The Public Spot
ರಾಜ್ಯ

ರಾಜ್ಯದಲ್ಲಿ ಇನ್ನೂ 6 ದಿನ ಭಾರೀ ಮಳೆ.. ಮಳೆಯಿಂದ ಜೀವಹಾನಿ

ಕರ್ನಾಕದಲ್ಲಿ ಈಗಾಗಲೇ ವರು ಅಬ್ಬರಿಸುತ್ತಿದ್ದಾರೆ. ಆಶ್ಲೇಷ ಮಳೆ ಶುರುವಾಗಿ ವಾರ ಕಳೆದಿದ್ದು, ಅಮದಿನಿಂದಲೂ ಮಳೆಯೋ ಮಳೆ ಎನ್ನುವಂತಾಗಿದೆ. ಇನ್ನೂ ಮುಂದಿನ 6 ದಿನಗಳ ಕಾಲ ರಾಜ್ಯದಲ್ಲಿ ಮಳೆ ಅಲರ್ಟ್ ಕೊಟ್ಟಿದೆ ಹವಾಮಾನ ಇಲಾಖೆ. ಮುಂದಿನ 6 ದಿನಗಳ ಕಾಲ ರಾಜ್ಯ ರಾಜಧಾನಿಯೂ ಸೇರಿದಂತೆ ಭಾರೀ ಮಳೆ ಆಗುತ್ತದೆ ಎಂದು ಹವಾಮಾನ ತಜ್ಞ ಸಿ.ಎಸ್‌ ಪಾಟೀಲ್‌ ತಿಳಿಸಿದ್ದಾರೆ. ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರಿ‌ ಮಳೆ ಆಗುವ ನಿರೀಕ್ಷೆ ಇದೆ. ಆಗಸ್ಟ್ 16 ರವರೆಗೆ ಬೆಳಗಾವಿ, ಧಾರವಾಡ, ಹಾವೇರಿ, ಬೀದರ್, ಕಲಬುರಗಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಬಳ್ಳಾರಿ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಮಂಡ್ಯದಲ್ಲಿ ಮುಂದಿನ 6 ದಿನಗಳ ಕಾಲ‌ ಭಾರಿ ಮಳೆ ಮುನ್ಸೂಚನೆ ಸಿಕ್ಕಿದೆ.

ಅಬ್ಬರದ ಮಳೆಯ ನಡುವೆ ಕವಲಗಿ ಹಳ್ಳದಲ್ಲಿ ಸಹೋದರರು ಕೊಚ್ಚಿ ಹೊದ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಮಾದನಸರ ಗ್ರಾಮದ ಕವಲಗಿ ಹಳ್ಳದಲ್ಲಿ ಸಹೋದರರಿಬ್ಬರು ಕೊಚ್ಚಿ ಹೋಗಿದ್ದಾರೆ. 8 ಜನ ಕವಲಗಿ ಹಳ್ಳ ದಾಟಿ ಬೆಡ್ತಿ ನದಿಗೆ ಮೀನು ಹಿಡಿಯಲು ಹೋಗಿದ್ದರು ಎನ್ನಲಾಗಿದೆ. ಮೀನು ಹಿಡಿದು ಮರಳಿ ಬರುತ್ತಿರುವಾಗ ಒಮ್ಮಿಂದ ಒಮ್ಮೆಲೆ ಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಹಳ್ಳದ ನೀರಿನ ರಭಸಕ್ಕೆ ಇಬ್ಬರು ಸಹೋದರರು ಕೊಚ್ಚಿ ಹೋಗಿದ್ದಾರೆ. ರಫೀಕ್ ಇಬ್ರಾಹಿಂ ಸಾಬ್ ಸಯ್ಯದ್ (27) ಹಾಗೂ ಹನೀಫ್ ಇಬ್ರಾಹಿಂ ಸಾಬ್ ಸಯ್ಯದ್ (25) ಕೊಚ್ಚಿಹೋದ ಅಣ್ಣತಮ್ಮ. ಇಬ್ಬರು ಗಾರೆ ಕೆಲಸ ಮಾಡುತ್ತಿದ್ದರು ಅನ್ನೋ ಮಾಹಿತಿ ಲಭ್ಯವಾಗಿದ್ದು, ಸ್ನೇಹಿತರ ಜೊತೆ ಮೀನು ಹಿಡಿಯಲು ಹೊಗಿದ್ದಾಗ ದುರ್ಘಟನೆ ಸಂಭವಿಸಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು, ಶವಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಯಾದಗಿರಿ ಜಿಲ್ಲೆಯಾಧ್ಯಂತ ಧಾರಾಕಾರ ಮಳೆಯಾಗ್ತಿದೆ. ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಮನೆಯೊಳಗೆ ಮಳೆ ನೀರು ನುಗ್ಗಿದ ಪರಿಣಾಮ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ದಿಗ್ಗಿ ಸೈದಾಪುರ ಗ್ರಾಮದ ಮನೆಯೊಳಗೆ ಮಳೆ ನೀರು ನುಗ್ಗಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದಿಗ್ಗಿ ಸೈದಾಪುರ ಗ್ರಾಮದಲ್ಲಿ ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದ ಆಹಾರ ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳ ಮಳೆಯಿಂದ ಹಾನಿಯಾಗಿವೆ. ಮನೆಯೊಳಗಿನ ನೀರನ್ನು ಖಾಲಿ ಮಾಡಲು ಹರಸಾಹಸ ಮಾಡುವಂತಾಗಿದೆ.

