The Public Spot
ರಾಜಕೀಯ

ಚುನಾವಣೆಗೆ ಸಜ್ಜಾಗ್ತಿದ್ಯಾ JDS..? ಇವತ್ತಿನ ಸಮಾವೇಶದ ಉದ್ದೇಶ ಏನು..?

ಹಾಸನದಲ್ಲಿ ಜೆಡಿಎಸ್‌ ಇವತ್ತು ಬೃಹತ್‌ ಸಮಾವೇಶ ಹಮ್ಮಿಕೊಂಡಿದೆ. ಸ್ಥಳೀಯ ಸಂಸ್ಥೆಗಳ‌ ಚುನಾವಣೆಗೂ ಮನ್ನವೇ ಜೆಡಿಎಸ್ ತವರು ಹಾಸನದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಜನತಾ ಸಮಾವೇಶದ ಹೆಸರಿನಲ್ಲಿ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಹಾಸನದ‌ ಭೂವನಹಳ್ಳಿ ಬಳಿ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭ ಆಗಲಿದೆ. ಕಾಂಗ್ರೆಸ್‌ಗೆ ಠಕ್ಕರ್ ಕೊಡಲು ದಳಪತಿಗಳು ಸಜ್ಜಾಗಿದ್ದು, ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಹಾಸನದಲ್ಲಿ‌ ಎರಡು ಸರ್ಕಾರಿ ಸಮಾವೇಶಗಳನ್ನ ಆಯೋಜಿಸಿ ಜೆಡಿಎಸ್ ಮತ್ತು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್‌‌ ಸೇರಿ ಅನೇಕ ಸಚಿವರು ವಾಗ್ದಾಳಿ ನಡೆಸಿದ್ದರು. ಇದೀಗ ಜೆಡಿಎಸ್ ಕೂಡ ಕಾರ್ಯಕ್ರಮ ಆಯೋಜನೆ ಮಾಡಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಲು ವೇದಿಕೆ ಸಿದ್ಧಪಡಿಸಿದೆ. ಕಾರ್ಯಕ್ರಮದಲ್ಲಿ ಜೆಡಿಎಸ್‌ನ ಎಲ್ಲಾ ಶಾಸಕರು, ಮಾಜಿ ಸಚಿವರುಗಳು, ಮಾಜಿ ಶಾಸಕರು ಭಾಗವಹಿಸಲಿದ್ದಾರೆ. ಜೆಡಿಎಸ್‌ ಸಮಾವೇಶದಲ್ಲಿ ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ ಇದೆ.

ಹಾಸನದಲ್ಲಿ ಬೃಹತ್ ಜನತಾ ಸಮಾವೇಶ ಮಾಡುತ್ತಿರುವ ಬಗ್ಗೆ ಜೆಡಿಎಸ್ ನಾಯಕ ಹೆಚ್. ಡಿ ರೇವಣ್ಣ ಮಾತನಾಡಿ, ದೇವೇಗೌಡರು ಈ ಜಿಲ್ಲೆಗೆ 63 ವರ್ಷ ಕಾಲ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಹಾನಸ ಜಿಲ್ಲೆ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಯಾವ ರೀತಿ ನಡೆದುಕೊಂಡಿದೆ ಗೊತ್ತಿದೆ. ಈ ಎರಡೂವರೆ ವರ್ಷ ಏನು ಮಾಡಿದೆ ಅಂತ ಗೊತ್ತಿದೆ. 2 ರಿಂದ 3 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಈ ಜಿಲ್ಲೆಯ ರೈತರ 530 ಕೋಟಿ ಸಾಲ ಮನ್ನಾ ಮಾಡಿದ್ದೆವು. ಕುಮಾರಸ್ವಾಮಿ ಸರ್ಕಾರ ಇದ್ದಾಗ 4 ಸಾವಿರ ಕೋಟಿ ಕಾಮಗಾರಿ ನೀಡಿದ್ದರು. ತೋಟಗಾರಿಕಾ ಕಾಲೇಜು, ಐಐಟಿಯನ್ಬು ಈ ಜಿಲ್ಲೆಯಿಂದ ತಪ್ಪಿಸಿದ್ದಾರೆ. ಎರಡೂವರೆ ವರ್ಷದಿಂದ ಜಿಲ್ಲೆಯ ಜನ ನೋವು ಅನುಭವಿಸುತ್ತಿದ್ದಾರೆ ಅಂತ ದೇವೇಗೌಡರು ಹೇಳಿದ್ದಾರೆ. ನಾನು ಬದುಕಿರುವಾಗ ಜಿಲ್ಲೆಯ ಜನರ ನೋವಿನ ಸ್ಥಿತಿ ನೋಡಲಾಗುತ್ತಿಲ್ಲ. ಈ ಜಿಲ್ಲೆಯ ಜನರ ಜೊತೆ ನಿಲ್ಲಬೇಕು ಅಂತ ದೇವೇಗೌಡರು ಸಮಾವೇಶಕ್ಕೆ ಬರುತ್ತಿದ್ದಾರೆ ಎಂದಿದ್ದಾರೆ.

