The Public Spot
ರಾಜ್ಯ

Congress MLA Shock; ಮಾಲೂರು ಶಾಸಕರಿಗೆ ಎದುರಾಗುತ್ತಾ ಶಾಕ್‌..?

ಕೋಲಾರ ಜಿಲ್ಲೆ ಮಾಲೂರು ವಿಧಾನಸಭೆ ಕ್ಷೇತ್ರದ ಚುನಾವಣೆ ಫಲಿತಾಂಶ ತೂಗುಯ್ಯಾಲೆಗೆ ಸಿಲುಕಿದೆ. ಮರು ಮತ‌ ಎಣಿಕೆ ವಿಚಾರವಾಗಿ ಸಲ್ಲಿಕೆ ಆಗಿರುವ ಅರ್ಜಿ ವಿಚಾರಣೆ ನಡೆಸಿರುವ ಕರ್ನಾಟಕ ಹೈಕೋರ್ಟ್‌, ಇಂದು ಮಧ್ಯಾಹ್ನ 2.30 ಕ್ಕೆ ಮಹತ್ವದ ತೀರ್ಪು ನೀಡಲಿದೆ.

2023ರ ವಿಧಾನಸಭಾ ಚುನಾವಣೆ ಫಲಿತಾಂಶ ಮರು ಎಣಿಕೆ ಮಾಡಿಸುವಂತೆ ಹೈಕೋರ್ಟ್‌ಗೆ ಬಿಜೆಪಿ ಅಭ್ಯರ್ಥಿ ಆಗಿದ್ದ ಮಂಜುನಾಥ್ ಗೌಡ ಅರ್ಜಿ ಸಲ್ಲಿಸಿದ್ದರು. ಕೇವಲ 248 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ ನಂಜೇಗೌಡ ಗೆಲುವು ಸಾಧಿಸಿದ್ದರು. ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಹೈಕೋರ್ಟ್‌ಗೆ ದೂರು ಸಲ್ಲಿಸಿದ್ದ ಮಂಜುನಾಥ್ ಗೌಡ, ಸಾಕಷ್ಟು ಸಾಕ್ಷ್ಯಗಳನ್ನೂ ಒದಗಿಸಿದ್ದರು.

ಮತ ಎಣಿಕಾ ಪ್ರಕ್ರಿಯೆಯಲ್ಲಿ ಲೋಪ ಕುರಿತು ಸಾಕ್ಷ್ಯ ನೀಡಿರುವ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ, ಮರು ಮತ ಎಣಿಕೆ ಆದೇಶ ನೀಡುವ ನಿರೀಕ್ಷೆಯಲ್ಲಿದ್ದಾರೆ. ಕಳೆದ 2 ವರ್ಷದಿಂದ ಸುದೀರ್ಘ ವಿಚಾರಣೆ ನಡೆಸಿರುವ ಕರ್ನಾಟಕ ಹೈಕೋರ್ಟ್ ವಾದ, ಪ್ರತಿವಾದ ಆಲಿಸಿ ಇಂದಿಗೆ ಅಂತಿಮ ತೀರ್ಪು ಕಾಯ್ದಿರಿಸಿತ್ತು.

ಪ್ರಮುಖವಾಗಿ ಮತ ಎಣಿಕೆಯ ಸಿಸಿಟಿವಿ ದೃಶ್ಯಗಳು ಇಲ್ಲ, ಪೋಸ್ಟಲ್‌ ವೋಟ್‌ಗಳು ಇಲ್ಲ, ಮತ ಎಣಿಕೆಯಲ್ಲಿ ಕೆಲವೊಂದು ಲೋಪದೋಶಗಳು ಆಗಿವೆ ಎನ್ನುವುದನ್ನು ಕೋರ್ಟ್‌ ಗಮನಿಸಿದ್ದು, ಇಂದು ಮರು ಮತ ಎಣಿಕೆಗೆ ಆದೇಶ ಮಾಡುವ ಸಾಧ್ಯತೆಯಿದೆ ಎನ್ನಲಾಗಿದ್ದು, ಒಂದು ವೇಳೆ ಮತ್ತೆ ಮರು ಮತ ಎಣಿಕೆ ಆಗಿದ್ದೇ ಆದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

Related posts

ಬೆಂಗಳೂರಲ್ಲಿ ಮಳೆಗೆ ನಿನ್ನೆ ರಸ್ತೆ ಜಲಾವೃತ.. ಇವತ್ತು ಮಳೆ ಬರುತ್ತಾ..?

Publicspot

ಕಸ ಗುಡಿಸುವ ವಾಹನ ಖರೀದಿ ಓಕೆ.. ಬಾಡಿಗೆಗೆ ಕೊಡೋದು ಯಾಕೆ..? JDS ಆಕ್ರೋಶ..

Publicspot

RAIN EFFECT, SCHOOL CLOSED; ಭಾರೀ ಮಳೆ.. ಎಲ್ಲೆಲ್ಲಿ ಶಾಲೆಗಳಿಗೆ ರಜೆ ಘೋಷಣೆ..?

Publicspot

ರಾಜ್ಯದಲ್ಲಿ ವರುಣಾರ್ಭಟ.. ಅಲ್ಲಲ್ಲಿ ಸಮಸ್ಯೆ.. ಬರ ನೀಗಿಸುತ್ತಾ ಮಳೆ..?

Publicspot

ಇವತ್ತೂ ನಾಳೆ ರಾಜ್ಯದಲ್ಲಿ ಮಳೆಯೋ ಮಳೆ.. ಕರಾವಳಿಗೆ ಮಾತ್ರ ರಜೆ..

Publicspot

ಮಳೆ ಸಾವಿನ ತನಿಖೆಗೆ ಸಮಿತಿ ರಚನೆ.. ಎಂಜಿನಿಯರ್ಸ್‌ ರಜೆ ರದ್ದು..

Publicspot