The Public Spot
Uncategorizedಟ್ರೆಂಡ್ದೇಶ-ವಿದೇಶ

ಮಕ್ಕಳಿಗೆ ಇಂಟರ್ನೆಟ್ ಸೇವೆ ನಿರ್ಬಂಧ ಅಸಾಧ್ಯ.. ಸುಪ್ರೀಂ ಆದೇಶ..

ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋಗಿರುವುದರಿಂದ ಪೋಷಕರು ಬೇಸತ್ತಿದ್ದಾರೆ. ಹೀಗಾಗಿ ಇಂಟರ್​ನೆಟ್​ ಬಳಕೆಗೆ ನಿರ್ಬಂಧ ಹೇರಬೇಕು ಅನ್ನೋ ಅರ್ಜಿ ವಿಚಾರಣೆ ಮಾಡಿದ ಸುಪ್ರೀಂಕೋರ್ಟ್​, ಯಾವುದೇ ಕಾರಣಕ್ಕೂ ಇಂಟರ್​ನೆಟ್​ ಸೇವೆ ಬಳಕೆ ಮಾಡುವುದನ್ನು ನಿರ್ಬಂಧ ಮಾಡುವುದು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್​ ತಿಳಿಸಿದೆ.

ಇಂಟರ್​ನೆಟ್​ ಬಳಕೆ ಮಾಡುವುದನ್ನು ಮೂಲಭೂತ ಹಕ್ಕು ಎಂದಿರುವ ಸುಪ್ರೀಂಕೋರ್ಟ್​ ಸಂವಿಧಾನದ ಆರ್ಟಿಕಲ್​ 21 ಹಾಗೂ ಆರ್ಟಿಕಲ್​ 19(1)(a) ಅಡಿಯಲ್ಲಿ ಇಂಟರ್​ನೆಟ್​ ಬಳಕೆ ಹಾಗೂ ಮೂಲಭೂತ ಹಕ್ಕು ಆಗಿದ್ದು, ಅದರಲ್ಲಿ ಮಕ್ಕಳು, ವಯಸ್ಕರು ಎಂದು ವಿಂಗಡಿಸಲು ಸಾಧ್ಯವಿಲ್ಲ. ಮಾತನಾಡುವ ಹಕ್ಕು ಮಕ್ಕಳಿಗೂ ಅನ್ವಯ. ಅದನ್ನು ತಡೆಯುವುದಕ್ಕೆ ಸಾಧ್ಯವಿಲ್ಲ. ನಮ್ಮ ಮಕ್ಕಳ ರಕ್ಷಣೆ ಹಾಗೂ ಸ್ವಾತಂತ್ರ್ಯ ಪರಸ್ಪರ ವಿರುದ್ಧ ಅಲ್ಲ ಎಂದಿದೆ.

ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಹಾಗೂ ಜಸ್ಟೀಸ್​ ವಿನೋದ್​ ಚಂದ್ರನ್​ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು, ಆದರೂ ಜಾಲತಾಣದಿಂದ ಮಕ್ಕಳ ರಕ್ಷಣೆ ಮಾಡಲು, ಇಂಟರ್​ನೆಟ್​ ಬಳಕೆ ನಿರ್ಬಂಧದ ಬದಲಿಗೆ ಚೈಲ್ಡ್​ ಮೋಡ್​ ವ್ಯವಸ್ಥೆಯನ್ನು ಶಕ್ತಿಯುತ ಮಾಡುವಂತೆ ಪೀಠ ಸಲಹೆ ನೀಡಿದೆ. ಆದರೆ ಇಂಟರ್​ನೆಟ್​ ಸೇವೆಯನ್ನೇ ನಿರ್ಬಂಧ ಸಾಧುವಲ್ಲ ಎಂದಿದ್ದಾರೆ.

ಸುಪ್ರೀಂಕೋರ್ಟ್​ನ ದ್ವಿಸದಸ್ಯ ಪೀಠ ಕೆಲವೊಂದು ನಿರ್ದೇಶನ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳನ್ನು ಲೈಂಗಿಕ ಶೋಷಣೆ ಹಾಗೂ ದುರುಪಯೋಗ ಆಗದಂತೆ ತಡೆಯಲು ಕಾರ್ಯವಿಧಾನಗಳನ್ನು ಬಲಪಡಿಸಿ ಎಂದು ಸಲಹೆ ನೀಡಿದ್ದು, ಅವುಗಳನ್ನು ಜಾಲತಾಣಗಳಿಂದ ತೆಗೆದು ಹಾಕುವಂತೆ (CSEAM) ಸುಪ್ರೀಂಕೋರ್ಟ್​ ಸೂಚನೆ ನೀಡಿದೆ. ಒಟ್ಟಾರೆ ಮಕ್ಕಳು ಇಂಟರ್​ನೆಟ್​ ಬಳಕೆ ನಿಷೇಧ ಮಾಡಲು ಸುಪ್ರೀಂಕೋರ್ಟ್​ ನಿರಾಕರಿಸಿದೆ.

Related posts

ಬಿರಿಯಾನಿ ತಿಂದ ನಟ ಡಾಲಿ ಧನಂಜಯ್‌‌ ಮೊದಲ ಪ್ರತಿಕ್ರಿಯೆ ಏನು..?

Publicspot

ಚಂದ್ರಗ್ರಹಣ ಬರಿಗಣ್ಣಿನಿಂದಲೇ ನೋಡಿ.. ಇದೆಲ್ಲವೂ ಸೃಷ್ಟಿಯ ಅಚ್ಚರಿಗಳು..

Publicspot

JDS ಪಾಲಿಗೆ GT ದೇವೇಗೌಡರದ್ದೇ ಚಿಂತೆ.. ಅತ್ಮ ಸಾಕ್ಷಿ ಅಂದ್ರೆ ಏನು..?

Publicspot

ಉಗ್ರರು, ಅಪರಾಧಿಗಳ ಪಾಲಿನ ಸ್ವರ್ಗ ನಮ್ಮ ಪರಪ್ಪನ ಅಗ್ರಹಾರ ಸೆಂಟ್ರಲ್​ ಜೈಲು

Publicspot

New Law In Loksabha: ಪ್ರಧಾನಿ, ಸಿಎಂ, ಮಂತ್ರಿಗಳಿಗೂ ಬರ್ತಿದೆ ಹೊಸ ಕಾನೂನು..!

Publicspot

ಚಂದ್ರಚೂಡ್​ ಕಥೆಗಳನ್ನು ಯಾವುದೇ ನಿರ್ಮಾಪಕ ಸಿನಿಮಾ ಮಾಡುವಂತಿಲ್ಲ..!

Publicspot