The Public Spot
ರಾಜಕೀಯ

Cong MP Trouble: ಹಾಸನದ ಕಾಂಗ್ರೆಸ್​ ಸಂಸದನಿಗೆ ಸಂಕಷ್ಟ..! ಸುಪ್ರೀಂ ಶಾಕ್..

ಹಾಸನದ ಕಾಂಗ್ರಸ್​ ಸಂಸದ ಶ್ರೇಯಸ್ ಪಟೇಲ್​ಗೆ ಸುಪ್ರೀಂಕೋರ್ಟ್​ ನೋಟಿಸ್​ ನೀಡಿದೆ. ಲೋಕಸಭಾ ಚುನಾವಣಾ ವೇಳೆ ಆಸ್ತಿ ವಿವರ ಮುಚ್ಚಿಟ್ಟ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್, ಖುದ್ದಾಗಿ ಕೋರ್ಟ್​ಗೆ ಹಾಜರಾಗುವಂತೆ ಸುಪ್ರೀಂ ನೋಟಿಸ್​ ನೀಡಿದೆ. ಹಾಸನದ ಸಂಸದರ ಕಚೇರಿಗೆ ನೋಟಿಸ್ ಅಂಟಿಸಿದ್ದಾರೆ ವಕೀಲರು. ಡಿಸಿ ಕಚೇರಿಯ ಕಟ್ಟಡದಲ್ಲಿರೊ ಕಚೇರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಸುಪ್ರೀಂಕೋರ್ಟ್ ನಿರ್ದೇಶನದಂತೆ ನೋಟಿಸ್​ ಅಂಟಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಚುನಾವಣಾ ಏಜೆಂಟ್ ಕೂಡ ಆಗಿರೋ ವಕೀಲ ಪೂರ್ಣಚಂದ್ರ ತೇಜಸ್ವಿ ದೂರು ನೀಡಿದ್ದರು. ಅಕ್ಟೋಬರ್ 6ರಂದು ವಿಚಾರಣೆಗೆ ಹಾಜರಾಗಲು ಸುಪ್ರೀಂಕೋರ್ಟ್​ ನೋಟಿಸ್​ನಲ್ಲಿ ತಿಳಿಸಲಾಗಿದೆ. ಲೋಕಸಭಾ ಚುನಾವಣೆ ವೇಳೆ ಬೆಂಗಳೂರಿನಲ್ಲಿರೊ ಕೋಟ್ಯಾಂತರ ಬೆಲೆಬಾಳೋ ಆಸ್ತಿ ವಿವರ ಮುಚ್ಚಿಟ್ಟ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

ಆಸ್ತಿ ವಿವರ ಮುಚ್ಚಿಟ್ಟ ಪ್ರಕರಣದಲ್ಲಿ ಸದಸ್ಯತ್ವದಿಂದಲೇ ಅನರ್ಹ ಆಗಿದ್ದ ಸಂಸದ ಪ್ರಜ್ವಲ್ ರೇವಣ್ಣ. ಅದೇ ರೀತಿಯ ಆರೋಪದ ಕೇಸ್ ದಾಖಲಿಸಿ, ಸದಸ್ಯತ್ವ ಅನರ್ಹಕ್ಕೆ ಮನವಿ ಮಾಡಿರುವ ಜೆಡಿಎಸ್. ಹೈಕೋರ್ಟ್​ನಲ್ಲಿ ದಾಖಲಾಗಿದ್ದ ದೂರು ವಜಾಗೊಂಡಿದ್ದರಿಂದ ಸುಪ್ರೀಂಕೋರ್ಟ್​ ಮೆಟ್ಟಿಲು ಹತ್ತಲಾಗಿತ್ತು. ಮೇಲ್ಮನವಿ ಅರ್ಜಿ ಮಾನ್ಯ ಮಾಡಿರುವ ಸುಪ್ರೀಂಕೋರ್ಟ್​ ನೋಟಿಸ್ ಜಾರಿ ಮಾಡಿದೆ. ತಮ್ಮ ತಾತ ಮಾಜಿ ಸಂಸದ ಜಿ ಪುಟ್ಟಸ್ವಾಮಿ ಗೌಡರ ಹೆಸರಿನಲ್ಲಿರೋ ಕೋಟ್ಯಾಂತರ ರೂಪಾಯಿ ಮೌಲ್ಯದ ಬೆಲೆ ಬಾಳೋ ಆಸ್ತಿಯ ವಿವರ ಮುಚ್ಚಿಟ್ಟ ಬಗ್ಗೆ ಆರೋಪ ಕೇಳಿ ಬಂದಿದೆ.

