The Public Spot
Uncategorized

Big Boss Bund: ಬಿಗ್‌‌ಬಾಸ್‌ ಮನೆಗೆ ಬೀಗ ಬಿದ್ದಿದೆ.. ಮುಂದೆ ಇರುವ ದಾರಿ ಯಾವುದು..?

ಬಿಗ್‌ಬಾಸ್‌ ಕನ್ನಡಕ್ಕೆ ಸಂಕಷ್ಟ ಎದುರಾಗಿದೆ. ಬಿಗ್‌ಬಾಸ್‌ ಸೆಟ್‌ ನಿರ್ಮಾಣ ಮಾಡಿರುವ ಜಾಲಿವುಡ್‌ ಅಮ್ಯೂಸ್‌ಮೆಂಟ್‌‌ ಪಾರ್ಕ್‌ನಲ್ಲಿ ವಾಟರ್‌ ಆ್ಯಕ್ಟ್‌ 1974 ಪಾಲನೆ ಮಾಡಿಲ್ಲ ಅಂತಾ ಮಾಲಿನ್ಯ ನಿಯಂತ್ರಣ ನೋಟಿಸ್‌ ಜಾರಿ ಮಾಡಿತ್ತು. ಆದರೆ ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಏಕಾಏಕಿ ಜಾಲಿವುಡ್‌ನ ಮೇನ್ ಗೇಟ್ ಸೀಜ್ ಮಾಡಿದ್ದಾರೆ. ರಾಮನಗರ ತಹಶೀಲ್ದಾರ್ ತೇಜಸ್ವಿನಿ ನೇತೃತ್ವದಲ್ಲಿ ಸೀಜ್ ಮಾಡಲಾಗಿದೆ. ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ಕೊಡದೇ ತಹಶೀಲ್ದಾರ್ ತೇಜಸ್ವಿನಿ ತೆರಳಿದ್ದಾರೆ. ಅಧಿಕಾರಿಗಳ ಕಾರ್ಯಕ್ಕೆ ಕನ್ನಡಪರ ಹೋರಾಟಗಾರರ ಅಭಿನಂದನೆ ತಿಳಿಸಿದ್ದಾರೆ. ಜಾಲಿವುಡ್ ಮಾಲೀಕನಿಗೆ ದುರಂಹಕಾರ, ಹೀಗಾಗಿ ಬಿಗ್ ಬಾಸ್ ನಿಂತಿದೆ ಎಂದಿದ್ದಾರೆ. ಆ ಬಳಿಕ ಬಿಗ್‌ಬಾಸ್‌ ಮನೆ ಒಳಗಿದ್ದ ಎಲ್ಲರನ್ನೂ ಪೊಲೀಸರು ಹೊರಕ್ಕೆ ಕರೆತಂದಿದ್ದಾರೆ.

