September 20, 2026
The Public Spot
ರಾಜಕೀಯ

ಚುನಾವಣೆಯಲ್ಲಿ ಮುಸ್ಲಿಮರಿಗೇ ಟಿಕೆಟ್‌ ಕೊಡ್ಬೇಕು ಎಂದು ಆಗ್ರಹ..

ದಾವಣಗೆರೆ ಉಪಚುನಾವಣೆ ಟಿಕೆಟ್‌‌ ಪಡೆಯಲು ಕಾಂಗ್ರೆಸ್‌ನಲ್ಲಿ ಪೈಪೋಟಿ ಶುರುವಾಗಿದ್ದು, ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಹುಬ್ಬಳ್ಳಿ ಧಾರವಾಡ ಅಂಜುಮನ್ ಸಂಸ್ಥೆ ಒತ್ತಾಯ ಮಾಡಿದೆ. ಧಾರವಾಡದಲ್ಲಿ ಮಾತನಾಡಿದ ಮಾಜಿ ಸಚಿವ ಎ.ಎಂ.ಹಿಂಡಸಗೇರಿ, ಈ ಹಿಂದೆ ದಿವಂಗತ ಶಾಮನೂರು ಶಿವಶಂಕರಪ್ಪ ಹೇಳಿದ ಮಾತಿನಂತೆ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಾಯ ಮಾಡಿದ್ದಾರೆ. ಶಾಮನೂರು ಮೊಮ್ಮಗನಿಗೆ ಟಿಕೆಟ್ ಕೇಳ್ತಿರುವುದಕ್ಕೆ ಅಂಜುಮನ್ ಸಂಸ್ಥೆ ವಿರೋಧ ಮಾಡಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳೇ ನಿರ್ಣಾಯಕವಾಗಿವೆ. ಶಾಮನೂರು ಶಿವಶಂಕರಪ್ಪ ಅವರಿಗೆ ಐದು ಸಲ‌ ಮತ ನೀಡಿ ಆರಿಸಿ ಕೊಟ್ಟಿದ್ದೇವೆ. ಗ್ರಾಮೀಣ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿ ಎಂದಾಗ ನಾನಿರೋವರೆಗೂ ಇಲ್ಲೇ ಸ್ಪರ್ಧೆ ಮಾಡುತ್ತೇನೆ ಅಂದಿದ್ರು. ಈಗ ಅವರ ನಿಧನದ ಹಿನ್ನೆಲೆ ಅಲ್ಪಸಂಖ್ಯಾತರಿಗೆ ಟಿಕೇಟ್ ನೀಡುವಂತೆ ಅಂಜುಮನ್ ಸಂಸ್ಥೆ ಪಟ್ಟು ಹಿಡಿದಿದೆ. ಆದರೆ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗರ್ ಮಾತನಾಡಿ, ಸಮಾರ್ಥ್ಯ ಇದ್ದವರಿಗೆ ಟಿಕೆಟ್ ಕೊಡಲಿ ಎಂದಿದ್ದಾರೆ.

ಮುಸ್ಲಿಂ ಸಮುದಾಯದ ಯಾವುದೇ ಒಬ್ಬ ಮುಖಂಡ ಹೋಗಿ ಇಂತವರಿಗೆ ಟಿಕೆಟ್ ಕೊಡಿ ಅನ್ನೋದು ತಪ್ಪು. ದಾದ ಸೇಠ್‌ಗಾದ್ರೂ ಕೊಡಿ, ಯಾರಿಗಾದರೂ ಕೊಡಿ, ಆದರೆ ಸಾಮರ್ಥ್ಯ ಇದ್ದರಿಗೆ ಟಿಕೆಟ್ ಕೊಡಿ. ಆದರೆ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡಬೇಕು ಅನ್ನೋದು ನಮ್ಮ ಬೇಡಿಕೆ ಅಷ್ಟೇ ಎಂದಿದ್ದಾರೆ. ಶಾಮನೂರು ಶಿವಶಂಕರಪ್ಪ 25 ವರ್ಷ ಗೆದ್ದು, ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದರು. ಶಾಮನೂರಿಗೆ ಗೌರವ ಕೊಟ್ಟು ಇಲ್ಲಿಯವರೆಗೆ ಅಲ್ಪಸಂಖ್ಯಾತರು ಯಾರೂ ಟಿಕೆಟ್ ಕೇಳಿರಲಿಲ್ಲ. ಈಗ ಅವರ ಸ್ಥಾನ ತೆರವಾಗಿದಕ್ಕೆ ಅಲ್ಪಸಂಖ್ಯಾತರಿಗೆ ಟಿಕೆಟ್ ಕೇಳುತ್ತಿದ್ದೇವೆ. ಶಾಮನೂರು ಮನೆಯಲ್ಲಿ ಓರ್ವ ಎಮ್ಎಲ್ಎ, ಓರ್ವ ಎಮ್‌ಪಿ ಇದ್ದಾರೆ. ಈಗ ಮುಸ್ಲಿಂರು ಗೆಲ್ಲುವ ವಿಶ್ವಾಸವಿದೆ. ಹೀಗಾಗಿ ಮುಸ್ಲಿಮರಿಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡ್ತಿದ್ದೇವೆ. ಟಿಕೆಟ್ ಕೇಳುತ್ತಿದ್ದೇವೆ, ಕೊಡೋದು ಬಿಡೋದು ಹೈಕಮಾಂಡ್‌ಗೆ ಬಿಟ್ಟಿದ್ದು. ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡದೇ ಇದ್ದರೆ, ನಾವು ಸಭೆ ಮಾಡಿ ತೀರ್ಮಾನಕ್ಕೆ ಬರುತ್ತೇವೆ ಎಂದಿದ್ದಾರೆ ಇಸ್ಮಾಯಿಲ್ ತಮಾಟಗರ್.