ಕಲಬುರ್ಗಿ ಜಿಲ್ಲೆಯಲ್ಲೂ ಭಾರೀ ಮಳೆ ಮುಂದುವರಿದಿದ್ದು, ಇಡೀ ರಾಜ್ಯದಲ್ಲಿ ಅತ್ಯಧಿಕ ಮಳೆ ಸುರಿದು ದಾಖಲೆ ಆಗಿದೆ. ಭಾರಿ ಮಳೆಗೆ ಚಿತ್ತಾಪುರ ತಾಲೂಕಿನ ಜನರು ತತ್ತರಿಸಿದ್ದಾರೆ. ಚಿತ್ತಾಪುರ ತಾಲೂಕಿನ ಸಂಕನೂರು ಗ್ರಾಮ ಜಲಾವೃತ ಆಗಿದೆ. ಗ್ರಾಮಕ್ಕೆ ಮಳೆ ನೀರು ನುಗ್ಗಿದ ಪರಿಣಾಮ ನೀರಿನಿಂದ ರಸ್ತೆ ಸಂಚಾರವೇ ಬಂದ್‌ ಆಗಿದೆ. ಭಾರಿ ಮಳೆಗೆ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಗ್ರಾಮದ ರಸ್ತೆ ಸಂಪೂರ್ಣ ಜಲಾವೃತ ಆಗಿವೆ. ಗ್ರಾಮದ ಜನರಿಗೆ ದಿಕ್ಕು ಕಾಣದಂತಾಗಿದೆ. ಚಿಂಚೋಳಿಯ ಸಣ್ಣ ಸಣ್ಣ ಜಲಪಾತಗಳು ಮುದುಂಬಿ ಹರಿಯುತ್ತಿದ್ದು, ಜನರ ಮನಸ್ಸು ಸೂರೆಗೊಳ್ಳುತ್ತಿವೆ.

Related posts

ಸ್ವಂತ ಜಮೀನಲ್ಲಿ ನಿಧಿ ಸಿಕ್ಕರೂ ಸರ್ಕಾರಕ್ಕೆ ಸೇರುತ್ತಾ..? ಕಾರಣವೇನು..?

Publicspot

Veerendra Heggade: ಧರ್ಮಸ್ಥಳದಿಂದ ಸರ್ಕಾರಕ್ಕೆ ಧನ್ಯವಾದ.. ಒಳ್ಳೆಯದ್ದೇ ಮಾಡುವ ಭರವಸೆ..

Publicspot

ಸಾವಿರ ದಿನಗಳ ಪೂರೈಕೆ ಸಂಭ್ರಮದಲ್ಲಿರುವ ಸರ್ಕಾರದಿಂದ ಇದೆಂಥಾ ಎಡವಟ್ಟು..?

Publicspot

ಜನ ಮೆಚ್ಚಿದ ಅಧಿಕಾರಿ ಮಹಾಂತೇಶ್‌ ಬೀಳಗಿ ಇನ್ನಿಲ್ಲ.. ಅಪಘಾತದಲ್ಲಿ ನಿಧನ

Publicspot

ಹೈಕೋರ್ಟ್‌ ಆದೇಶಕ್ಕೆ ಮಣಿದ ಸರ್ಕಾರ.. ನಾಳೆಯೇ SSLC ರಿಸಲ್ಟ್‌

Publicspot

Lingayath; ಲಿಂಗಾಯತ ಸಮಾವೇಶದಲ್ಲಿ ಭಾಗಿಯಾದ್ರೆ ಸರಿಯಿರಲ್ಲ.. ಸಿಎಂಗೆ ಎಚ್ಚರಿಕೆ

Publicspot