ನಟಿಗೆ ಲೈಂಗಿಕ ಕಿರುಕುಳ ಕೊಟ್ಟ ಪ್ರಕರಣದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿಯನ್ನು ಅರೆಸ್ಟ್ ಮಾಡಿ, ಜಾಮೀನು ಪಡೆದ ಬಳಿಕ ಮಾಧ್ಯಮಗಳ ಜೊತೆಗೆ ನಟಿ ಮಾತನಾಡಿದ್ದು, ನಾನು ಎವಿಅರ್ (ಅರವಿಂದ್ ವೆಂಕಟೇಶ್ ರೆಡ್ಡಿ) ಜೊತೆ ರಿಲೇಶನ್ ಶಿಪ್‌ನಲ್ಲಿ ಇದ್ದೆ. 2 ವರ್ಷಗಳ ಹಿಂದೆ ಎವಿಅರ್ ಜೊತೆ ರಿಲೇಶನ್ ಶಿಪ್ ಬ್ರೇಕಪ್ ಮಾಡಿಕೊಂಡೆ. ಬ್ರೇಕಪ್ ನಂತ್ರ ನನಗೆ ಸಾಕಷ್ಟು ಟಾರ್ಚರ್ ಆಗಿತ್ತು. ಕಳೆದ ಆಗಸ್ಟ್‌ನಿಂದ ಅನಾಮಧೇಯ ವ್ಯಕ್ತಿಗಳಿಂದ ಲೆಟರ್ ಬರೋಕೆ ಶುರು ಆಗಿತ್ತು. ನನ್ನ ಕ್ಯಾರೆಕ್ಟರ್ ಹಾಗೂ ಸ್ನೇಹಿತರ ಅಶ್ಲೀಲವಾಗಿ ಕೆಟ್ಟ ಕೆಟ್ಟದಾಗಿ ನನಗೆ ನನ್ನ ಸ್ನೇಹಿತರಿಗೆ, ಸಂಬಂಧಕರಿಗೆ ಹಾಗೂ ನಾನು ಇರುವ ಮನೆ ಓನರ್‌ಗೂ ಲೆಟರ್ ಕಳಿಸಿದ್ರು. ನಾನು ಏರ್ ಪೋರ್ಟ್ ಅಲ್ಲಿ ಇರೋದು, ಪ್ಲೈಟ್ ಅಲ್ಲಿ ಇರೋ ಫೊಟೊ ತೆಗೆದು ಪ್ರಿಂಟ್ ಹಾಕಿ ಕಳ್ಸೊದು. ನಾನು ಎವಿಅರ್ ಜೊತೆ ಬ್ರೇಕಪ್ ಆದಾಗ ಅವರು ಬಳಸಿದ್ದ ಭಾಷೆ ಆಧಾರದಲ್ಲಿ ನಾನು ದೂರು ನೀಡಿದ್ದೆ. ತನಿಖೆ ಮಾಡಿದ ಪೊಲಿಸರು ಅರೆಸ್ಟ್ ಮಾಡಿದ್ದರು.

ನಾನು ಎವಿಅರ್ ಅವರ ಜೊತೆ ರಿಲೇಶನ್ ಶಿಪ್‌ನಲ್ಲಿ ಇದ್ದಿದ್ದು ನಿಜ. ಅವರ ಜೊತೆ ನಾವು ಬಾಳೋಕೆ ಆಗಲ್ಲ ಅಂತ ಗೊತ್ತಾದಾಗ ಬಿಟ್ಟು ಬಿಟ್ಟೆ. ಬ್ರೇಕ್ ಅಪ್ ಅಗುತ್ತೆ ಅಂತ ಈ ರೀತಿ ಮಾಡೋದು ಎಷ್ಟು ಸರಿ..? ನಾವು ರಿಲೇಶನ್ ಶಿಪ್ ನಲ್ಲಿ ಇದ್ದಾಗ ಅವ್ರು ಸಾಕಷ್ಟು ಖರ್ಚು ಮಾಡಿದ್ದಾರೆ. ಅವರ ಶಕ್ತಿಗನುಸಾರ ಅವರು ಖರ್ಚು ಮಾಡಿದ್ರೆ ನನ್ನ ಶಕ್ತಿಗನುಸಾರ ನಾನು ಖರ್ಚು ಮಾಡಿದ್ದೇನೆ. ನನಗೆ ಕಾರು, ಮನೆ ಕೊಟ್ಟಿದ್ದೀನಿ ಅಂತ ಹೇಳಿದ್ದಾರೆ. ಅವರು ಕೊಟ್ಟ ಕಾರು ಮನೆ ಯಾವುದು ನನ್ನ ಬಳಿ ಇಲ್ಲ. ಮನೆ, ಕಾರು ಎಲ್ಲವನ್ನು ಅವರ ಹೆಸರಲ್ಲೆ ಅವರ ಬಳಿಯೇ ಇದೆ. ಈ ಕೇಸ್‌ನಲ್ಲಿ ಅವರು ಹೊರ ಬಂದ ಮೇಲೆ ನನಗೆ ಏನ್ ಮಾಡ್ತಾರೆ ಅನ್ನೋ ಭಯ ಇದೆ. ನನಗೆ ನಮ್ಮ ಕಾನೂನು ಪೋಲಿಸರ ಮೇಲೆ ನಂಬಿಕೆ ಇದೆ. ನನಗೆ ನ್ಯಾಯ ಸಿಗುತ್ತೆ ಅನ್ನೊ ನಂಬಿಕೆ ಇದೆ ಅಂತ ಅಳಲು ಮಾಧ್ಯಮಗಳ ಜೊತೆಗೆ ಹೇಳಿಕೊಂಡಿದ್ದಾರೆ.