ದಾವಣಗೆರೆ ದಕ್ಷಿಣ ಕ್ಷೇತ್ರ ಉಪಚುನಾವಣೆ ಕದನದಲ್ಲಿ ತಮ್ಮ ಕಡೆಯವರಿಗೆ ಟಿಕೆಟ್‌ ಪಡೆಯಲು ಎಸ್‌.ಎಸ್‌ ಮಲ್ಲಿಕಾರ್ಜುನ್‌ ಹಾಗೂ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಪ್ರಯತ್ನ ಮಾಡ್ತಿದ್ದಾರೆ. ಈ ನಡುವೆ ಮುಸ್ಲಿಂ ಸಮುದಾಯದಲ್ಲಿ ಬಿರುಕು ಮೂಡಿದ್ದು, ಎರಡು ಬಣಗಳಾಗಿದೆ ಎನ್ನಲಾಗಿದೆ. ಎಂಎಲ್‌ಸಿ ಅಬ್ದುಲ್ ಜಬ್ಬಾರ್ ವರ್ಸಸ್‌‌ ದಾದು ಸೇಟ್ ನಡುವೆ ಪೈಪೋಟಿ ನಡೆದಿದೆ. ಮುಸ್ಲಿಮರ ಪರವಾಗಿ ತಂಜಿಮುಲ್ ಕಮಿಟಿಯ ಮಾಜಿ ಅಧ್ಯಕ್ಷರೂ ಆದ ದಾದು ಸೇಟ್ ಡಿಸಿಎಂ ಬಳಿ ಮಾತು ಕೊಟ್ಟು ಬಂದಿದ್ದಾರೆ ಎನ್ನಲಾಗ್ತಿದೆ.

ಈ ಬೆಳವಣಿಗೆ ನಡುವೆ ಅತ್ತ ದೆಹಲಿಯಲ್ಲಿ ಕಾಂಗ್ರೆಸ್‌ CEC ಮೀಟಿಂಗ್‌ ನಡೆದಿದ್ದು, ಮುಂಬರುವ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆದಿದೆ. ನವದೆಹಲಿಯ ಕಾಂಗ್ರೆಸ್‌‌ ಮುಖ್ಯ ಕಚೇರಿ ಇಂದಿರಾ ಭವನದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕದಿಂದ ಹಿರಿಯ ಕಾಂಗ್ರೆಸ್‌ ನಾಯಕರೂ ಆಗಿರುವ ಇಂಧನ ಸಚಿವ K.J ಜಾರ್ಜ್‌ ಕೂಡ CEC ಸದಸ್ಯರಾಗಿ ಸಭೆಯಲ್ಲಿ ಹಾಜರಾಗಿದ್ದರು. ಕರ್ನಾಟಕದ ಉಪಚುನಾವಣೆಗೂ ಅಭ್ಯರ್ಥಿಗಳ ಹೆಸರು ಅಂತಿಮ ಆಗುವ ಸಾಧ್ಯತೆಯಿದೆ.

Related posts

S I R ಮತಪಟ್ಟಿ ಪರಿಷ್ಕರಣೆಯಲ್ಲಿ ಮಹತ್ವದ ಬದಲಾವಣೆ.. ಸರಿಯಾಗ್ತಾರಾ BLO..?

Publicspot

ಚುನಾವಣೆಗೆ ಸಜ್ಜಾಗ್ತಿದ್ಯಾ JDS..? ಇವತ್ತಿನ ಸಮಾವೇಶದ ಉದ್ದೇಶ ಏನು..?

Publicspot

Cabinet Decision revoke Criminal case: ಸತ್ಯವಂತರ ಮೇಲೆ ದಾಖಲಿಸಿದ್ದ ಕೇಸ್​ ವಾಪಸ್..​

Publicspot

CONG VS CONG : ಕಾಂಗ್ರೆಸ್ ಶಾಸಕರ ಮೇಲೆ ​ ಸಚಿವರ ಸೇಡು.. ದಲಿತ ಅಂತಾ ಟಾರ್ಗೆಟ್..?

Publicspot

JDS – BJP ಮೈತ್ರಿ ಹಾಳಾದರೆ ಹಾಸನದ ಕಿತಾಪತಿಯೇ ಕಾರಣ..?

Publicspot

ದುರಾಸೆಯಿಂದ ಪ್ರಕೃತಿಯನ್ನು ನಾಶ ಮಾಡಿದರೆ ನಮ್ಮನ್ನು ನಾವೇ ನಾಶ ಮಾಡಿಕೊಂಡಂತೆ

admin