The Public Spot
ಅಪರಾಧ

Women Death for Love; ಹೆಣ್ಣು ಮನಸ್ಸು ಚಂಚಲ ಅಂತಾರೆ.. ಆದರೆ ಮದುವೆ ಆಗಿದ್ದ ಹೆಣ್ಣು ಮಾಡಿದ್ದೇನು..?

ಬೆಂಗಳೂರಿನ ಮಾಗಡಿ ರೋಡ್ ನಿವಾಸಿ ಯಶೋಧಾ ತನ್ನ ಗಂಡ ಹಾಗೂ ಇಬ್ಬರು ಮಕ್ಕಳ ಜೊತೆಗೆ ನೆಮ್ಮದಿಯ ಜೀವನ ಮಾಡ್ತಿದ್ರು. ಆದ್ರೆ, ಯಶೋಧಗೆ ವಿಶ್ವನಾಥ್ ಎಂಬಾತನ ಮೇಲೆ ಮನಸ್ಸಾಗಿ ಮೈಮರೆತಿದ್ದರಳು. ಮನೆ ಅಕ್ಕಪಕ್ಕದಲ್ಲೇ ಇದ್ದಿದ್ರಿಂದ ಮನಸ್ಸುಗಳು ಬೆರೆತು ಮಿಲನ ಮಹೋತ್ಸವ ಆಚರಣೆ ಮಾಡಿದ್ದರು. ಕಳೆದ ಏಳು ವರ್ಷದಿಂದ ತುಂಬಾ ಸಲುಗೆಯಲ್ಲಿ ಜೋಡಿಹಕ್ಕಿಗಳು ಪಲ್ಲಂಗದಾಟ ನಡೆಯುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಯಶೋಧಾ ತನ್ನ ಗೆಳತಿಗೆ ವಿಶ್ವನಾಥ್​ನನ್ನು ಪರಿಚಯ ಮಾಡಿಕೊಟ್ಟಿದ್ದಳು. ಅಷ್ಟು ಸಾಕಿತ್ತು, 7 ವರ್ಷಗಳಿಂದ ನಡೆದುಕೊಂಡು ಬಂದಿದ್ದ ಅಕ್ರಮ ಸಂಬಂಧಕ್ಕೆ ಹುಳಿ ಬೀಳುವುದಕ್ಕೆ. ಸ್ನೇಹಿತೆಯನ್ನು ಪರಿಚಯ ಮಾಡಿಕೊಟ್ಟಿದ್ದೇ ತಡ, ವಿಶ್ವನಾಥನ ಕಣ್ಣು ಆಕೆಯ ಕಡೆಗೆ ಹೊರಳಿತ್ತು. ಅಲ್ಲಿಂದ ಮಂಚ ಅದೇ ಆದರೂ ಮಂಚದ ಮೇಲಿನ ಹೆಣ್ಣು ಅದಲು ಬದಲಾಗಿತ್ತು.

