ಜನರು ಸಾಕಷ್ಟು ವಿಚಾರಗಳಲ್ಲಿ ಅಡಿಕ್ಟ್ ಆಗಿರುತ್ತಾರೆ. ಅದರಲ್ಲಿ ಪ್ರಮುಖವಾದದ್ದು ಅಂದ್ರೆ ಟೀ, ಕಾಫಿ. ಆದರೆ ಟೀ, ಕಾಫಿ ಮಾಡೋದಕ್ಕೆ ಬಳಸುವ ವಸ್ತುಗಳು ಎಷ್ಟು ಸೇಫ್ ಅನ್ನೋ ಬಗ್ಗೆ ಜನರು ಕಿಂಚಿತ್ತು ಯಫಚನೆ ಮಾಡೋದಿಲ್ಲ. ಆದರೆ ಅಗತ್ಯ ವಸ್ತುಗಳ ಮಾರಾಟ ಮಾಡುವ ಜನರು ಹಣದಾಸೆಯಿಂದ ಆದಾಯ ಮಾಡುವುದಕ್ಕೇ ನೋಡುತ್ತಾರೆ. ಜನರ ಆರೋಗ್ಯ ಹಾಳಾದರೂ ಜನ ಮಾತ್ರ ಕೋಟಿ ಕೋಟಿ ಆದಾಯದ ಹಿಂದೆ ಬಿದ್ದಿರುತ್ತಾರೆ. ಅದೇ ರೀತಿಯ ಘಟನೆಯೊಂದು ಬೆಳಕಿಗೆ ಬಂದಿದೆ.

ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರು ಮಾತ್ರವಲ್ಲ. ಬದುಕಬೇಕು ಅನ್ನೋ ಆಸೆ ಹೊಂದಿರುವ ಎಲ್ಲರೂ ಈ ಸ್ಟೋರಿ ಓದಲೇಬೇಕು. ಯಾಕಂದ್ರೆ ಸಿಕ್ಕ ಸಿಕ್ಕ ಹಾಲನ್ನು ಕುಡಿಯುವ ಮುನ್ನ ಬಿ ಅಲರ್ಟ್. ಜನರ ಆರೋಗ್ಯದ ಜೊತೆಗೆ ಚೆಲ್ಲಾಟ ಆಡುತ್ತಿದೆ ಡೋಡ್ಲಾ ಡೈರಿ. ಡೋಡ್ಲಾ ಡೈರಿ ಹಾಲಿನಲ್ಲಿ ಅಪಾಯಕಾರಿ ಕ್ಯಾನ್ಸರ್ಕಾರಕ ಡಿಟರ್ಜೆಂಟ್ ಹಾಗೂ ಕಾಸ್ಟಿಕ್ ಸೋಡಾ ಅಂಶ ಪತ್ತೆ ಆಗಿದೆ. ಆಂಧ್ರಪ್ರದೇಶ ಮೂಲದ ಡೋಡ್ಲಾ ಡೈರಿಯ ಹಾಲು ರಾಜಧಾನಿ ಬೆಂಗಳೂರಿಗೂ ಸರಬರಾಜು ಆಗುತ್ತಿದೆ.
ಪುಲ್ ಕ್ರೀಮ್ ಹಾಲಿನಲ್ಲಿ ಅಪಾಯಕಾರಿ ಕ್ಯಾನ್ಸರ್ಕಾರಕ ಡಿಟರ್ಜೆಂಟ್ ಹಾಗೂ ಕಾಸ್ಟಿಕ್ ಸೋಡಾ ಅಂಶ ಪತ್ತೆ ಆಗಿರುವ ಹಿನ್ನಲೆಯಲ್ಲಿ FSSAI ಕಾನೂನು ಕ್ರಮಕ್ಕೆ ಮುಂದಾಗಿದೆ. ಡೋಡ್ಲಾ ಫುಲ್ ಕ್ರೀಮ್ ಹಾಲು ಅಸುರಕ್ಷಿತ ಎಂದು ಲ್ಯಾಬ್ ಟೆಸ್ಟ್ನಲ್ಲಿ ದೃಢವಾಗಿದೆ. ಹಾಲಿನ ಗುಣಮಟ್ಟದಲ್ಲಿ ಗಂಭೀರ ಲೋಪ ಕಂಡು ಬಂದಿದೆ. ಹೀಗಾಗಿ ಡೋಡ್ಲಾ ಡೈರಿ ವಿರುದ್ಧ ಪ್ರಾಸಿಕ್ಯೂಷನ್‌ಗೆ FSSAI ಮುಂದಾಗಿದೆ. ಡೋಡ್ಲಾ ಡೈರಿಯ ಫುಲ್ ಕ್ರೀಮ್ ಹಾಲು ಅಸುರಕ್ಷಿತ ಹಾಗೂ ಅತ್ಯಂತ ಕಳಪೆ ಗುಣಮಟ್ಟದ್ದು ಎಂದು ದೃಢಪಟ್ಟಿದೆ.
