The Public Spot
ಆಹಾರ - ಆರೋಗ್ಯ

Rat Fever: ಕರ್ನಾಟಕಕ್ಕೆ ವಕ್ಕರಿಸಿದೆ ಇಲಿ ಜ್ವರ.. ಮಳೆಯಿಂದ ಸೋಂಕು ಹೆಚ್ಚಳ..

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ (Rat Fever) ಇಲಿ ಜ್ವರ ಕಾಣಿಸಿಕೊಂಡಿದೆ. ಅದರಲ್ಲೂ ಮುಂಗಾರು ಮಳೆ ಅಬ್ಬರಿಸುತ್ತಿರುವ ಈ ಹೊತ್ತಿನಲ್ಲಿ ಇಲಿ ಜ್ವರ ಹೆಚ್ಚಾಗುವ ಲಕ್ಷಣ ಕಂಡು ಬಂದಿದೆ. ಮಳೆಯ ಜೊತೆಗೆ ಈಗಾಗಲೇ ಸಾಂಕ್ರಾಮಿಕ ಕಾಯಿಲೆಗಳು ಉಲ್ಬಣ ಆಗುತ್ತಿರುವ ಈ ಹೊತ್ತಿನಲ್ಲಿ ಸೈಲೆಂಟ್‌ ಆಗಿ ‌ ಡೆಂಘಿ ಅಬ್ಬರ ಶುರುವಾಗಿದೆ. ಈ ನಡುವೆ ರಾಜಧಾನಿಗೆ ಲೆಪ್ಟೊಸ್ಪೈರೋಸಿಸ್ ಅಂದ್ರೆ ಇಲಿ ಜ್ವರದ ಭೀತಿ ಶುರುವಾಗಿದೆ..

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಲೆಪ್ಟೊಸ್ಪೈರೋಸಿಸ್ ಅಂದ್ರೆ ಇಲಿ ಜ್ವರ ಪ್ರಕರಣ ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ರಾಜ್ಯದಲ್ಲಿ ಲೆಪ್ಟೊಸ್ಪೈರೋಸಿಸ್ (Rat Fever) ಕಳೆದ ಒಂದು ವಾರದಲ್ಲಿ 103 ಜನರಲ್ಲಿ ಕಾಣಿಸಿಕೊಂಡಿದೆ.. ಜನವರಿಯಿಂದ ಇಲ್ಲಿವರೆಗೆ 7,714 ಜನರ ರಕ್ತ ಮಾದರಿ ಸಂಗ್ರಹ ಮಾಡಿದ್ದು, ಪರೀಕ್ಷೆ ನಡೆಸಿದಾಗ 982 ಜನರಲ್ಲಿ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿವೆ.. ಹೀಗಾಗಿ ಆರೋಗ್ಯ ಇಲಾಖೆ ಇಲಿ ಜ್ವರದ ಬಗ್ಗೆ ಹೈ ಅಲರ್ಟ್ ಮಾಡಿದೆ.

ಇಲಿಗಳಿಂದ ಲೆಪ್ಟೊಸ್ಪೈರೋಸಿಸ್ ಅಂದ್ರೆ ಇಲಿ ಜ್ವರ ಕಾಣಿಸಿಕೊಳ್ಳುತ್ತದೆ. ಸಿಲಿಕಾನ್ ಸಿಟಿ ವೈದ್ಯರು ಇಲಿ ಜ್ವರದ ಬಗ್ಗೆ ಅಲರ್ಟ್ ಘೋಷಣೆ ಮಾಡಿದ್ದಾರೆ. ಇಲಿಯ ಎಂಜಲು, ಮೂತ್ರ, ಮಲ ಅಥವಾ ಇಲಿ ದೇಹದ ಯಾವುದೇ ದ್ರವ ಮಾನವರ ಚರ್ಮಕ್ಕೆ ತಾಗುವುದರಿಂದ ಈ ಸೋಂಕು ಹರಡುತ್ತಿದೆ. ಹೀಗಾಗಿ ತೀವ್ರ ಜ್ವರ, ತಲೆನೋವು, ಕಣ್ಣು ಕೆಂಪಾಗುವುದು, ವಾಕರಿಕೆ ಅಥವಾ ವಾಂತಿ, ಮೈಕೈ ನೋವು, ಮೈಮೇಲೆ ಗುಳ್ಳೆಗಳು ಹಾಗೂ ಸೋಂಕು ಉಂಟಾದ ಎರಡು ದಿನಗಳ ನಂತರ ಕೀಲುನೋವು ಕಂಡುಬರುತ್ತದೆ.

