The Public Spot
ಅಪರಾಧ

Kashmir ಕಾಶ್ಮೀರದಲ್ಲಿ ಫೋಟೋ ಶೂಟ್​.. ವಾರ್ಷಿಕೋತ್ಸವಕ್ಕೂ ಮುನ್ನ ಮಾಸ್ಟರ್ ಪ್ಲ್ಯಾನ್

ಮದುವೆ ಆಗುವಾಗ ಇತ್ತೀಚಿಗೆ ಪ್ರೀ ವೆಡ್ಡಿಂಗ್​ ಶೂಟ್​ ಅಂತಾ ಸಿನಿಮಾ ಸ್ಟೈಲ್​ನಲ್ಲೇ ಹಾಡುತ್ತಾ ಕುಣಿಯುತ್ತಾ ಕುಪ್ಪಳಿಸುತ್ತಾ ಮಾಡಿಕೊಳ್ತಾರೆ. ಅದೊಂದು ಪ್ಯಾಷನ್​ ಕೂಡ ಆಗಿದೆ. ಅದರಿಂದ ಸಾಕಷ್ಟು ಉದ್ಯೋಗಗಳೂ ಸೃಷ್ಟಿಯಾಗಿವೆ ಅನ್ನೋದು ಬೇರೆ ವಿಚಾರ. ಆದರೆ ಮೊನ್ನೆಯಷ್ಟೇ ಬೆಳಕಿಗೆ ಬಂದಿತ್ತಲ್ಲ, 6 ತಿಂಗಳ ಹಿಂದಿನ ಕೊಲೆ ರಹಸ್ಯ. ಡಾ ಮಹೇಂದ್ರ ರೆಡ್ಡಿ ತನ್ನ ಹೆಂಡತಿ ಡಾ ಕೃತಿಕಾ ರೆಡ್ಡಿಗೆ ಇಂಜೆಕ್ಷನ್​ ಮಾಡಿ ಕೊಲೆ ಮಾಡಿದ್ದ ಘಟನೆ, ಆ ಜೋಡಿ ಪ್ರೀ ವೆಡ್ಡಿಂಗ್​ ಶೂಟ್​ ಮಾಡಿದ್ದು ಎಲ್ಲಿ ಅಂತಾ ಗೊತ್ತಾದ್ರೆ ಒಂದು ಕ್ಷಣ ಹೌಹಾರುವುದು ಖಚಿತ. ಯಾಕಂದ್ರೆ ಭಾರತದ ಕಿರೀಟ, ಕಣಿವೆ ರಾಜ್ಯ ಕಾಶ್ಮೀರದಲ್ಲಿ ಪ್ರೀ ವೆಡ್ಡಿಂಗ್​ ಶೂಟ್​ ಮಾಡಿಸಿದ್ದರು. ಕಾಶ್ಮೀರದ 8 ಸ್ಥಳಗಳಲ್ಲಿ ಪ್ರೀ ವೆಡ್ಡಿಂಗ್‌ ಫೋಟೋಶೂಟ್‌ ನಡೆದಿತ್ತು. ಒಂದು ರೀತಿಯ ಸಿನಿಮಾ ದೃಶ್ಯಗಳೇ ಎನಿಸುವಂತೆ ವಿಡಿಯೋ ಮಾಡಿಸಲಾಗಿತ್ತು.

ಚುಮುಚುಮು ಚಳಿಯಲ್ಲಿ, ಮಂಜಿನ ಮಳೆಯಲ್ಲಿ ಇಬ್ಬರೂ ಪರಸ್ಪರ ತಬ್ಬಿಕೊಂಡು, ಚುಂಬನದ ಜೋಕಾಲಿಯಲ್ಲಿ ಬದುಕಿನ ಪಯಣಕ್ಕೆ ಮುನ್ನುಡಿ ಬರೆದಿದ್ದರು. ಕೈಕೈ ಹಿಡ್ಕೊಂಡು ಸಪ್ತಪದಿ ಯುಳಿಯುವ ಮುನ್ನವೇ ಪರಸ್ಪರ ಹೆಜ್ಜೆ ಹಾಕಿದರು. ಜೀವನ ಪರ್ಯಂತ ಹೆಜ್ಜೆ ಹಾಕೋ ಕನಸು ಕಾಣುತ್ತ ಏಳೇಳು ಜನ್ಮಕ್ಕೂ ನೀನೇ ನನ್ನ ಜೊತೆಗೆ ಇರ್ಬೇಕು ಅಂತಾ ಹಾಡಿ ನಲಿದಿದ್ರು. ಆದರೆರ ಒಂದೇ ವರ್ಷಕ್ಕೆ ಬದುಕಿನ ಪಯಣವನ್ನೇ ಅಂತ್ಯಗೊಳಿಸುವ ನಿರ್ಧಾರ ಮಾಡಿದ ಡಾ ಮಹೇಂದ್ರ ರೆಡ್ಡಿ, ಮೊದಲ ವರ್ಷದ ವೆಡ್ಡಿಂಗ್‌ ಆ್ಯನಿವರ್ಸರಿಗೆ ಇನ್ನೂ ಒಂದು ತಿಂಗಳು ಬಾಕಿ ಇದ್ದಾಗಲೇ ಕೊಂದು ಮುಗಿಸಿದ್ದಾನೆ. ಅನಾರೋಗ್ಯದಿಂದ ಹಾಸಿಗೆ ಹಿಡಿದ್ದ ಹೆಂಡತಿ ಡಾ ಕೃತಿಕಾ ರೆಡ್ಡಿಗೆ ಸಾವಿನ ಇಂಜೆಕ್ಷನ್‌ ಕೊಟ್ಟು ನರಳಿ ನರಳಿ ಸಾಯುವಂತೆ ಮಾಡಿದ್ದಾನೆ. ಕಿಲ್ಲರ್‌ ಡಾಕ್ಟರ್‌ನ ಅಸಲಿ ಕಥೆ FSL ವರದಿಯಲ್ಲಿ ಬಟಾಬಯಲಾಗ್ತಿದ್ದಂತೆ ಒಂದೊಂದೇ ರಹಸ್ಯಗಳು ತೆರೆದುಕೊಳ್ತಿವೆ.

