The Public Spot
ಟ್ರೆಂಡ್

RSS ಪಥಸಂಚಲನ.. ಸಸ್ಪೆಂಡ್​ಗೆ ಆಕ್ರೋಶ.. ಇವತ್ತು ಮತ್ತೆ ಪಥಸಂಚಲನ ಸಂಚಲನ..!

RSS ಶತಮಾನೋತ್ಸವ ಪ್ರಯುಕ್ತ ದೇಶಾದ್ಯಂತ ಪಥ ಸಂಚಲನ ಮಾಡಲಾಗ್ತಿದೆ. RSS ಪಥಸಂಚಲನದಲ್ಲಿ ಭಾಗಿಯಾಗಿದ್ದ ಪಿಡಿಓ‌ ಪ್ರವೀಣ್​​ ಕೆ.ಪಿ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಮಾಡಲಾಗಿದೆ. RSS ಸಮವಸ್ತ್ರ ಧರಿಸಿ ಪಥ ಸಂಚಲನದಲ್ಲಿ ಭಾಗಿಯಾಗಿದ್ದ ಪಿಡಿಓ ಪ್ರವೀಣ್ ಕೆ.ಪಿ. ಅವರನ್ನುಅಮಾನತುಗೊಳಿಸಿ ಆದೇಶ ಮಾಡಿದ್ದಾರೆ. ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಆಪ್ತ ಸಹಾಯಕನಾಗಿರುವ ಪ್ರವೀಣ್ ಕೆ.ಪಿ, ಸಿರವಾರ ತಾಲ್ಲೂಕಿನಲ್ಲಿ ಪಿಡಿಓ ಆಗಿ ನಿಯೋಜನೆಗೊಂಡಿದ್ದರು. ಇತ್ತೀಚೆಗೆ ರಾಯಚೂರಿನ ಲಿಂಗಸಗೂರು ಕ್ಷೇತ್ರದ ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಅವರ ಆಪ್ತ ಸಹಾಯಕ ಹಾಗೂ ಪಿಡಿಒ ಆಗಿ ಪ್ರವೀಣ್ ಕುಮಾರ್ ಕೆ.ಪಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ನಡೆದ ಆರ್​ಎಸ್ಎಸ್ ಪಥ ಸಂಚಲನದಲ್ಲಿ ಶಾಸಕರೊಟ್ಟಿಗೆ ಭಾಗವಹಿಸಿದ್ದ ಕಾರಣಕ್ಕೆ ಅಮಾನತು ಮಾಡಿ ಆದೇಶ ಮಾಡಲಾಗಿದೆ.

ಶಾಸಕ ಮಾನಪ್ಪ ವಜ್ಜಲ್ ಅವರೊಂದಿಗೆ ಸಂಘದ ಸಮವಸ್ತ್ರ ಧರಿಸಿ ಕೈಯಲ್ಲಿ ದೊಣ್ಣೆ ಹಿಡಿದಿದ್ದ ಫೋಟೋ, ವಿಡಿಯೋ ವೈರಲ್ ಆಗಿತ್ತು. ಪಥ ಸಂಚಲನದಲ್ಲಿ ಭಾಗವಹಿಸುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡಿದ್ದಲ್ಲದೇ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ವಿಭಜಕ ಶಕ್ತಿಗಳ ಜೊತೆ ಕೈಜೋಡಿಸಿರುವ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿತ್ತು. ಪಂಚಾಯತ್ ರಾಜ್ ಸಚಿವರಿಗೂ ಕಾರ್ಮಿಕ ಸಂಘಟನೆಯ ಮುಖಂಡ ಹೆಚ್ ಎಂ ಬಾಬು ಎಂಬುವವರು ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಪಿಡಿಒ ಪ್ರವೀಣ್ ಕೆ.ಪಿ ಅವರನ್ನು ಅಮಾನತುಗೊಳಿಸಿ ಆದೇಶ ಮಾಡಲಾಗಿದೆ.

