ನಟ ಧನ್ವೀರ್ ಮೇಲೆ ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಟ ದರ್ಶನ್ ಸಹಾಯಕ ನಾಗರಾಜ್ಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪದ ಮೇಲೆ ಆರ್ ಆರ್ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ನಾಗರಾಜ್ ದೂರು ಪಡೆದ ಆರ್ ಆರ್ ಆರ್ ನಗರ ಠಾಣೆ ಪೊಲೀಸರು ಧನ್ವೀರ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ನಟ ದರ್ಶನ್ ಆಪ್ತ ಸಹಾಯಕ ನಾಗರಾಜ್ಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಆರೋಪ ಕೇಳಿಬಂದಿದೆ. ಸದ್ಯ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಆಪ್ತನಾಗಿರುವ ನಾಗರಾಜ್ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಮುಂದಿನ ಹಂತದಲ್ಲಿ ಧನ್ವೀರ್ಗೆ ನೋಟಿಸ್ ಜಾರಿ ಮಾಡಲು ಸಿದ್ಧತೆ ನಡೆಸಿದ್ದಾರೆ.

ಆರ್ ಆರ್ ನಗರ ಸೇರಿದಂತೆ ಬ್ಯಾಟರಾಯನಪುರ ಹಾಗೂ ರಾಜಾಜಿನಗರ ಠಾಣೆಯಲ್ಲೂ ಕೇಸ್ ದಾಖಲಿಸಲು ಸಿದ್ಧತೆ ನಡೆದಿದೆ. ಮಾತುಕತೆಗೆ ಅಂತಾ ನಟ ಧನ್ವೀರ್ ಮನೆಗೆ ಹೋಗಿದ್ದರು. ವಿಜಯಲಕ್ಷ್ಮಿ ದರ್ಶನ್ ಹಾಗೂ ಆಪ್ತ ಸಹಾಯಕ ನಾಗರಾಜ್ ಇಬ್ಬರೂ ಹೋಗಿದ್ದರು. ಈ ವೇಳೆ ಮನೆಯಲ್ಲಿ ನಟ ಧನ್ವೀರ್ ಇಲ್ಲದ ಕಾರಣ ವಾಪಸ್ ಹೋಗಿದ್ದರು. ವಿಜಯಲಕ್ಷ್ಮಿ ದರ್ಶನ್ ಹಾಗೂ ನಾಗರಾಜ್ ಮನೆಗೆ ಬಂದ ವಿಚಾರ ತಿಳಿದು ನಾಗರಾಜ್ಗೆ ಕರೆ ಮಾಡಿದ್ದ ನಟ ಧನ್ವೀರ್, ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ಧನ್ವೀರ್ ಮತ್ತು ನಾಗರಾಜ್ ಮಾತನಾಡಿರೋ ಆಡಿಯೋ ಕೂಡ ವೈರಲ್ ಆಗಿದೆ. ಸದ್ಯ ಪೊಲೀಸರು ಆಡಿಯೋ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ. ವಾಟ್ಸಪ್ನಲ್ಲೂ ಅವಾಚ್ಯ ಶಬ್ದಗಳಿಂದ ನಿಂದಿಸಿರೋ ಆಡಿಯೋ ವೈರಲ್ ಆಗಿದ್ದಾರೆ. ಧನ್ವೀರ್ ಹಾಗೂ ವಿಜಯಲಕ್ಷ್ಮಿ ಆಪ್ತ ಸಹಾಯಕ ನಾಗರಾಜ್ ಚಾಟಿಂಗ್ ಕೂಡ ವೈರಲ್ ಆಗಿದೆ.
ದರ್ಶನ್ ಪತ್ನಿ ಬಗ್ಗೆಯೂ ನಟ ಧನ್ವೀರ್ ಅವಾಚ್ಯವಾಗಿ ಮೆಸೇಜ್ ಮಾಡಿರುವ ಆರೋಪ ಎದುರಾಗಿದೆ. ನಾನು ಇಲ್ಲದ ಟೈಮಲ್ಲಿ ಬರ್ತಿರಆ..? ಎಂದು ಮೆಸೇಜ್ ಮಾಡಿದ್ದಾರೆ. ಅವಾಚ್ಯ ಶಬ್ದಗಳನ್ನೇ ಬಳಸಿ ನಟ ಧನ್ವೀರ್ ಮೆಸೇಜ್ ಮಾಡಿದ್ದಾರೆ. ಆಡಿಯೋ ಹಾಗೂ ವಾಟ್ಸಪ್ ಚಾಟಿಂಗ್ ಪರಿಶೀಲನೆ ಮಾಡ್ತಿದ್ದಾರೆ. ಬ್ಯಾಟರಾಯನಪುರ ಠಾಣೆಯಲ್ಲಿ ಗೌರವ್ ಎಂಬಾತ ನೀಡಿದ ದೂರಿನ ಮೇಲೆ NCR ದಾಖಲು ಮಾಡಲಾಗಿದೆ. ನಟ ಧನ್ವೀರ್ ಮತ್ತು ಶಶಿ ಎಂಬಾತನ ಮೇಲೆ ಗೌರವ್ ದೂರು ನೀಡಿದ್ದಾರೆ. 5 ಲಕ್ಷಕ್ಕೆ ವಿಮಾನ ಟಿಕೆಟ್ ಬುಕ್ ಮಾಡಿಸಿಕೊಂಡು ಹಣ ಕೊಡ್ತಿಲ್ಲ. ಹಣ ಕೇಳಿದ್ರೆ ಅವಾಚ್ಯವಾಗಿ ನಿಂದಿಸ್ತಿದ್ದಾರೆ ಅಂತಾ ದೂರು ನೀಡಲಾಗಿದೆ. ಅಲ್ಲದೆ ತನ್ನ ವೋಕ್ಸ್ ವ್ಯಾಗನ್ ಕಾರನ್ನ ಧನ್ವೀರ್, ಶಶಿ ಎಂಬುವನಿಗೆ ಕೊಡಿಸಿದ್ದಾರೆ ಅದನ್ನೂ ಕೊಡ್ತಿಲ್ಲ. ಬೆದರಿಕೆ ಹಾಕಿದ್ದಾರೆ ಅಂತಾ ದೂರು ನೀಡಲಾಗಿದೆ.
