The Public Spot
ಟ್ರೆಂಡ್ರಾಜ್ಯ

ನಾಡಿನಾದ್ಯಂತ ನವರಾತ್ರಿ ಸಡಗರ.. ಸರ್ಕಾರದಿಂದ ಸಖತ್​ ಸೌಲಭ್ಯ..

ನಾಡಹಬ್ಬ ದಸರಾ ನಾಡಿನಾದ್ಯಂತ ಕಳೆಗಟ್ಟಿದೆ. ಆದರೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ಹಬ್ಬ ಕಣ್ತುಂಬಿಕೊಳ್ಳಬೇಕು ಅನ್ನೋದು ಅದೆಷ್ಟೋ ಜನರ ಕನಸು ಕೂಡ ಹೌದು. ಪ್ರತಿವರ್ಷ ನಾಡಹಬ್ಬ ದಸರಾ ಅಂದ್ರೆ ಮೈಸೂರು ನೆನಪಿಗೆ ಬರುತ್ತದೆ. ಈ ವರ್ಷ ಕೂಡ ಮಳೆಯಿಲ್ಲದೆ ಬರಗಾಲ ಆವರಿಸಿದರೂ ಸರ್ಕಾರ ಮಾತ್ರ ಅದ್ಧೂರಿಯಾಗಿ ದಸರಾ ಆಚರಣೆ ಮಾಡುತ್ತಿದೆ. ದಸರಾ ನೋಡಲು ಮೈಸೂರಿಗೆ ಆಗಮಿಸುವ ಜನರ ಅನುಕೂಲಕ್ಕೆ ಸರ್ಕಾರ ಸರ್ವ ಪ್ರಯತ್ನ ಮಾಡಿದೆ.

ದಸರಾ ಹಬ್ಬಕ್ಕೆ ವಿಶೇಷ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ದಸರಾ ಹಬ್ಬದ ಪ್ರಯುಕ್ತ ಕೆಎಸ್‌ಆರ್‌ಟಿಸಿ ವತಿಯಿಂದ 3 ಸಾವಿರ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನಿಂದ ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ನಗರಗಳಿಗೆ ವಿಶೇಷ ಬಸ್‌ ಸಂಚಾರ ಆರಂಭ ಆಗಿದೆ. ಅಕ್ಟೋಬರ್‌ 16ರಿಂದ ಅಕ್ಟೋಬರ್​ 20ರವರೆಗೆ ಬೆಂಗಳೂರಿನಿಂದ ವಿವಿಧ ಕಡೆಗೆ ವಿಶೇಷ ಬಸ್​ಗಳು ಸಂಚಾರ ಮಾಡಲಿದ್ದು, ಜನರ ಪ್ರಯಾಣಕ್ಕೆ ತೊಂದರೆ ಆಗದಂತೆ ಕ್ರಮಕ್ಕೆ ಸೂಚಿಸಲಾಗಿದೆ.

ಬೆಂಗಳೂರು – ಮೈಸೂರು ಮಾರ್ಗಕ್ಕೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದ್ದು, ಮೈಸೂರಿಗೆ ತೆರಳುವ ಪ್ರಯಾಣಿಕರಿಗಾಗಿ ಒಟ್ಟು 700 ವಿಶೇಷ ಬಸ್‌ಗಳನ್ನು ನಿಯೋಜನೆ ಮಾಡಲಾಗಿದೆ. ಮೆಜೆಸ್ಟಿಕ್‌, ಮೈಸೂರು ರಸ್ತೆ ಹಾಗೂ ಶಾಂತಿನಗರದಿಂದ ವಿಶೇಷ ಬಸ್‌ಗಳ ಕಾರ್ಯಾಚರಣೆ ನಡೆಯಲಿದೆ. ಅಕ್ಟೋಬರ್‌ 20 ಮತ್ತು 21ರಂದು ಬೆಂಗಳೂರಿಗೆ ವಾಪಸ್ಸಾಗುವ ಪ್ರಯಾಣಿಕರಿಗೂ ವಿಶೇಷ ಬಸ್‌ ಸೇವೆ ಲಭ್ಯ ಇರಲಿದೆ ಎಂದು KSRTC ಮಾಹಿತಿ ನೀಡಿದೆ.

ಇನ್ನೂ ಕೇವಲ ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಕಡೆಯಿಂದ ಮಾತ್ರವಲ್ಲ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೂ ಮೈಸೂರಿಗೆ ಫ್ಲೈ ಬಸ್‌ ಸೇವೆಯ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಫ್ಲೈ ಬಸ್​ ವ್ಯವಸ್ಥೆ ಇತ್ತು. ಇದೀಗ ಮತ್ತಷ್ಟು ಹೆಚ್ಚಳ ಮಾಡಲಾಗಿದೆ. ಹೆಚ್ಚುವರಿ ಬಸ್​ಗಳನ್ನು ಒದಗಿಸಿದ್ದು, ದೇಶ, ವಿದೇಶಗಳಿಂದ ಬರುವ ಜನರನ್ನು ಶೀಘ್ರವಾಗಿ ಮೈಸೂರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ ನಮ್ಮೂರ ನಾಡಹಬ್ಬ ದಸರಾ ಸಂಭ್ರಮ ಕಳೆಗಟ್ಟಿದೆ.

Related posts

ಅಡ್ಡ ಮತದಾನ ಮಾಡಿದ್ದು ವೈಯಕ್ತಿಕ ಲಾಭಕ್ಕೋ..? ನಾಯಕತ್ವದ ಸೇಡಿಗೋ..?

Publicspot

ಹಾಸನಾಂಬೆ ದರ್ಶನಕ್ಕೆ ಹೋಗುವ ಮುನ್ನ ಹುಷಾರು.. ಜನಸಂಖ್ಯೆ ನಿಯಂತ್ರಣಕ್ಕೆ ಪರದಾಟ..!

Publicspot

Mysore Mahisha Mandala; ಮೈಸೂರು ಚಾಮುಂಡಿಗೆ ಕೊಡುವ ಗೌರವ ಮಹಿಷನಿಗೂ ಕೊಡಿ..

Publicspot

RSSಗೆ ಅಂಕುಶ ಯತ್ನ.. ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್‌ ತಡೆ..!

Publicspot

ಬಿಜೆಪಿಯವರು ಕರ್ನಾಟಕದಲ್ಲಿ ಇಂತಹ ಜನೋಪಯೋಗಿ ಯೋಜನೆಯನ್ನು ಜಾರಿಗೆ ತಂದಿದ್ದಾರೆಯೇ?

admin

RAIN EFFECT, SCHOOL CLOSED; ಭಾರೀ ಮಳೆ.. ಎಲ್ಲೆಲ್ಲಿ ಶಾಲೆಗಳಿಗೆ ರಜೆ ಘೋಷಣೆ..?

Publicspot