The Public Spot
ರಾಜ್ಯ

Caste Census Extended: ಈ ತಿಂಗಳಾಂತ್ಯಕ್ಕೆ ಜಾತಿಜನಗಣತಿ ಸಮೀಕ್ಷೆ ನಿಜವಾಗಲೂ ಮುಗಿಯುತ್ತಾ..?

ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಜನಗಣತಿ ಸಮೀಕ್ಷೆಯ ಪ್ರಗತಿ ಪರಿಶೀಲನೆ ಸಭೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ಭಾಗದ ಸಚಿವರಾದ ರಾಮಲಿಂಗಾರೆಡ್ಡಿ, ಬೈರತಿ ಸುರೇಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ರಾಜ್ಯಾದ್ಯಂತ ಶೇಕಡಾ 90 ರಷ್ಟು ಸರ್ವೆ ಆಗಿದ್ದು, ಬೆಂಗಳೂರಿನ GBA ವ್ಯಾಪ್ತಿಯಲ್ಲಿ ಗುರಿ ಮುಟ್ಟಿಲ್ಲ. ಬೆಂಗಳೂರಲ್ಲಿ ಶೇಕಡಾ 37ರಷ್ಟು ಅಷ್ಟೇ ಸಮೀಕ್ಷೆ ಆಗಿದೆ. ಹೀಗಾಗಿ ಬೆಂಗಳೂರಲ್ಲಿ ಮತ್ತಷ್ಟು ಸರ್ವೆ ಚುರುಕುಗೊಳಿಸಲು ಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಮಧುಸೂದನ್ ನಾಯಕ್, ಸಚಿವರಾದ ಕೆ.ಜೆ ಜಾರ್ಜ್, ಶಿವರಾಜ್ ತಂಗಡಗಿ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿ ಅಧಿಕಾರಿಗಳು ಭಾಗಿಯಾಗಿದ್ದರು. ಬೆಂಗಳೂರಿನಲ್ಲಿ ಸಮೀಕ್ಷೆ ಮಂದಗತಿಯಲ್ಲಿ ಸಾಗ್ತಿರೋದಕ್ಕೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದರು ಎನ್ನಲಾಗಿದೆ.

