The Public Spot
Uncategorized

Bollywood; ಗೆಳೆಯನ ಮರಣದ ದಿನವೇ ಉಸಿರು ನಿಲ್ಲಿಸಿದ ಬಾಲಿವುಡ್‌ ನಟ ಧರ್ಮೇಂದ್ರ!!

ಬಾಲಿವುಡ್‌ ಸೂಪರ್ ಸ್ಟಾರ್ ಧರ್ಮೇಂದ್ರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ಧರ್ಮೇಂದ್ರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. 89 ವರ್ಷದ ಧರ್ಮೇಂದ್ರಗೆ ಚಿಕಿತ್ಸೆ ನೀಡಿ, ಮನೆಗೆ ಕಳುಹಿಸಲಾಗಿತ್ತು. ಇವತ್ತು ಬೆಳಗ್ಗೆ 7.30ರ ಸುಮಾರಿಗೆ ನಟ ಧರ್ಮೇಂದ್ರ ಇಹಲೋಕ ತ್ಯಜಿಸಿದ್ದಾರೆ. 1960ರಲ್ಲಿ ಮೊದಲ ಸಿನಿಮಾ ದಿಲ್ ಭೀ ತೇರಾ ಹಮ್ ಭೀ ತೇರೆ ಮೂಲಕ ರಂಗ ಪ್ರವೇಶ ಮಾಡಿದ ಧರ್ಮೇಂದ್ರ ಹಿಂತಿರುಗಿ ನೋಡಿದ್ದೇ ಇಲ್ಲ.

ಬಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಆಗಿ ಮೆರೆದ ನಟ ಧರ್ಮೇಂದ್ರ ಆರು ದಶಕಗಳ ಕಾಲ ಬರೋಬ್ಬರಿ 300ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಧರ್ಮೇಂದ್ರ ಬಾಲಿವುಡ್‌ನಲ್ಲಿ ಅತ್ಯಂತ ಯಶಸ್ವಿ ನಟ ಅನ್ನೋ ಖ್ಯಾತಿ ಪಡೆದಿದ್ದರು. ಬಾಲಿವುಡ್‌ನಲ್ಲಿ ಅತ್ಯಧಿಕ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರೋ ಹೆಗ್ಗಳಿಕೆ ನಟ ಧರ್ಮೇಂದ್ರ ಹೆಸರಿನಲ್ಲಿದೆ. ಇನ್ನೂ ಒಂದೇ ವರ್ಷದಲ್ಲಿ ಏಳೆಂಟು ಹಿಟ್ ಸಿನಿಮಾಗಳನ್ನು ಕೊಟ್ಟ ಖ್ಯಾತಿಗೂ ಧರ್ಮೇಂದ್ರ ಹೆಸರಿನಲ್ಲಿದೆ ಅನ್ನೋದು ವಿಶೇಷ.

ನಟ ಧರ್ಮೇಂದ್ರಗೆ ಇಬ್ಬರು ಪತ್ನಿಯರು. ಮೊದಲ ಪತ್ನಿ ಪ್ರಕಾಶ್ ಕೌರ್. ಆ ಬಳಿಕ 1980ರಲ್ಲಿ ಖ್ಯಾತ ನಟಿ ಹೇಮಾ ಮಾಲಿನಿಯನ್ನು ಮದುವೆ ಆಗಿದ್ದರು. ಧರ್ಮೇಂದ್ರಗೆ ಒಟ್ಟು 6 ಜನ ಮಕ್ಕಳಿದ್ದು, ಸನ್ನಿ ಡಿಯೋಲ್, ವಿಜೇತ ಡಿಯೋಲ್‌, ಅಜೀತ ಡಿಯೋಲ್‌, ಬಾಬಿ ಡಿಯೋಲ್, ಇಶಾ ಡಿಯೋಲ್, ಅಹಾನ ಡಿಯೋಲ್‌ ಆಗಿದ್ದಾರೆ. ಕೆಲವರು ವೈದ್ಯರಾಗಿ ವಿದೇಶಗಳಲ್ಲಿ ಕೆಲಸ ಮಾಡ್ತಿದ್ರೆ, ಮತ್ತಷ್ಟು ಮಂದಿ ಬಾಲಿವುಡ್‌ನಲ್ಲೇ ಖ್ಯಾತರಾಗಿದ್ದಾರೆ. ಬಾಲಿವುಡ್ ನಟ ಧರ್ಮೇಂದ್ರ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ ಬಾಲಿವುಡ್ ದಿಗ್ಗಜ ನಟ ನಟಿಯರು. ಮುಂಬೈನ ವಿಲ್ಲೆ ಪಾರ್ಲೆ ಸ್ಮಶಾನದಲ್ಲಿ ಧರ್ಮೇಂದ್ರ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಲಾಗಿದೆ. ಪುತ್ರ ಸನ್ನಿ ಡಿಯೋಲ್ ಅಗ್ನಿಸ್ಪರ್ಶ ಮಾಡಿದ್ದಾರೆ.

