The Public Spot
ಅಪರಾಧ

ಕೊಲೆ ಕೇಸ್​ನಲ್ಲಿ ಸಾಕ್ಷಿ ಉಲ್ಟಾ.. ನನಗೇನು ಗೊತ್ತಿಲ್ಲ.. ಈಗ ಏನಾಗುತ್ತೆ..?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಜೈಲು ಸೇರಿದ್ದು, ವಿಚಾರಣೆ ನಡೆಯುತ್ತಿದೆ. ದರ್ಶನ್ ಜೊತೆಗೆ ಆರೋಪಿ ಆಗಿದ್ದ ಪಙ್ರದೋಶ್​ ರಾವ್​ ಇದೀಗ ದರ್ಶನ್​ ಹಾಗೂ ಇತರೆ ಆರೋಪಿಗಳ​ ವಿರುದ್ಧ ಮಾಫಿ ಸಾಕ್ಷಿ ಆಗಿದ್ದಾರೆ. ಆದರೆ ಇದರಿಂದ ಸಂಕಷ್ಟ ಖಚಿತ ಅನ್ನೋ ಮಾತುಗಳು ಕೇಲಿಬಂದಿದ್ದವು. ಕೋರ್ಟ್​ ಎದುರು ಅಂದು ಏನೆಲ್ಲಾ ನಡೆದಿತ್ತು ಅನ್ನೋದನ್ನು ಪ್ರದೋಶ್​ ರಾವ್​ ಕೂಡ ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಪ್ರದೋಶ್​ ರಾವ್​ ಹೇಳಿಕೆ ನೋಡಿದವರು ಮರಣದಂಡನೆ ತಪ್ಪಿದರೂ ಜೀವಾವಧಿ ಜೈಲುಶಿಕ್ಷೆ ತಪ್ಪಿದ್ದಲ್ಲ ಅನ್ನೋ ಮಾತನ್ನು ಹೇಳುತ್ತಿದ್ದರು. ಆದರೆ ಇದೀಗ ಕೋರ್ಟ್​ನಲ್ಲಿ ನಡೆದಿರುವ ಸಾಕ್ಷಿ ಹೇಳಿಕೆ ದರ್ಶನ್​ ಪಾಲಿಗೆ ನೆಮ್ಮದಿ ಮೂಡಿಸಿದೆ ಎನ್ನಲಾಗ್ತಿದೆ.

59ನೇ ಸಿಸಿಹೆಚ್ ಸೆಷನ್ಸ್​ ಕೋರ್ಟ್​ಗೆ ಸಾಕ್ಷಿ ಹೇಳಲು ಕೋರ್ಟ್​ಗೆ ಹಾಜರಾಗಿದ್ದ ಐ ವಿಟ್ನೇಸ್ ಪುನೀತ್, ಉಲ್ಟಾ ಹೊಡೆದಿದ್ದಾರೆ. ಮಂಗಳವಾರ ಕೋರ್ಟ್​ಗೆ ಹಾಜರಾಗಬೇಕಿದ್ದ ಪುನೀತ್​ ಕೋರ್ಟ್​ಗೆ ಬಂದಿರಲಿಲ್ಲ. ಆಗ ಕೋರ್ಟ್​ ಜಾಮೀನು ರಹಿತ ವಾರೆಂಟ್​ ಹೊರಡಿಸಿತ್ತು. ಹೀಗಾಗಿ ನಿನ್ನೆ ಕೋರ್ಟ್​ ಎದುರು ಹಾಜರಾದ ಪುನೀತ್, ಪೊಲೀಸರ ಎದುರು ನೀಡಿದ್ದ ಹೇಳಿಕೆಗೆ ತದ್ವಿರುದ್ಧವಾಗಿ ಹೇಳಿದ್ದಾರೆ. ವಿಚಾರಣೆಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ದರ್ಶನ್ ಹಾಗೂ ಪವಿತ್ರಾಗೌಡ ಸೇರಿದಂತೆ ಇತರೆ ಆರೋಪಿಗಳು ಹಾಜರು ಆಗಿದ್ದರು. ಉಳಿದ ಆರೋಪಿಗಳು ಖುದ್ದು ಕೋರ್ಟ್​ಗೆ ಹಾಜರು ಆಗಿದ್ದರು.