ಸಿಎಂ ಸಿದ್ದರಾಮಯ್ಯ ಸಭೆ ಬಳಿಕ ಮಾತನಾಡಿದ ಶಿವರಾಜ್ ತಂಗಡಗಿ, ಬೆಂಗಳೂರನ್ನು ಹೊರತು ಪಡಿಸಿ, ಎಲ್ಲಾ ಜಿಲ್ಲೆಗಳಲ್ಲಿ ಕನಿಷ್ಠ 95 ಪರ್ಸೆಂಟ್ ಆಗಿದೆ. ರಾಮನಗರ, ಬೀದರ್, ಧಾರವಾಡದಲ್ಲಿ ಶೇಕಡಾ 90 ಕ್ಕಿಂತ ಕಡಿಮೆ ಆಗಿದೆ. ಬೆಂಗಳೂರಲ್ಲಿ ಮಾತ್ರ ನಮಗೆ ಬಹಳ ಕಡಿಮೆ ಆಗಿದೆ. ಬೆಂಗಳೂರಲ್ಲಿ 45 ರಷ್ಟು ಆಗಿದೆ. ಇನ್ಮುಂದೆ ಶಿಕ್ಷಕರು ಭಾಗಿ ಅವಶ್ಯಕತೆ ಇಲ್ಲ. ಇನ್ಮುಂದಿನ ಸಮೀಕ್ಷೆಗೆ ಬೇರೆ ಬೇರೆ ಇಲಾಖೆಯ ಸಿಬ್ಬಂದಿ ಬಳಕೆಗೆ ಸೂಚನೆ ಕೊಡಲಾಗಿದೆ. ಅಕ್ಟೋಬರ್‌ 31 ರೊಳಗೆ ಸಮೀಕ್ಷೆ ಸಂಪೂರ್ಣ ಆಗಬೇಕು. ಶಾಲೆ ಪ್ರಾರಂಭ ಆಗಿರೋದ್ರಿಂದ ಶಿಕ್ಷಕರರು ಬೇಡ ಅನ್ನೋ ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಭೆ ಬಳಿಕ ಮಾತನಾಡಿದ ಶಿವರಾಜ್ ತಂಗಡಗಿ, ಬೆಂಗಳೂರನ್ನು ಹೊರತು ಪಡಿಸಿ, ಎಲ್ಲಾ ಜಿಲ್ಲೆಗಳಲ್ಲೂ ಕನಿಷ್ಠ 95 ಪರ್ಸೆಂಟ್ ಆಗಿದೆ. ರಾಮನಗರ, ಬೀದರ್, ಧಾರವಾಡದಲ್ಲಿ ಶೇಕಡಾ 90 ಕ್ಕಿಂತ ಕಡಿಮೆ ಆಗಿದೆ. ಬೆಂಗಳೂರಲ್ಲಿ ಮಾತ್ರ ನಮಗೆ ಬಹಳ ಕಡಿಮೆ ಆಗಿದೆ. ಬೆಂಗಳೂರಲ್ಲಿ 45 ರಷ್ಟು ಆಗಿದೆ. ಇನ್ಮುಂದೆ ಶಿಕ್ಷಕರು ಭಾಗಿ ಅವಶ್ಯಕತೆ ಇಲ್ಲ. ಇನ್ಮುಂದಿನ ಸಮೀಕ್ಷೆಗೆ ಬೇರೆ ಬೇರೆ ಇಲಾಖೆಯ ಸಿಬ್ಬಂದಿ ಬಳಕೆಗೆ ಸೂಚನೆ ಕೊಡಲಾಗಿದೆ. ಅಕ್ಟೋಬರ್‌ 31 ರೊಳಗೆ ಸಮೀಕ್ಷೆ ಸಂಪೂರ್ಣ ಆಗಬೇಕು. ಶಾಲೆ ಪ್ರಾರಂಭ ಆಗಿರೋದ್ರಿಂದ ಶಿಕ್ಷಕರರು ಬೇಡ ಅನ್ನೋ ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.

ಜಾತಿ ಜನಗಣತಿ ಬಗ್ಗೆ ಸಚಿವರ ಸಮ್ಮುಖದಲ್ಲಿ ಸಿಎಂ ಸಿದ್ದರಾಮಯ್ಯ ಸಭೆ ಮಾಡಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಸಹ ಸಭೆಯಲ್ಲಿ ಭಾಗಿಯಾಗಿದ್ದರು. 27 ಜಿಲ್ಲೆಯಲ್ಲಿ ಶೇಕಡ 90ಕ್ಕಿಂತಲೂ ಹೆಚ್ಚು ಸರ್ವೇ ಆಗಿದೆ. ಮೂರು ಜಿಲ್ಲೆಯಲ್ಲಿ ಸಮೀಕ್ಷೆ ಇನ್ನೂ ಆಗಬೇಕು. ರಾಮನಗರದಲ್ಲಿ ಶೇಕಡ 88ರಷ್ಟು, ಬೀದರ್‌ನಲ್ಲಿ ಶೇಕಡ 89ರಷ್ಟು, ಬೆಂಗಳೂರು ನಗರದಲ್ಲಿ 50 ರಷ್ಟು ಸಮೀಕ್ಷೆ ಆಗಿದೆ. ಬೆಂಗಳೂರಲ್ಲಿ ಶುರುವಾಗಿದ್ದು ತಡವಾಯಿತು. ಅಕ್ಟೋಬರ್‌ 23 ರಿಂದ 31ರವ ವರೆಗೂ ಮತ್ತೆ ಸಮೀಕ್ಷೆ ಮಾಡ್ತೀವಿ. ಸಿಎಂ ಸಿದ್ದರಾಮಯ್ಯ ಬೆಂಗಳೂರಲ್ಲಿ ಸಮೀಕ್ಷೆ ಮಾಡಿ ಅಂತ ಹೇಳಿದ್ದಾರೆ. ಶಿಕ್ಷಕರು ಶಾಲೆಗೆ ಹೋಗಬೇಕು ಪಾಠಕ್ಕೆ ತೊಂದರೆ ಆಗಬಾರದು ಎಂದಿದ್ದಾರೆ.