ಕನ್ನಡ ಚಲನಚಿತ್ರದ ರೆಬೆಲ್‌ ಸ್ಟಾರ್‌ ಆಗಿದ್ದ ನಟ ಅಂಬರೀಶ್‌ಗೆ ನಟ ಧರ್ಮೇಂದ್ರ ಆತ್ಮೀಯ ಸ್ನೇಹಿತರಾಗಿದ್ದರು. ವಿಶೇಷ ಅಂದ್ರೆ ಅಂಬರೀಶ್‌ ನಿಧನರಾದ ತಾರೀಕಿನಂದೇ ಧರ್ಮೇಂದ್ರ ನಿಧನರಾಗಿದ್ದಾರೆ. 2018ರ ನವೆಂಬರ್ 24 ರಂದು ಅಂಬರೀಶ್ ಕೊನೆ ಉಸಿರು ಎಳೆದಿದ್ದರು. ಇದೀಗ 2025ರ ನವೆಂಬರ್ 24 ರಂದು ನಿಧನರಾಗಿದ್ದಾರೆ. ಧರ್ಮೇಂದ್ರ ಹಾಗೂ ಅಂಬರೀಶ್ ಅವರ ನಡುವೆ ಉತ್ತಮ ಸ್ನೇಹ ಒಡನಾಟ ಹೊಂದಿದ್ದರು. ಧರ್ಮೇಂದ್ರ ನಟನೆಯ ಕೊನೆಯ ಸಿನಿಮಾ ಇಕ್ಕಿಸ್ ಡಿಸೆಂಬರ್ 25 ರಂದು ಬಿಡುಗಡೆ ಆಗ್ಬೇಕಿತ್ತು. ಅದಕ್ಕೂ ಮೊದಲೇ ಇಹಲೋಕ ತ್ಯಜಿಸಿ ಕೋಟ್ಯಂತರ ಅಭಿಮಾನಿಗಳನ್ನು ಅಗಲಿದ್ದಾರೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಾಕಷ್ಟು ಜನ ಧರ್ಮೇಂದ್ರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Related posts

Nepal Politics: ನೇಪಾಳದಲ್ಲಿ ರಾಜಕೀಯ ಕ್ಷಿಪ್ರ ಕ್ರಾಂತಿ.. ಓಡಿಹೋದ ಓಲಿ..

Publicspot

Modi Japan Tour: ದೇಶದ ವಿದೇಶಾಂಗ ನೀತಿ ಬಗ್ಗೆ ಟೀಕೆ ಒಳ್ಳೇದಾ..? ಕೆಟ್ಟದ್ದಾ..?

Publicspot

Storms in S Naraayan Family: ಎಸ್​ ನಾರಾಯಣ್​ ದಂಪತಿ ಸೇರಿದಂತೆ ಪುತ್ರನಿಗೆ ಸಂಕಷ್ಟ..

Publicspot

Duniya Vijay Slams SIMA; ದುಬೈನಲ್ಲಿ ಕನ್ನಡಿಗರಿಗೆ ಅವಮಾನ.. ಯಾಕೆ ಬೇಕು ಆ ಪ್ರಶಸ್ತಿ..?

Publicspot

American Presidents Target India: ಭಾರತವನ್ನು ಟಾರ್ಗೆಟ್​ ಮಾಡಿದ್ಯಾ ಅಮೆರಿಕ..?

Publicspot

ಅಯೋಧ್ಯೆಯಲ್ಲಿ ಬಾನಂಗಳದಲ್ಲಿ ಹಾರಿದ ರಾಮಧ್ವಜ.. ಮೋದಿ, ಭಾಗವತ್‌ ಭಾಗಿ..

Publicspot