ರಾಜಧಾನಿಯಲ್ಲಿ ಮಳೆಯಿಂದ ಇಲಿಗಳ ಗೂಡು ಭರ್ತಿ ಆಗಿದ್ದು, ರಸ್ತೆಯಲ್ಲಿ ಸಂಚಾರ ಆರಂಭವಾಗಿದೆ. ಹೀಗಾಗಿ ಇಲಿ ಜ್ವರದ ಆತಂಕವನ್ನ ವೈದ್ಯರು ಹೊರ ಹಾಕಿದ್ದಾರೆ. ಡೆಂಘಿ ಜ್ವರ, ಚಿಕನ್ ಗುನ್ಯಾ ಸೇರಿದಂತೆ ಅನೇಕ ವೈರಲ್ ಸೋಂಕುಗಳ ನಡುವೆ ಮತ್ತೊಂದು ಆತಂಕ ಕಂಡು ಬಂದಿದೆ. ಮಳೆಗಾಲದಲ್ಲಿ ಮನೆಯ ಸಂಪ್‌ ನೀರಿನ ಬಗ್ಗೆ ಎಚ್ಚರ ವಹಿಸಿ ಎಂದು ವೈದ್ಯರು ಸೂಚಿಸುತ್ತಿದ್ದಾರೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ಇಲಿ ಜ್ವರ ಹೆಚ್ಚಾಗುತ್ತದೆ. ಕಳೆದ ವರ್ಷ ನಗರದಲ್ಲಿ ಸುಮಾರು 100 ಕ್ಕೂ ಹೆಚ್ಚು ಜನರಲ್ಲಿ ಇಲಿಜ್ವರ ಕಾಣಿಸಿಕೊಂಡಿತ್ತು. ಈ ವರ್ಷ ಬೇಸಿಗೆ ಹಾಗು ಮಳೆಗಾಲದ ಆರಂಭದಲ್ಲೇ ಇಲಿಜ್ವರ ಪತ್ತೆಯಾಗ್ತಿವೆ. ಯಾವುದೇ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನ ಸಂಪರ್ಕಿಸುವುದು ಸೂಕ್ತ. ಮಳೆಗಾಲದ ಸಾಂಕ್ರಾಮಿಕ ಕಾಯಿಲೆಗಳ ಜೊತೆಗೆ ಈಗ ಇಲಿ ಜ್ವರದ ಆತಂಕವೂ ಎದುರಾಗಿದೆ. ಜನರು ತಮ್ಮ ಮನೆಗಳ ಬಳಿ ಸ್ವಚ್ಛತೆ ಕಾಪಾಡಿಕೊಳ್ಳುವ ಜೊತೆಗೆ ಇಲಿಗಳ ಸಂಪರ್ಕ ಆಗದಂತೆ ಎಚ್ಚರಿಕೆ ವಹಿಸಬೇಕಿದೆ.

Related posts

5 Kg Ration Cut; ರೇಷನ್​ ಕಾರ್ಡ್​ಗೆ ಇನ್ಮುಂದೆ 10 ಕೆ.ಜಿ ಅಕ್ಕಿ ಸಿಗಲ್ಲ.. ಕಾರಣ ಗೊತ್ತಾ..?

Publicspot

ಬೆಂಗಳೂರಿಗರ ಸೀಜನಲ್​ ಅಸ್ತಮಾಗೆ ಪಾರಿವಾಳ ಕಾರಣ ಅಂದ್ರೆ ನಂಬ್ತೀರಾ..?

Publicspot

Hospital Bill new Rules: ಖಾಸಗಿ ಆಸ್ಪತ್ರೆಗಳಲ್ಲಿ ಮೊದಲೇ ಬಿಲ್ ಕೇಳುವಂತಿಲ್ಲ​ .. ಸರ್ಕಾರದ ಹೊಸ ರೂಲ್ಸ್​..

Publicspot

New BPL Card: ರೇಷನ್​ ಕಾರ್ಡ್​ ಇಲ್ಲದವರಿಗೆ ಸರ್ಕಾರದಿಂದ ಗುಡ್​ ನ್ಯೂಸ್​..

Publicspot