ಜಾತಿಗಣತಿ ಸಮೀಕ್ಷೆಯಿಂದ ಸಚಿವಾಲಯದ ನೌಕರರನ್ನು ಬಿಡುಗೊಳಿಸಲು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಸಚಿವಾಲಯದ ನೌಕರರ ಸಂಘ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ಗೆ ಪತ್ರ ಬರೆದಿದ್ದು, ಆಡಳಿತದ ಪ್ರಮುಖ‌ ಕೆಲಸ ಕಾರ್ಯಗಳು‌ ಸ್ಥಬ್ದವಾಗಿವೆ. ಅನಿವಾರ್ಯ ಮತ್ತು ಅಗತ್ಯ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ತಕ್ಷಣವೇ ಜಾರಿಗೆ ಬರುವಂತೆ ಸಮೀಕ್ಷೆಗೆ ನೇಮಿಸಿರುವ ಸಚಿವಾಲಯದ ನೌಕರರನ್ನು ಬಿಡುಗಡೆಗೊಳಿಸಿ ಎಂದು ಸರ್ಕಾರಕ್ಕೆ ಪತ್ರ ಬರೆದು‌ ಮನವಿ ಮಾಡಿದ್ದಾರೆ. ಸಚಿವಾಲಯ ಸಿಬ್ಬಂದಿ ಸಮೀಕ್ಷೆಯಿಂದ ನಮ್ಮನ್ನು ಕೈಬಿಡಿ ಎಂಬ ವಿಚಾರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ರಿಕ್ವೆಸ್ಟ್ ಮಾಡ್ತಾರೆ, ಹಾಗಂತ ಸಮೀಕ್ಷೆ ಆಗಬೇಕಲ್ವಾ..? ಒತ್ತಡ ಇದೆ ಇಲ್ಲ ಅಂತ ನಾನು ಹೇಳಲ್ಲ. ಕೆಲಸ ಮಾಡುವವರು ಸಹ ರೆಡಿ ಇದ್ದಾರೆ ಎಂದಿದ್ದಾರೆ.

Related posts

Cast Censes Congress Ready to Leagal Fight; ಹೈಕೋರ್ಟ್‌ನಲ್ಲಿ ತಡೆ ಸಿಕ್ಕರೂ ಕಾನೂನು ಹೋರಾಟಕ್ಕೆ ಕಾಂಗ್ರೆಸ್‌ ತಯಾರಿ..!

Publicspot

KARNATAKA SCHOOL LEAVE: ಇವತ್ತು 4 ಜಿಲ್ಲೆಗೆ ಮಳೆಯಬ್ಬರ.. 8 ಜಿಲ್ಲೆಗಳ ಶಾಲಾ ಕಾಲೇಜಿಗೆ ರಜೆ

Publicspot

ಅಪರೂಪದ ಸಮಾಗಮ, ಅಚ್ಚರಿಯ ಬೆಳವಣಿಗೆಗೆ ಕಾರಣವಾದ ಮೋದಿ..!

ಯಶವಂತಿ

ಒಳ ಮೀಸಲಾತಿ ನಡುವೆ ಸುಪ್ರೀಂನಲ್ಲಿ ಆದಾಯ ಆಧಾರಿತ ಮೀಸಲಾತಿ ಸದ್ದು..!

ಯಶವಂತಿ

ರಾಜ್ಯದಲ್ಲಿ ಎಲ್ಲೆಲ್ಲಿ ಮಳೆ.. ಯಾವ ಯಾವ ಜಿಲ್ಲೆಯಲ್ಲಿ ಹೆಚ್ಚು..?

Publicspot

High Court News: ರಾಜ್ಯದಲ್ಲಿ ಮತ್ತೆ ರಸ್ತೆ ಇಳಿಯುತ್ತವೆ ಬೈಕ್​ ಟ್ಯಾಕ್ಸಿ..!?

Publicspot