The Public Spot
ರಾಜ್ಯ

RSS ನೋಂದಣಿ ಮಾಡಿಸಿ, ಅನುಮತಿ ಕೊಡಲ್ಲ ಅಂತಿದ್ರು.. ಈಗ..?

ರಾಜ್ಯದಲ್ಲಿ ಡಿ.ಕೆ ಶಿವಕುಮಾರ್​ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪ್ರಿಯಾಂಕ್​ ಖರ್ಗೆ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ಆ ನಂತರ ದಿನನಿತ್ಯ ಆರ್​ಎಸ್​ಎಸ್​ ಬಗ್ಗೆ ಮಾತನಾಡುತ್ತ, ಒಂದು ವರ್ಗದ ಜನರನ್ನು ಓಲೈಸಿಕೊಳ್ಳುವ ಪ್ರಯತ್ನ ಮಾಡಿದರು. ಕೆಲವರು RSS ನೋಂದಣಿ ಅಗತ್ಯವಿಲ್ಲ ಎಂದು ವಾದಿಸಿದರೆ, ಇನ್ನೂ ಕೆಲವರು RSS ನೋಂದಣಿ ಮಾಡಿಸಬೇಕು. ದಌಏಶದ ಕಾನೂನು ರೀತಿ ನಡೆದುಕೊಳ್ಳಬೇಕು ಎಂದು ವಕಾಲತ್ತು ವಹಿಸಿದ್ದರು. ಈ ಬಾರಿ ಪಥಸಂಚಲನಕ್ಕೆ ಅವಕಾಶ ಕೊಡಲ್ಲ, ಪೊಲೀಸರು RSS ನಾಯಕರ ಮನೆಯ ಆಳುಗಳಲ್ಲ ಅಂತಾನೂ ಪ್ರಿಯಾಂಕ್​ ಖರ್ಗೆ ಮಾತನಾಡಿದರು. RSS ಕಾನೂನು ಬದ್ಧ ಸಂಸ್ಥೆ ಅಲ್ಲ ಅಂದ್ಮೇಲೆ ಈಗ ಅನುಮತಿ ಹೇಗೆ ಕೊಡ್ತಿದ್ದಾರೆ..? ಕೇವಲ ರಾಜಕೀಯಕ್ಕಾಗಿ RSS ಬಗ್ಗೆ ಮಾತನಾಡಿದ್ರಾ..? ಹೋಂ ಮಿನಿಸ್ಟರ್​..? ಅನ್ನೋ ಅನುಮಾನ ಮೂಡುತ್ತಿದೆ.

ಸಚಿವ ಪ್ರಿಯಾಂಕ ಖರ್ಗೆ ತವರು ಜಿಲ್ಲೆಯಲ್ಲಿ RSS ಪಥ ಸಂಚಲನಕ್ಕೆ ಅನುಮತಿ ಕೊಡಲಾಗಿದೆ. ಇಂದು ಆಯೋಜನೆ ಆಗಿರುವ RSS ಪಥ ಸಂಚಲನಕ್ಕೆ ಪೊಲೀಸ್ ಇಲಾಖೆ ಷರತ್ತು ಬದ್ಧ ಅನುಮತಿ ನೀಡಿದೆ. ಆರ್ ಎಸ್ ಎಸ್ ಮುಖಂಡರು ನೀಡಿದ ಮನವಿ ಪತ್ರ ಆಧರಿಸಿ ಉಪ ಪೊಲೀಸ್ ಕಮಿಷನರ್ ಅನುಮತಿ ನೀಡಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಯಿಂದ ನಗರದ ಎಪಿಎಂಸಿ ಬಳಿಯಿಂದ RSS ಪಥ ಸಂಚಲನ ಶುರುವಾಗಲಿದೆ. ಮಿಜಗುರಿ ಕ್ರಾಸ್, ಚಡ್ಡಿ ಹೋಟೆಲ್, ಗಣೇಶ ಮಂದಿರ, ಜಗತ್ ಸರ್ಕಲ್ ಮಾರ್ಗವಾಗಿ ಶರಣಬಸವೇಶ್ವರರ ಜಾತ್ರಾ ಮೈದಾನದವರೆಗೆ ಪಥ ಸಂಚಲನ ನಡೆಯಲಿದೆ. ವಿಜಯ ದಶಮಿ ಅಂಗವಾಗಿ RSS ನಡೆಸುತ್ತಿರುವ ಪಥ ಸಂಚಲನಕ್ಕೆ ಅನುಮತಿ ಸಿಕ್ಕಿದ್ದು, ಸಾವಿರಕ್ಕೂ ಹೆಚ್ಚು ಗಣ ವೇಷಧಾರಿಗಳು ಭಾಗಿಯಾಗಲಿದ್ದಾರೆ. ಗಣವೇಷಧಾರಿಗಳು ಮಾತ್ರವಲ್ಲದೇ ಸಾವಿರಾರು ಜನರು ಸಹ ಭಾಗಿಯಾಗುವ ಸಾಧ್ಯತೆ ಇದೆ.