ಸ್ವತಃ ಬಿಗ್‌ಬಾಸ್‌ ಮನೆಗೆ ಪೊಲೀಸರೇ ಎಂಟ್ರಿಯಾಗಿ ಬಿಗ್‌ ಬಾಸ್‌ ಸ್ಪರ್ಧಿಗಳನ್ನು ಮನೆಯಿಂದ ಹೊರಕ್ಕೆ ಕರೆತಂದ ಮೇಲೆ, ಬಿಗ್‌ಬಾಸ್‌ ಮ್ಯಾನೆಜ್‌ಮೆಂಟ್‌‌ ಎಲ್ಲರನ್ನೂ ಬಿಡದಿ ಬಳಿಯ ಈಗಲ್‌ ಟನ್‌ ರೆಸಾರ್ಟ್‌ಗೆ ಶಿಫ್ಟ್ ಮಾಡಿದೆ. ಬಿಗ್‌ಬಾಸ್‌ ಸ್ಪರ್ಧಿಗಳನ್ನು ಕೂಡಲೇ ಮನೆಗಳಿಗೆ ಕಳಿಸದೆ ಇರಲು ನಿರ್ಧಾರ ಮಾಡಿರುವ ಬಿಗ್‌‌ಬಾಸ್‌‌ ಆಡಳಿತ ಮಂಡಳಿ. ಇವತ್ತು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವ ತಯಾರಿಯಲ್ಲಿದ್ದು, ಹೈಕೋರ್ಟ್‌ನಲ್ಲಿ ಸರ್ಕಾರದ ನಿರ್ಧಾರಕ್ಕೆ ತಡೆ ತರುವ ಪ್ರಯತ್ನದಲ್ಲಿ ಇದ್ದಾರೆ. ಅಲ್ಲೀವರೆಗೂ ಸ್ಪರ್ಧಿಗಳನ್ನು ಮನೆಗೆ ಕಳುಹಿಸದೆ ಇರಲು ಬಿಗ್‌ಬಾಸ್‌ ಮ್ಯಾನೇಜ್ಮೆಂಟ್‌ ನಿರ್ಧಾರ ಮಾಡಿದೆ. ಇದೆ ಕಾರಣಕ್ಕೆ ಸುಮಾರು ಐದಾರು ಕಾರುಗಳಲ್ಲಿ ಕರೆದುಕೊಂಡು ರೆಸಾರ್ಟ್‌ಗೆ ಶಿಫ್ಟ್‌ ಮಾಡಲಾಗಿದೆ. ಬಿಗ್‌ಬಾಸ್‌ಗೆ ಎದುರಾಗಿರುವ ಸಂಕಷ್ಟ ಪರಿಹಾರ ಆಗುವ ತನಕ ರೆಸಾರ್ಟ್‌‌ನಲ್ಲೇ ವಾಸ್ತವ್ಯ ಮಾಡಲು ನಿರ್ಧಾರ ಮಾಡಲಾಗಿದೆ.