ಈ ಜಿಲ್ಲೆಗೆ ಕಾಂಗ್ರೆಸ್ ಸರ್ಕಾರ ಏನು ಅನ್ಯಾಯ ಮಾಡಿದೆ ಅನ್ನೋದರ ಪಟ್ಟಿಯನ್ನು ದೇವೇಗೌಡರು, ಕುಮಾರಸ್ವಾಮಿ ಅವರ ಕೈನಲ್ಲಿ ಬಿಡುಗಡೆ ಮಾಡಿಸುತ್ತೇನೆ ಎಂದಿರುವ ಹೆಚ್‌.ಡಿ ರೇವಣ್ಣ, ಈ ಜಿಲ್ಲೆಗೆ ಅಭಿವೃದ್ಧಿ ಕಾಮಗಾರಿ ತ‌ಂದಿದ್ದು ಜೆಡಿಎಸ್, ಕಾಂಗ್ರೆಸ್ ಕೊಡುಗೆ ಏನು ಅನ್ನೋದು ಎಲ್ಲರಿಗೆ ಗೊತ್ತಿದೆ. ನಂಬಿಕೆ ದ್ರೋಹಿ ಪಕ್ಷ ಇದ್ರೆ ಅದು ಕಾಂಗ್ರೆಸ್, ಚಂದ್ರಶೇಖರ್ ಅವರನ್ನು ಪ್ರಧಾನಿಯಾಗಿ ಹತ್ತೂವರೆ ತಿಂಗಳು ಬಿಡಲಿಲ್ಲ. ದೇವೇಗೌಡರು ಏನ್ ತಪ್ಪು ಮಾಡಿದ್ರು , ಹತ್ತೂವರೆ ತಿಂಗಳಲ್ಲಿ ಕೆಳಗಿಳಿಸಿದ್ರಲ್ಲ..? ಹಾಸನದಲ್ಲಿ ಲೋಕಸಭೆ, ಮಹಾನಗರ ಪಾಲಿಕೆ ಚುನಾವಣೆ ಏನಾಯ್ತು..? ಅನ್ನೋದು ಎಲ್ಲರಿಗೂ ಗೊತ್ತಿಲ್ಲ. ನಾವು ಹಿಂದಿನಿಂದ ಬೆನ್ನಿಗೆ ಚೂರಿ ಹಾಕಿಲ್ಲ. ಮೋದಿಯವರು ಐದು ವರ್ಷ ಸಿಎಂ ಆಗು ಅಂತ ಈ ಹಿಂದೆ ಹೆಚ್‌.ಡಿ ಕುಮಾರಸ್ವಾಮಿ ಹೇಳಿದ್ದರು. ಆದರೆ ಕಾಂಗ್ರೆಸ್‌ನವರು ಬೇಕಾದಾಗ ಪಾದಕ್ಕೆ ಬೀಳ್ತಾರೆ ಎಂದು ಟೀಕಿಸಿದ್ದಾರೆ.

