The Public Spot
ಅಪರಾಧ

BENGALURU BLAST: ಸ್ವಾತಂತ್ರ್ಯೋತ್ಸವದ ದಿನ ಸ್ಫೋಟ.. ಸಿಲಿಂಡರ್​ ಸ್ಫೋಟವೇ..? ಅನುಮಾನ..

ಬೆಂಗಳೂರಿನ ಆಡುಗೋಡಿಯ ಚೆನ್ನೇನಹಳ್ಳಿಯಲ್ಲಿ ನಿಗೂಢ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಇಡೀ ವಠಾರವೇ ಛಿದ್ರ ಛಿದ್ರವಾಗಿದೆ. ಹನ್ನೆರಡು ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ಶಿಫ್ಟ್​​ ಮಾಡಲಾಗಿದೆ. ಓರ್ವ ಬಾಲಕ ಸ್ಫೋಟದಿಂದ ಸಾವನ್ನಪ್ಪಿದ್ದಾನೆ. ದೊಡ್ಡ ಮಟ್ಟದ ಶಬ್ಧ ಬಂತು. ಆದರೆ ಏನಾಗಿದೆ ಅನ್ನೋದು ಗೊತ್ತಿಲ್ಲ ಎಂದಿದ್ದಾರೆ ಸ್ಥಳೀಯರು. ಲಾಲ್​ಬಾಗ್ ಕೆಲಸಕ್ಕೆ ಸಾಕಷ್ಟು ಮಂದಿ ಬೆಳಗ್ಗೆಯೇ ಹೋಗಿದ್ರಿಂದ ಕಡಿಮೆ ಪ್ರಮಾಣದ ಗಅಯಾಳುಗಳಾಗಿದ್ದಾರೆ. ಇಲ್ಲದಿದ್ರೆ ಇನ್ನೂ ಸಾಕಷ್ಟು ಮಂದಿ ಗಾಯಗೊಳ್ಳುತ್ತಿದ್ರು ಅನ್ನೋ ಮಾತುಗಳು ಕೇಳಿಬಂದಿವೆ.

ಸ್ಫೋಟದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೇಲ್ನೋಟಕ್ಕೆ ಸಿಲಿಂಡರ್ ಸ್ಫೋಟ ಇರಬಹುದು ಎಂದು ಶಂಕಿಸಲಾಗಿದೆ. ಸ್ಫೋಟ ಆಗಿದ್ದರಿಂದ ಮಲಗಿದ್ದ ಸ್ಥಳದಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ 10 ವರ್ಷದ ಬಾಲಕ ಮುಬಾರಕ್. ಕಸ್ತೂರಿ ಎಂಬ ಮಹಿಳೆ ಮನೆಯಲ್ಲಿ ಸ್ಫೋಟ ಸಂಭವಿಸಿರೋ ಶಂಕೆ ವ್ಯಕ್ತವಾಗಿದೆ. ಕಸ್ತೂರಿ ಮಗಳು 8 ವರ್ಷದ ಕಯಾಲ್​ಗೆ ವಿಕ್ಟೋರಿಯಾ ಬರ್ನಿಂಗ್ ವಾರ್ಡ್‌ನಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ಮೃತ ಬಾಲಕ ಮುಬಾರಕ್ ಪಕ್ಕದ ಮನೆಯ ಕಸ್ತೂರಿ ಅವರ ಮನೆಯಲ್ಲಿ ಸ್ಫೋಟ ಆಗಿರುವ ಬಗ್ಗೆ ಚರ್ಚೆ ಆಗ್ತಿದೆ.