ಕಳೆದ 7 ವರ್ಷಗಳಿಂದ ತನ್ನ ಕಾಮತೃಷೆಯನ್ನು ತೀರಿಸುತ್ತಿದ್ದ ವಿಶ್ವನಾಥ, ಯಾವಾಗ ಯಶೋಧಳ ಸ್ನೇಹಿತೆ ಜೊತೆಗೆ ಸಲುಗೆ ಬೆಳೆಸಿದ್ದಾನೆ, ನನಗೆ ಸಿಗಬೇಕಿದ್ದ ಪ್ರೀತಿ ಗೆಳತಿಯ ಪಾಲಾಗ್ತಿದೆ ಅನ್ನೋದು ಗೊತ್ತಾಯ್ತೋ, ಯಶೋಧ ಯಕಶ್ಚಿತ್ ರೌದ್ರಾವತಾರ ತಾಳಿದ್ದಳು. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯೂ ಆಗಿತ್ತು. ಆದರೆ ವಿಶ್ವನಾಥ ಮಾತ್ರ ತನ್ನ ಕಾಮನ ಬಿಲ್ಲನ್ನು ಯಶೋಧಾ ಸ್ನೇಹಿತೆ ಕಡೆಗೆ ಹೂಡಿ ಆಗಿತ್ತು. ಮೊನ್ನೆ ಗಾಂಧಿ ಜಯಂತಿ ಅಕ್ಟೋಬರ್‌ 2ರಂದು ರಜೆ ಮೂಡಲ್ಲಿದ್ದ ವಿಶ್ವನಾಥ್ ಹಾಗೂ ಯಶೋಧ ಸ್ನೇಹಿತೆ ಓಯೋ ರೂಮಿನಲ್ಲಿ ಪಲ್ಲಂಗದಾಟ ಆಡುವ ನಿರ್ಧಾರ ಮಾಡಿದ್ದರು. ವಿಶೇಷ ಅಂದ್ರೆ ಈ ವಿಚಾರ ಯಶೋಧಾ ಕಿವಿಗೂ ಬಿದ್ದಿತ್ತು. ಬಸವೇಶ್ವರ ನಗರದ ಓಯೋ ರೂಮಿನಲ್ಲಿ 305ನೇ ರೂಮ್​ ಕೂಡ ಬುಕ್​ ಆಗಿತ್ತು. ಯಶೋಧಾ ಕೂಡ ಅದರ ಎದುರಿನಲ್ಲೇ ಇದ್ದ 302ನೇ ನಂಬರ್​ನ ರೂಮ್​ ಬುಕ್​ ಮಾಡಿದ್ದಳು.

ಯಶೋಧಾಳ ಟ್ರ್ಯಾಪ್​ನಲ್ಲಿ ನಾನಿದ್ದೇನೆ ಅನ್ನೋ ಸಣ್ಣ ಸುಳಿವು ಇಲ್ಲದ ವಿಶ್ವನಾಥ, ಯಶೋಧಾಳ ಸ್ನೇಹಿತೆರ ಜೊತೆಗೆ ಕಾಮಕೇಳಿ ಶುರು ಮಾಡಿಕೊಂಡಿದ್ದ. ಆದರೆ ಎದುರಿನ ರೂಮ್​ನಲ್ಲೇ ಘಟಸರ್ಪದಂತೆ ಕಾದು ಕುಳಿತಿದ್ದ ಯಶೋಧಾ ಕೆಲವೇ ನಿಮಿಷದಲ್ಲಿ ಎದುರಿನಲ್ಲಿದ್ದ ವಿಶ್ವನಾಥ್​ ರೂಮಿನ ಡೋರ್​ ತಟ್ಟಿದ್ದಳು. ಯಾವುದೇ ಅಳುಕು ಇಲ್ಲದೆ ರೂಮ್​ ಡೋರ್​ ಓಪನ್​ ಮಾಡಿದ್ದ ವಿಶ್ವನಾಥ್​ಗೆ ಮುಖದಲ್ಲಿ ಬೆವರು ಹರಿದಿತ್ತು. ಬಾಗಿಲು ತೆರೆಯುವ ಮೊದಲು ಮಂಚದಲ್ಲಿ ಮದಗಜಗಳ ಕಾಳಗ ಏರ್ಪಟ್ಟಿತ್ತು. ಆದರೆ ಯಾವಾಗ ಬಾಗಿಲು ತೆರೆದನೋ ಆದ ಅಸಲಿ ಯುದ್ಧ ಶುರುವಾಗಿತ್ತು. ಯಶೋಧಾ ಕೋಪ ತಾಳಲಾರದೆ ಗೆಳತಿ ಅಲ್ಲಿಂದ ಕಾಲ್ಕಿತ್ತಳು. ಯಶೋಧಾಳನ್ನು ಸಮಾಧಾನ ಮಾಡಲು ವಿಶ್ವನಾಥ ಎಷ್ಟೇ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಅಲ್ಲಿಂದ ವಿಶ್ವನಾಥ ಹೊರಟ ಮೇಲೆ ಓಯೋ ರೂಮ್​ಗೆ ಹೋಗಿದ್ದ ಯಶೋಧಾ ಪ್ರೀತಿಯನ್ನು ಬಿಟ್ಟುಕೊಡಲು ಮನಸ್ಸು ಒಪ್ಪದೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಯಶೋಧಾ ಕುಟುಂಬಸ್ಥರು ಅನುಮಾನಾಸ್ಪದ ಸಾವು (UDR) ದೂರು ನೀಡಿದ್ದಾರೆ. ಬಸವೇಶ್ವರ ನಗರ ಪೊಲೀಸ್ರು ಓಯೋ ರೂಮಿನಲ್ಲಿದ್ದ ಸಿಸಿಟಿವಿ ದೃಶ್ಯ ತೆಗೆದುಕೊಂಡು ತನಿಖೆ ಶುರು ಮಾಡಿದಾಗ ಅಸಲಿ ಸಂಗತಿ ಹೊರಬಿದ್ದಿದೆ. ಆದರೆ ದುಡಿದು ಸಾಕಲು ಗಂಡ, ಮುದ್ದಾಡಲು ಇಬ್ಬರು ಮುತ್ತಿನಂತ ಮಕ್ಕಳಿದ್ದರೂ ಈ ರೀತಿಯ ಕೃತ್ಯಕ್ಕೆ ಮುಂದಾಗಿದ್ದು ಯಾಕೆ..? ಅನ್ನೋ ಅನುಮಾನ ನಿಮ್ಮ ಮನಸ್ಸಲ್ಲೂ ಬಂದಿರಬಹುದು. ಆದರೆ ಮದುವೆಯಾಗಿ ಮಕ್ಕಳಾದ ಕೂಡಲೇ ದೇಹದ ವಾಂಛೆಗಳನ್ನು ದೂರ ಮಾಡಲು ಸಾಧ್ಯವಿಲ್ಲ. ದಾಂಪತ್ಯ ಎಂದ ಬಳಿಕ ಇಬ್ಬರ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಬೇಕು. ಅಷ್ಟೇ ಅಲ್ಲ. ಸೋಷಿಯಲ್​ ಮೀಡಿಯಾ ಅನ್ನೋ ರಕ್ಕಸ ಬಾಳಿನಲ್ಲಿ ಆಟ ಆಡ್ತಿರುವ ಬಗ್ಗೆ ಗಮನ ಕೊಡಬೇಕು. ಇಲ್ಲದಿದ್ರೆ ಹೆಂಡತಿ ಆನ್​ಲೈನ್​ ಗೆಳಯನ ಜೊತೆಗೆ ಸಹವಾಸಕ್ಕೆ ಬಿದ್ದರೆ ಅಚ್ಚರಿಯೇನಿಲ್ಲ.