ಚುನಾವಣೆಗೂ ಮುನ್ನ ತಾತನ ಆಸ್ತಿಗೆ ತೆರಿಗೆ ಕಟ್ಟಿದ್ದ ಶ್ರೇಯಸ್ ಪಟೇಲ್, ಶ್ರೇಯಸ್ ಪಟೇಲ್ ತೆರಿಗೆ ಕಟ್ಟಿದ ಅಂಶವನ್ನೆ ಮುಂದಿಟ್ಟು ಕಾನೂನು ಹೋರಾಟಕ್ಕಿಳಿದಿದೆ ಜೆಡಿಎಸ್. ಕಚೇರಿಗೆ ನೋಟಿಸ್​ ಅಂಟಿಸಲಾಗಿದ್ದು ಖುದ್ದಾಗಿಯು ನೋಟಿಸ್​ ನೀಡೋದಾಗಿ ದೂರುದಾರ ವಕೀಲ ತಿಳಿಸಿದ್ರು. ಆದರೆ ದೂರುದಾರರ ನೋಟಿಸ್​ ಪಡೆಯಲು ನಿರಾಕರಿಸಿದ್ದಾರೆ ಶ್ರೇಯಸ್ ಪಟೇಲ್. ನನಗೆ ನೋಟಿಸ್ ನೀಡೋದಕ್ಕೆ ನೀವು ಕೋರ್ಟ್​ ಅಮೀನರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸನ ಮಹಾನಗರ ಪಾಲಿಕೆ ಆವರಣದಲ್ಲಿ ನೋಟಿಸ್ ಕಾಪಿ‌ ನೀಡಲು ಮುಂದಾದ ವೇಳೆ ಸಂಸದರು ಕಿಡಿಕಾರಿದ್ದಾರೆ. ಆದರೂ ನೋಟಿಸ್​ ಸ್ವೀಕರಿಸುವಂತೆ ಸಂಸದರ ಹಿಂದೆಯೇ ಹೋಗಿದ್ದಾರೆ ವಕೀಲರು.

ಹಾಸನ ಸಂಸದ ಶ್ರೇಯಸ್ ಪಟೇಲ್ , ನೀವೇನು ಕೋರ್ಟ್​ ಅಮೀನ ಎಂದಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ವಕೀಲ ಪೂರ್ಣಚಂದ್ರ, ಪಾಲಿಕೆ ಹೊರಗೆ ನಿಂತು ಸಂಸದರ ನಡೆ ವಿರುದ್ಧ ವಕೀಲರಿಂದ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಒಬ್ಬ ವಕೀಲನಿಗೆ ಮಾಡಿದ ಅವಮಾನ. ಈ ರೀತಿಯ ವರ್ತನೆಯನ್ನು ಸಂಸದರು ಬಿಡಬೇಕು. ಇನ್ನೂ ಯುವ ಸಂಸದರಾಗಿ ರಾಜಕೀಯವಾಗಿ ಬೆಳೆಯಬೇಕಿದೆ. ಈ ರೀತಿ ವರ್ತನೆ ಅವರಿಗೆ ಶೋಭೆ ತರೋದಿಲ್ಲ. ಅಮೀನರಿಗೂ ಅವರದ್ದೇ ಆದ ಗೌರವ ಇದೆ. ನಾನು ಈ ವಿಚಾರವನ್ನ ಸುಪ್ರೀಂ ಕೋರ್ಟ್ ನಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಹೇಳಿದ್ದಾರೆ. ಒಟ್ಟಾರೆ ಹಾಸನದ ಕಾಂಗ್ರೆಸ್​ ಸಂಸದನಿಗೆ ಸಂಕಷ್ಟ ಎದುರಾಗಿದೆ.

Related posts

Vote Theft.. ರಾಹುಲ್​ ಆರೋಪಕ್ಕೆ ಟೀಕೆ ಮಾಡಿದವರಿಗೆ ಪ್ರಿಯಾಂಕ್​ ತಿರುಗೇಟು..

Publicspot

ಚಿತ್ತಾಪುರದಲ್ಲಿ RSS ಪಥ ಸಂಚಲನ VS ಭೀಮ್‌ ಆರ್ಮಿ ಫೈಟ್‌ ಸಂಚಲನ..!!

Publicspot

ಹೊಸ ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ ಸಿಗುತ್ತದೆ..?

Publicspot

Cabinet Fight; ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕಾಂಗ್ರೆಸ್‌ನಲ್ಲಿ ಪರ ವಿರೋಧ ಮಾತು..!

Publicspot

ಅಡ್ಡ ಮತದಾನ ಮಾಡಿದ್ದು ವೈಯಕ್ತಿಕ ಲಾಭಕ್ಕೋ..? ನಾಯಕತ್ವದ ಸೇಡಿಗೋ..?

Publicspot

ಕಾಂಗ್ರೆಸ್​ ಜಗಳದಲ್ಲಿ ಬಿಜೆಪಿ ಸುಲಭವಾಗಿ ಗೆದ್ದುಕೊಳ್ಳುತ್ತಾ..? ಜಮೀರ್​ ತಂತ್ರ ಏನು..?

Publicspot