The Public Spot
ಅಪರಾಧ

ಬೆಂಗಳೂರಿನಲ್ಲಿ ಶೂಟೌಟ್​.. ವಕೀಲ ಮಂಜುನಾಥ್​ ಹತ್ಯೆ

ಬೆಂಗಳೂರಿನಲ್ಲಿ ಮನೆ ಮಾಲೀಕನ ಮೇಲೆ ಶೂಟೌಟ್ ನಡೆದಿದೆ. ಕಳೆದ 3 ತಿಂಗಳಿಂದ ಬಾಡಿಗೆ ಹಣ ಕೊಟ್ಟಿರಲಿಲ್ಲ. ಬಾಡಿಗೆ ಕೊಡುವಂತೆ ಬೈದಿದ್ದ ಮನೆ ಮಾಲೀಕ ಮಂಜುನಾಥ್​​. ಬಾಡಿಗೆ ವಿಚಾರಕ್ಕೆ ನಿನ್ನೆ ರಾತ್ರಿ ಗನ್​ನಿಂದ ಶೂಟ್ ಮಾಡಿ ಹತ್ಯೆ ಮಾಡಲಾಗಿದೆ. ಮನೆ ಮಾಲೀಕರು ಬಾಡಿಗೆ ಹಣ ನೀಡಲಿಲ್ಲ ಎಂದು ಬೈಯ್ದಿದ್ದಕ್ಕೆ ಕೋಪಗೊಂಡು ರಾತ್ರಿ ಗನ್​ನಿಂದ ಫೈರಿಂಗ್​ ಮಾಡಿರುವ ಬಾಡಿಗೆದಾರ. ಬೆಂಗಳೂರಿನ ಪಟ್ಟಂದೂರು ಅಗ್ರಹಾರದಲ್ಲಿ ಘಟನೆ ನಡೆದಿದ್ದು, ವೈಟ್ ಫೀಲ್ಡ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟ‌‌ನೆ ನಡೆದಿದೆ.

ನಿನ್ನೆ ರಾತ್ರಿ 11.30ರ ಸುಮಾರಿಗೆ ಮನೆಗೆ ನುಗ್ಗಿ ಹಣೆಗೆ ಗುಂಡಿಟ್ಟು ವಕೀಲನ ಹತ್ಯೆ ಮಾಡಲಾಗಿದೆ. ಮನೆ ಬಾಗಿಲು ಓಪನ್ ಮಾಡ್ತಿದ್ದಂತೆ ವಕೀಲ ಮಂಜುನಾಥ್ ಹಣೆಗೆ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ವೈಟ್ ಫೀಲ್ಡ್ ಭಾಗದಲ್ಲಿ ಹತ್ತಾರು ಎಕರೆ ಜಮೀನು ಹೊಂದಿದ್ದ ವಕೀಲ ಮಂಜುನಾಥ್, ಜಮೀನನ್ನು ಶೆಡ್​ ಬಾಡಿಗೆಗೆ ನೀಡುತ್ತಿದ್ದರು. ಇದೀಗ ವಕೀಲ ಮಂಜುನಾಥ್, ಜಮೀನು ವ್ಯಾಜ್ಯಕ್ಕೆ ಕೊಲೆಯಾಗಿರೋ ಶಂಕೆ ವ್ಯಕ್ತವಾಗ್ತಿದೆ. ಬಾಡಿಗೆದಾರು ಗನ್​ ಫೈರಿಂಗ್​ ಮಾಡಲು ಜಮೀನು ವ್ಯಾಜ್ಯ ಕಾರಣವೋ..? ಬಾಡಿಗೆ ಕೊಡದಿದ್ದಕ್ಕೆ ಗುಂಡು ಹೊಡೆದಿದ್ದಾರೋ ಅನ್ನೋ ಬಗ್ಗೆ ವೈಟ್ ಫೀಲ್ಡ್ ಪೊಲೀಸರು ತನಿಖೆ ನಡೆಸುತ್ತಿದ್ದು, ಹಂತಕರಿಗಾಗಿ ಹುಡುಕಾಟ ನಡೆದಿದೆ.

