The Public Spot
ಸಿನಿಮಾ

ಚಂದನ್​ ಶೆಟ್ಟಿ – ನಿವೇದಿತಾ ಗೌಡ ಡೀವೋರ್ಸ್​ ಬಳಿಕ ಹಾಡಿನ ಜಗಳ..!

ಱಪರ್​ ಚಂದನ್​ ಶೆಟ್ಟಿ ಹಾಗೂ ನಿವೇದಿತಾ ಗೌಡ ನಡುವೆ ಬಿಗ್​ಬಾಸ್​ನಲ್ಲಿ ಪ್ರೇಮಾಂಕುರ ಆಗಿತ್ತು. ಆಕರ್ಷಣೆಯನ್ನೇ ಪ್ರೇಮ ಎಂದುಕೊಂಡು ದಸರಾ ವೇದಿಕೆಯಲ್ಲಿ ಪ್ರೇಮ ನಿವೇದನೆ ಮಾಡಿಕೊಂಡು, ಮದುವೆಯನ್ನೂ ಆದರೂ. ಪ್ರೀತಿ ಪ್ರೇಮ ಮದುವೆ ಅನ್ನೋದು ಹುಡುಗಾಟಿಕೆ ರೀತಿಯಲ್ಲಿ ಮಾಡಿಕೊಂಡ ಈ ಜೋಡಿ ಅಷ್ಟೇ ವೇಗವಾಗಿ ಡಿವೋರ್ಸ್​ ಕೂಡ ಪಡೆದುಕೊಂಡರು. ಆದರೆ ಡಿವೋರ್ಸ್​ ಪಡೆಯುವಾಗ ಎಲ್ಲರಿಗೂ ಮಾದರಿ ಎನ್ನುವಂತೆ, ಡೀವೋರ್ಸ್​ ಪಡೆದರೂ ಸ್ನೇಹಿತರಾಗಿ ಇರಬಹುದು ಎಂದು ಹೇಳಿದ್ದರು. ಡಿವೋರ್ಸ್​ ಪಡೆದ ಬಳಿಕವೂ ಒಟ್ಟಿಗೆ ಸುದ್ದಿಗೋಷ್ಠಿ ಮಾಡಿದ್ದರು. ಇದೀಗ ತನ್ನೊಳಗಿನ ದ್ವೇಷ ಹೊರಬಿದ್ದಿದೆ.

ಱಪರ್​ ಚಂದನ್​ ಶೆಟ್ಟಿ ತನ್ನೊಳಗಿನ ನೋವನ್ನು ಹಾಡಿನ ಮೂಲಕ ಹೊರ ಹಾಕಿದ್ದಾರೆ. ಈ ಹಾಡು ಕೇವಲ ಮನೊರಂಜನೆಗಾಗಿ ಮಾಡಿದ್ದೇ ಹೊರತು, ಯಾವುದೇ ವ್ಯಕ್ತಿಗೆ ಸಂಬಂಧಿಸಿದ್ದು ಅಲ್ಲ ಅಂತಾ ಮೊದಲಿಗೇ ಡಿಸ್ಕೈಮರ್​ ಹಾಕಿಕೊಂಡಿದ್ದಾರೆ. ಆ ಹಾದನ್ನು ನೋಡಿದವರಿಗೆ ಇದು ನಿವೇದಿತಾಗೌಡ ಮಾಡಿದ ಮೋದವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರೋದು KannadaRapper ಅನ್ನೋದು ಅರ್ಥ ಆಗುತ್ತದೆ. ಹಾಡು ರಿಲೀಸ್​ ಆಗ್ತಿದ್ದ ಹಾಗೆ ನಿವೇದಿತಾಗೌಡ ಕೂಡ ಸಹಜವಾಗಿಯೇ ನೋಡಿರ್ತಾರೆ. ಚಂದನ್​ ನನ್ನ ಮೇಲೆ ದ್ವೇಷ ಕಾರಿದ್ದಾನೆ ಅನ್ನೋದು ಗೊತ್ತಾಗ್ತಿದ್ದ ಹಾಗೆ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಚಂದನ್ ಶೆಟ್ಟಿಗೆ ಟಾಂಗ್ ಕೊಟ್ಟಿದ್ದಾರೆ ನಿವೇದಿತಾ ಗೌಡ.

