The Public Spot
ರಾಜಕೀಯ

Congress Protest Vote Chori; ಮತಗಳ್ಳತನ ವಿರುದ್ಧ ಕಾಂಗ್ರೆಸ್‌ ತೀವ್ರ ಹೋರಾಟ..

ಬಿಹಾರ ಸೋಲಿನ ಬಳಿಕ ಮತಗಳ್ಳತನ ಆರೋಪ ಮತ್ತಷ್ಟು ತೀಕ್ಷ್ಣವಾಗಿದೆ. ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಮಾಡಲಾಗಿದೆ. ಯುತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಬಾನು, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ, ಸಚಿವ ಸಂತೋಷ್ ಲಾಡ್, ರಾಜ್ಯಸಭಾ ಸದಸ್ಯ ಜಿ ಸಿ ಚಂದ್ರಶೇಖರ್, ಪರಿಷತ್ ಸದಸ್ಯ ಸಲೀಂ ಅಹ್ಮದ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗಿದೆ. ಪ್ರತಿಭಟನೆಯಲ್ಲಿ ನೂರಾರು ಯುತ್ ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಯುತ್ ಕಾಂಗ್ರೆಸ್ ಕಾರ್ಯಕರ್ತರಿಂದ ವೋಟ್ ಚೋರಿ ವಿರುದ್ಧ ಘೋಷಣೆ ಕೂಗಿ ಕೆಂಡಕಾರಿದ್ದಾರೆ.

ಪರಿಷತ್ ಸದಸ್ಯ ಸಲೀಂ ಅಹ್ಮದ್ ಮಾತನಾಡಿ, ಬಿಹಾರದಲ್ಲಿ ಎಲೆಕ್ಷನ್ ಕಮಿಷನ್ ಮತ್ತು ಬಿಜೆಪಿಯ ಗೆಲುವು. ಇದು ಬಿಹಾರ ಜನರು ಕೊಟ್ಟ ತೀರ್ಪಲ್ಲ. ನಿತೀಶ್ ಕುಮಾರ್ ನಡೆಯಲು ಆಗಲ್ಲ ಕಿವಿ ಕೇಳಿಸಲ್ಲ. ಎಲೆಕ್ಷನ್ ಕಮೀಷನ್, ಅಮಿತ್ ಶಾ, ಮೋದಿ ಈ ಚುನಾವಣೆ ಗೆಲ್ಲಿಸಿದ್ದಾರೆ. ವೋಟ್‌ನ ಡಕಾಯಿತನ ಮಾಡಿದ್ದಾರೆ. ಹೆಚ್ಚುವರಿ ವೋಟ್ ಸೇರಿಸಿದ್ದಾರೆಂದು ರಾಹುಲ್ ಗಾಂಧಿ ಆರೋಪ ಮಾಡಿದ್ರು. ಕಾಂಗ್ರೆಸ್ ಪಕ್ಷಕ್ಕೆ ಇತಿಹಾಸ ಇದೆ. ನಾವು ಜನತೆಯ ಮುಂದೆ ಹೋಗ್ತೇವೆ. ಜನರಿಗೆ ಸತ್ಯವನ್ನ ತಿಳಿಸುವ ಕೆಲಸ ಮಾಡ್ತೇವೆ ಎಂದಿದ್ದಾರೆ.

