The Public Spot
ರಾಜಕೀಯರಾಜ್ಯ

ಅಡ್ಡ ಮತದಾನ ಮಾಡಿದ್ದು ವೈಯಕ್ತಿಕ ಲಾಭಕ್ಕೋ..? ನಾಯಕತ್ವದ ಸೇಡಿಗೋ..?

ಶಾಸಕರು ಲಕ್ಷಾಂತರ ಕಾರ್ಯಕರ್ತರ ತ್ಯಾಗದಿಂದ ಗೆದ್ದಿರುತ್ತೇವೆ. ಅಡ್ಡಮತದಾನ ಮಾಡಿರೋರು ಯಾರು ಎನ್ನೋದು ಗೊತ್ತಾಗುತ್ತದೆ. ಪಕ್ಷ ಶಿಸ್ತಿನ ಕ್ರಮ ಕೈಗೊಳ್ಳುವ ವಿಶ್ವಾಸ ಇದೆ ಎಂದು ಬಿಜೆಪಿ ಶಾಸಕ ಹರೀಶ್​ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಪರಿಷತ್​ ಚುನಾವಣೆಯಿಂದ ನಮ್ಮ ಪಕ್ಷದ ಪರಿಸ್ಥಿತಿ ತೀರಾ ಕೆಳಮಟ್ಟಕ್ಕೆ ಹೋಗಿದೆ. ಇದೀಗ ಈ ಚುನಾವಣೆ ಪಕ್ಷದ ಸುಧಾರಣೆಗೆ ಕಾರಣ ಆಗ್ಬಹುದು, ಪಕ್ಷಕ್ಕೆ ದ್ರೋಹ ಮಾಡಿದವರನ್ನು ದೇವರು ಕ್ಷಮಿಸಲ್ಲ ಎಂದಿದ್ದಾರೆ. ಇನ್ನೂ ನಾಯಕತ್ವದ ಕಾರಕ್ಕಾಗಿ ಅಡ್ಡಮತದಾನ ಮಾಡಿರೋಕೆ ಸಾಧ್ಯವಿಲ್ಲ. ಅಸಮಾಧಾನ ಇರೋದನ್ನು ನೇರವಾಗಿ ಹೇಳ್ತಾರೆ. ಪಕ್ಷಕ್ಕೆ ದ್ರೋಹ ಮಾಡಲ್ಲ. ಇದು ವೈಯಕ್ತಿಕ ಲಾಭಕ್ಕಾಗಿ ಅಡ್ಡ ಮತದಾನ ಮಾಡಿರೋದು ಎಂದಿದ್ದಾರೆ.

ಅಧರ್ಮದಿಂದ ನಡೆದುಕೊಂಡವರಿಗೆ ಖಂಡಿತವಾಗಿಯೂ ಶಿಕ್ಷೆ ಆಗುತ್ತದೆ. ಅಶೋಕ್, ವಿಜಯೇಂದ್ರ ಅವರ ಮೇಲಿನ ಅಸಮಾಧಾನದಿಂದ ಅಡ್ಡಮತದಾನ ಆಗಿಲ್ಲ. ಅಶೋಕ್, ವಿಜಯೇಂದ್ರ ಅವರನ್ನ ಇದಕ್ಕಾಗಿ ಟೀಕೆ ಮಾಡಬಾರದು. ನೂರಕ್ಕೆ ನೂರರಷ್ಟು ಆಮಿಷಕ್ಕೆ ಅಡ್ಡಮತದಾನ ಆಗಿರೋದು. ಯಾರಾದರೂ ಒಬ್ಬರು ಬಾಯಿ ಬಿಡ್ತಾರೆ. ಕಾಂಗ್ರೆಸ್ ನಾಯಕರೇ ಬಾಯಿ ಬಿಡ್ತಾರೆ. ಕಾಂಗ್ರೆಸ್ ಆಡಳಿತ, ಸಿಎಂ ಡಿಕೆಶಿವಕುಮಾರ್ ನಾಯಕತ್ವದ ವಿಚಾರ ಇನ್ನೂ ಸ್ವಲ್ಪ ದಿನದಲ್ಲಿ ಗೋತ್ತಾಗುತ್ತದೆ ಎಂದಿದ್ದಾರೆ. ಇನ್ನೂ ಬಿಜೆಪಿ ಶಾಸಕರು ಅಡ್ಡ ಮತದಾನ ಮಾಡಿರುವ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಮಾತನಾಡಿದ್ದಾರೆ.