ಹಾಲಿನ ಮಾದರಿಯಲ್ಲಿ ಡಿಟರ್ಜೆಂಟ್ ಕಾಸ್ಟಿಕ್ ಸೋಡಾ ಅಂಶ ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಹಾಲಿನಲ್ಲಿ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಹಾಲಿನ ಕೊಬ್ಬಿನಂಶ ಪತ್ತೆಯಾಗಿದೆ. ಮೊದಲ ಪರೀಕ್ಷೆಯಲ್ಲಿ ಕಳಪೆ ಗುಣಮಟ್ಟದ್ದು ಎಂದು ವರದಿ ನೀಡಿದ್ದ ಆಹಾರ ವಿಶ್ಲೇಷಕರು, ಮರುಪರೀಕ್ಷೆ ನಡೆಸಿದ ರೆಫರಲ್ ಆಹಾರ ಪ್ರಯೋಗಾಲ ಕೂಡ ಉಲ್ಲಂಘನೆ ಮಾಡಿರುವುದನ್ನು ದೃಢಪಡಿಸಿದೆ. ಹೀಗಾಗಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರಡಿ ನಿಯಮ ಉಲ್ಲಂಘನೆ ಆಗಿದ್ದು, ಕಾನೂನು ಕ್ರಮಕ್ಕೆ ಸಿದ್ಧತೆ ನಡೆದಿದೆ.
ಡೋಡ್ಲಾ ಡೈರಿಯ ಎಲ್ಲಾ ಉತ್ಪಾದನೆಗಳ ಮಾರಾಟಕ್ಕೆ ಸಂಬಂಧಿಸಿದ ಇತರ ಆಹಾರ ಉದ್ಯಮಿಗಳ ವಿರುದ್ಧವೂ ವಿಚಾರಣೆಗೆ ನಿರ್ಧಾರ ಮಾಡಲಾಗಿದೆ. ಅಸುರಕ್ಷಿತ ಹಾಲು ಪೂರೈಕೆ ಆರೋಪದಡಿ ಮುಂದಿನ ಕಾನೂನು ಪ್ರಕ್ರಿಯೆ ನಡೆಯಲಿದ್ದು, ಹಾಲಿನಲ್ಲಿ ಡಿಟರ್ಜೆಂಟ್ ಹಾಗೂ ಕಾಸ್ಟಿಕ್ ಸೋಡಾ ಬಳಕೆಯಿಂದ ಹೊಟ್ಟೆ ಕ್ಯಾನ್ಸರ್ ಬರುತ್ತದೆ. ಆದರೆ ಇದೇ ಹಾಲನ್ನು ಬಳಸಿಕೊಂಡು ಯಾರೆಲ್ಲಾ ಏನೇನು ತಿಂಡಿ ತಿನಿಸು ಮಾಡಿದ್ದಾರೋ..!? ಯಾವ ಯಾವ ಬೇಕರಿಗಳಲ್ಲಿ ಈ ಹಾಲನ್ನು ಬಳಸಿದ್ದಾರೋ..? ಎಲ್ಲೆಲ್ಲಿ ಟೀ ಕಾಫಿ ಅಂಗಡಿಗಳಲ್ಲಿ ಡೋಡ್ಲಾ ಹಾಲು ಬಳಕೆ ಆಗಿದ್ಯೋ ಆ ದೇವರೇ ಬಲ್ಲ..