ಸಚಿವ ಸಂತೋಷ್ ಲಾಡ್ ಮಾತನಾಡಿ, ಬಿಹಾರ ಸೋತಿರೊದಕ್ಕೆ ನಾವು ಈ ಹೋರಾಟ ಮಾಡ್ತಿರೋದಲ್ಲ. ರಾಹುಲ್ ಗಾಂಧಿ ಈಗಾಗಲೇ ವೋಟ್ ಚೋರಿ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ್ದಾರೆ. ಬಿಹಾರ ಚುನಾವಣೆ, ಮಹಾರಾಷ್ಟ್ರ ಚುನಾವಣೆ, ಹರಿಯಾಣ ಚುನಾವಣೆಯಲ್ಲಿ ಎಲೆಕ್ಷನ್ ಕಮೀಷನ್ ಪಾತ್ರ ಮಹತ್ವದ್ದು ಆಗಿದೆ. ರಾಹುಲ್ ಗಾಂಧಿ ಹೇಳಿದ್ದು ಸುಳ್ಳು ಎಂದು ಮನವರಿಕೆ ಮಾಡಲು, ರಾಹುಲ್ ಗಾಂಧಿ ವಿರುದ್ಧ ಬಿಜೆಪಿ, ಕೇಂದ್ರ ಸರ್ಕಾರ, ಎಲೆಕ್ಷನ್ ಕಮಿಷನ್ ಸಹ ರಾಹುಲ್ ವಿರುದ್ಧ ನಿಂತಿದೆ. ಬಿಹಾರ ಚುನಾವಣೆ ವೇಳೆ ಬಿಜೆಪಿ ಯಾವ ಆಧಾರದ ಮೇಲೆ ವೋಟ್ ಕೇಳಿದೆ..? ಇದನ್ನ ಬಿಜೆಪಿ ಮುಖಂಡರಿಗೆ ಕೇಳ್ಬೇಕು. ಡೆವಲಪ್ಮೆಂಟ್ ಮಾಡಿದ್ದೇವೆ, ಮಕ್ಕಳಿಗೆ ಉದ್ಯೋಗ ಕೊಟ್ಟಿದ್ದೇವೆ ಎಂದು ಹೇಳಿಲ್ಲ. ಬಾಂಗ್ಲಾದೇಶ, ರೋಹಿಂಗ್ಯಾ ಈ ಎಲ್ಲಾ ವಿಚಾರದ ಮೇಲೆ ವೋಟ್ ಕೇಳಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

25 ವರ್ಷ ಅಧಿಕಾರ ಮಾಡಿ ಬಾಂಗ್ಲಾದೇಶದವರು ಅಕ್ರಮವಾಗಿ ಇದ್ದಾರೆ ಎನ್ನುತ್ತಾರೆ. 60 ಲಕ್ಷ ವೋಟ್ ಡಿಲೀಟ್ ಮಾಡಿ, ನಂತರ 20 ಲಕ್ಷ ವೋಟ್ ಸೇರಿಸಿದ್ದಾರೆ. ಮೋದಿ ಸಾಹೇಬ್ರು ಮತ ಖರೀದಿಯನ್ನು ಮಾಡಿದ್ದಾರೆ. 1 ಕೋಟಿಗೂ ಹೆಚ್ಚು ಹೆಣ್ಣುಮಕ್ಕಳಿಗೆ 10 ಸಾವಿರ ಹಣ ಹಾಕಿದ್ದಾರೆ. ಹೆಣ್ಮಕ್ಕಳಿಗೆ ಹಣ ಕೊಟ್ಟು ವೋಟ್ ಖರೀದಿ ಮಾಡಿದ್ದಾರೆ. ಚುನಾವಣೆ ಪ್ರಕ್ರಿಯೆ ಅನೌನ್ಸ್ ಆದ ಮೇಲೆ ಹಣ ಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ. ವೋಟ್ ಚೊರಿಯಿಂದ ಬಿಹಾರ್‌ದಲ್ಲಿ ಸೋತಿದ್ದೇವೆ, ಷಡ್ಯಂತ್ರದಿಂದ ಸೋತಿದ್ದೇವೆಯೇ ಹೊರತು ನಾವು ಸತ್ತಿಲ್ಲ ಎಂದು ಮಂಜುನಾಥ್ ಗೌಡ ವಾಗ್ದಾಳಿ ಮಾಡಿದ್ದಾರೆ. ಸಂವಿಧಾನವನ್ನ ಕೊಲ್ಲಲು ಮೋದಿ, ಅಮಿತ್ ಷಾ ಹೊರಟಿದ್ದಾರೆ. ಜಾತಿ, ಧರ್ಮಗಳ ನಡುಗೆ ಬೆಂಕಿ ಹಚ್ಚಿ ಗೆಲ್ಲುತ್ತಿದ್ದಾರೆ. ಮಹಾದೇವಪುರದಲ್ಲಿ ಮತ ಕದ್ದು ಬೆಂಗಳೂರು ಕೇಂದ್ರ ಎಂಪಿ ಕ್ಷೇತ್ರ ಗೆದ್ರು. ಅವರು ವೋಟ್ ಚೋರಿ ಮಾಡಿದ ನಂತರವೂ ನಾವು 136 ಸೀಟ್ ಗೆದ್ದಿದ್ದೇವೆ ಎಂದಿದ್ದಾರೆ.

ಯುತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ್ ಬಾನು ಮಾತನಾಡಿ, ಸಂವಿಧಾನ ಉಳಿಸಲು ನಾವು ಹೋರಾಡ್ತಿದ್ದೇವೆ. ವೋಟ್ ಚೋರಿಯ ಆಟವನ್ನ ಬಿಜೆಪಿ ಆಡ್ತಿದೆ. ನಮ್ಮ ದೇಶದ ಪ್ರಜಾಪ್ರಭುತ್ವ, ವಿರೋಧ ಪಕ್ಷಗಳ ನಾಯಕರ ಮೇಲೆ ಇಡಿ, ಐಟಿ ದಾಳಿ ಮಾಡುತ್ತದೆ. ಎಲೆಕ್ಷನ್ ಕಮಿಷನರ್ ಆಯ್ಕೆಯ ಕಮಿಟಿಯಿಂದ ಚೀಪ್ ಜಸ್ಟೀಸ್‌ರನ್ನ ಹೊರಗಿಟ್ಟರು. ಮೋದಿಗೆ ಎಲೆಕ್ಷನ್ ಕಮಿಷನರ್ ಬೇಕಿರಲಿಲ್ಲ ಅವರ ಪಿಎ ಬೇಕಿತ್ತು. ಎಲೆಕ್ಷನ್ ಕಮಿಷನ್ ಬಿಜೆಪಿಯ ಪ್ರೈವೇಟ್ ಲಿಮಿಟೆಡ್ ಆಗಿದೆ. ಜ್ಞಾನೇಶ್ ಕುಮಾರ್ ಮೋದಿಯ ಪಿಎ‌ ಆಗಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ. ಬಡವರು ಬಡವರಾಗಿಯೇ ಹೋಗ್ತಿದ್ದಾರೆ. ಭ್ರಷ್ಟ ಎಲೆಕ್ಷನ್ ವ್ಯವಸ್ಥೆಯ ವಿರುದ್ಧ ಯುತ್ ಕಾಂಗ್ರೆಸ್ ಹೋರಾಟ ಮುಂದುವರಿಸುತ್ತದೆ. ಲೋಕತಂತ್ರದ ಹತ್ಯೆ ಮಾಡ್ತಿದ್ದಾರೆ. ಲೋಕತಂತ್ರವನ್ನ ICU‌ನಲ್ಲಿ ಇಟ್ಟಿದ್ದಾರೆ. ದೇಶದ ಲೋಕತಂತ್ರ ಸರಿಪಡಿಸಲು ನಾವು ಹೋರಾಟ ಮುಂದುವರಿಸಬೇಕಿದೆ ಎಂದಿದ್ದಾರೆ.

