The Public Spot
ರಾಜಕೀಯ

ಸತ್ಯ ಹೇಳಿದ್ದಕ್ಕೆ ಸಚಿವ ಸ್ಥಾನ ಕಿತ್ಕೊಳ್ತಾ ಕಾಂಗ್ರೆಸ್​ ಹೈಕಮಾಂಡ್​..?

ಕಾಂಗ್ರೆಸ್​ ಪಕ್ಷದಲ್ಲಿ ಸೆಪ್ಟೆಂಬರ್​ ಕ್ರಾಂತಿ ನಡೆಯುತ್ತೆ ಅಂತಾ ಭವಿಷ್ಯ ನುಡಿದಿದ್ದ ಸಚಿವ ಕೆ.ಎನ್​ ರಾಜಣ್ಣ ಆಗಸ್ಟ್​ನಲ್ಲೇ ರಾಜೀನಾಮೆ ನೀಡಿದ್ದಾರೆ. ವಿಧಾನಮಂಡಲ ಅಧಿವೇಶನ ಆರಂಭದ ದಿನವೇ ಸಚಿವ ರಾಜಣ್ಣ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲವಾದರೂ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಅನ್ನೋ ಸುದ್ಧಿ ಸದನದಲ್ಲಿ ಸದ್ದು ಮಾಡಿದೆ.

ಕಾಂಗ್ರೆಸ್​ ಹೈಕಮಾಂಡ್​ ನಾಯಕರು ಮತಗಳ್ಳತನದ ಬಗ್ಗೆ ಆರೋಪ ಮಾಡಿದ್ದರು. ಫ್ರೀಡಂಪಾರ್ಕ್​ನಲ್ಲಿ ಪ್ರತಿಭಟನೆಯನ್ನೂ ಮಾಡಿದ್ದರು. ಆದರೆ ಲೋಕಸಭಾ ಚುನಾವಣೆ ನಡೆದ ವೇಳೆ ರಾಜ್ಯದಲ್ಲಿ ಕಾಂಗ್ರೆಸ್​​ ಸರ್ಕಾರವೇ ಇತ್ತು. ಮತಪಟ್ಟಿಗೆ ಸೇರ್ಪಡೆ ಮಾಡುವುದು ಹಾಗೂ ಮತಪಟ್ಟಿಯಿಂದ ಕಿತ್ತು ಹಾಕುವುದು ರಾಜ್ಯ ಸರ್ಕಾರದ ಕೈಯಲ್ಲೇ ಇತ್ತು. ಹೀಗಿದ್ದಾಗಲೂ ನಾವು ಕೇಂದ್ರ ಸರ್ಕಾರದ ಕಡೆಗೆ ಆರೋಪ ಮಾಡುವುದು ಎಷ್ಟು ಸರಿ ಎನ್ನುವ ಮೂಲಕ ಕಾಂಗ್ರೆಸ್​ ಹೈಕಮಾಂಡ್​ ನಾಯಕರ ಮಾತಿಗೆ ತಿರುಗೇಟು ನೀಡಿದ್ದರು. ಆ ಮಾತುಗಳೇ ರಾಜಣ್ಣನ ಸಚಿವರ ಸ್ಥಾನಕ್ಕೆ ಪೆಟ್ಟು ಕೊಟ್ಟಿದೆ ಎನ್ನಲಾಗ್ತಿದೆ.

ಸಚಿವ ರಾಜಣ್ಣ ಮಾತನಾಡಿದ್ದನ್ನು ಕುಶಾಲ್​ ಹರಿವೇಗೌಡ ಎಂಬುವರು ಹೈಕಮಾಂಡ್​ ನಾಯಕರಿಗೆ ದೂರು ನೀಡಿದ್ದರು. ಸ್ವತಃ ರಾಹುಲ್​ ಗಾಂಧಿ ಬಂದು ಪ್ರತಿಭಟನೆ ನಡೆಸಿದ ಕಾರ್ಯಕ್ರಮದ ಬಗ್ಗೆಯೇ ರಾಜಣ್ಣ ಮಾತನಾಡಿದ್ದಕ್ಕೆ ಗರಂ ಆಗಿದ್ದ ರಾಹುಲ್​ ಗಾಂಧಿ, ಸ್ವತಃ ಸಿದ್ದರಾಮಯ್ಯಗೆ ಫೋನ್​ ಮಾಡಿ, ರಾಜಣ್ಣನಿಂದ ರಾಜೀನಾಮೆ ಪಡೆದು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಅಧಿವೇಶನ ಆರಂಭದ ದಿನವೇ ರಾಜೀನಾಮೆ ಪಡೆದುಕೊಂಡಿದ್ದಾರೆ. ಸಚಿವ ರಾಜಣ್ಣ ಪುತ್ರ ರಾಜೇಂದ್ರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕಣ್ಣೀರು ಹಾಕಿಕೊಂಡು ಹೊರಕ್ಕೆ ಬಂದಿದ್ದಾರೆ.