ಸ್ಫೋಟದಿಂದ ಗಾಯಗೊಂಡವರನ್ನು 65 ವರ್ಷದ ಸರಸಮ್ಮ, 38 ವರ್ಷದ ಪ್ರಮಿಳಾ, 42 ವರ್ಷದ ರಾಜೇಶ್ ಎಂಬುವರಿಗೆ ಸಂಜಯ್​ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. 35 ವರ್ಷದ ಕಸ್ತೂರಮ್ಮಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ಇನ್ನುಳಿದಂತೆ 35 ವರ್ಷದ ಶಬ್ರೀನಾ ಬಾನು, ಸಂಜಯ್ ಗಾಂಧಿ ಆಸ್ಪತ್ರೆ, 8 ವರ್ಷದ ಫಾತೀಮಾಗೆ ಸಂಜಯ್ ಗಾಂಧಿ ಆಸ್ಪತ್ರೆ, 8 ವರ್ಷದ ಕಯಾಲ್​ಗೆ ಇಂದಿರಾ ಗಾಂಧಿ ಆಸ್ಪತ್ರೆ, 62 ವರ್ಷದ ಸುಬ್ರಹ್ಮಣಿಯನ್ನು ಅಗಡಿ ಆಸ್ಪತ್ರೆ. 37 ವರ್ಷದ ಶೇಕ್ ನಜೀಬ್ ಉಲ್ಲಾ ಎಂಬಾತನನ್ನು ನಿಮ್ಹಾನ್ಸ್​ಗೆ ದಾಖಲು ಮಾಡಲಾಗಿದೆ. ಭಾರೀ ಸ್ಫೋಟದ ಬಗ್ಗೆ ಪೊಲೀಸರಲ್ಲಿ ಭಾರೀ ಅನುಮಾನವೇ ಕಾಡುತ್ತಿದೆ.

ಪೊಲೀಸರು ಮತ್ತು ಸ್ಥಳೀಯರ ಅನುಮಾನಕ್ಕೆ ಮತ್ತೊಂದು ಕಾರಣ ಏನೆಂದ್ರೆ ಕಸ್ತೂರಿ ಎಂಬ ಮಹಿಳೆ ನಿನ್ನೆ ಸಿಲಿಂಡರ್ ಖಾಲಿಯಾಗಿದೆ ಎಂದು ಹೋಟೆಲ್​ನಿಂದ ತಿಂಡಿ ತಂದು ಸೇವನೆ ಮಾಡಿದ್ದರು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ಇಂದು ಬೆಳಗ್ಗೆ 8.10 ಕ್ಕೆ ಸ್ಫೋಟ ಆಗಿದೆ. ನಿನ್ನೆ ಸಿಲಿಂಡರ್​ ಖಾಲಿ ಆದ ಬಳಿಕ ಹೊಸ ಸಿಲಿಂಡರ್​ ಬಂದಿತ್ತಾ..? ಅದು ಕನೆಕ್ಷನ್​​ ಮಾಡುವಾಗ ಏನಾದರೂ ಲೂಸ್​ ಕನೆಕ್ಷನ್​​ ಆಗಿತ್ತಾ..? ಸ್ಫೋಟ ನಡೆದಿದೆ. ಆದರೆ ಸಿಲಿಂಡರ್​ ಸ್ಫೋಟ ಎಂಬುದು ಖಚಿತವೇ..? ಅನ್ನೋ ಬಗ್ಗೆ ಪೊಲೀಸರ ತನಿಖೆ ಬಳಿಕ ಗೊತ್ತಾಗಬೇಕಿದೆ.

Related posts

Darshan Court; ಇವತ್ತು ದರ್ಶನ್‌ಗೆ ಸಿಗುತ್ತಾ ಜೈಲು ರಿಲೀಫ್‌.. ಪತ್ನಿ ವಿಜಯಲಕ್ಷ್ಮೀ ಸೈಲೆಂಟ್‌ ಆಗಿದ್ಯಾಕೆ..?

Publicspot

ಬಳ್ಳಾರಿ ಗಲಾಟೆ.. SP ಅಮಾನತು.. ಆತ್ಮಹತ್ಯೆ ಯತ್ನ.. ಸರ್ಕಾರ ಹೇಳಿದ್ದೇನು..?

Publicspot

Minor Pregnent: 16 ವರ್ಷದ ಅಮ್ಮ.. 17 ವರ್ಷದ ಅಪ್ಪ.. ಎಲ್ಲಿಗೆ ಬಂತು ಸಮಾಜ..?

Publicspot

ಹಾಡಹಗಲೇ ಬರ್ತಾರೆ.. ಪೊಲೀಸರೇ ದರೋಡೆ ಮಾಡಿಕೊಂಡು ಹೋಗ್ತಾರೆ..!!?

Publicspot

ಕೋರ್ಟ್​ನಲ್ಲಿ ಇಂದಿನಿಂದ ದರ್ಶನ್​ ಕೊಲೆ ಕೇಸ್​ ವಿಚಾರಣೆ!!

Publicspot

PU ಫಲಿತಾಂಶ ನೆಪದಲ್ಲಿ ಮಗಳನ್ನು ಕೊಂದಳಾ ಹೆತ್ತಮ್ಮ..? ತನುಶ್ರೀ ಸಾವಿಗೆ ಕಾರಣ ಏನು..?

Publicspot