The Public Spot
ಅಪರಾಧ

Priyanka Upendra; ಪ್ರಿಯಾಂಕಾ ಉಪೇಂದ್ರಗೆ ವಂಚಿಸಿದ್ದ ಬಿಹಾರಿ ಬಾಬು ಅಂದರ್​..

ನಟಿ ಪ್ರಿಯಾಂಕ ಉಪೇಂದ್ರ ಪೋನ್ ಹ್ಯಾಕ್ ಮಾಡಿ ವಂಚನೆ ಮಾಡಿದ್ದ ಸೈಬರ್ ಚೋರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಸದಾಶಿವನಗರ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ. ಬಿಹಾರ ಮೂಲದ ವಿಕಾಸ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಪ್ರಿಯಾಂಕಾ ಉಪೇಂದ್ರ ದೂರು ಆಧರಿಸಿ ಆರೋಪಿ ಪತ್ತೆಗೆ ನಿರಂತರ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ಆರೋಪಿಯನ್ನು ಬಿಹಾರದಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಸೆಪ್ಟೆಂಬರ್ 15 ರಂದು ನಟಿ ಪ್ರಿಯಾಂಕ ಉಪೇಂದ್ರಗೆ ಕರೆ ಮಾಡಿದ್ದ ಸೈಬರ್​ ವಂಚಕ, ಫರ್ನಿಚರ್​ ಕಳುಹಿಸಿ ಕೊಡುವುದಾಗಿ ಹೇಳಿ OTP ನಂಬರ್​ ಪಡೆದುಕೊಂಡಿದ್ದ. ಅಷ್ಟೇ ಅಲ್ಲದೆ ಕೆಲವೇ ನಿಮಿಷಗಳಲ್ಲಿ ಮೊಬೈಲ್​ ಹ್ಯಾಕ್​ ಆಗಿತ್ತು. ಆ ನಂತರ ಉಪೇಂದ್ರ ಮೊಬೈಲ್ ಕೂಡ ಹ್ಯಾಕ್​ ಮಾಡಿದ್ದ ಆರೋಪಿ, ಪೋನ್ ಹ್ಯಾಕ್ ಮಾಡಿ ಹಣ ಹಾಕಿಸಿಕೊಂಡಿದ್ದ. ಆರ್ಡರ್ ಡೆಲಿವರಿ ಮಾಡುವ ನೆಪದಲ್ಲಿ ಸೈಬರ್ ವಂಚನೆ ಮಾಡಿದ್ದನು. ಪ್ರಿಯಾಂಕ ಉಪೇಂದ್ರ ಮಗ ಸೇರಿದಂತೆ ಕೆಲವರಿಂದ ಹಣ ಹಾಕಿಸಿಕೊಂಡಿದ್ದನು.

ಪ್ರಿಯಾಂಕಾ, ಉಪೇಂದ್ರ ಇಬ್ಬರ ಮೊಬೈಲ್​ ಹ್ಯಾಕ್​ ಮಾಡಿದ್ದು ಅಷ್ಟೇ ಅಲ್ಲದೆ ಆಪ್ತರಿಗೆ ಕರೆ ಮಾಡಿ, ಮೆಸೇಜ್​ ಮಾಡಿ ಹಣ ಹಾಕುವಂತೆ ತಿಳಿಸಿದ್ದರು. ಪ್ರಿಯಾಂಕಾ ಉಪೇಂದ್ರ ಮಗನಿಂದ ಸುಮಾರು 50 ಸಾವಿರ ಹಣ ಹಾಕಿಸಿಕೊಂಡಿದ್ದ ಆಸಾಮಿ. ಮೋಜು ಮಸ್ತಿ ಮಾಡಿ ಹಣ ಖಾಲಿ ಮಾಡಿದ್ದನು. ಆರೋಪಿಯನ್ನು ಬಿಹಾರದಿಂದ ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಲಾಗ್ತಿದೆ. ಸದಾಶಿವನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಯಾವುದೇ ವ್ಯಕ್ತಿ ದೂರವಾಣಿ ಕರೆ ಮಾಡಿ ಒಟಿಪಿ ನಂಬರ್​ ಪಡೆದುಕೊಂಡರೆ ನಿಮ್ಮ ಮೊಬೈಲ್​ ನಿಯಂತ್ರಣವನ್ನು ಸಂಪೂರ್ಣವಾಗಿ ತಮ್ಮ ಕೈವಶ ಮಾಡಿಕೊಳ್ತಾರೆ. ಕೂಡಲೇ ನಿಮ್ಮ ಮೊಬೈಲ್ ನಿಮ್ಮ ಬಳಿಯೇ ಇದ್ದಾಗಲೂ​ ಸೈಬರ್​ ವಂಚಕರು ತಮ್ಮ ಮೊಬೈಲ್​ನಲ್ಲಿ ನಿಮ್ಮ ಮೊಬೈಲ್​ ನಿಯಂತ್ರಣ ಮಾಡುತ್ತಾರೆ. ಈ ವೇಳೆ ನಿಮ್ಮ ಆ್ಯಪ್​ಗಳೂ, ನಿಮ್ಮ ಬ್ಯಾಂಕ್​​ ಖಾತೆಗಳ ಒಟಿಪಿ ಸೇರಿದಂತೆ ಪ್ರತಿಯೊಂದು ಕಾರ್ಯವನ್ನು ಅವರೇ ಮಾಡುತ್ತಾರೆ. ಹೀಗಾಗಿ ನಿಮ್ಮ ಆಪ್ತರಿಂದಲೂ ಹಣ ನೀಡುವಂತೆ ಕೇಳಿ ಪಡೆದುಕೊಳ್ತಾರೆ. ಹಾಗಾಗಿ ಯಾರಿಗೇ ಆದರೂ ಒಟಿಪಿ ಕೊಡುವ ಮುಂಚೆ ಬೀ ಕೇರ್​ ಫುಲ್​.

Related posts

Teacher Asulted student; ಕ್ರೂರವಾಗಿ ವರ್ತಿಸಿದ ಶಿಕ್ಷಕನ ಬಂಧನ, ಜೈಲಿಗೆ ಶಿಫ್ಟ್​..

Publicspot

Dam Death; ಮಾರ್ಕೋನಹಳ್ಳಿ ಡ್ಯಾಂನಲ್ಲಿ ಮುಳುಗಿ ಒಂದೇ ಕುಟುಂಬದ 6 ಮಂದಿ ದುರ್ಮರಣ..

Publicspot

Drashan Jail Shift: ದರ್ಶನ್​ ಜೈಲು ಶಿಫ್ಟ್​ ಮಾಡೋದು ಪಕ್ಕಾನಾ..?

Publicspot

ಸಿನಿಮಾ ನಟಿಯ ಆರೋಪದ ಬಗ್ಗೆ ಅರವಿಂದ್‌ ರೆಡ್ಡಿ ಬಿಚ್ಚಿಟ್ಟ ಸೀಕ್ರೆಟ್‌ ಏನು..?

Publicspot

ಕಾಯೋ ದೈವವೇ ಕ್ರೂರವಾದರೆ.. ರಕ್ಷಣೆ ಎಲ್ಲಿದೆ..? ಅಯ್ಯೋ ದೇವರೇ..?

Publicspot

Kashmir ಕಾಶ್ಮೀರದಲ್ಲಿ ಫೋಟೋ ಶೂಟ್​.. ವಾರ್ಷಿಕೋತ್ಸವಕ್ಕೂ ಮುನ್ನ ಮಾಸ್ಟರ್ ಪ್ಲ್ಯಾನ್

Publicspot