ಪ್ರಚೋದನಕಾರಿ ಬ್ಯಾನರ್ ಅಳವಡಿಸದಂತೆ ಎಚ್ಚರಿಕೆ ವಹಿಸಬೇಕು, ಜನ ಸಂದಣಿ ನಿಯಂತ್ರಣಕ್ಕೆ ಸ್ವಯಂ ಸೇವಕರ ನಿಯೋಜನೆ ಮಾಡಿಕೊಳ್ಳಬೇಕು, ಅಶ್ಲಿಲ ಭಾಷೆ, ಅಶ್ಲೀಲ ಹಾಡು, ಅಶ್ಲೀಲ ನೃತ್ಯ ಇಲ್ಲದಂತೆ ನೋಡಿಕೊಳ್ಳಬೇಕು ಎನ್ನುವುದು ಸೇರಿ 18 ಷರತ್ತುಗಳನ್ನು ಪೊಲೀಸ್ ಇಲಾಖೆ ವಿಧಿಸಿದೆ. RSS ಇದ್ಯಾವುದನ್ನೂ ಮಾಡೋದಿಲ್ಲ ಅನ್ನೋದು ಕೂಡ ಪೊಲೀಸ್​ ಇಲಾಖೆಗೂ ಗೊತ್ತಿದೆ. ಇನ್ನು ಮೈಸೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಜಯದಶಮಿ ಪಥಸಂಚಲನ ನಡೆದಿದೆ. ನಿನ್ನೆ ಶ್ರೀ ಗುಂಜಾನರಸಿಂಹ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಪಥಸಂಚಲನ ಆರಂಭವಾಗಿ, ಶ್ರೀ ಮಹದೇಶ್ವರ ಭವನ, ನಂಜನಗೂಡು ರಸ್ತೆಯಲ್ಲಿ ಕಾರ್ಯಕ್ರಮ ನಡೆದಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲೂ ಅಂದರೆ ಸ್ವತಃ ಸಿಎಂ ಡಿ.ಕೆ ಶಿವಕುಮಾರ್​ ಅವರ ಜಿಲ್ಲೆಯಲ್ಲೂ RSS ಪಥಸಂಚಲನಕ್ಕೆ ಮುಹೂರ್ತ ನಿಗದಿಯಾಗಿದೆ. ಚನ್ನಪಟ್ಟಣ, ರಾಮನಗರ, ಕನಕಪುರದಲ್ಲಿ ಇಂದು ಪಥಸಂಚಲನ ನಡೆಯಲಿದೆ. ಬೆಳಗ್ಗೆ 9ಕ್ಕೆ ರಾಮನಗರ, ಬೆಳಗ್ಗೆ 10ಕ್ಕೆ ಕನಕಪುರ ಹಾಗೂ ಸಂಜೆ 4ಕ್ಕೆ ಚನ್ನಪಟ್ಟಣದಲ್ಲಿ ಪಥಸಂಚಲನ ಆಯೋಜನೆ ಮಾಡಲಾಗಿದೆ. ಮೂರು ತಾಲೂಕಿನಲ್ಲೂ ಪೊಲೀಸರಿಂದ ಅನುಮತಿ ಸಿಕ್ಕಿದೆ. ಸರ್ಕಾರದ ಷರತ್ತುಗಳ ಅನ್ವಯ ಅನುಮತಿ ಪಡೆದು ಕಾರ್ಯಕ್ರಮ ಮಾಡಲಾಗ್ತಿದೆ. ಅನುಮತಿ ಪಡೆದು ಪಥಸಂಚಲನಕ್ಕೆ RSS ಮುಖಂಡರು ಪಥಸಂಚಲನಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಕೋಲಾರದಲ್ಲಿ ನಿಗದಿಯಾಗಿದ್ದ RSS ಪಥಸಂಚಲನ ಮುಂದೂಡಿಕೆ ಮಾಡಲಾಗಿದೆ. RSS ಪಥಸಂಚಲನಕ್ಕೆ ನೀಡಿದ್ದ ಅನುಮತಿ ವಾಪಸ್ ಪಡೆದಿದ್ದಾರೆ ಕೋಲಾರ ತಹಶೀಲ್ದಾರ್. ವಿಧಾನ ಪರಿಷತ್ ಚುನಾವಣೆ ಹಿನ್ನಲೆ ನೀತಿ ಸಂಹಿತೆ ಜಾರಿಯಲ್ಲಿದೆ. ನೀತಿಸಂಹಿತೆ ಮುಕ್ತಾಯ ನಂತರ ಪಥಸಂಚಲನ ನಡೆಸಲು ಡಿಸಿ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಜಿಲ್ಲಾಧಿಕಾರಿ MR ರವಿ ಕುಮಾರ್ ಸೂಚನೆಯಂತೆ ಅನುಮತಿ ವಾಪಸ್ ಪಡೆದಿದ್ದಾರೆ ತಹಶೀಲ್ದಾರ್ ಶ್ರೀನಿವಾಸ್. ಪಥಸಂಚಲನ ನಡೆಸದಂತೆ RSSಗೆ ಪೊಲೀಸರು ಸೂಚಿಸಿದ್ದು, ಜಿಲ್ಲಾಡಳಿತ ಸೂಚನೆಯಂತೆ ಪಥಸಂಚಲನ ಮುಂದೂಡಿಕೆ ಮಾಡಲಾಗಿದೆ.