ಅತೀ ಶೀಘ್ರದಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗಲಿದ್ದು, ಮುಂದಿನ 2 ವರ್ಷದಲ್ಲಿ ವಿಧಾನಸಭಾ ಚುನಾವಣೆಯೂ ಎದುರಾಗಲಿದೆ. ಹಾಸನದಲ್ಲಿ ಈಗಾಗಲೇ ಬಿಜೆಪಿಯು ಪೈಪೋಟಿ ನೀಡುವ ಹಂತಕ್ಕೆ ಬೆಳೆದು ನಿಂತಿದ್ದು, ಜೆಡಿಎಸ್‌ ಪಕ್ಷ ತನ್ನ ಶಕ್ತಿ ವೃದ್ಧಿಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿಯಲ್ಲಿದೆ. ಈಗಾಗಲೇ ಸಕಲೇಶಪುರ ಹಾಗೂ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇದ್ದು, ಜೆಡಿಎಸ್‌ ಶಕ್ತಿ ಕ್ಷೀಣಿಸಿದರೆ ಬಿಜೆಪಿ ಆಕ್ರಮಿಸಿಕೊಳ್ಳುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ಜೆಡಿಎಸ್‌ ತನ್ನ ಪ್ರಭಾವ ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಸಮಾವೇಶ ಆಯೋಜನೆ ಮಾಡಿದೆ. ಇವತ್ತಿನ ಸಮಾವೇಶದಲ್ಲಿ ಲಕ್ಷ ಲಕ್ಷ ಜನರನ್ನು ಸೇರಿಸುವ ಪ್ರಯತ್ನ ಮಾಡಲಾಗಿದೆ. ಪ್ರಜ್ವಲ್‌ ರೇವಣ್ಣ ಪ್ರಕರಣದ ಬಳಿಕ ಕುಂದಿರುವ ಶಕ್ತಿಯನ್ನು ವೃದ್ಧಿಸುವ ಕಡೆಗೆ ಜೆಡಿಎಸ್‌ ನಾಯಕರು ಮುಂದಾಗಿದ್ದಾರೆ.

Related posts

ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್​ನಲ್ಲಿ ಒತ್ತಡ.. ಜಮೀರ್​ ಪಾಲಿಗೆ ಕಾಂಗ್ರೆಸ್​ ದೂರನಾ..?

Publicspot

ದುರಾಸೆಯಿಂದ ಪ್ರಕೃತಿಯನ್ನು ನಾಶ ಮಾಡಿದರೆ ನಮ್ಮನ್ನು ನಾವೇ ನಾಶ ಮಾಡಿಕೊಂಡಂತೆ

admin

ಸಿದ್ದರಾಮಯ್ಯ ರಾಜೀನಾಮೆ.. ಅವಧಿ ಪೂರ್ವ ಚುನಾವಣೆ ನಿರೀಕ್ಷೆ..!

Publicspot

‘ಸಿದ್ದರಾಮಯ್ಯ ಇರೋ ತನಕ ನನ್ನ ಭವಿಷ್ಯಕ್ಕೆ ಏನೂ ಆಗಲ್ಲ’ ರಾಜಣ್ಣ ಸವಾಲು..

Publicspot

ಇವತ್ತು ವಿಶ್ವಾಸ ಗೆದ್ದು ಬೀಗ್ತಾರಾ ನಟ ವಿಜಯ್‌‌..? ಯಾರೆಲ್ಲಾ ಬೆಂಬಲಿಸ್ತಾರೆ..?

Publicspot

Hariyana Vote Theft; ಹರಿಯಾಣದಲ್ಲೂ ಮತಗಳ್ಳತನ ಆಗಿದೆ.. ಸಾಕ್ಷ್ಯ ಕೊಟ್ಟ ರಾಹುಲ್​..

Publicspot