The Public Spot
ರಾಜಕೀಯ

Cabinet List; ಸಂಪುಟ ಪುನಾರಚನೆ ಚರ್ಚೆ.. ದೆಹಲಿಯಲ್ಲಿ ಸಿಎಂ ಕಸರತ್ತು.. ಯಾರು ಔಟ್‌..? ಯಾರು ಇನ್..?

ದೆಹಲಿಯಲ್ಲಿ ಸಂಪುಟ ಪುನಾರಚನೆ ವಿಚಾರ ಕ್ಲೈಮ್ಯಾಕ್ಸ್‌ ಹಂತಕ್ಕೆ ತಲುಪಿದೆ. ಮೊನ್ನೆ ರಾಹುಲ್‌ ಗಾಂಧಿ ಭೇಟಿ ಮಾಡಿದ್ದ ಸಿಎಂ ಸಿದ್ದರಾಮಯ್ಯ, ಸಚಿವ ಸಂಪುಟ ಪುನಾರಚನೆ ಮಾಡುವುದಕ್ಕೆ ಅವಕಾಶ ಕೇಳಿದ್ದರು. ಆ ಬಳಿಕ ಮಲ್ಲಿಕಾರ್ಜುನ ಖರ್ಗೆ ಜೊತೆಗೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಮಾಡುವಂತೆ ಸಿಎಂ ಸಿದ್ದರಾಮಯ್ಯಗೆ ಸೂಚನೆ ಕೊಟ್ಟಿದ್ದರು. ಅದರಂತೆ ಇಂದು ದೆಹಲಿಗೆ ತೆರಳಿರುವ ಸಿಎಂ ಸಿದ್ದರಾಮಯ್ಯ, AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಭೇಟಿಗೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ. ಮಲ್ಲಿಕಾರ್ಜುನ ಖರ್ಗೆ ಭೇಟಿ ಸೌರ್ಹದ ಭೇಟಿ ಅಷ್ಟೇ. ರಾಹುಲ್‌ ಗಾಂಧಿ ಜೊತೆಗೆ ಮಾತನಾಡಿಲ್ಲ. ಮಲ್ಲಿಕಾರ್ಜುನ ಖರ್ಗೆ ಕೇಳಿದರೆ ಮಾತನಾಡ್ತಿನಿ, ನಾಲ್ಕೈದು ತಿಂಗಳುಗಳ ಹಿಂದೆ ಸಂಪುಟ ಪುನರ್ ರಚನೆ ಮಾಡಲು ಹೇಳಿದ್ದರು. ಆಗ ನಾನೇ ಎರಡೂವರೆ ವರ್ಷ ಆದ್ಮೇಲೆ ‌ಮಾಡ್ತಿನಿ ಅಂದಿದ್ದೆ. ಈಗ ಪುನಾರಚನೆ ಮಾಡು ಅಂದರೆ ಮಾಡ್ತಿನಿ. ನವೆಂಬರ್ 20ಕ್ಕೆ ಎರಡೂವರೆ ವರ್ಷ ತುಂಬುತ್ತದೆ. 140 ಶಾಸಕರು ಆಕಾಂಕ್ಷಿಗಳು, ಎಲ್ಲರೂ ಸಮರ್ಥರು. ಖರ್ಗೆ ಅವರು ಎಷ್ಟು ಬದಲಾವಣೆ ಮಾಡು ಅಂತಾರೆ ಅಷ್ಟು ಮಾಡ್ತಿನಿ. ಅದನ್ನೇ ಮಾತನಾಡಲು ಹೊಗ್ತಿದ್ದೀನಿ ಎಂದಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ವೇಳೆ ಹೊಸದಾಗಿ ಆಯ್ಕೆ ಆಗಿರುವ 15 ಶಾಸಕರಿಗೆ ಸಚಿವ ಸ್ಥಾನ ನೀಡಿದರೆ ಒಳ್ಳೆಯದು ಅಂತ ಶಾಸಕ ಬಸವರಾಜ್ ಶಿವಗಂಗಾ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಚನ್ನಗಿರಿ ಶಾಸಕ ಬಸವರಾಜ್‌ ಶಿವಗಂಗಾ, ಹೊಸ ಶಾಸಕರಿಗೆ ಹೊಸ ಆಲೋಚನೆಗಳು ಇರುತ್ತವೆ. ದಾವಣಗೆರೆ ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ನೀಡಿದರೆ ಒಳ್ಳೆಯದಾಗುತ್ತದೆ ಎಂದಿದ್ದಾರೆ. ಜಿಲ್ಲೆಯಲ್ಲಿ ಹೊಸ ಶಾಸಕರು ನಾನು, ದೇವೇಂದ್ರಪ್ಪ, ಬಸವಂತಪ್ಪ ಮೂರು ಜನ ಇದ್ದೇವೆ ಅಂತ ಹೇಳುವ ಮೂಲಕ ತಾನೂ ಕೂಡ ಮಂತ್ರಿ ಸ್ಥಾನದ ಆಕಾಂಕ್ಷಿ ಅನ್ನೋದನ್ನು ಪರೋಕ್ಷವಾಗಿ ಹೇಳಿದ್ದಾರೆ.