ಜಾಮೀನು ಪಡೆದ ಬಳಿಕ ನಿರ್ಮಾಪಕ ಅರವಿಂದ್ ರೆಡ್ಡಿ ಮಾತನಾಡಿ, ನಾನು ಅವರಿಗೆ ಪೋನ್ ಮಾಡಿ ತೊಂದರೆ ಮಾಡ್ತಿದ್ದೇನೆಂದು ಅಲಿಗೇಷನ್ ಮಾಡಿದ್ದಾರೆ. ಅವರ ಫ್ರೆಂಡ್ ಅಂತ ಯಾರಿದ್ದಾರೆ ಆತನ ವೈಫ್‌ಗೆ ನಾನು ಲೆಟರ್ ಕಳಿಸಿದ್ದೇನೆಂದು ಆಪಾದನೆ ಮಾಡಿದ್ದಾರೆ. 2023 ರಲ್ಲಿ ನನಗೆ ಇವರು ಪರಿಚಯ. ಶ್ರೀಲಂಕಾದ ಟೂರ್ನಮೆಂಟ್‌ನಲ್ಲಿ ನನಗೆ ಇವರು ಪರಿಚಯ. ನಂತರ ನನಗೆ ನನ್ನ ಸ್ನೇಹಿತರಿಗೆ ಹತ್ತಿರವಾದ್ರು. ನಂತರ ಲಿವಿನ್ ರಿಲೇಷನ್ ಶಿಪ್ ಸ್ಟಾರ್ಟ್ ಆಯ್ತು. ಇವರು ತಾಂಜೇನಿಯಾ ಟ್ರಿಪ್ ಹೋಗಿ, ಹುಡುಗನ ಜೊತೆ ಟ್ರಿಪ್ ಹೋಗಿದ್ರು. ಹುಡುಗ ಮನೆಗೆ ಬಂದು ಹೋಗೋದು ಗೊತ್ತಾಯ್ತು. ಅದನ್ನ ಕೇಳಿದಾಗ ನಾವಿಬ್ಬರೂ ದೂರ ಆದ್ವಿ. 2024 ರಲ್ಲಿ ಅವರನ್ನ ಪಿಕ್ಚರ್ಸ್ ರಾಂಗ್ ಆಗಿ ಪೋಟೊ ಮಾಡ್ತಿದ್ದೀನಿ ಅಂತ ಆರೋಪ ಮಾಡಿದ್ರು. ಅದರಲ್ಲಿ ಯಾವುದು ರಾಂಗ್ ಇರಲಿಲ್ಲ. ಅವರ ಫ್ಯಾನ್ ಕ್ಲಬ್ ಅವರು ಅದನ್ನ ಹಾಕ್ತಿದ್ರು ಎಂದಿದ್ದಾರೆ.