ಉತ್ತಮ ಸ್ನೇಹಿತರು, ದೊಡ್ಡ ಆಸೆ-ಮಹತ್ವಾಕಾಂಕ್ಷೆ ಇದ್ದು, ಪ್ರೀತಿಯ ವಿಷಯದಲ್ಲಿ ಮಾತ್ರ ದುರಾದೃಷ್ಟ ಹೊಂದಿರುವ ಹುಡುಗಿಯ ಜೀವನವು ರೊಮ್ಯಾಂಟಿಕ್-ಕಾಮಿಡಿ (Rom-Com) ಸಿನಿಮಾದಂತೆ ಇರುತ್ತದೆ ಎಂದು ಎಲ್ಲೋ ಓದಿದ್ದೆ. ಆದರೆ ನನ್ನ ಜೀವನ ಮಾತ್ರ ಒಂದು ಭಯಾನಕ (ಹಾರರ್) ಕಥೆಯಾಗಿದೆ. ನನ್ನ ಗತಕಾಲ, ಹಳೆಯ ನೆನಪುಗಳು ನನ್ನನ್ನು ನೆಮ್ಮದಿಯಾಗಿ ಇರಲು ಬಿಡುತ್ತಲೇ ಇಲ್ಲ ಎಂದು ಚಂದನ್ ಶೆಟ್ಟಿ ಹೊಸ‌ ಆಲ್ಬಂ ಹಾಡಿನ ಸಾಲುಗಳಿಗೆ ಪ್ರತಿಕ್ರಿಯಿಸಿದಂತೆ ನಿವೇದಿತಾ ಗೌಡ ಬರೆದುಕೊಂಡಿದ್ದಾರೆ. ಈ ಪೋಸ್ಟ್​ ಬಗ್ಗೆ ಸುದ್ದಿಯಾಗ್ತಿದ್ದ ಹಾಗೆ ಚಂದನ್​ ಶೆಟ್ಟಿ ಸ್ಪಷ್ಟನೆ ಕೂಡ ಕೊಟ್ಟಿದ್ದಾರೆ.

ನೀನು ಹೋದ‌ ಮೇಲೆ ನಾನು‌ ಸೋತಿಲ್ಲ, ನನ್ನ ಕತೆ ಮುಗಿದಿಲ್ಲ. ಆದರೆ ಅಸಲಿ ಆಟ ಇನ್ನೂ ಶುರುವಾಗಿಲ್ಲ ಅನ್ನೋ ಸಾಲುಗಳ ಬಗ್ಗೆ ಱಪರ್​ ಚಂದನ್ ಶೆಟ್ಟಿ ಸ್ಪಷ್ಟನೆ ಕೊಟ್ಟಿದ್ದು, ಹಾಡು ಕೇವಲ ಮನರಂಜನೆಗೆ ಹೊರತು, ಯಾರನ್ನೋ ಗುರಿಯಾಗಿಸಿ ನೋಯಿಸುವ ಉದ್ದೇಶ ಇಲ್ಲ. ವೈಯಕ್ತಿಕ ಜೀವನದಲ್ಲಿ ನಡೆದ ಘಟನೆಗೂ ಮೊದಲೇ ಹಾಡು ರಚಿಸಲಾಗಿತ್ತು ಎಂದು ಪೋಸ್ಟ್ ಹಾಕಿ ಸ್ಪಷ್ಟನೆ ಕೊಟ್ಟಿದ್ದಾರೆ. ಆದರೆ ಹೃದಯ ನೋವು ಹಾಡಾಗಿ ಬಂದಿದ್ದು, ಅದು ನಿವೇದಿತಾ ಗೌಡರನ್ನು ಗುರಿಯಾಗಿಸಿ ನೋಡುತ್ತಿದೆ. ನಿವೇದಿತಾಗೌಡ ಕೂಡ ಚಂದನ್​ ಉದ್ದೇಶಿಸಿಯೇ ಪೋಸ್ಟ್​ ಹಾಕಿದ್ದು, ಇದೀಗ ಚಂದನ್​ ಸ್ಪಷ್ಟನೆ ಕೋಪ ತಣಿಸುತ್ತಾ ಕಾದು ನೋಡ್ಬೇಕು.

Related posts

ದರ್ಶನ್​ ಬೆನ್ನು ನೋವಿಗೆ ಆಪರೇಷನ್ ಮಾಡಿಸಲಿಲ್ಲ ಯಾಕೆ..?

Publicspot

ಚಿತ್ರಕಥೆ ಕಳವು ಮಾಡಿದ್ರಾ ಡಾರ್ಲಿಂಗ್ ಕೃಷ್ಣ..? ಲವ್‌ ಮಾಕ್ಟೇಲ್‌ 3 ಚಿತ್ರಕಥೆ ಯಾರದ್ದು..?

Publicspot

ರೇಣುಕಾಸ್ವಾಮಿ ಕೊಲೆ ಆಧಾರಿತ ಚಿತ್ರ ಅಂತಾ BOSS ಚಿತ್ರ ಬಿಡುಗಡೆಗೆ ಬ್ರೇಕ್‌..

Publicspot

ಒಡೆಯ ಚಿತ್ರದಲ್ಲಿ ದರ್ಶನ್​ ತಮ್ಮನಾಗಿದ್ದ ನಿರಂಜನ್​ ಮೇಲೆ ಹಲ್ಲೆ..!

Publicspot

ಅರೆ ನಗ್ನ ಸ್ಥಿತಿಯಲ್ಲಿ ನಟಿಯ ಫೋಟೋ.. ರುಕ್ಮಿಣಿ ವಸಂತ್‌ ಹೇಳಿದ್ದೇನು..?

Publicspot

ಕಿರಿಕ್‌ ಹುಡುಗಿಗೆ ಇಂದು ಕಲ್ಯಾಣ.. ಈಗಲಾದ್ರೂ ಸಂಸಾರ ಸರಿಯಾಗಲಿ..

Publicspot