ಈಗ RSS ಸಂಘಟನೆ ದೇಶದಲ್ಲಿ ಕಾನೂನು ಬದ್ಧವಾಗಿ ಇದ್ಯಾ..? ಅಥವಾ ಕಾನೂನು ಬಾಹಿರವಾಗಿ ಇರುವ ಸಂಘಟನೆಗೆ ಸರ್ಕಾರ ಅನುಮತಿ ನೀಡುತ್ತಿದ್ಯಾ..? ಈ ಬಗ್ಗೆ ಸ್ವತಃ ಗೃಹ ಸಚಿವರೇ ಸ್ಪಷ್ಟನೆ ಕೊಡಬೇಕಿದೆ. ನೋಂದಣಿ ಆಗದೆ ಇರುವ ಸಂಸ್ಥೆಗೆ ಪೊಲೀಸರು ಭದ್ರತೆ ಕೊಡಬೇಕು ಅಂದ್ರೆ ಹೇಗೆ ಸಾಧ್ಯ..? ಯಾವ ಕಾನೂನು ಆಧಾರದಲ್ಲಿ ಅನುಮತಿ ಕೊಡುತ್ತಿದ್ದಾರೆ..? ಅಲ್ಲವೇ..?

Related posts

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆಸಿದ ಎತ್ತಿನಹೊಳೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು:

admin

BJP Protest Against Potholes; ರಸ್ತೆ ಗುಂಡಿ ಮುಚ್ಚದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ..

Publicspot

Farmers Protest: ರೈತರಿಗೆ ಧಿಕ್ಕಾರ ಕೂಗಲು ಅಷ್ಟೇ ಸಾಧ್ಯ.. ಏನ್​ ಮಾಡ್ತೀರಾ..?

Publicspot

No Rain Only Flood; ಉತ್ತರ ಕರ್ನಾಟಕದಲ್ಲಿ ಮಳೆಯಿಲ್ಲ.. ಪ್ರವಾಹ ಮಾತ್ರ.. ಕಾರಣ ನಮ್ಮದೇ ಸರ್ಕಾರ..!!

Publicspot

PU, SSLC ಪರೀಕ್ಷೆಗೆ ಸಿದ್ಧತೆ ಇರಲಿ, ಭಯ ಬೇಡ.. ಪತ್ರಿಕೆ ಲೀಕ್‌ ಆಗುವ ಭಯ ಬೇಡ..

Publicspot

ಬಗೆಹರಿಯಿತೇ ಬಾನು ಆಯ್ಕೆ ವಿವಾದ..? ಅರಮನೆ ಸಂದೇಶ ಏನು..?

Publicspot