The Public Spot
ಟ್ರೆಂಡ್

Body Fight; ಬದುಕಿದ್ದಾಗ ಬೇಡವಾದ ಅಮ್ಮ.. ಸತ್ತಾಗ ಶವಕ್ಕೆ ಬಂದ ಮಕ್ಕಳು.. ಥೂ ನಿಮ್ಮ ಜನ್ಮಕ್ಕೆ..

ತಾಯಿಗಿಂತ ಮಿಗಿಲಾದ ದೇವರಿಲ್ಲ ಅನ್ನೋ ನಾಣ್ಣುಡಿ ಇದೆ. ವಯೋವೃದ್ಧ ಪೋಷಕರನ್ನು ಆರೈಕೆ ಮಾಡಬೇಕು ಅನ್ನೋ ಮಾತನ್ನು ಹೆತ್ತವರೇ ಮರೆತು ಬಿಟ್ಟಿದ್ದಾರೆ. ಆದ್ರೆ ಇಲ್ಲೊಂದು ಕುಟುಂಬ ತಾಯಿ ಬದುಕಿದ್ದಾಗ ಅನಾಥ ಆಶ್ರಮಕ್ಕೆ ಸೇರಿಸಿ, ತಾಯಿ ಸತ್ತ ಬಳಿಕ ಮೃತ‌ ದೇಹಕ್ಕಾಗಿ ಕಿತ್ತಾಡುತ್ತಿರುವ ಘಟನೆ ನಡೆದಿದೆ. 80 ವರ್ಷದ ವಯೋವೃದ್ಧೆ ಆಗಿದ್ದ ತಾಯಿ ವೃದ್ಧಾಶ್ರಮದಲ್ಲಿ ಸಾವನ್ನಪ್ಪಿದ ಕೂಡಲೇ ಸ್ಥಳಕ್ಕೆ ಬಂದ ಮಕ್ಕಳು ಶವವನ್ನು ಕೊಂಡೊಯ್ದು ಶವಸಂಸ್ಕಾರ ಮಾಡಿ ತಮ್ಮ ಶ್ರೀಮಂತಿಕೆ ತೋರಿಸಿಕೊಳ್ಳಲು ಮುಂದಾಗಿದ್ದಾರೆ. ವೃದ್ಧಾಶ್ರಮದ ಬಳಿ ನಡೆಯುತ್ತಿದ್ದ ಹೈಡ್ರಾಮ ಕಂಡ ಸಾರ್ವಜನಿಕರಿಂದ‌ ಛೀ ಥೂ ಎಂದು ಖಂಡನೆ ವ್ಯಕ್ತಪಡಿಸಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಮಾತೃಭೂಮಿ ವೃದ್ಧಾಶ್ರಮದಲ್ಲಿ ಪಾರ್ವತಮ್ಮ ಜೀವನ ನಡೆಸುತ್ತಿದ್ದರು. 80 ವರ್ಷದ ವೃದ್ಧೆ ಪಾರ್ವತಮ್ಮ ತನ್ನ ಮಕ್ಕಳ ಆರೈಕೆ ಇಲ್ಲದೆ ಕಳೆದು ತಿಂಗಳು ಬೀದಿಗೆ ಬಿದ್ದಿದ್ದರು. ಆಶ್ರಮದಲ್ಲಿ ಹಾರೈಕೆ ಮಾಡುತ್ತ ವಸತಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ವಯೋಸಹಜ ಹಾಗೂ ಮಕ್ಕಳಿಂದ ದೂರವಾದ ಚಿಂತೆಯಲ್ಲೇ ತಾಯಿ ಪಾರ್ವತಮ್ಮ ಅಸುನೀಗಿದ್ದರು. ಹಾಸನ ಜಿಲ್ಲೆ ಕವಳಿಕೆರೆ ಗ್ರಾಮದ ಪಾರ್ವತಮ್ಮ ಮೃತರಾದ ವಿಚಾರ ಕೇಳಿದ ಮಕ್ಕಳು ಶವ ತಗೆಗೆದುಕೊಂಡು ಹೋಗಲು ಬಂದಾಗಲೂ ಕುಸ್ತಿ ಮಾಡಿದ್ದಾರೆ.

ವೃದ್ಧೆ ಪಾರ್ವತಮ್ಮಗೆ ಬರೊಬ್ಬರಿ ಆರು ಜನ ಮಕ್ಕಳಿದ್ದು, ಅದರಲ್ಲಿ ಮೂವರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳಿದ್ದಾರೆ. ಪಾರ್ವತಮ್ಮ ಸಾವನ್ನಪ್ಪಿದ್ದರಿಂದ ಅವರ ಮಕ್ಕಳಿಗೆ ವೃದ್ಧಾಶ್ರಮದ ವತಿಯಿಂದ ಸಾವಿನ ಸುದ್ದಿಯನ್ನು ಕುಟುಂಬಸ್ಥರಿಗೆ ತಲುಪಿಸಿದ್ದ. ಎಲ್ಲರೂ ವೃದ್ಧಾಶ್ರಮಕ್ಕೆ ಬಂದ ಸಂದರ್ಭದಲ್ಲಿ ಅವರವರ ನಡುವೆಯೇ ಮೃತ ದೇಹಕ್ಕಾಗಿ ಕಿತ್ತಾಟ ನಡೆದಿದೆ. ಮಾತು ಮಾತಿನಲ್ಲಿ ಶುರುವಾದ ಜಗಳ ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೂ ತಲುಪಿದೆ.

