The Public Spot
ರಾಜಕೀಯರಾಜ್ಯ

ಇ-ಖಾತಾ ನಿಮ್ಮ ಆಸ್ತಿ, ನಿವೇಶನಗಳ ಮಾಲೀಕತ್ವಕ್ಕೆ ಇರುವ ಅಧಿಕೃತ ದಾಖಲೆ

ಇ-ಖಾತಾ ಮೇಳವು ಮನೆ ಮನೆಗೆ ಇ-ಖಾತೆಯನ್ನು ತಲುಪಿಸುವ ಸದುದ್ದೇಶವನ್ನು ಹೊಂದಿರುವ ಅರ್ಥಪೂರ್ಣ ಕಾರ್ಯಕ್ರಮ ಎಂದು ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವರಾದ ಶ್ರೀ ಬಿ.ಎಸ್.ಸುರೇಶ್ (ಭೈರತಿ) ರವರು ತಿಳಿಸಿದರು.

ಪಾಲಿಕೆಯ ಹೆಬ್ಬಾಳ‌ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆರ್.ಟಿ.ನಗರದ ಹೆಚ್.ಎಮ್.ಟಿ ಮೈದಾನದಲ್ಲಿ ದಿನಾಂಕ 22 ಹಾಗೂ 23 ಜುಲೈ 2025 ರಂದು ಆಯೋಜಿಸಿರುವ ಬೃಹತ್ ಇ-ಖಾತಾ ಮೇಳಕ್ಕೆ ಇಂದು ಚಾಲನೆ ನೀಡಿ ಮಾತನಾಡಿದ ಅವರು ಇ-ಖಾತಾ ನಿಮ್ಮ ಆಸ್ತಿ, ನಿವೇಶನಗಳ ಮಾಲೀಕತ್ವಕ್ಕೆ ಇರುವ ಅಧಿಕೃತ ದಾಖಲೆ ಎಂದು ತಿಳಿಸಿದರು.

ಈಗಾಗಲೇ ಹೆಬ್ಬಾಳ‌ ವಿಧಾನಸಭಾ ಕ್ಷೇತ್ರದಲ್ಲಿ 50,000 ಸ್ವತ್ತುಗಳ ಪೈಕಿ 13,000 ಸ್ವತ್ತುಗಳಿಗೆ ಅಂತಿಮ ಇ-ಖಾತಾವನ್ನು ನೀಡಲಾಗಿದೆ. ನಾಗರೀಕರು ಇ-ಖಾತಾ ಮೇಳದ ಸದುಪಯೋಗ ಪಡೆದು, ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸುಲಭವಾಗಿ ಇ-ಖಾತಾವನ್ನು ಪಡೆಯುವಂತೆ ನಾಗರೀಕರಲ್ಲಿ ವಿನಂತಿಸಿದರು.

ಪೂರ್ವ ವಲಯದ ಆಯುಕ್ತರಾದ ಶ್ರೀಮತಿ ಸ್ನೇಹಲ್.ಆರ್ ರವರು ಮಾತನಾಡಿ ಪೂರ್ವ ವಲಯದಲ್ಲಿ ಇ-ಖಾತಾ ಮೇಳದ ಆಯೋಜನೆಯ ಮೂಲಕ‌ ಸುಲಭವಾಗಿ ಇ-ಖಾತಾ ನೀಡಲು ವ್ಯವಸ್ಥೆ ಮಾಡಲಾಗಿದೆ. ಪೂರ್ವ ವಲಯದಲ್ಲಿ ಒಟ್ಟು 3,45,858 ಸ್ವತ್ತುಗಳ ಪೈಕಿ 55,917 ಸ್ವತ್ತುಗಳಿಗೆ ಅಂತಿಮ ಇ-ಖಾತಾವನ್ನು ನೀಡಲಾಗಿದೆ ಎಂದು ತಿಳಿಸಿದರು.

ಇ-ಖಾತಾ ಮೇಳದ‌ ಸೌಲಭ್ಯವನ್ನು ಹೆಚ್ಚಿನ ಜನರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ, ಆರ್.ಟಿ.ನಗರದ ಹೆಚ್.ಎಮ್.ಟಿ ಮೈದಾನದಲ್ಲಿ ಈ ಮೇಳವನ್ನು ನಾಳೆಯೂ ಮುಂದುವರೆಸಲಾಗುತ್ತದೆ. ಇ-ಖಾತಾ ಪಡೆಯಬೇಕಿರುವ ನಾಗರಿಕರು ತಮ್ಮ ಅಗತ್ಯ ದಾಖಲೆಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಇ-ಖಾತಾ ಪಡೆಯುವಂತೆ ಅವರು ತಿಳಿಸಿದರು.

ಈ ವೇಳೆ ಮಾಜಿ ಉಪ ಮಹಾಪೌರರು,
ವಲಯ ಆಯುಕ್ತರಾದ ಸ್ನೇಹಲ್.ಆರ್, ಜಂಟಿ ಆಯುಕ್ತರಾದ ಸರೋಜ, ಉಪ ಆಯುಕ್ತರಾದ ರಾಜು, ಕಂದಾಯ ಅಧಿಕಾರಿ ಶ್ರೀನಿವಾಸ್ ಮೂರ್ತಿ, ಕಾರ್ಯಪಾಲಕ ಅಭಿಯಂತರರು ಚಂದ್ರಶೇಖರ್, ಮಾಜಿ ಪಾಲಿಕೆ ಸದಸ್ಯರುಗಳು, ಸ್ಥಳೀಯ ಹಿರಿಯ ಮುಖಂಡರುಗಳು, ಹಾಗೂ‌ ಇತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

ರಾಜ್ಯಕ್ಕೆ ಮುಂಗಾರು ಪ್ರವೇಶ.. ಎಲ್ಲೆಲ್ಲಿ ಮಳೆ ಆಗ್ತಿದೆ ಗೊತ್ತಾ..?

Publicspot

Caste Census Issue: ಜಾತಿ ಜನಗಣತಿ ಆರಂಭಕ್ಕೂ ಮುನ್ನವೇ ಶುರುವಾಯ್ತು ಗೊಂದಲ

Publicspot

ತ್ರಿಭಾಷಾ ಸೂತ್ರ ವಿಚಾರದಲ್ಲಿ ಕಾಂಗ್ರೆಸ್‌ ನಿಲುವು ಏನು..? ಹಿಂದಿ ಬೇಡ.. ಉರ್ದು ಬೇಕಾ..?

Publicspot

Caste Census Extended: ಈ ತಿಂಗಳಾಂತ್ಯಕ್ಕೆ ಜಾತಿಜನಗಣತಿ ಸಮೀಕ್ಷೆ ನಿಜವಾಗಲೂ ಮುಗಿಯುತ್ತಾ..?

Publicspot

GBA ನಿರ್ಲಕ್ಷ್ಯ.. ಮರ ಬಿದ್ದು ಯುವತಿ ಸಾವು.. ಮೂವರ ಸ್ಥಿತಿ ಗಂಭೀರ..

Publicspot

CONG VS CONG : ಕಾಂಗ್ರೆಸ್ ಶಾಸಕರ ಮೇಲೆ ​ ಸಚಿವರ ಸೇಡು.. ದಲಿತ ಅಂತಾ ಟಾರ್ಗೆಟ್..?

Publicspot