The Public Spot
ದೇಶ-ವಿದೇಶ

ಕ್ಯಾನ್ಸರ್ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ..

ಕ್ಯಾನ್ಸರ್ ಔಷಧಿಗಳ ಬೆಲೆಯಲ್ಲಿ ಭಾರಿ ಇಳಿಕೆಗೆ ಕೇಂದ್ರ ಸರ್ಕಾರದ ಕ್ರಮಕೈಗೊಂಡಿದೆ. 137 ಕ್ಯಾನ್ಸರ್ ಔಷಧಿಗಳ ವ್ಯಾಪಾರದ ಮಾರ್ಜಿನ್‌ಗೆ ಕಡಿವಾಣ ಹಾಕಲಾಗ್ತಿದ್ದು, ಔಷಧಿಗಳ ಗರಿಷ್ಠ ಚಿಲ್ಲರೆ ಬೆಲೆ ಅಂದ್ರೆ MRPಯಲ್ಲಿ ಶೇಕಡ 70 ರಷ್ಟು ದರ ಇಳಿಕೆ ಮಾಡಲು ನಿರ್ಧಾರ ಮಾಡಿದ್ದು, ಅತಿಯಾದ ವ್ಯಾಪಾರ ಮಾರ್ಜಿನ್ ನಿಯಂತ್ರಿಸಲು NPPA ಮಹತ್ವದ ಆದೇಶ ಹೊರಡಿಸಿದೆ.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕ್ಯಾನ್ಸರ್ ಚಿಕಿತ್ಸೆಯ ವೆಚ್ಚ ಕಡಿಮೆ ಮಾಡಿ, ರೋಗಿಗಳಿಗೆ ಪರಿಹಾರ ನೀಡುವ ಉದ್ದೇಶ ಹೊಂದಿದ್ದು, ಔಷಧ ತಯಾರಕರು, ವಿತರಕರು ಮತ್ತು ಮಾರಾಟಗಾರರ ಲಾಭದ ಮಾರ್ಜಿನ್‌ಗೆ ಶೇಕಡ 30ರ ಮಿತಿ ಹೇರಲಾಗಿದೆ.

ಒಟ್ಟು 137 ಕ್ಯಾನ್ಸರ್​ ಔಷಧಿಗಳ ಪರಿಷ್ಕೃತ ಬೆಲೆಗಳು 2026ರ ನವೆಂಬರ್ 9ರಿಂದ ಜಾರಿಗೆ ಬರಲಿವೆ. ಔಷಧ ತಯಾರಕರು 7 ದಿನಗಳೊಳಗೆ ಪರಿಷ್ಕೃತ ದರಗಳ ವಿವರವನ್ನು NPPAಗೆ ಸಲ್ಲಿಸಬೇಕು ಎಂದಿರುವ ಸರ್ಕಾರ, ಆಸ್ಪತ್ರೆಗಳು ಮತ್ತು ಮೆಡಿಕಲ್ ಶಾಪ್‌ಗಳಲ್ಲಿ ಪರಿಷ್ಕೃತ ದರಪಟ್ಟಿ ಪ್ರದರ್ಶನ ಕಡ್ಡಾಯ ಎಂದು ಸೂಚನೆ ನೀಡಿದೆ. ಅದೇ ರೀತಿ ಆಸ್ಪತ್ರೆಗಳ ವೆಬ್‌ಸೈಟ್‌ನಲ್ಲೂ ಹೊಸ ದರಗಳನ್ನು ಪ್ರಕಟಿಸಬೇಕು ಎಂದು ಕಟ್ಟು ನಿಟ್ಟಿನ ಸೂಚನೆ ಕೊಡಲಾಗಿದೆ.