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. ಪರಿಷತ್ ಚುನಾವಣೆಯಲ್ಲಿ ಬಹಳ ಸ್ಪಷ್ಟವಾಗಿ ಬಿಜೆಪಿ, ಜೆಡಿಎಸ್​​ನಲ್ಲಿ ನಾಯಕತ್ವ ಕೊರತೆ ಇರೋದು ಗೊತ್ತಾಗ್ತಿದೆ. ಅವರಲ್ಲೇ ನಂಬಿಕೆ ಇಲ್ಲದಂತೆ ಆಗಿದೆ. ಜನರ ಪರ ಯೋಜನೆ ಗ್ಯಾರಂಟಿ ಕೊಟ್ಟಿದ್ದೇವೆ. ಕುಟುಂಬಕ್ಕೆ ಸ್ಥಿರತೆ ಕಾಯ್ದುಕೊಂಡಿದ್ದೇವೆ. ಹೀಗಾಗಿ ನಮಗೆ ಸ್ವಾಭಿಮಾನದ ಮತ ಹಾಕಿದ್ದಾರೆ. ಕೆಲವು ಶಾಸಕರು ಆತ್ಮ ಸಾಕ್ಷಿ ಮತ ನೀಡಿದ್ದಾರೆ. ಯಾವ ಪಕ್ಷದವರು ಟೀಕೆ ಮಾಡುತ್ತಿದ್ದರೋ ಅದೇ ಪಕ್ಷದ ನಾಯಕರ ಮತ ನಮಗೆ ಬಿದ್ದಿದೆ. ಅದಕ್ಕೆ ಉತ್ತರ ಬಿಜೆಪಿ ಜೆಡಿಎಸ್​ನವರು ಕೊಡಬೇಕು. ಬಿಜೆಪಿ, ಜೆಡಿಎಸ್​ನವರಿಗೆ ನೀವು ಇದನ್ನ ಕೇಳಬೇಕು. ಅಶೋಕ್, ವಿಜಯೇಂದ್ರ ಕುಮಾರಸ್ವಾಮಿ ನಾಯಕತ್ವಕ್ಕೆ ಸೋಲಾಗಿದೆ ಎಂದಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಕಾಂಗ್ರೆಸ್​ ಅಭ್ಯರ್ಥಿಗಳಿಗೆ ಇಷ್ಟು ಮತಗಳು ಬರ್ತಾವೆ ಅಂತ ನಿರೀಕ್ಷೆ ಮಾಡಿರಲಿಲ್ಲ. ನಾಲ್ಕೈದು ಆತ್ಮಸಾಕ್ಷಿಯ ಮತಗಳು ಬರ್ತಾವೆ ಎಂಬ ನಿರೀಕ್ಷೆ ಇತ್ತು. ಅವರು ಬಂದ್ರೆ ಅವಕಾಶ ಕಲ್ಪಿಸಬಹುದು. ಅವಕಾಶ ಬಂದಾಗ ಪಕ್ಷ ಸಿದ್ದಾಂತ ಒಪ್ಪಿ ಬಂದ್ರೆ ಸರಿ. ಇದು ಕುದುರೆ ವ್ಯಾಪಾರ ಅಲ್ಲ ಸ್ಟ್ಯಾಟರ್ಜಿ. ದೆಹಲಿ ಮಾಡಲ್ ಕರ್ನಾಟಕದಲ್ಲಿ ಅನುಷ್ಠಾನ ಆಗಿದೆ. ಬಿಜೆಪಿಯಲ್ಲಿ ನಾಯಕತ್ವ ಗೊಂದಲವಿದೆ. ಮೊದಲಿನಿಂದ ಗೊಂದಲವಿದೆ ಎಂದಿರುವ ಸಚಿವ ಸತೀಶ್ ಜಾರಕಿಹೊಳಿ, ಸ್ವಾಭಾವಿಕವಾಗಿ ಜೆಡಿಎಸ್ ಹಾಗೂ ಬಿಜೆಪಿಗೆ ಬೇಜಾರಾಗುತ್ತದೆ. ಪಕ್ಷ ಬಿಟ್ಟು ಹೋದ್ರೆ ಬೇಜಾರಗುತ್ತದೆ. ಬಿಜೆಪಿ ನಾಯಕತ್ವ ಬದಲಾವಣೆ ಅದು ಅವರ ಹೈಕಮಾಂಡ್​ಗೆ ಬಿಟ್ಟ ವಿಚಾರ ಎಂದಿದ್ದಾರೆ.

Related posts

Cabinet List; ಸಂಪುಟ ಪುನಾರಚನೆ ಚರ್ಚೆ.. ದೆಹಲಿಯಲ್ಲಿ ಸಿಎಂ ಕಸರತ್ತು.. ಯಾರು ಔಟ್‌..? ಯಾರು ಇನ್..?

Publicspot

ಕಸ ಗುಡಿಸುವ ವಾಹನ ಖರೀದಿ ಓಕೆ.. ಬಾಡಿಗೆಗೆ ಕೊಡೋದು ಯಾಕೆ..? JDS ಆಕ್ರೋಶ..

Publicspot

ಅಧಿಕಾರ ಹಸ್ತಾಂತರ ಬೆನ್ನಲ್ಲೇ ದಲಿತ ನಾಯಕರ ಒಗ್ಗಟ್ಟು.. ಯಾರು ಏನಂದ್ರು..?

Publicspot

RSS ನೋಂದಣಿ ಮಾಡಿಸುವ ವಿಚಾರ.. ಹೋಂ ಮಿನಿಸ್ಟರ್‌ ಮಾತಿಗೆ ಆಕ್ರೋಶ..

Publicspot

ಈ ವರ್ಷ ಹಿಂದಿಗೆ ಅಂಕಗಳನ್ನೇ ನೀಡಿ.. ಸರ್ಕಾರಕ್ಕೆ ಮುಖಭಂಗ

Publicspot

CAG REPORT; ಜನರಿಗೆ ಗ್ಯಾರಂಟಿ ಕೊಡಲು ಸಾಲ ಮಾಡಿದ್ದಾರೆ ಸಿದ್ದರಾಮಯ್ಯ..!!

Publicspot