September 30, 2026
The Public Spot
ದೇಶ-ವಿದೇಶ

80ನೇ ಸ್ವಾತಂತ್ರ್ಯ ಸಂಭ್ರಮ.. ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ

ಭಾರತ ಸ್ವಾತಂತ್ರ್ಯ ಪಡೆದು ಬರೋಬ್ಬರಿ 80 ವರ್ಷಗಳು ಆದ ಸಂದರ್ಭದಲ್ಲಿ ಇಡೀ ದೇಶವೇ ಸಂತಸದಲ್ಲಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಿದ್ದಾರೆ. ಅದಕ್ಕೂ ಮೊದಲು ಮಹಾತ್ಮ ಗಾಂಧಿ ಸ್ಮಾರಕಕ್ಕೆ ಭೇಟಿ ನಮನ ಸಲ್ಲಿಸಿದ್ದಾರೆ. ಸೇನಾ ಗೌರವ ಸ್ವೀಕರಿಸಿದ ಪ್ರಧಾನಿ ಮೋದಿ, ಆ ಬಳಿಕ ವಂದೇ ಮಾತರಂ ಮೊಳಗಿಸಲಾಯ್ತು. ಧ್ವಜಾರೋಹಣದ ಬಳಿಕ ರಾಷ್ಟ್ರಗೀತೆ ಹಾಡಲಾಯ್ತು. ಆ ನಂತರ ಹೆಲಿಕಾಪ್ಟರ್​ ಮೂಲಕ ಪುಷ್ಪವೃಷ್ಟಿ ಮಾಡಲಾಯ್ತು. ಈ ಕ್ಷಣಕ್ಕೆ ಸಾವಿರಾರು ಮಂದಿ ಸಾಕ್ಷಿ ಆದರು.

ಸತತ 13ನೇ ಬಾರಿ ಧ್ವಜಾರೋಹಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಮೊದಲಿಗೆ ದೇಶದ ಜನರಿಗೆ 80ನೇ ಸ್ವಾತಂತ್ರ ದಿನದ ಶುಭ ಕೋರಿದ ಪ್ರಧಾನಿ, ವಂದೇ ಮಾತರಂ ಹಾಡಿಗೆ 150 ವರ್ಷ ಆಗಿದೆ. ಮೊದಲ ಬಾರಿಗೆ ವಂದೇ ಮಾತರಂ ನಿನಾದ ಮೊಳಗಿದೆ. ತಿರಂಗ ಹಾರುತ್ತಿದೆ. ಈ ಸಂಭ್ರಮದ ಹಿಂದೆ ಸಾಕಷ್ಟು ಜನರ ಬಲಿದಾನ ಆಗಿದೆ. ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದವರ ಸ್ಮರಣೆ ಮಾಡುವುದು ನಮ್ಮ ಕರ್ತವ್ಯ. ಹೊಸ ಸಂಕಲ್ಪದೊಂದೊಂದಿಗೆ ಭಾರತ ಮುನ್ನುಗ್ಗುತ್ತಿದೆ. ವಿಕಸಿತ ಭಾರತಕ್ಕಾಗಿ 140 ಕೋಟಿ ಭಾರತೀಯರು ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದ್ದಾರೆ.

ಭಾರತವನ್ನು ವಿಶ್ವ ನೋಡುವ ದೃಷ್ಟಿ ಬದಲಾಗಿದೆ ಎಂದಿರುವ ಪ್ರಧಾನಿ ಮೋದಿ, ಸದೃಢ ಭಾರತ ದೇಶಕ್ಕಾಗಿ ನಮ್ಮ ಸಂಕಲ್ಪ ದೃಢವಾಗಿದೆ. ಬಡತನ ನಿರ್ಮೂಲನೆಗೆ ಸಾಕಷ್ಟು ಜನರು ಕೈ ಜೋಡಿಸಿದ್ದಾರೆ. ಡಿಜಿಟಲ್​ ವ್ಯವಹಾರಕ್ಕೆ ಹೆಚ್ಚು ಹೆಚ್ಚು ಆದ್ಯತೆ. ಅಭಿವೃದ್ಧಿ ಪಥದಲ್ಲಿ ಭಾರತ ಮುನ್ನುಗ್ಗುತ್ತಿದ್ದು, 2047ಕ್ಕೆ ವಿಕಸಿತ ಭಾರತ ಗುರಿ ಮುಟ್ಟಲಿದೆ. ಭಾರತದ ರಕ್ಷಣಾ ಉತ್ಪಾದನೆ 4 ಪಟ್ಟು ಹೆಚ್ಚಾಗಿದೆ. ಐಟಿ ಕ್ಷೇತ್ರದಲ್ಲಿ ಸ್ವಾವಲಂಬನೆ, ಮೇಕ್​ ಇನ್​ ಇಡಿಯಾಗೆ ಆದ್ಯತೆ ಕೊಡಲಾಗಿದೆ. ಸೆಮಿ ಕಂಡಕ್ಟರ್​ ಘಟಕಗಳ ಆರಂಭ ಆಗಿದೆ. ಜಾಗತಿಕ ಆರ್ಥಿಕ ಶಕ್ತಿಯಾಗಿ ಭಾರತ ಹೊರಹೊಮ್ಮುತ್ತಿದೆ.

ಕೆಂಪುಕೋಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​, ಗೃಹ ಸಚಿವ ಅಮಿತ್​ ಸೇರಿದಂತೆ ಸಂಪುಟ ಸಚಿವರು ಹಾಗೂ ರಾಜ್ಯ ಸಚಿವರು ಭಾಗಿಯಾಗಿದ್ದರು. ಕೇಂದ್ರ ಸಚಿವ ಕುಮಾರಸ್ವಾಮಿ ಕೂಡ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾದರು. 25 ಕೋಟಿ ಜನರು ಬಡತನ ರೇಖೆಯಿಂದ ಹೊರಕ್ಕೆ ಬಂದಿದ್ದಾರೆ ಎಂದು ಪ್ರಧಾನಿನ ಮೋದಿ ಘೋಷಿಸಿದ್ದಾರೆ. ಮನೆ ಮನೆಗಳ ಮೇಲೆ 50 ಲಕ್ಷ ಕುಟುಂಬಗಳು ಸೋಲಾರ್​ ಅಳವಡಿಸಿಕೊಳ್ಳುವ ಮೂಲಕ ಆತ್ಮನಿರ್ಭರ್​ ಭಾರತಕ್ಕೆ ಬೆಂಬಲ. ಶತಮಾನದ ಹಲವು ಕಾನೂನು ಬದಲಾವಣೆ ಆಗಿದೆ. ವಿದ್ಯುತ್​​ ಉತ್ಪಾದನೆ ಪರಮಾಣು ಶಕ್ತಿ ಬಳಸಿಕೊಳ್ಳಲಾಗ್ತಿದೆ. 12 ವರ್ಷದಿಂದ ಭಾರತದ ಅಭಿವೃದ್ಧಿ ವೇಗ ಹೆಚ್ಚಾಗಿದೆ ಎಂದಿದ್ದಾರೆ ಪ್ರಧಾನಿ ನಮೋ.

Related posts

Stamped death; ತಮಿಳು ನಟ ವಿಜಯ್​​ Rally ಯಲ್ಲಿ ಕಾಲ್ತುಳಿತ.. 38 ಜನ ಸಾವು..!

Publicspot

ತಮಿಳರ ಮನ ಗೆದ್ದ ವಿಜಯ್‌ ಕೊಟ್ಟ ಮಾತು ಉಳಿಸಿಕೊಳ್ತಾರಾ..?

Publicspot

Sugar Rate hike; ಸಕ್ಕರೆ MSP ದರ ಹೆಚ್ಚಳಕ್ಕೆ ಕೇಂದ್ರದ ಚಿಂತನೆ.. ಯಾರಿಗೆ ಲಾಭ..?

Publicspot

ಇಂದಿನಿಂದ ಏನೆಲ್ಲಾ ಬದಲಾವಣೆ ಆಗುತ್ತೆ ಅನ್ನೋದು ಗೊತ್ತಿದ್ಯಾ..?

Publicspot

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ಯಾರು ಗೊತ್ತಾ..? ಶಾಕ್

Publicspot

ಮೇಕೆದಾಟು ಡ್ಯಾಂಗೆ ತಮಿಳುನಾಡು ವಿರೋಧ.. ಸಮಸ್ಯೆ ಆಗೋದೇ ನಮಗಲ್ಲ..!!

Publicspot