಆಗ್ರಹ ಮಾಡ್ತಿದ್ರು. ಇದೀಗ ಕಾಂಗ್ರೆಸ್‌ ಶಾಸಕರೇ ಉತ್ತರ ಕರ್ನಾಟಕ ಪ್ರತ್ಯೇಕ ‌ರಾಜ್ಯದ ಬಗ್ಗೆ ಕೂಗು ಎಬ್ಬಿಸಿದ್ದಾರೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟಿದ್ದಾರೆ ಕಾಂಗ್ರೆಸ್ ಶಾಸಕ. ಉತ್ತರ ಕರ್ನಾಟಕ‌ ರಾಜ್ಯವನ್ನಾಗಿ ಮಾಡಿ ಎಂದು ರಾಷ್ಟ್ರಪತಿ, ಪ್ರಧಾನಿ, ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಸ್ವಪಕ್ಷದ ಶಾಸಕನೇ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

ಉತ್ತರ ಕರ್ನಾಟಕ ಭಾಗದ 15 ಜಿಲ್ಲೆಗಳನ್ನು ಒಳಗೊಂಡಂತೆ ಉತ್ತರ ಕರ್ನಾಟಕ‌ವನ್ನು ಪ್ರತ್ಯೇಕ ರಾಜ್ಯವನ್ನಾಗಿಸಲು ಕೋರಿಕೆ ಸಲ್ಲಿಸಿದ್ದಾರೆ. ಕಾಗವಾಡ ಶಾಸಕ ರಾಜು ಕಾಗೆ ಪ್ರತ್ಯೇಕ ಉತ್ತರ ಕರ್ನಾಟಕದ ಬೇಡಿಕೆ ಇಟ್ಟಿದ್ದಾರೆ. ಉತ್ತರ ಕರ್ನಾಟಕದ ಮೇಲೆ ಪದೇ ಪದೇ ಅನ್ಯಾಯ ಆಗ್ತಿದೆ. ಮಲತಾಯಿ ಧೋರಣೆ ತಾರತಮ್ಯ ಆಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ. ಬೀದರ್, ಕಲಬುರಗಿ, ವಿಜಯಪುರ,‌ ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ರಾಯಚೂರು ಸೇರಿಸಿಕೊಂಡು 15 ಜಿಲ್ಲೆಗಳನ್ನು ಪ್ರತ್ಯೇಕ ರಾಜ್ಯ ಮಾಡುವಂತೆ ಉಲ್ಲೇಖ ಮಾಡಿದ್ದಾರೆ.

ಉತ್ತರ ಕರ್ನಾಟಕಕ್ಕಾಗಿ ಹೋರಾಟ ನಡೆಸುತ್ತಿರುವ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ ಶಾಸಕ ರಾಜು ಕಾಗೆ. ಉತ್ತರ ಕರ್ನಾಟಕ ಪ್ರತ್ಯೇಕ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಒತ್ತಾಯ ಮಾಡಿದ್ದಾರೆ. ಡಿಸೆಂಬರ್‌ನಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲೂ ಉತ್ತರ ಕರ್ನಾಟಕದ ಬಗ್ಗೆ ಸುಧೀರ್ಘವಾಗಿ ಮಾತನಾಡುತ್ತೇನೆ ಎಂದಿದ್ದಾರೆ ಶಾಸಕ ರಾಜು‌ ಕಾಗೆ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕಕ್ಕಾಗಿ ನಡೆಯುವ ಹೋರಾಟದ ನೇತೃತ್ವ ವಹಿಸಿಕೊಳ್ಳುತ್ತೇನೆ ಎಂದೂ ರಾಜು ಕಾಗೆ ತಿಳಿಸಿದ್ದಾರೆ.

Related posts

ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಸ್ಥಗಿತ ಆಗುತ್ತಾ..? ಸರ್ಕಾರದ ಉದ್ದೇಶ ಏನು..?

Publicspot

ಕಾಂಗ್ರೆಸ್‌ ನಾಯಕರು ಏನೇ ಹೇಳಿದ್ರೂ ಅದು ನನಗೆ ಪ್ರಸಾದ..

Publicspot

ಗ್ಯಾರಂಟಿಗೆ ಮಾರು ಹೋಗ್ಬೇಡಿ.. ಸಾವಿನ ಹತ್ತಿರ ಹೋಗಿ ಬಂದಿದ್ದೇನೆ.. ಇದು ಸತ್ಯ

Publicspot

ಸರ್ಕಾರ ನಡೆಸಲು ಸಾಕಾ 13 ಮಂದಿ ಸಚಿವರು..? ಉಳಿಕೆ ಮಿನಿಸ್ಟರ್ ಯಾವಾಗ..?

Publicspot

ಪಾವಗಡದಲ್ಲಿ ವಿದ್ಯುತ್ ಉತ್ಪಾದನೆ ಪ್ಲಾಂಟ್ ಏಷ್ಯಾದಲ್ಲೇ ನಂ 1 ಎಂದ ಸಿಎಂ ಸಿದ್ದರಾಮಯ್ಯ

admin

S I R ಮತಪಟ್ಟಿ ಪರಿಷ್ಕರಣೆಯಲ್ಲಿ ಮಹತ್ವದ ಬದಲಾವಣೆ.. ಸರಿಯಾಗ್ತಾರಾ BLO..?

Publicspot