The Public Spot
ಅಪರಾಧ

Dam Death; ಮಾರ್ಕೋನಹಳ್ಳಿ ಡ್ಯಾಂನಲ್ಲಿ ಮುಳುಗಿ ಒಂದೇ ಕುಟುಂಬದ 6 ಮಂದಿ ದುರ್ಮರಣ..

ತುಮಕೂರು ಜಿಲ್ಲೆ ಕುಣಿಗಲ್​ ತಾಲೂಕಿನ ಎಡೆಯೂರು ಬಳಿ ಇರುವ ಮಾರ್ಕೋನಹಳ್ಳಿ ಜಲಾಶಯದಲ್ಲಿ ರಜೆಯ ಮಜೆ ಅನುಭವಿಸಲು ತೆರಳಿದ್ದ ಕುಟುಂಬವೊಂದು ಜಲಸಮಾಧಿ ಆಗಿರುವ ಘಟನೆ ನಡೆದಿದೆ. ಮಾರ್ಕೋನಹಳ್ಳಿ ಡ್ಯಾಂ‌ಂನ ಕೋಡಿಯಲ್ಲಿ 7 ಮಂದಿ ಕೊಚ್ಚಿ ಹೋದ ಪ್ರಕರಣದ ಬಗ್ಗೆ ತುಮಕೂರು ಎಸ್​ಪಿ ಅಶೋಕ್ ವೆಂಕಟ್ ಸ್ಪಷ್ಟನೆ ನೀಡಿದ್ದು, ಮಂಗಳವಾರ ಮಧ್ಯಾಹ್ನ 3.30ರ ವೇಳೆಗೆ ಘಟನೆ ನಡೆದಿದೆ. ಮೃತರೆಲ್ಲರೂ ತುಮಕೂರು ಜಿಲ್ಲೆಯವರು. ಆದರೆ ಘಟನೆ ಮಂಡ್ಯ ಜಿಲ್ಲೆ ಬೆಳ್ಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎರಡು ಜಿಲ್ಲೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಶವಗಳ ಪತ್ತೆ ಕಾರ್ಯ ಮಾಡುತ್ತಿದ್ದೇವೆ, ಈಗ ಕತ್ತಲೆಯಾಗಿರುವ ಕಾರಣ ಕಾರ್ಯಾಚರಣೆ ಬುಧವಾರ ಬೆಳಗ್ಗೆ ಮಾಡಲಾಗುತ್ತದೆ ಎಂದಿದ್ದಾರೆ.

ದಸರಾ ರಜೆ ನಿಮಿತ್ತ ಮಕ್ಕಳಿಗೆ ರಜೆ ಇತ್ತು. ಹೀಗಾಗಿ ತುಮಕೂರಿನಿಂದ ಮಾರ್ಕೋನಹಳ್ಳಿ ಜಲಾಶಯಕ್ಕೆ ಪಿಕ್‌ನಿಕ್‌ಗಾಗಿ ಬಂದಿದ್ದರು. ಈ ವೇಳೆ ಸ್ಟೈಫನ್ ಓಪನ್‌ ಆಗಿ ಒಮ್ಮೆಲೆ ಜಲಾಶಯದಿಂದ ಹೆಚ್ಚು ನೀರು ಹರಿದು ಬಂದಿದೆ. ನೀರಿನ ರಭಸಕ್ಕೆ ನೀರಿನಲ್ಲಿ ಆಟ ಆಡ್ತಿದ್ದಂತಹ 7 ಮಂದಿ ಕೊಚ್ಚಿ ಹೋಗಿದ್ದಾರೆ. ಈ ಪೈಕಿ ಒಬ್ಬರನ್ನ ರಕ್ಷಣೆ ಮಾಡಿ, ಆದಿ ಚುಂಚನಗಿರಿ ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲದೆ, ಈಗ ಸಿಕ್ಕಿರುವ ಮೃತ ದೇಹಗಳನ್ನೂ ಕೂಡ ಆದಿ ಚುಂಚನಗಿರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದಿದ್ದಾರೆ. ಇಬ್ಬರ ಮೃತದೇಹ ಪತ್ತೆಯಾಗಿದ್ದು, ನಾಲ್ವರ ಶವಗಳಿಗಾಗಿ ಹುಡುಕಾಟ ನಡೆಸಬೇಕಿದೆ. ಮೃತರನ್ನು ತುಮಕೂರು‌ ನಗರದ ಬಿಜಿ ಪಾಳ್ಯ ಮೂಲದವರು ಎಂದು ಗುರ್ತಿಸಲಾಗಿದೆ.