ದರ ನಿಯಂತ್ರಣ ಮಾಡಿದ ಬೆನ್ನಲ್ಲೇ ಔಷಧಿಗಳ ಲಭ್ಯತೆ ಕಡಿಮೆ ಆಗದಂತೆ ಉತ್ಪಾದನೆ ಮತ್ತು ಪೂರೈಕೆ ಮುಂದುವರಿಸಲು ಸೂಚನೆ ಕೊಡಲಾಗಿದ್ದು. ನಿಯಮ ಪಾಲನೆಯ ಮೇಲ್ವಿಚಾರಣೆಗೆ ರಾಜ್ಯ ಔಷಧ ನಿಯಂತ್ರಕರಿಗೆ ಜವಾಬ್ದಾರಿ ನೀಡಲಾಗಿದೆ. ನವೆಂಬರ್​​ 9ರಿಂದಲೇ ಹೊಸ ದರ ಜಾರಿ ಆಗ್ತಿದ್ದು, ಭಾರತದಲ್ಲಿ 137 ಕ್ಯಾನ್ಸರ್ ಔಷಧಿಗಳ ಬೆಲೆ ಶೇಕಡ 70ರಷ್ಟು ಇಳಿಕೆ ಆಗಲಿವೆ.

ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯದ DGHS ತಜ್ಞರ ಸಮಿತಿಯ ಶಿಫಾರಸಿನಂತೆ ಔಷಧಗಳ ಬೆಲೆ ನಿಯಂತ್ರಣ ಮಾಡಿ ಆದೇಶ ಹೊರಡಿಸಲಾಗಿದೆ. 137 ಔಷಧಿಗಳ ವ್ಯಾಪಾರ ಲಾಭಾಂಶವನ್ನು ಗರಿಷ್ಠ ಶೇಕಡ 30ಕ್ಕಿಂತ ಹೆಚ್ಚು ಇರದಂತೆ ಎನ್‌ಪಿಪಿಎ ಮಿತಿ ಹೇರಿದೆ. ಎಲ್ಲಾ ಔಷಧ ತಯಾರಿಕಾ ಕಂಪನಿಗಳು ಪತ್ರ ಪ್ರಕಟವಾದ 7 ದಿನಗಳೊಳಗೆ ಪರಿಷ್ಕೃತ ಬೆಲೆಗಳನ್ನು ಎನ್‌ಪಿಪಿಎಗೆ ತಿಳಿಸಬೇಕು. ಪ್ರತಿಯೊಂದು ಆಸ್ಪತ್ರೆ, ಚಿಲ್ಲರೆ ಮಾರಾಟಗಾರರು ಮತ್ತು ಕಂಪನಿಗಳು , ತಮ್ಮ ವೆಬ್‌ಸೈಟ್‌ಗಳಲ್ಲಿ ಹಾಗೂ ಫಾರ್ಮಸಿಗಳಲ್ಲಿ ಪರಿಷ್ಕೃತ ಬೆಲೆ ಪಟ್ಟಿಯನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ.

Related posts

ಅಮೆರಿಕದ ಮತ್ತೊಂದು F35 ಯುದ್ಧ ವಿಮಾನ ಹೊಡೆದ ಇರಾನ್.. ಯುದ್ಧ ತೀವ್ರ..

Publicspot

ನೀಟ್‌ ಪರೀಕ್ಷೆ ಪ್ರಶ್ನೆ ಪತ್ರಿಕೆ ಲೀಕ್‌ಗೆ ಯಾರು ಹೊಣೆ..? ಜವಾಬ್ದಾರಿ ಯಾರದ್ದು..?

Publicspot

VICE PRESIDENT ELECTION: NDA ಉಪರಾಷ್ಟ್ರಪತಿ ಅಭ್ಯರ್ಥಿ ಯಾರು ಗೊತ್ತಾ..?

Publicspot

80ನೇ ಸ್ವಾತಂತ್ರ್ಯ ಸಂಭ್ರಮ.. ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ

Publicspot

ಅಮೆರಿಕ ಬೆನ್ನುಮೂಳೆ ಮುರಿದ ಇರಾನ್​.. F-35 ಫೈಟರ್​ ಜೆಟ್​ ಫಿನಿಷ್​​..!!

Publicspot

ರಾಹುಲ್‌ ಗಾಂಧಿಗೆ ಚುನಾವಣಾ ಆಯೋಗದಿಂದ ನೋಟಿಸ್‌..! ಕಾರಣ ಏನು..?

Publicspot