ಎಸ್​ಪಿಪಿ ಪ್ರಸನ್ನ ಕುಮಾರ್ ಐ ವಿಟ್ನೆಸ್ ಪುನೀತ್​ಗೆ ಪ್ರಶ್ನೆ ಮಾಡಿದ್ದು, ಪ್ರಮಾಣ ಮಾಡಿ ಸಾಕ್ಷಿ ಹೇಳಿಕೆ ಆರಂಭಿಸಿದ ಪುನೀತ್, ತನ್ನ ಹೇಳಿಕೆಯಿಂದ ಯೂಟರ್ನ್​ ಹೊಡೆದಿದ್ದರಿಂದ ಪ್ರತಿಕೂಲ ಸಾಕ್ಷಿಯಾಗಿ ಪರಿಗಣಿಸಲು ಎಸ್​ಪಿಪಿ ಮನವಿ ಮಾಡಿದ್ರು. ಪೂರ್ಣ ಪ್ರಮಾಣದ ಹಾಸ್ಟೈಲ್ ವಿಟ್ನೆಸ್ ಆಗಿ ಪರಿಗಣಿಸಲು ಮನವಿ ಮಾಡಿದ್ರು. ಪ್ರಕರಣದಲ್ಲಿ ಮೂರನೇ ‌ಸಾಕ್ಷಿಯನ್ನ ಹಾಸ್ಟೈಲ್ ವಿಟ್ನೆಸ್ ಆಗಿ ಪರಿಗಣಿಸಲು ಎಸ್​ಪಿಪಿ ಪ್ರಸನ್ನ ಕುಮಾರ್​ ಮನವಿ ಮಾಡಿದ್ರು. ರೇಣುಕಾಸ್ವಾಮಿ ಕೊಲೆ ನಡೆದ ದಿನ, ನಾನು ಅಲ್ಲಿಗೆ ಹೋಗಿಲ್ಲ ಎಂದಿದ್ದು, ಕೊಲೆ ಆರೋಪಿಗಳನ್ನ ಗುರುತಿಸುವಲ್ಲಿ ಸಾಕ್ಷಿ ವಿಫಲರಾಗಿದ್ದಾರೆ. ನಾನು ಯಾರನ್ನೂ, ಎಲ್ಲಿಯೂ ನೋಡಿಲ್ಲ ಎಂದಿದ್ದಾರೆ.

ನಟ ದರ್ಶನ್, ಪವಿತ್ರಾಗೌಡ ಸೇರಿದಂತೆ ಯಾರನ್ನೂ ನಾನು ನೋಡಿಲ್ಲ ಎಂದು ಪುನೀತ್ ಉಲ್ಟಾ ಹೊಡೆದಿರಬಹುದು. ಆದರೆ ಪ್ರತಿಕೂಲ ಸಾಕ್ಷಿ ಎಂದು ಕೋರ್ಟ್​ ಪರಿಗಣಿಸಿದರೆ, ಅವರ ಹೇಳಿಕೆಯನ್ನು ಸಂಪೂರ್ಣವಾಗಿ ನಂಬುವುದಿಲ್ಲ. ಇನ್ನು ಹಾಸ್ಟೈಲ್​ ವಿಟ್ನೆಸ್​ ಆದವರನ್ನು ಮತ್ತೊಮ್ಮೆ ಕ್ರಾಸ್​ ಎಕ್ಸಾಮಿನೇಷನ್​ ಕೂಡ ಮಾಡಲಾಗುತ್ತದೆ. ಒಂದು ವೇಳೆ ಉದ್ದೇಶ ಪೂರ್ವಕವಾಗಿ ಸುಳ್ಳು ಹೇಳುತ್ತಿದ್ದಾರೆ ಅನ್ನೋದು ಖಚಿತ ಆದರೆ, ಸಾಕ್ಷಿ ಆದವರನ್ನೇ ಜೈಲಿಗೆ ಕಳುಹಿಸುವ ಸಾಧ್ಯತೆಯೂ ಇರುತ್ತದೆ. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಈಗಾಗಲೇ ಸಾಕಷ್ಟು ಸಾಕ್ಷಿಗಳು ಇರೋದ್ರಿಂದ ದರ್ಶನ್​ಗೆ ಪೂರ್ಣ ಪ್ರಮಾಣದ ಲಾಭ ಸಿಗುತ್ತಾ ಅಂದ್ರೆ ಇಲ್ಲ ಅನ್ನೋದೇ ಅಂತಿಮ ಉತ್ತರ.

Related posts

ACTOR AJAY RAO MARRIAGE STORY: ಕಷ್ಣನ ಲವ್‌ ಸ್ಟೋರಿಯಲ್ಲ.. ಸಂಸಾರ ಬಿರುಕು..

Publicspot

husband Suicide : ಗಂಡನ ಮನೆ ಬಿಟ್ಟ ಹೆಂಡತಿ ತವರು ಸೇರಿದ್ಲು.. ನದಿಗೆ ಹಾರಿದ ಗಂಡ..

Publicspot

ಬೆಂಗಳೂರಿನಲ್ಲಿ ಶೂಟೌಟ್​.. ವಕೀಲ ಮಂಜುನಾಥ್​ ಹತ್ಯೆ

Publicspot

RAMYA REACTION: ನಟ ದರ್ಶನ್​ ಜೈಲಿಗೆ ಹೋಗಿದ್ದಕ್ಕೆ ರಮ್ಯಾ ಬೇಸರ.. ಟ್ರೋಲರ್ಸ್​ ಭೀತಿನಾ..?

Publicspot

ಹೆಣ್ಣು ಮಗು ಬಲಿ; ಏಳು ವರ್ಷದ ಮಗುವನ್ನು ಕೊಂದೇ ಬಿಟ್ಟಳು ಮಲತಾಯಿ.. ಕಾರಣ ಗೊತ್ತಾ..?

Publicspot

Love Death; ಬೆಲೆ ಕಳೆದುಕೊಂಡ ಪ್ರೀತಿ.. ಗರ್ಭಿಣಿ ಆದ ಯುವತಿಗೆ ಕೈಕೊಟ್ಟ ಪ್ರೇಮಿ..!

Publicspot