The Public Spot
ರಾಜ್ಯ

PUC ಫಲಿತಾಂಶ ನಾಳೆ ಪ್ರಕಟ.. ಶಿಕ್ಷಣ ಸಚಿವರ ಪ್ರಚಾರಕ್ಕೆ ತಡವಾಯ್ತು..

ಮಂಗಳವಾರ ಪಿಯುಸಿ ಫಲಿತಾಂಶ ಪ್ರಕಟ ಆಗಬೇಕಿತ್ತು. ಆದರೆ ಚುನಾವಣಾ ನೀತಿ ಸಂಹಿತೆ ಕಾರಣಕ್ಕೆ ಸಚಿವರು ಫಲಿತಾಂಶ ಪ್ರಕಟಿಸುವ ಸುದ್ದಿಗೋಷ್ಟಿಯಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಅನ್ನೋ ಕಾರಣಕ್ಕೆ ಫಲಿತಾಂಶವನ್ನೇ ಮುಂದೂಡುವ ಪ್ರಯತ್ನ ಮಾಡಿತು ಸರ್ಕಾರ. ಹೀಗಾಗಿ ಫಲಿತಾಂಶಕ್ಕಾಗಿ ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ಹೃದಯ ಬಡಿತ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ದ್ವಿತೀಯ ಪಿಯು ಫಲಿತಾಂಶ ಚುನಾವಣಾ ದಿನವಾದ ನಾಳೆಯೇ ಪ್ರಕಟವಾಗಲಿದೆ. ಏಪ್ರಿಲ್ 9 ರಂದು ದ್ವಿತೀಯ ಪಿಯು ಫಲಿತಾಂಶ ಪ್ರಕಟ ಮಾಡಲಿದ್ದೇವೆ ಎಂದು ಕರ್ನಾಟಕ ಶಾಲಾ ಪರೀಕ್ಷಾ ಮೌಲ್ಯ ನಿರ್ಣಯ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಫೆಬ್ರವರಿ 28ರಿಂದ ಮಾಚ್೯ 17ವರೆಗೂ ನಡೆದಿದ್ದ PUC ಪರೀಕ್ಷೆಯಲ್ಲಿ ಒಟ್ಟು 7 ಲಕ್ಷದ 10 ಸಾವಿರದ 363 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. 1,217 ಪರೀಕ್ಷಾ ಕೇಂದ್ರದಲ್ಲಿ ದ್ವಿತೀಯ ಪಿಯು ಪರೀಕ್ಷೆ ನಡೆದಿತ್ತು. ದ್ವಿತೀಯ ಪರೀಕ್ಷೆ ಫಲಿತಾಂಶವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ ಮಾಡಲಿದ್ದಾರೆ.

ಫಲಿತಾಂಶವನ್ನು ಆನ್​ಲೈನ್​ನಲ್ಲಿ ನೋಡುವುಕ್ಕೆ ಸರ್ಕಾರದ ಅಧಿಕೃತ ವೆಬ್‌ಸೈಟ್ www.karresults.nic.in ಗೆ ಭೇಟಿ ನೀಡಿ, Karnataka 2nd PUC Result 2026 ಲಿಂಕ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ರಿಜಿಸ್ಟ್ರೇಷನ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ. Submit ಬಟನ್ ಒತ್ತಿದ ತಕ್ಷಣ ನಿಮ್ಮ ಅಂಕಪಟ್ಟಿಯ ಪರದೆ ಓಪನ್ ಆಗಲಿದೆ. 2nd PUC ಫಲಿತಾಂಶ ಪ್ರಕಟ ಆಗುತ್ತಿದ್ದಂತೆ, ಅತ್ತ ವೆಬ್​ಸೈಟ್​ಗಳಲ್ಲಿ ಫಲಿತಾಂಶ ಪ್ರಕಟ ಆಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.

ಸಚಿವರು ಬಂದೇ ಫಲಿತಾಂಶ ಬಿಡುಗಡೆ ಮಾಡಬೇಕು ಅನ್ನೋ ನಿಯಮವೇನು ಇಲ್ಲ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಸರಿಯಾದ ಪೂರ್ವ ತಯಾರಿ ಇಲ್ಲದೆ ಮಾಧ್ಯಮಗಳ ಎದುರು ಬಂದು ತಡಬಡಾಯಿಸುವುದರಿಂದ ಸರ್ಕಾರಕ್ಕೇನು ಅಂತಹ ಲಾಭ ಆಗಲಿದೆ ಅನ್ನೋದು ಕೂಡ ಸುಳ್ಳು. ಆದರೆ ಶಿಕ್ಷಣ ಸಚಿವರಿಗೆ ಇದು ಒಂದು ರೀತಿಯ ಪ್ರತಿಷ್ಠೆಯ ವಿಚಾರ. ನನ್ನ ಅವಧಿಯಲ್ಲಿ ಇಷ್ಟು ಫಲಿತಾಂಶ ಬಂದಿತ್ತು. ಅದರಲ್ಲಿ ಸರ್ಕಾರದ್ದು ಇಷ್ಟು, ಖಾಸಗಿ ಅವರದ್ದು ಇಷ್ಟು ಎಂದು ಮಾಧ್ಯಮಗಳ ಎದುರು ಹೇಳಿಕೆ ಕೊಡುವುದಕ್ಕಷ್ಟೇ ಸೀಮಿತ ಆಗಿರಲಿದೆ. ಆದರೂ ವಿದ್ಯಾರ್ಥಿಗಳ ಎದೆಯಲ್ಲಿ ಢವಢವ ಹೆಚ್ಚಾಗಿರುವುದಂತೂ ಸತ್ಯ.

Related posts

ಜಾತಿ ಜನಗಣತಿ ಆರಂಭ.. ಇವತ್ತು ಹೈಕೋರ್ಟ್‌ನಲ್ಲಿ ಸಿಗುತ್ತಾ ಮಧ್ಯಂತರ ತಡೆ..?

Publicspot

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆಸಿದ ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು:

admin

PU, SSLC ಪರೀಕ್ಷೆಗೆ ಸಿದ್ಧತೆ ಇರಲಿ, ಭಯ ಬೇಡ.. ಪತ್ರಿಕೆ ಲೀಕ್‌ ಆಗುವ ಭಯ ಬೇಡ..

Publicspot

ರಾಜ್ಯದಲ್ಲಿ ವರುಣಾರ್ಭಟ ಹೆಚ್ಚಾಗುತ್ತೆ.. ಅಪಾಯವೂ ಕಾದಿದೆ..

Publicspot

17.50 ಲಕ್ಷ ಜನರ ಆರೋಗ್ಯ ಖಾತ್ರಿಪಡಿಸುವ ಶುದ್ಧ ಕುಡಿಯುವ ನೀರಿನ ಯೋಜನೆ ಉದ್ಘಾಟಿಸಿದ ಸಿಎಂ

admin

ರಾಜ್ಯದಲ್ಲಿ ಬೇಸಿಗೆ ಮಳೆ.. ಸಿಡಿಲಬ್ಬರಕ್ಕೆ ಜೀವ ಬಲಿ, ಮರ, ವಿಂಡ್‌ ಫ್ಯಾನ್‌‌ ಭಸ್ಮ..

Publicspot