September 20, 2026
The Public Spot
ಅಪರಾಧರಾಜ್ಯ

ಪೊಲೀಸರೇ ಕಳ್ಳರಾದಾಗ ನ್ಯಾಯ ಕೇಳೋದು ಯಾರನ್ನು..? ಆಗಿದ್ದೇನು..?

ಬೆಂಗಳೂರಿನಲ್ಲಿ ಸಿಐಡಿ ಪೊಲೀಸ್ ಜೀಪ್‌ನಲ್ಲಿ ಬಂದು ರಾಬರಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್ ಐಡಿ ಕಾರ್ಡ್ ತೋರಿಸಿ ಕೇರಳ ಮೂಲದ ಯುವಕರಿಂದ 20 ಲಕ್ಷ ರಾಬರಿ ಮಾಡಲಾಗಿದೆ. ಮಡಿವಾಳದ ಖಾಸಗಿ ಹೋಟೆಲ್ ಬಳಿ ರಾಬರಿ ನಡೆದಿದೆ. ಮನಿ ಟ್ರೇಡಿಂಗ್ ಮಾಡುವ ಉದ್ದೇಶದಿಂದ ಹಣ ತಂದಿದ್ದೀರಾ ಅಂತ ಖಾಸಗಿ ವ್ಯಕ್ತಿಗಳಿಂದ ಧಮ್ಕಿ ಹಾಕಿಸಿದ ನಂತರ ನಾವು ಪೊಲೀಸರು ಅಂತ ಪೊಲೀಸ್ ಐಡಿ ಕಾರ್ಡ್ ತೋರಿಸಿ ಹಣ ರಾಬರಿ ಮಾಡಿದ್ದಾರೆ.

ಪೊಲೀಸರೆಂದು ಹಣ ಕೊಟ್ಟ ಕೇರಳ ಮೂಲದ ಯುವಕರು ನಂತರ ಮಡಿವಾಳ ಠಾಣೆಗೆ ದೂರು ನೀಡಿದ್ದರು. ಸಿಐಡಿಗೆ ಸೇರಿದ್ದ ಅಸಲಿ ಪೊಲೀಸ್ ಜೀಪ್​ನಲ್ಲೇ ಬಂದು ಹಣ ಪಡೆದು ಹೋಗಿದ್ದಾರೆ ಖಾಸಗಿ ವ್ಯಕ್ತಿಗಳು. ಆದರೆ ಈ ವೇಳೆ ಹಣ ಕೊಟ್ಟವರು ವಿಡಿಯೋ ಮಾಡ್ಕೊಂಡಿದ್ದಾರೆ. ಕೇಸ್ ದಾಖಲಿಸಿದ ಬಳಿಕ ಡಿಸಿಪಿ ಮೊಹಮ್ಮದ್ ಸಜೀತ ಟೀಂ ತನಿಖೆ ನಡೆಸಿದ್ದು, ಹಣ ರಾಬರಿ ಮಾಡಿದ್ದ ಓರ್ವ ಖಾಸಗಿ ವ್ಯಕ್ತಿ ಬಂಧನ ಮಾಡಲಾಗಿದೆ. ಆದರೆ ಈ ರಾಬರಿ ವೇಳೆ ಸಿಐಡಿ ಇನ್ಸ್​ಪೆಕ್ಟರ್ ಸಹ ಜೀಪ್​ನಲ್ಲಿದ್ರು. ನಾವು ಮಾತ್ರ ಹೋಟೆಲ್​ಗೆ ಹೋಗಿ ಹಣ ಪಡೆದು ಬಂದೆವು ಎಂದು ಬಾಯ್ಬಿಟ್ಟಿದ್ದಾನೆ. ಇದೀಗ ಸಿಐಡಿ ಇನ್ಸ್​ಪೆಕ್ಟರ್​ಗೆ ಸೇರಿದ ಪೊಲೀಸ್ ಜೀಪ್ ಸೀಜ್ ಮಾಡಲಾಗಿದೆ. ಪ್ರಕರಣ ದಾಖಲಾಗ್ತಿದ್ದಂತೆ ಪೋನ್ ಸ್ವಿಚ್ ಆಫ್ ಮಾಡಿ ಇನ್ಸ್​ಪೆಕ್ಟರ್ ಎಸ್ಕೇಪ್ ಆಗಿದ್ದಾರೆ.