ತಾಯಿ ಬದುಕಿದ್ದಾಗ ನೋಡಿಕೊಳ್ಳದ ಮಕ್ಕಳು ವೃದ್ಧಾಶ್ರಮದಲ್ಲಿ ಹೆಣಕ್ಕಾಗಿ ಮಾಡಿದ ಹೈಡ್ರಾಮ ಎಲ್ಲರಲ್ಲೂ ಆಶ್ಚರ್ಯ ತರಿಸಿದ್ದು, ಆಕೆಯ ಹೆಸರಲ್ಲಿರೋ ಆಸ್ತಿಗಾಗಿಯೋ..?‌ ಬ್ಯಾಂಕ್‌ನಲ್ಲಿರೋ ಹಣಕ್ಕಾಗಿಯೋ ಈ ರೀತಿ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ ಕಾಯಿಲೆ ಬಿದ್ದಿರುವ ತಾಯಿಗೆ ವಯಸ್ಸಾಗಿದೆ‌ ಎಂದು ಬೀದಿಗೆ ತಳ್ಳಿದ ಮಕ್ಕಳು ಮೃತದೇಹಕ್ಕಾಗಿ ನಡೆಸಿದ ಹೈಡ್ರಾಮ ಕಂಡು ಸಂಬಂಧಿಕರೂ ಸೇರಿದಂತೆ ಸ್ಥಳೀಐರು ಅಸಹ್ಯಕರ ಎಂದಿದ್ದಾರೆ.

ತಾಯಿಯ ಶವಕ್ಕಾಗಿ ಮಕ್ಕಳು ಕಿತ್ತಾಡಿದ್ದನ್ನು ನೋಡಿದ ವೃದ್ಧಾಶ್ರಮದ ಮಾಲೀಕ ನಾಗಣ್ಣ, ನಾವು ನಿಮಗೆ ಪಾರ್ವತಮ್ಮ ಅವರ ಮೃತದೇಹ ನೀಡೋದಿಲ್ಲ. ನಾವೇ ಅಂತ್ಯ ಸಂಸ್ಕಾರ‌ ಮಾಡುತ್ತೇವೆ ಎಂದು ಜೋರು ಮಾಡಿದ ಬಳಿಕ ಮಕ್ಕಳು ಶಾಂತರಾಗಿದ್ದಾರೆ. ಆ ಬಳಿಕ ಎಲ್ಲರೂ ಒಟ್ಟಾಗಿ ಪಾರ್ವತಮ್ಮನ ಮೃತದೇಹವನ್ನ ತೆಗೆದುಕೊಂಡು ಹೋಗಿದ್ದಾರೆ. ಕೊನೆ ಕಾಲದಲ್ಲಿ ತನ್ನ ತಾಯಿಯನ್ನ ಸಾಕ ಬೇಕಿದ್ದ ಅರ್ಧ ಡಜನ್‌ ಮಕ್ಕಳು ವೃದ್ಧಾಶ್ರಮ ಸೇರುವಂತೆ ಮಾಡಿದ್ದೂ ಅಲ್ಲದೆ ತಾಯಿಯ ಶವಕ್ಕಾಗಿ ಹಾದಿ ರಂಪ ಬೀದಿ ರಂಪ ಮಾಡಿದ್ದಾರೆ. ಇಂಥಹ ಮಕ್ಕಳಿಗೆ ಆ ದೇವರೇ ಶಿಕ್ಷೆ ಕೊಡಬೇಕಿದೆ.

Related posts

CM, DCM ಕೈಯಲ್ಲಿ 33 ಲಕ್ಷದ ವಾಚ್.. ಕದ್ದಿದ್ದೋ..? ಕೊಂಡಿದ್ದೋ..? ಲೆಕ್ಕ ಕೇಳಿದ ಛಲವಾದಿ..

Publicspot

Farmers Fight; ಸಕ್ಕರೆ ಕಾರ್ಖಾನೆ ಮಾಲೀಕರು ಡ್ರಾಮಾ ಮಾಡಿದ್ರೆ ರೈತರು ಬುದ್ಧಿ ಕಲಿಸ್ತಾರೆ..!

Publicspot

AIBE 20 ಪರೀಕ್ಷೆಯ ಅಡ್ಮಿಟ್‌ ಕಾರ್ಡ್‌ ರಿಲೀಸ್‌‌.. ಡೌನ್‌ಲೋಡ್‌ ಮಾಡೋದು ಹೇಗೆ..?

Publicspot

Elephant; ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಆನೆ ಬದುಕಿದ್ಯಾ..? ಸತ್ತೇ ಹೋಯ್ತಾ..?

Publicspot

ಚಂದ್ರಗ್ರಹಣ ಬರಿಗಣ್ಣಿನಿಂದಲೇ ನೋಡಿ.. ಇದೆಲ್ಲವೂ ಸೃಷ್ಟಿಯ ಅಚ್ಚರಿಗಳು..

Publicspot

Sugarcane Farmers Protest; ಸರ್ಕಾರದ ಆಹ್ವಾನ ತಿರಸ್ಕರಿಸಿದ ರೈತರು.. ಸಂಜೆ ತನಕ ಡೆಡ್‌ಲೈನ್‌..

Publicspot