ಡಾ.‌‌ ಮಹೇಂದ್ರ ಬಂಧನ ಆಗಿ ಒಂದು ದಿನ ಆಗ್ತಿದ್ದಂತೆ ಒಂದೊಂದೇ ಕಥೆಗಳು ಹೊರ ಬೀಳ್ತಿವೆ. ಡಾ ಕೃತಿಕಾ ಕೊಲೆ ಹಿಂದೆ ಹತ್ತಾರು ಕಾರಣಗಳಿರೋ ಅನುಮಾನವೂ ಹುಟ್ಕೊಂಡಿದೆ. ಹಂತಕ ಡಾ. ಮಹೇಂದ್ರ, ಡಾ. ಕೃತಿಕಾ ಪೋಷಕರನ್ನು ಅದೆಷ್ಟರ ಮಟ್ಟಿಗೆ ನಂಬಿಸಿದ್ದ ಅಂದರೆ, ಸ್ವಂತ ಮಗನಿಗಿಂತಲೂ ಜಾಸ್ತಿ ಎಂದುಕೊಂಡಿದ್ದರು. ಮಗಳನ್ನು ಕೊಂದು ಮಾವನ ಮುಂದೆ ಡಾ ಮಹೇಂದ್ರ ಮೊಸಳೆ ಕಣ್ಣೀರು ಸುರಿಸಿದರೂ ಯಾರಿಗೂ ಅನುಮಾನ ಬಂದಿರಲಿಲ್ಲ. ಇಂಥಹ ಒಳ್ಳೆ ಅಳಿಯನಿಗೆ ದೇವರು ಮೋಸ ಮಾಡಿಬಿಟ್ಟ ಅಂತಾ ಡಾ ಕೃತಿಕಾ ರೆಡ್ಡಿ ಇಡೀ ಕುಟುಂಬ ಶಾಪ ಹಾಕಿತ್ತು. ಡಾ. ಕೃತಿಕಾ ರೆಡ್ಡಿ ಸಾವನ್ನಪ್ಪಿದ ಬಳಿಕ ಪೊಲೀಸ್ರು UDR ದಾಖಲಿಸಿ, ಮರಣೋತ್ತರ ಪರೀಕ್ಷೆ ಮಾಡ್ಬೇಕು ಎಂದಾಗ ಹೈಡ್ರಾಮಾ ಮಾಡಿದ್ದ ಡಾ ಮಹೇಂದ್ರ ರೆಡ್ಡಿ, ಯಾವುದೇ ಕಾರಣಕ್ಕೂ ಮರಣೋತ್ತರ ಪರೀಕ್ಷೆ ಮಾಡೋದು ಬೇಡ. ನನ್ನ ಹೆಂಡತಿ ದೇಹಕ್ಕೆ ನೋವು ಕೊಡಬೇಡಿ ಎಂದು ಕಣ್ಣೀರು ಹಾಕಿದ್ನಂತೆ. ಅವತ್ತು ಗಂಡನ ನಾಟಕದ ಅಸಲಿ ಆಟ ಯಾರಿಗೂ ಗೊತ್ತಾಗಿರ್ಲಿಲ್ಲ. ಆದರೆ FSL ರಿಪೋರ್ಟ್‌ ಬರ್ತಿದ್ದಂತೆ ಅಳಿಯನ ಕ್ರೌರ್ಯಗಳು ಬಯಲಾಗಲು ಶುರುವಾಗಿದೆ.