ಕ್ಯಾಬಿನೆಟ್‌ ಪುನಾರಚನೆ ವಿಚಾರ ಮುನ್ನೆಲೆಗೆ ಬರ್ತಿದ್ದ ಹಾಗೆ ಆಕಾಂಕ್ಷಿತರು ಸಿಎಂ ಭೇಟಿ ಮಾಡಿದ್ದಾರೆ. ಮಧ್ಯಾಹ್ನ ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ಶಾಸಕ ವಿಜಯಾನಂದ ಕಾಶಪ್ಪನವರ್, ನಾನು ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ ಆಗಿದ್ದಕ್ಕೆ ಸಿಎಂ ಭೇಟಿ ಮಾಡಿದ್ದೇನೆ. ಸಿಎಂ ನೋಡೋಣ ಕಾಲ ಬಂದಾಗ ಮಾಡೋಣ ಎಂದಿದ್ದಾರೆ. ಇಡೀ ನಮ್ಮ ಕುಟುಂಬವೇ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದೇವೆ. ಅದಕ್ಕಾಗಿ ನಮ್ಮನ್ನು ಪರಿಗಣಿಸಿ ಎಂದು ಕೇಳಿದ್ದೇವೆ. ಲಿಂಗಾಯತ ಸಮಾಜಕ್ಕೆ ಡಿಸಿಎಂ ಹುದ್ದೆಯ ಬೇಡಿಕೆ ಇಡುತ್ತೇವೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರೇ ನಮ್ಮ ದೇವರು ಎಂದಿದ್ದಾರೆ ವಿಜಯಾನಂದ ಕಾಶಪ್ಪನವರ್.

ಸಚಿವ ಸಂಪುಟ ಪುನಾರಚನೆಗೆ ಸಿಎಂ ಸಿದ್ದರಾಮಯ್ಯ ಒಲವು ಹಿನ್ನೆಲೆ ಮಾಜಿ ಸಚಿವ ಕೆ.ಎನ್ ರಾಜಣ್ಣ ಕೂಡ ಅಲರ್ಟ್‌ ಆಗಿದ್ದಾರೆ. ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿಯಾದ ರಾಜಣ್ಣ, ಮತ್ತೆ ಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ನನ್ನನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ. ಈ ಬಗ್ಗೆ ವರಿಷ್ಠರ ಜೊತೆಗೆ ಮಾತಾಡುವಂತೆಯೂ ಸಿಎಂಗೆ ಮನವಿ ಮಾಡಿದ್ರು. ಇನ್ನೂ ಸಚಿವ ಸಂಪುಟದಲ್ಲಿ ಯು.ಟಿ ಖಾದರ್‌ಗೆ ಸ್ಥಾನ ಸಿಗುತ್ತದೆ ಎಂಬ ಚರ್ಚೆ ಬಗ್ಗೆ ಸ್ಪೀಕರ್ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ. ಸದ್ಯದ ರಾಜಕೀಯ‌‌ ಬೆಳವಣಿಗೆಗಳ ಎಬಿಸಿಡಿ ನನಗೆ ಗೊತ್ತಿಲ್ಲ. ಬೆಳಗಾವಿ ಅಧಿವೇಶನ ಚೆನ್ನಾಗಿ ನಡೆಸಬೇಕು. ಜನರ ಕಷ್ಟಗಳಿಗೆ ಸ್ಪಂದಿಸಬೇಕು. ಇದಿಷ್ಟೇ ನಮ್ಮ ಮುಂದೆ ಇರುವ ಗುರಿ ಎಂದಿದ್ದಾರೆ ಖಾದರ್.

ಇನ್ನು ಪ್ರಧಾನಿ ಮೋದಿ ಭೇಟಿ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೂ ಸಿಎಂ ಭೇಟಿ ಮಾಡಿದ್ದು, ಡಿಸೆಂಬರ್ 8ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುವ ಹೊತ್ತಿಗೆ ಹೊಸ ಸಂಪುಟ ರಚನೆ ಮಾಡಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ. ಖರ್ಗೆ ಜೊತೆಗೆ ಸಮಾಲೋಚನೆ ಮಾಡಿದ ಬಳಿಕ ಬೆಂಗಳೂರಿಗೆ ಹೊರಟಿದ್ದು, ಯಾವ ಸಚಿವರನ್ನು ಕೈ ಬಿಡಬೇಕು..? ಯಾರನ್ನು ಸೇರಿಸಿಕೊಳ್ಳಬೇಕು..? ಯಾರಿಗೆ ಯಾವ ಖಾತೆ..? ಎಂಬುದರ ಬಗ್ಗೆ ನಾಳೆ ಬೆಳಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ.

Related posts

ಸರ್ಕಾರ ಸಾಲ ತೀರಿಸಲು ಶಾಸಕರಿಂದ ಸಖತ್‌‌ ಐಡಿಯಾ..?

Publicspot

ಇವತ್ತು ಕಾಂಗ್ರೆಸ್‌ ಸರ್ಕಾರದ ಸಾಧನಾ ಸಮಾವೇಶ..! ಏನು ವಿಶೇಷ..?

Publicspot

BJP ಬಾಣವನ್ನು ಬಿಜೆಪಿಗೇ ತಿರುಗಿಸಿದ ಸಚಿವ ಕೃಷ್ಣಬೈರೇಗೌಡ..!

Publicspot

Vote Theft.. ರಾಹುಲ್​ ಆರೋಪಕ್ಕೆ ಟೀಕೆ ಮಾಡಿದವರಿಗೆ ಪ್ರಿಯಾಂಕ್​ ತಿರುಗೇಟು..

Publicspot

ರಾಜ್ಯಮಟ್ಟದ ಸ್ವಾತಂತ್ರ‍್ಯ ದಿನಾಚರಣೆಗೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಿ: ಮಹೇಶ್ವರ್ ರಾವ್.

admin

Congress Protest Vote Chori; ಮತಗಳ್ಳತನ ವಿರುದ್ಧ ಕಾಂಗ್ರೆಸ್‌ ತೀವ್ರ ಹೋರಾಟ..

Publicspot