ರಾಜಣ್ಣ ಮಾತಿನಲ್ಲಿ ಯಾವುದೇ ಸುಳ್ಳು ಇರಲಿಲ್ಲ. ಸತ್ಯವೇ ಆಗಿದೆ. ರಾಜ್ಯದಲ್ಲಿ ಮತಪಟ್ಟಿ ಪರಿಷ್ಕರಣೆ ಆದಾಗ ಸ್ಥಳೀಯ ಪಕ್ಷಗಳಿಗೂ ನೋಟಿಸ್​ ನೋಡಲಾಗುತ್ತದೆ. ತಮ್ಮ ವಿರೋಧ ಇದ್ದರೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲು ಅವಕಾಶವಿತ್ತು. ಆದರೆ ಚುನಾವಣಾ ಆಯೋಗಕ್ಕೆ ನಿಗದಿತ ಸಮಯದಲ್ಲಿ ತಮ್ಮ ಆಕ್ಷೇಪಣೆ ಸಲ್ಲಿಸದಿದ್ದರೆ ತಪ್ಪು ಯಾರದ್ದು..? ಪಕ್ಷದ ನಾಯಕರು ಹಾಗೂ ಅಂದಿನ ಸ್ಥಳೀಯ ಸರ್ಕಾರದ್ದು. ಇದೀಗ ಕೇಂದ್ರ ಸರ್ಕಾರದ ವಿರುದ್ಧ ದೂರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಸರಿಯಾಗಿಯೇ ಇದೆ. ಆದರೂ ರಾಜೀನಾಮೆ ಪಡೆಯುತ್ತಿರುವುದು ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿಯಿಲ್ಲ. ಏಕಪಕ್ಷೀಯ ತೀರ್ಮಾನ ಎನ್ನುವ ವಿಪಕ್ಷಗಳ ಆರೋಪಕ್ಕೆ ಪುಷ್ಟಿಕೊಟ್ಟಂತಾಗಿದೆ.

Related posts

RSS ಗಣವೇಶಧಾರಿಯನ್ನು ಕರಿ ಟೋಪಿ MLA ಅಂದಿದ್ದಕ್ಕೆ ಕೋಪವೋ..? ನಿರ್ಲಕ್ಷ್ಯದ ಕಿಡಿಯೋ..?

Publicspot

CM Finally; ಸಿಎಂ ಆಗಲು ಪಟ್ಟು ಹಿಡಿದು ಕುಳಿತ ಡಿ.ಕೆ ಶಿವಕುಮಾರ್​.. ಶಕ್ತಿ ವೃದ್ಧಿಗೆ ಸರ್ಕಸ್​..

Publicspot

ದುರಾಸೆಯಿಂದ ಪ್ರಕೃತಿಯನ್ನು ನಾಶ ಮಾಡಿದರೆ ನಮ್ಮನ್ನು ನಾವೇ ನಾಶ ಮಾಡಿಕೊಂಡಂತೆ

admin

ಅಬಕಾರಿ ಇಲಾಖೆಯಲ್ಲಿ ಗೋಲ್ಮಾಲ್‌.. ಅಹೋರಾತ್ರಿ BJP – JDS ಧರಣಿ..

Publicspot

ಪ್ರಧಾನಿ ಮೋದಿಗೆ ಡಿಕೆಶಿ ಬೆಳ್ಳಿ ಗಣಪತಿ ಗಿಫ್ಟ್.. ಏನಿದು ವಿವಾದ..?

Publicspot

ಅಧಿಕಾರ ಹಸ್ತಾಂತರ ಬೆನ್ನಲ್ಲೇ ದಲಿತ ನಾಯಕರ ಒಗ್ಗಟ್ಟು.. ಯಾರು ಏನಂದ್ರು..?

Publicspot