ಡಾ. ಕೃತಿಕಾ ರೆಡ್ಡಿ ಕೊಲೆ ಹಿಂದಿನ ಕಾರಣವೇ ನಿಗೂಢವಾಗಿದೆ. ಯಾಕಂದ್ರೆ, ಹಂತಕ ಮಹೇಂದ್ರನ ವಿಷ್ಯದಲ್ಲಿ ಹತ್ತಾರು ಅನುಮಾನಗಳು ಹೊರ ಬರ್ತಿವೆ. ಹೊಸ ಕ್ಲಿನಿಕ್‌ ಓಪನ್‌‌ ಮಾಡೋದಕ್ಕೆ ಕೃತಿಕಾ ತಂದೆ ಮುನಿರೆಡ್ಡಿ ನಿರ್ಧರಿಸಿದ್ರಂತೆ. ಆದರೆ ಹೊಸ ಕ್ಲಿನಿಕ್ ಮಾಡೋದಕ್ಕೆ ಮಹೇಂದ್ರನಿಗೆ ಸುತರಾಂ ಇಷ್ಟವಿರಲಿಲ್ವಂತೆ. ಇದೇ ವಿಚಾರವಾಗಿ ಆಗಾಗ ಗಂಡ ಹೆಂಡತಿ ನಡುವೆ ಗಲಾಟೆ ಕೂಡ ಆಗ್ತಿತ್ತಂತೆ. ಕೊನೆಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದ ಡಾ. ಕೃತಿಕಾಗೆ ಅನಾರೋಗ್ಯ ಕಾಡುವುದಕ್ಕೆ ಶುರುವಾಗಿತ್ತು.. ಒಂದು ಅಕ್ರಮ ಸಂಬಂಧ ಇರ್ಬೇಕು. ಇಲ್ಲ ಕ್ಲಿನಿಕ್‌ ವಿಷ್ಯವಾಗಿ ನಮ್ಮ ಮಗಳನ್ನ ಕೊಂದಿರ್ಬೇಕು ಅಂತಾ ಕೃತಿಕಾ ತಂದೆ ಮುನಿರೆಡ್ಡಿ ಕಣ್ಣೀರಿಟ್ಟಿದ್ದಾರೆ. ಇದೀಗ ಪೊಲೀಸರ ವಶದಲ್ಲಿರುವ ಮಹೇಂದ್ರನಿಗೆ ಕೊಲೆ ಮಾಡುವ ಯೋಚನೆ ಬಂದಿದ್ಯಾಕೆ..? ಬೇರೆ ಯಾರಾದರೂ ಸಹಕಾರ ಕೊಟ್ಟಿದ್ದಾರಾ..? ಅಕ್ರಮ ಸಂಬಂದ ಏನಾದರೂ ಇದ್ಯಾ..? ಕೃತಿಕ ಕೊಲೆ ಬಳಿಕ ಮಹೇಂದ್ರನ ಚಲನವಲನ ಹೇಗಿದೆ..? ಯಾರ ಜೊತೆಗೆ ಆತ್ಮೀಯತೆ ಹೆಚ್ಚಾಗಿದೆ ಅನ್ನೋ ಬಗ್ಗೆಯೂ ತನಿಖೆ ಮಾಡ್ತಿದ್ದಾರೆ.

Related posts

ಗಂಡನ ಜೊತೆ ವಿರಸ.. ಪ್ರಿಯಕರನ ಜೊತೆ ಸರಸ.. ಕೊಂದು ಹೋದ ರಫೀಕ್‌..

Publicspot

Minor Pregnent: 16 ವರ್ಷದ ಅಮ್ಮ.. 17 ವರ್ಷದ ಅಪ್ಪ.. ಎಲ್ಲಿಗೆ ಬಂತು ಸಮಾಜ..?

Publicspot

ಓರಗಿತ್ತಿರ ವಾರ್​.. ಇದು ಸೀರಿಯಲ್​ ಕಥೆ.. ನಟಿ ಮಣಿಯ ವ್ಯಥೆ..

Publicspot

ಜೈಲಿನಲ್ಲಿ ಚಳಿ.. ಬೆಡ್‌ಶೀಟ್‌ ಕೇಳಿದ ದರ್ಶನ್.. ಎಲ್ಲಾ ಕೈದಿಗಳಿಗೂ ಅನ್ವಯ ಆಗುತ್ತಾ..?

Publicspot

Gang Rape; ಬೆಂಗಳೂರಲ್ಲಿ ಗ್ಯಾಂಗ್‌ ರೇಪ್‌.. ಮೂವರು ಆರೋಪಿಗಳ ಬಂಧನ.. ಇಬ್ಬರು ಎಷ್ಕೇಪ್‌

Publicspot

ಧರ್ಮಸ್ಥಳದಲ್ಲಿ ಇವತ್ತು ಹೈಟೆಕ್​ ತಂತ್ರಜ್ಞಾನದ ಜೊತೆಗೆ ಅಸ್ಥಿ ಆಪರೇಷನ್​..!!

Publicspot