ಬಾಡಿಗೆ ವಿಚಾರಕ್ಕೆ ಕೊಲೆ ನಡೆದಿದ್ದರೂ ಆಘಾತಕಾರಿ ಸಂಗತಿ. ಮನೆಯಲ್ಲಿ ಬಾಡಿಗೆಗೆ ಇದ್ದುಕೊಂಡು ಮೂರು ತಿಂಗಳಿಂದ ಬಾಡಿಗೆ ನೀಡದಿದ್ದರೂ ತಪ್ಪೆ. ಇನ್ನೂ ಜಮೀನು ವ್ಯಾಜ್ಯಕ್ಕೆ ಸುಪಾರಿ ಪಡೆದು ಹತ್ಯೆ ಮಾಡಿದರೂ ತಪ್ಪೆ. ಒಟ್ಟಾರೆ ರಾಜ್ಯದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸ್​ ವ್ಯವಸ್ಥೆ ಹದಗೆಟ್ಟಿದೆ ಅನ್ನೋದು ಸಾಬೀತಾಗ್ತಿದೆ. ಸಾಮಾನ್ಯ ಜನರ ಕೈಗೆ ಗನ್​ನು ಬುಲೆಟ್​ ಸಿಗ್ತಿದೆ ಅಂದ್ರೆ ಕಾನೂನು ಸುವ್ಯವಸ್ಥೆ ಎಲ್ಲಿಗೆ ತಲುಪಿದೆ..?

ಇಬ್ಬರು ಬಾಡಿಗೆದಾರರು ಒಟ್ಟಿಗೆ ಸೇರಿ ಶೂಟೌಟ್​ ಮಾಡಿದ್ದಾರೆ ಎನ್ನಲಾಗಿದೆ. ಇಬ್ಬರೂ ಸಹ ಮೃತ ವಕೀಲ ಮಂಜುನಾತ್​ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು ಅನ್ನೋದು ಗೊತ್ತಾಗಿದೆ. ಇಬ್ಬರು ಮನೆ ಬಳಿ ಬಂದು ಫೈರಿಂಗ್ ಮಾಡಿ ಪರಾರಿ ಆಗಿದ್ದಾರೆ. ಒಂದು ಸುತ್ತು ಸೀದಾ ಹಣೆಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಬಾಡಿಗೆ ಹಣ ಅಥವಾ ಜಮೀನು ವ್ಯಾಜ್ಯಕ್ಕೆ ಕೊಲೆ ಆಗಿದ್ಯಾ ಅನ್ನೋ ಆಯಾಮದಲ್ಲಿ ತನಿಖೆ ನಡೆಸಲಾಗ್ತಿದೆ.

Related posts

Teacher Asulted student; ಕ್ರೂರವಾಗಿ ವರ್ತಿಸಿದ ಶಿಕ್ಷಕನ ಬಂಧನ, ಜೈಲಿಗೆ ಶಿಫ್ಟ್​..

Publicspot

ಅಪ್ರಾಪ್ತ ವಯಸ್ಸಲ್ಲಿ ಪ್ರೀತಿ.. ಪ್ರೇಮ.. ಇಷ್ಟೆ ಇಷ್ಟೆ.. ಎಚ್ಚರ ತಪ್ಪಿದ್ರೆ ಫಿನಿಷ್..!!

Publicspot

ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ.. ಬಂಡಾರದ ಲೆಕ್ಕಾಚಾರ..

Publicspot

ವರ್ಷದ ಹಿಂದೆ DOCTOR ಮದುವೆ.. 6 ತಿಂಗಳ ಹಿಂದೆ ಕೊಲೆ.. ಈಗ ರಹಸ್ಯ ಬಯಲು..!

Publicspot

ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ದಿನಕ್ಕೊಂದು ಎಡವಟ್ಟು.. ನಿನ್ನೆ ಒಂದು.. ಇವತ್ತು ಒಂದು..

Publicspot

Birthday party; ಹುಟ್ಟು ಹಬ್ಬದ ಪಾರ್ಟಿಯಲ್ಲಿ ಬಿಲ್ ಪೇ ಘರ್ಷಣೆ.. ಕೊಲೆಯಲ್ಲಿ ಅಂತ್ಯ..

Publicspot