ಮೃತರಾದವರಲ್ಲಿ ಸಾಜಿಯಾ, ಅರ್ಬಿನ್ ಮೃತದೇಹಗಳು ಪತ್ತೆಯಾಗಿದ್ದು, ತಬಾಸುಮ್ (45), ಶಬಾನ (44), ಮಿಫ್ರಾ (4), ಮಹಿಬ್ (1) ಶವಗಳನ್ನು ಹುಡುಕಲಾಗ್ತಿದೆ. ಜೊತೆಗಿದ್ದ ನವಾಜ್ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರು ಕುಣಿಗಲ್ ತಾಲ್ಲೂಕಿನ ಮಾಗಡಿಪಾಳ್ಯ ಗ್ರಾಮಕ್ಕೆ ಬಂದಿದ್ದರು. ಸಂಬಂಧಿಕರ ಮನೆಗೆ ತೆರಳಿದ್ದ ಇಡೀ ಕುಟುಂಬ ಊಟ ಮುಗಿಸಿ ಜಲಾಶಯಕ್ಕೆ ತೆರಳಿದ್ದಾಗ ದುರಂತ ಸಂಭವಿಸಿದೆ. ಮೃತರ ಕೊನೆ ಕ್ಷಣದ ವೀಡಿಯೋ ವೈರಲ್​ ಆಗಿದ್ದು, ಸಣ್ಣದಾಗಿ ಹರಿಯುತ್ತಿದ್ದ ನೀರಿನಲ್ಲಿ ಮಕ್ಕಳೊಂದಿಗೆ ತಾಯಿ ಆಟವಾಡ್ತಿರುವ ವಿಡಿಯೋ ಲಭ್ಯವಾಗಿದೆ. 5 ಮಕ್ಕಳೊಂದಿಗೆ ಆಡವಾಡ್ತಿರುವ ತಾಯಿ ಜಲಸಮಾಧಿ ಆಗಿದ್ದಾರೆ. ತಂದೆ ಮನೆಗೆ ಬಂದಿದ್ದ ಅಕ್ಕ ತಂಗಿಯ ಕುಟುಂಬದಿಂದ ಒಟ್ಟು 15 ಜನರ ಎರಡು ಫ್ಯಾಮಿಲಿ ಪಿಕ್ ನಿಕ್​ಗೆ ತೆರಳಿದ್ದರು.

Related posts

ಧರ್ಮಸ್ಥಳದಲ್ಲಿ ಇವತ್ತು ಹೈಟೆಕ್​ ತಂತ್ರಜ್ಞಾನದ ಜೊತೆಗೆ ಅಸ್ಥಿ ಆಪರೇಷನ್​..!!

Publicspot

ಬೆಂಗಳೂರಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ..! 29 ಸ್ಥಳ.. 1909 ಮಂದಿ..

Publicspot

Seven Year Dreams End; 7 ವರ್ಷದ ಬಳಿಕ ತಾಯಿ ಆಗುವ ಆಸೆಗೆ ಹುಳಿ ಹಿಂಡಿದ್ದು ಯಾರು..?

Publicspot

ಸಿನಿಮಾ ನಟಿಯ ಆರೋಪದ ಬಗ್ಗೆ ಅರವಿಂದ್‌ ರೆಡ್ಡಿ ಬಿಚ್ಚಿಟ್ಟ ಸೀಕ್ರೆಟ್‌ ಏನು..?

Publicspot

Mandya Murder: ಮಗಳನ್ನು ಪ್ರೀತಿಸಿದ್ದಕ್ಕೆ ಕೊಂದೇ ಬಿಟ್ರಾ..?

Publicspot

ಹೆಣ್ಣು ಮಗು ಬಲಿ; ಏಳು ವರ್ಷದ ಮಗುವನ್ನು ಕೊಂದೇ ಬಿಟ್ಟಳು ಮಲತಾಯಿ.. ಕಾರಣ ಗೊತ್ತಾ..?

Publicspot