ನಾನು ಅವರ ಮನೆಗೆ ಮನೆ ಓನರ್‌ಗೆ ಪೋಟೋ ಶೇರ್ ಮಾಡಿದ್ದೀನಿ ಅಂತ ಆಪಾದನೆ ಮಾಡಿದ್ದಾರೆ. ಆರ್.ಆರ್.ನಗರ ಪೊಲೀಸರು ನೋಟಿಸ್ ಕೊಟ್ಟಿದ್ರು. ಆಗ ನಾನು ಶ್ರೀಲಂಕಾದಲ್ಲಿದ್ದೆ. ಇವತ್ತು ನಾನು ಆರ್.ಆರ್.ನಗರ ಠಾಣೆಗೆ ಹೇಳಿಕೆ ಕೊಡಲು ಬಂದೆ. ಅಷ್ಟೊತ್ತಿಗೆ ಎಲ್.ಒ.ಸಿ ಮಾಡಿ ನನ್ನನ್ನ ಠಾಣೆಗೆ ಕರೆತಂದ್ರು. ಸ್ಟೇಷನ್ ಬೇಲ್ ಇದ್ರು ಕೋರ್ಟ್‌ಗೆ ಪ್ರೊಡ್ಯೂಸ್ ಮಾಡಿದ್ರು. ಕೋರ್ಟ್ ಬೇಲ್ ಕೊಡ್ತು. ಪೊಲೀಸ್ ಅಧಿಕಾರಿಗಳು ನನ್ನ ಸ್ಟೋರಿಯನ್ನು ಕೇಳಿದ್ದಾರೆ. ರಿಯಾಲಿಟಿಯಲ್ಲಿ ಯಾರು ಲೆಟರ್ ಫೋಟೋ ಕಳಿಸಿದ್ದಾರೆ ನನಗಂತೂ ಗೊತ್ತಿಲ್ಲ. ಸಂಘರ್ಷ ಬರಲಿಕ್ಕೆ ಕಾರಣ ದುಬೈ ಸೈಮಾಗೆ ತಾಂಜೇನಿಯಾಗೆ ಹೋಗಲು ಸ್ಪಾನ್ಸರ್ ಮಾಡಿ ಕಳಿಸಿದ್ದೆ. ಅವರನ್ನ ನನ್ನ ಪಾರ್ಟನರ್ ಅಂತ ಏನು ಮಾಡಬೇಕು ಮಾಡ್ತಿದ್ದೆ. ಆದ್ರೆ ಆ ಹುಡುಗನ ಜೊತೆ ರೆಗ್ಯೂಲರ್ ಕಾಂಟ್ಯಾಕ್ಟ್ ಮಾಡ್ತಿದ್ರು.
ಅವಳು ನನ್ನ ಮೀಟ್ ಮಾಡಿದ್ದು 2023 ನಲ್ಲಿ 2024 ರಲ್ಲಿ ಪೊರ್ಶೆ ಕಾರು ಕೊಡಿಸಿದ್ದೆ. ಅವಳ ಹೆಸರಲ್ಲಿ ಕಸ್ಟಮೈಸ್ಡ್ ಮಾಡಿ ತರಿಸಿದ್ದೆ. ಅವಳು ಕೇಳಿಲ್ಲ, ಮಾಡಿಲ್ಲ, ಆದ್ರೆ ತಗೊಂಡಿದ್ದಾಳೆ . ಅವರ ತಮ್ಮನ ಮದುವೆಗೆ ಅವರ ಮನೆ ಗೃಹಪ್ರವೇಶಕ್ಕೆ ಸಹಾಯ ಮಾಡಿದೆ. ನನ್ನ ಮೇಲೆ ಬೇಡವಾದ ಅಪವಾದ ಹಾಕ್ತಿದ್ದಾರೆ. ಅವರಿಗೆ ಕೊಟ್ಟಿದ್ದ ಕಾರು ನನ್ನತ್ರನೇ ಇದೆ. ಸೈಟ್ ಹುಡುಗಿ ಹೆಸರಲ್ಲಿ ಅಗ್ರಿಮೆಂಟ್ ರಿಜಿಸ್ಟರ್ ಮಾಡಿದ್ದೀನಿ. ಮಹಿಳಾ ಸ್ಟೇಷನ್‌ಗೆ ಕರೆಸೋವರೆಗೂ ಆಕೆಯನ್ನ ನೋಡಿಲ್ಲ. ನನ್ನ ತಪ್ಪಿದ್ರೆ ನನಗೆ ಶಿಕ್ಷೆ ಆಗತ್ತದೆ. ಅವರ ತಪ್ಪಿದ್ರೆ ಅವರಿಗೆ ಶಿಕ್ಷೆ ಆಗತ್ತದೆ. ಇದು ಮರೆತಿರೋ ಕಥೆ. ಮರೆತಿರೋ ಕಥೆ ಬಗ್ಗೆ ನಾನು ಯೋಚನೆ ಮಾಡಲ್ಲ. ಮತ್ತೊಬ್ಬರ ಜೊತೆ ಸಂಸಾರ ಮಾಡ್ತಿದ್ದಾರೆ ಅನ್ನೊ ವಿಚಾರ ಕಿವಿಗೆ ಬಿದ್ದು ದೂರ ಆಗಿದ್ದು. ನಾನು ಕೌಂಟರ್ ಅಟ್ಯಾಕ್ ಮಾಡಲ್ಲ. ಸಾಬೀತು ಮಾಡಲಿಕ್ಕೆ ಏನೇನು ದಾಖಲಾತಿ ಬೇಕೋ ಅದನ್ನ ನಾನು ಪ್ರೊಡ್ಯೂಸ್ ಮಾಡ್ತೀನಿ. 2024 ಜೂನ್ 10 & ಜೂನ್ 11 ಮದುವೆ ಅಂದ್ಕೊಂಡಿದ್ವಿ, ಆದ್ರೆ ಆಗಲಿಲ್ಲ ಎಂದಿದ್ದಾರೆ ಎವಿಆರ್ ಗ್ರೂಪ್ ಅರವಿಂದ್ ರೆಡ್ಡಿ.