ಬಿಗ್ ಬಾಸ್ ಶೋ ನಡೆಯುತ್ತಿದ್ದ ಜಾಲಿವುಡ್‌ ಸ್ಟುಡಿಯೋಗೆ ಬೀಗ ಹಾಕಿರುವ ಕುರಿತಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯಿಸಿದ್ದಾರೆ. ಸ್ಟುಡಿಯೋಗೆ ರಾಮನಗರ ಪ್ರಾದೇಶಿಕ ಕಚೇರಿ ಅಧಿಕಾರಿಗಳು ಈ ಹಿಂದೆಯೇ ನೋಟಿಸ್‌ ಕೊಟ್ಟಿದ್ದರು. ಆದ್ರೆ ಜಾಲಿವುಡ್‌ ಕಡೆಯಿಂದ ನೋಟಿಸ್‌ಗೆ ಉತ್ತರಿಸಿಲ್ಲ. ಹೀಗಾಗಿ ಕಾನೂನಿನ ಪ್ರಕಾರವೇ ಕ್ರಮ ಕೈಗೊಳ್ಳಲಾಗಿದೆ. ಕಾನೂನಿಗಿಂತ ಯಾರೂ ದೊಡ್ಡವರಿಲ್ಲ ಅಂತ ಹೇಳಿದ್ದಾರೆ. ಈ ನಡುವೆ ಬಿಗ್‌‌ಬಾಸ್‌ ಮನೆಗೆ ಬೀಗ ಬಿದ್ದ ಬಳಿಕ ಎಲ್ಲಾ ಆಟಗಾರರನ್ನು ರೆಸಾರ್ಟ್‌ಗೆ ಶಿಫ್ಟ್‌ ಮಾಡಲಾಗಿದೆ. ಹೈಕೋರ್ಟ್‌ ಮೆಟ್ಟಿಲೇರಲು ಬಿಗ್‌ಬಾಸ್‌ ಟೀಂ ಸಿದ್ಧತೆ ನಡೆಸಿದೆ. ಇದರೆ ಬೆನ್ನಲ್ಲೇ ಬೆಸ್ಕಾಂ ಹಾಗೂ BMRDA ಜಾಲಿವುಡ್‌ಗೆ ನೋಟಿಸ್‌ ನೀಡಿದೆ. ಯಾವುದೇ ನಕ್ಷೆ ಇಲ್ಲದೇ, ಪರವಾನಗಿ ಇಲ್ಲದೇ ಜಾಲಿವುಡ್ ನಡೆಸುತ್ತಿರುವ ಆರೋಪದ ಮೇಲೆ ನೋಟಿಸ್‌ ನೀಡಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಜಾಲಿವುಡ್‌ ಅಮ್ಯೂಸ್‌ಮೆಂಟ್‌ ಪಾರ್ಕ್‌ನಲ್ಲಿ ಬಿಗ್‌ಬಾಸ್‌ ಅನ್ನೋದು ಒಂದು ಭಾಗ ಅಷ್ಟೇ. ನೇರವಾಗಿ ಬಿಗ್‌ಬಾಸ್‌ ಯಾವುದೆ ಕಾನೂನು ಉಲ್ಲಂಘನೆ ಮಾಡಿಲ್ಲ. ಜಾಲಿವುಡ್‌ ಸಂಸ್ಥೆ ಮಾಡಿರುವ ತಪ್ಪಿಗೆ ಒಂದು ವಾಹಿನಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ತಡೆಯುವುದು ಸರಿಯಲ್ಲ ಎಂದು ಹೈಕೋರ್ಟ್‌ನಲ್ಲಿ ವಾದ ಮಂಡಿಸಬಹುದು. ಇದು ಉದ್ದೇಶ ಪೂರ್ವಕವಾಗಿ ಸರ್ಕಾರ ತೊಂದರೆ ಕೊಡುತ್ತಿದೆ, ಯಾವುದಾದರೂ ಕಾನೂನು ಉಲ್ಲಂಘನೆ ಆಗಿದ್ದರೆ ಅದರ ದಂಡವನ್ನು ನಾವು ಕೋರ್ಟ್‌ ಎದುರಲ್ಲಿ ಪಾವತಿ ಮಾಡಲು ಸಿದ್ಧರಿದ್ದೇವೆ. ಈ ರಿಯಾಲಿಟಿ ಶೋ ಕಾರ್ಯಕ್ರಮದ ಹೆಸರಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ಆಗುತ್ತಿರುತ್ತದೆ. ಜಾಹಿರಾತುದಾರರಿಗೆ ನಾವು ಸಮಸ್ಯೆ ಮಾಡಲು ಸಾಧ್ಯವಿಲ್ಲ. ಸರ್ಕಾರದ ಕ್ರಮಕ್ಕೆ ತಡೆ ನೀಡಬೇಕು, ಆಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಾಲಾವಕಾಶ ನೀಡಬೇಕು ಎಂದು ಹೈಕೋರ್ಟ್‌ನಲ್ಲಿ ತಿಳಿಸಿ, ಅವಕಾಶ ಪಡೆಯುವ ಸಾಧ್ಯತೆಯಿದೆ.

Related posts

ಕಾರ್​ ಸ್ಫೋಟ.. NIA ತನಿಖೆಗೆ ವಹಿಸಿ ಕೇಂದ್ರ ಗೃಹ ಇಲಾಖೆ ಆದೇಶ

Publicspot

ಸತ್ತ ಗಂಡನ ಜೊತೆಗೆ 10 ದಿನಗಳನ್ನು ಕಳೆದಳು ಪತ್ನಿ..!

Publicspot

ಸ್ಯಾಂಡಲ್‌ವುಡ್‌ ನಿರ್ಮಾಣಪಕ ವಿರುದ್ಧ ಠಾಣೆ ಮೆಟ್ಟಿಲೇರಿದ ಡೈರೆಕ್ಟರ್‌ ಪ್ರೇಮ್‌..!

Publicspot

ಇಂಧನ ಉಳಿಸುವ ಬಗ್ಗೆ ಬಿಜೆಪಿ ನಾಟಕ.. ಕಾಂಗ್ರೆಸ್ ಕಟು ಟೀಕೆ..

Publicspot

Heavy Rain North India: ವರುಣದ ಆರ್ಭಟಕ್ಕೆ ಉತ್ತರ ಭಾರತ ತತ್ತರ..

Publicspot

ಹುಟ್ಟುಹಬ್ಬದ ನೆಪದಲ್ಲಿ ಸಾಕಷ್ಟು ರಹಸ್ಯ ಬಿಚ್ಚಿಟ್ಟ ನಟಿ ರಚಿತಾ ರಾಮ್​!

Publicspot