ರಾಜ್ಯ ಸಭಾಸದಸ್ಯ ಜಿ.ಸಿ ಚಂದ್ರಶೇಖರ್ ಮಾತನಾಡಿ, ಬಿಹಾರದಲ್ಲಿ ಅತಿಹೆಚ್ಚು ಮಹಿಳೆಯರು ಮತಚಲಾಯಿಸಿದ್ದಾರೆ. ಚುನಾವಣೆ ಪೂರ್ವ ಮಹಿಳೆಯರ ಖಾತೆಗೆ ಹಣ ಹಾಕಿದ್ರು. ಯಾರೂ ಊಹೆ ಮಾಡದಷ್ಷು ಅವರಿಗೆ ಹೆಚ್ಚಿನ ಸಿಟ್ ಬರ್ತಿದೆ. ಊಹೆ ಮೀರಿದಂತೆ ಅವರು ಚುನಾವಣೆ ಮಾಡ್ತಿದ್ದಾರೆ. ಇಡೀ ಸಿಸ್ಟಮ್‌ನ ಅವರು ಹೈಜಾಕ್ ಮಾಡಿದ್ದಾರೆ. ಸಿಸ್ಟಮ್ ಹೈಜಾಕ್ ಅಲ್ಲದೆ ಮತ್ತೇನು ಅಲ್ಲ ಎಂದು ಹೇಳಿದ್ದಾರೆ. ಒಟ್ಟಾರೆ ಬಿಜೆಪಿ ಮತಚೋರಿ ಮಾಡಿಯೇ ಬಿಹಾರ ಗೆದ್ದಿದ್ದಾರೆ ಅನ್ನೋದು ಕಾಂಗ್ರೆಸ್‌ನ ಗಟ್ಟಿಯಾದ ನಿಲುವು. ಆದರೆ ಮತಚೋರಿ ವಿರುದ್ಧ ಯಾವ ರೀತಿಯ ಹೋರಾಟ ಮುಂದುವರಿಯುತ್ತದೆ..? ಭಾರತದಾದ್ಯಂತ ಪ್ರತಿಭಟನೆ ಮಾಡುವ ಮೂಲಕ ದೇಶದ ಜನರನ್ನು ಎಚ್ಚರಿಸ್ತಾರಾ..? ಅಥವಾ ಕಾನೂನು ಮೂಲಕ ಹೋರಾಟ ಮಾಡುತ್ತಾರಾ..? ಅನ್ನೋ ಬಗ್ಗೆ ಇನ್ನು ಮುಂದಾದರೂ ಕನ್ಫರ್ಮ್‌ ಮಾಡಬೇಕಿದೆ.

Related posts

ಮನರೇನಾ ಹೆಸರು ಬದಲಿಸದಂತೆ ಕಾಂಗ್ರೆಸ್‌ ಲೋಕಭವನ ಚಲೋ!

Publicspot

Okkaliga and Lingayath united; ಜಾತಿ ಗಣತಿ ಆರಂಭಕ್ಕೂ ಮುನ್ನವೆ ಬಲಾಢ್ಯರ ವಿರೋಧ.. ಸಣ್ಣ ಬಿರುಕು..

Publicspot

Cabinet List; ಸಂಪುಟ ಪುನಾರಚನೆ ಚರ್ಚೆ.. ದೆಹಲಿಯಲ್ಲಿ ಸಿಎಂ ಕಸರತ್ತು.. ಯಾರು ಔಟ್‌..? ಯಾರು ಇನ್..?

Publicspot

ಅಧಿಕಾರ ಹಸ್ತಾಂತರ ಬೆನ್ನಲ್ಲೇ ದಲಿತ ನಾಯಕರ ಒಗ್ಗಟ್ಟು.. ಯಾರು ಏನಂದ್ರು..?

Publicspot

INTERNAL CASTE RESERVATION: ಕಾಂಗ್ರೆಸ್‌ ಪಾಲಿಗೆ ಕಬ್ಬಿಣದ ಕಡೆಲೆ ಆದ ಒಳಮೀಸಲಾತಿ..

Publicspot

ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್​ನಲ್ಲಿ ಒತ್ತಡ.. ಜಮೀರ್​ ಪಾಲಿಗೆ ಕಾಂಗ್ರೆಸ್​ ದೂರನಾ..?

Publicspot