RSS ಪಥ ಸಂಚಲನದಲ್ಲಿ ಭಾಗವಹಿಸಿದ ಸರಕಾರಿ ನೌಕರರನ್ನು ಅಮಾನತು ಮಾಡುವ ವಿಚಾರವಾಗಿ ಹಾವೇರಿಯಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಈ ರಾಜ್ಯದಲ್ಲಿ ಹೀಗಾಗಲೇ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ನಾಗರಿಕರ ಹಕ್ಕನ್ನು ಸಂಪೂರ್ಣವಾಗಿ ಮೊಟಕುಗೊಳಿಸಿದೆ. ಕಾನೂನಿನಲ್ಲಿ ರಾಜಕೀಯ ಚಟುವಟಿಕೆಯಲ್ಲಿ ನೌಕರರು ಭಾಗವಹಿಸ ಬಾರದು ಅಂತಿದೆ. RSS ಸಂಘಟನೆ ಯಾವುದೇ ರಾಜಕೀಯ ಚಟುವಟಿಕೆಯ ಸಂಘಟನೆಯಲ್ಲ. ಈ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ RSS ನ ಸದಸ್ಯರು. ಯಾವ ಕೋರ್ಟ್ ಆದೇಶದಲ್ಲಿ ಸಂಘ ಸಂಸ್ಥೆ ಚಟುವಟಿಕೆಯಲ್ಲಿ ನೌಕರರು ಭಾಗವಹಿಸಬಾರದು ಅಂತಿದೆ. ಈ ಸರಕಾರಕ್ಕೆ RSS ಸಂಘಟನೆಯನ್ನ ಏನು ಮಾಡಲೂ ಆಗುವುದಿಲ್ಲ. ಈ ದೇಶದ ಸಿದ್ದಾಂತವೇ ಆರ್ ಎಸ್ ಎಸ್ ಸಂಘಟನೆಯ ಸಿದ್ದಾಂತವಾಗಿದೆ. ಕಾಡಿನಲ್ಲಿ ಉಗ್ರರ ತರಬೇತಿಗಳು ನಡೆಯುತ್ತಿವೆ, ಅದನ್ನು ನಿಲ್ಲಿಸಲು ಆಗ್ತಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಇವತ್ತು ತುಮಕೂರು ನಗರದಲ್ಲಿ‌ ಆರ್​ಎಸ್​ಎಸ್ ಪಥಸಂಚಲನ‌‌ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಐದು ಸಾವಿರ ಆರ್​ಎಸ್ಎಸ್ ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆ ಇದೆ. ಹಳೆ ಡಿಡಿಪಿಐ ಕಚೇರಿಯಿಂದ ಪಥಸಂಚಲನ ಆರಂಭ ಆಗಲಿದ್ದು, ತುಮಕೂರು ನಗರ ಹಾಗೂ ಗ್ರಾಮಾಂತರ ಕ್ಷೇತ್ರದ ಆರ್ ಎಸ್ ಎಸ್ ಕಾರ್ಯಕರ್ತರು ಪಥಸಂಚಲನ ಮಾಡಲಿದ್ದಾರೆ. ಪಥ ಸಂಚಲನಕ್ಕೂ ಮುನ್ನ ತುಮಕೂರು ನಗರದ ಸರ್ಕಾರಿ ಕಾಲೇಜು ಮೈದಾನದಲ್ಲಿ ಸಮಾವೇಶಗೊಳ್ಳಲು ನಿರ್ಧಾರ ಮಾಡಿದ್ದಾರೆ. ಇನ್ನೂ ಕೂಡ ಅನುಮತಿ ನೀಡಿಲ್ಲ. ಅನುಮತಿ ಕೋರಿ ಜಿಲ್ಲಾಧಿಕಾರಿ ಶುಭಾಕಲ್ಯಾಣ್​​ಗೆ ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ಪತ್ರ ಬರೆದಿದ್ದಾರೆ. ಅಕ್ಟೋಬರ್​ 3ರಂದು ಅನುಮತಿ ಕೊರಿ ಪತ್ರ ಬರೆದಿದ್ದು, ಇಲ್ಲೀವರೆಗೂ ಡಿಸಿ ಅನುಮತಿ ಸಿಕ್ಕಿಲ್ಲ. ಆದರೆ ಶಾಸಕ ಜ್ಯೋತಿಗಣೇಶ್ ಪತ್ರವನ್ನ ಸರ್ಕಾರಿ ಕಾಲೇಜು ಪ್ರಾಂಶುಪಾಲರಿಗೆ ಕಾನೂನು ರೀತ್ಯಾ ಕ್ರಮಕೈಗೊಳ್ಳಿ ಎಂದು ರವಾನೆ ಮಾಡಿದ್ದಾರೆ. ಒಂದು ವೇಳೆ ಸರ್ಕಾರ ಈಗಾಗಲೇ ನಿರ್ಬಂಧದ ಬಗ್ಗೆ ಹೊಸ ಆದೇಶ ಹೊರಡಿಸಿದ್ದು, ಇವತ್ತು ಪಥಸಂಚಲನಕ್ಕೆ ಅನುಮತಿ ಸಿಗದಿದ್ದರೆ ತುಮಕೂರಿನಲ್ಲಿ ಭಾರೀ ಹೈಡ್ರಾಮ ನಡೆಯೋದು ಶತಸಿದ್ಧ ಅನ್ನೋ ಮಾಹಿತಿಗಳು ಬರ್ತಿವೆ.

Related posts

33 ಲಕ್ಷ ವಾಚ್​.. ಸಿಎಂ , ಡಿಸಿಎ ಕೊಟ್ಟ ಉತ್ತರ ಏನು ಗೊತ್ತಾ..?

Publicspot

ಚಳಿಗಾಲ ವಿಪರೀತ.. ಎಚ್ಚರ ತಪ್ಪಿದ್ರೆ ಹಾರಿ ಹೋಗುತ್ತೆ ಪ್ರಾಣ ಪಕ್ಷಿ.. ಕಾರಣ ಏನು..?

Publicspot

S.L Byrappa No More; ಕನ್ನಡ ಸಾಹಿತ್ಯ ಲೋಕದ ಅಕ್ಷರ ಮಾಂತ್ರಿಕ S.L ಬೈರಪ್ಪ ಇನ್ನಿಲ್ಲ..

Publicspot

Baby Inside Another Baby ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಮಗು.. ಅಚ್ಚರಿ ಮತ್ತು ವಿಸ್ಮಯ..

Publicspot

Today Blood moon: ರಕ್ತ ಚಂದ್ರಗ್ರಹ.. ಎಲ್ಲೆಲ್ಲಿ ಕಾಣುತ್ತೆ..? ಏನಿದ್ರ ವಿಶೇಷ..

Publicspot

ಲೈಂಗಿಕ ಸಮಸ್ಯೆಗೆ 48 ಲಕ್ಷದ ಮದ್ದು..! ಕನಸು ಕೈಗೂಡಲಿಲ್ಲ.. ಕಿಡ್ನಿಯೇ ಹೋಯ್ತು..

Publicspot