ಪೊಲೀಸ್ ಇನ್ಸ್‌ಪೆಕ್ಟರ್​ರಿಂದ 20 ಲಕ್ಷ ಹಣ ದರೋಡೆ ಆರೋಪದ ಬಗ್ಗೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಮಾತನಾಡಿದ್ದು, ನಿನ್ನೆ ತಡರಾತ್ರಿ ಮಡಿವಾಳ ಪೊಲೀಸ್ ಠಾಣೆಗೆ ದೂರು ಬಂದಿದೆ. ಇಬ್ಬರು ವ್ಯಕ್ತಿಗಳು ಹೋಟೆಲ್​ನಲ್ಲಿ ಹಣ ಇಟ್ಟುಕೊಂಡು ಇದ್ರು‌‌. ಪೊಲೀಸರು ಅಂತ ಹೇಳಿ ಹೋಟೆಲ್ ಒಳಗೆ ನುಗ್ಗಿದ್ರು. ಹಣವನ್ನು ಇನ್ಸ್‌ಪೆಕ್ಟರ್ ತೆಗೆದುಕೊಂಡು ಹೋಗಿದ್ರು. ಈ ಬಗ್ಗೆ ದೂರುದಾರರು ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ರು. ಇನ್ಸ್‌ಪೆಕ್ಟರ್ ಒಬ್ಬರ ಪಾತ್ರ ಇರುವ ಬಗ್ಗೆ ಮಾಹಿತಿ ಬಂದಿದೆ. ಅದರ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಹಣವನ್ನು ರಿಕವರಿ ಮಾಡಲಾಗಿದೆ ಎಂದಿದ್ದಾರೆ.

ಇನ್ನೂ ರಾಬರಿಗೆ ಬಳಸಿದ್ದ ಪೊಲೀಸ್ ಇಲಾಖೆಯ ವಾಹನವನ್ನೂ ವಶಕ್ಕೆ ಪಡೆಯಲಾಗಿದೆ. ದೂರುದಾರರ ಹಿನ್ನಲೆಯನ್ನ ಸಹ ಪರಿಶೀಲನೆ ಮಾಡಲಾಗುತ್ತಿದೆ. ಸದ್ಯ ಇನ್ಸ್‌ಪೆಕ್ಟರ್ ಪರಾರಿಯಾಗಿದ್ದಾರೆ. ಅವರಿಗೆ ಹುಡುಕಾಟ ನಡೆಸಲಾಗುತ್ತಿದೆ ಎಂದಿದ್ದಾರೆ ಕಮಿಷನರ್​. ಕೇರಳ ಮೂಲದ ಇಬ್ಬರು ಯುವರನ್ನ ಎನ್​ಡಿಪಿಎಸ್ ಕೇಸ್​ನಲ್ಲಿ ಬಂಧನ ಮಾಡೋದಾಗಿ ಬೆದರಿಕೆ ಹಾಕಿ ಹಣ ವಸೂಲಿ ಮಾಡಿರುವ ಆರೋಪ ಕೇಳಿ ಬಂದಿದೆ. ಪೊಲೀಸ್ ಜೀಪ್​ನಲ್ಲೇ ಬಂದು ಹಣ ರಾಬರಿ ಮಾಡಿದ್ದಾರೆ ಎಂದರೆ ರಾಜ್ಯದಲ್ಲಿ ಸರ್ಕಾರದ ಆಡಳಿತ ಯಾವ ಮಟ್ಟದಲ್ಲಿ ಇದೆ ಎನ್ನುವುದನ್ನು ಊಹೆ ಮಾಡಿಕೊಳ್ಳಬೇಕಿದೆ.

Related posts

CAG REPORT; ಜನರಿಗೆ ಗ್ಯಾರಂಟಿ ಕೊಡಲು ಸಾಲ ಮಾಡಿದ್ದಾರೆ ಸಿದ್ದರಾಮಯ್ಯ..!!

Publicspot

ಹೈಕೋರ್ಟ್‌ ಆದೇಶಕ್ಕೆ ಮಣಿದ ಸರ್ಕಾರ.. ನಾಳೆಯೇ SSLC ರಿಸಲ್ಟ್‌

Publicspot

ಕರ್ನಾಟಕ ಸೇರಿದಂತೆ 6 ರಾಜ್ಯಗಳಲ್ಲಿ S I R ಶುರು.. ಢವಢವ ಶುರು..

Publicspot

ಕುರುಬರಿಗೆ ಎಸ್ಟಿ ಮೀಸಲಾತಿ ಕೇಂದ್ರ ವಾಪಸ್‌ ಕಳುಹಿಸಿದೆ.. ನಾನು ಮತ್ತೆ ಕಳುಹಿಸುತ್ತೇನೆ..

Publicspot

ಪ್ರೀತಿ ಮಾಡು.. ಇಲ್ಲದಿದ್ರೆ ನೋಡು.. ಇದು ಪ್ರೇಮಿಗಳ ದಿನದ ವಿಶೇಷ..

Publicspot

ನಾಳೆ ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆ ಆಗುತ್ತಾ..? ಇಲ್ವಾ..? ಕಾಂಗ್ರೆಸ್‌-ಬಿಜೆಪಿ ಇಬ್ಬರಿಗೂ ಮನಸ್ಸಿಲ್ವಾ..?

Publicspot