Related posts

Darshan Bail Cancel, What Next: ಜಾಮೀನು ರದ್ದಾದ ಬಳಿಕ ಮುಂದೇನು..? ಅರೆಸ್ಟ್​ ಆಗ್ತಾರಾ ದರ್ಶನ್​..?

ಯಶವಂತಿ

ನಿನ್ನೆ ಆಯ್ತು.. ಇವತ್ತೂ ಕೊಲೆ ಕೇಸ್‌ ವಿಚಾರಣೆ.. ನಟ ದರ್ಶನ್‌ಗೆ ಢವಢವ..

Publicspot

Darshan jail case; ದರ್ಶನ್‌ಗೆ ಜೈಲಿನಲ್ಲಿ ಏನೂ ಸೌಲಭ್ಯ ಕೊಡ್ತಿಲ್ವಾ..? ಕೋರ್ಟ್‌ನಲ್ಲಿ ಏನಾಗುತ್ತೆ..?

Publicspot

ಕಿರುತೆರೆ ನಟಿಗೆ ಲೈಂಗಿಕ ಕಿರುಕುಳ ಆರೋಪ, ಕೇರಳದ ಚೇಟ ಬಂಧನ..

Publicspot

ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ.. ಬಂಡಾರದ ಲೆಕ್ಕಾಚಾರ..

Publicspot

husband Suicide : ಗಂಡನ ಮನೆ ಬಿಟ್ಟ ಹೆಂಡತಿ ತವರು ಸೇರಿದ್ಲು.. ನದಿಗೆ ಹಾರಿದ ಗಂಡ..

Publicspot