ವಿಜಯಲಕ್ಷ್ಮಿ ದರ್ಶನ್ ಹಾಗೂ ನಾಗರಾಜ್ ವಿರುದ್ಧ ಧನ್ವೀರ್ ತಂದೆಯಿಂದ ದೂರು ಸಲ್ಲಿಕೆ ಆಗಿದೆ. ಮನೆಗೆ ಬಂದು ರೌಡಿಗಳನ್ನ ಕರೆಸಿ ಬೆದರಿಕೆ ಹಾಕಿರೋದಾಗಿ ದೂರು ಸಲ್ಲಿಕೆ ಮಾಡಿದ್ದಾರೆ. ಧನ್ವೀರ್ ಜೊತೆ ಮಾತನಾಡಬೇಕು ಎಂದು ಬಂದು ಬೆದರಿಕೆ ಹಾಕಿರುವ ಆರೋಪ ಹೊರಿಸಲಾಗಿದೆ. ಗೌರವ್ ಶೆಟ್ಟಿ ಎಂಬಾತನ ಮೂಲಕ ರೌಡಿಗಳನ್ನ ಕರೆಸಿ ಧಮ್ಕಿ ಹಾಕಿದ ಆರೋಪ ಕೇಳಿಬಂದಿದೆ. ಈ ಹಿಂದೆ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಕೇಸ್ನಲ್ಲೂ ಕೇಳಿ ಬಂದಿತ್ತು ಗೌರವ್ ಶೆಟ್ಟಿ ಹೆಸರು. ಕಾಮಾಕ್ಷಿ ಪಾಳ್ಯ ಠಾಣೆಯಲ್ಲಿ ಗೌರವ್ ಶೆಟ್ಟಿ ವಿರುದ್ಧ ಕೇಸ್ ದಾಖಲು ಆಗಿತ್ತು. ಈಗ ಧನ್ವೀರ್ ಮನೆಗೆ ಗೌರವ್ ಶೆಟ್ಟಿ ಮೂಲಕ ಇಬ್ಬರನ್ನ ಕರೆಸಿ ಅವಾಜ್ ಹಾಕಿಸಿರುವ ಬಗ್ಗೆ ದೂರು ದಾಖಲಾಗಿದೆ.
ರಾಜಾಜಿನಗರ ಠಾಣೆಯಲ್ಲಿ ವಿಜಯಲಕ್ಷ್ಮಿ ದರ್ಶನ್ ಸೇರಿದಂತೆ ನಾಲ್ವರ ವಿರುದ್ಧ ನಟ ಧನ್ವೀರ್ ತಂದೆ ತಿಮ್ಮಗೌಡ ದೂರು ನೀಡಿದ್ದಾರೆ. ವಿಜಯಲಕ್ಷ್ಮಿ, ನಾಗರಾಜ್, ಭೋಜ, ಬಟಾಲಿ ಪ್ರಮೋದ್ ವಿರುದ್ಧ ದೂರು ನೀಡಿದ್ದಾರೆ. ಬೆದರಿಕೆ ಹಾಕಿರುವ ಆರೋಪದಡಿ ರಾಜಾಜಿನಗರ ಠಾಣೆ ಪೊಲೀಸರು ತನಿಖೆ ಕೈಗೊಳ್ಳಬೇಕಿದೆ. ಒಟ್ಟಾರೆ ನಟ ದರ್ಶನ್ ಜೊತೆಗೆ ನಿಲ್ತೇನೆ. ಜೀವ ಇರೋ ತನಕ ನಾನು ದರ್ಶನ ಪರ ಕೆಲಸ ಮಾಡ್ತೇನೆ ಎನ್ನುತ್ತಿದ್ದ ನಟ ಧನ್ವೀರ್ ವಿಜಯಲಕ್ಷ್ಮೀ ದರ್ಶನ್‌ಗೆ ಎದುರಾಳಿ ಆಗಿದ್ದಾರೆ. ಕಾರಣ ಏನು ಅನ್ನೋದು ಗೊತ್ತಿಲ್ಲ. ಆದರೆ ಪರಸ್ಪರ ಸಾಮರಸ್ಯ ಇಲ್ಲ ಅನ್ನೋದು ಬಹಿರಂಗ ಆಗಿದೆ. ದರ್ಶನ್ ಮಧ್ಯಪ್ರವೇಶ ಮಾಡ್ತಾರಾ..? ಅನ್ನೋದು ಈಗಿರುವ ಪ್ರಶ್ನೆ.


